Sunday, December 22, 2019

Published in 25th Dec Mangala
*************************************************************
ಆಸ್ಪೋಟ

ಬೆಟ್ಟದ ತುದಿಯೇರಲು
ಆಸೆ ಪಟ್ಟು ಬೆಟ್ಟದ ತಪ್ಪಲಲ್ಲಿ ನಿಂತು
ತುದಿಯ ನೋಡಿದೆ.
ಆಗದು ಎಂದು ಕೈ ಚೆಲ್ಲಿ ಕುಳಿತರೂ
ಮೈ ಒಳಗಿನ ಬೆಂಕಿ ತಿವಿದು ತಿವಿದು ಎಬ್ಬಿಸಿತ್ತು!
ಮೊಗಮ್ಮಾಗಿ ನಿದ್ದೆ ಹೋದೆ.
ಆದರೆ ಕನಸಲಿ ಕಾಡಿ ಬಂತು ಬೆಟ್ಟ ಮತ್ತು ಬೆಟ್ಟದ ತುದಿ.

ಮತ್ತೊಮ್ಮೆ ತಪ್ಪಲಲಿ ನಿಂತು ನೋಡಿದೆ
ಅದೇ ಎತ್ತರ ಅಷ್ಟೆ ಜಡ ಆಗಲಿಲ್ಲ
ಹಿಂತಿರುಗಿ ಹೊರಟುಬಿಟ್ಟೆ.
ಬೆಟ್ಟ ಕನಸಲಿ ಮತ್ತೊಮ್ಮೆ ಕಾಡಿತು, ನಿರಾಳ ನಿದ್ದೆಗೆ ಅಡ್ಡಿಯೊಡ್ಡಿ

ಈಗ ಬೆಟ್ಟದ ತಪ್ಪಲಲಿ ನಿಂತು ನೋಡಲಿಲ್ಲ
ನೇರ ಹತ್ತುವ ಸಾಹಸಕ್ಕಿಳಿದೆ.
ಕೆಲ ಹೊತ್ತಿನ ನಂತರ ಸಪಾಟದ ಮೆಟ್ಟಿಲುಗಳಿದ್ದವು
ಕೆಲಸ ಸುಲಭವಾಯಿತು, ಮನಸು ಹಗುರವಾಯಿತು.
ಸರ ಸರನೆ ಹತ್ತಿ ಬಿಟ್ಟೆ ಬೆಟ್ಟ.
ಕೆಲವೇ ಕ್ಷಣಗಳಲಿ ತುದಿ ತಲುಪಿದ್ದೆ.

ಅಲ್ಲಿ!
ಆ ತುದಿಯಲ್ಲಿ ಸಣ್ಣಗೆ ನಡುಗುತಿರುವ ಭೂಮಿ.
ಹತ್ತಿರಕ್ಕೆ ಹೋಗುವ ಧೈರ್ಯ ಬರಲಿಲ್ಲ.
ಒಂದೆ ಒಂದು ಹೆಜ್ಜೆ ಮುಂದೆ ಇಟ್ಟು
ನೋಡಿದರೆ ಮೊದಲು ಬೂದಿ.
ಬೂದಿಯ ಕೆಳಗೆ ಧಗಧಗಿಸುವ ಲಾವ!!!
ಭುಗಿಲೇಳುವ ಸಮಯ.
ಬೆಟ್ಟವೇರಿದ ವೇಗಕ್ಕಿಂತ ಕೆಳಗಿಳಿಯುವ ಪ್ರಯತ್ನ ಮಾಡಿದೆ.
ಇನ್ನೂ ಬೆಟ್ಟದ ತುದಿ ಇಳಿದಿರಲಿಲ್ಲ.
ಅಹೊತ್ತಿಗಾಗಲೆ ಆಸ್ಪೋಟ!!!

Thursday, November 14, 2019

೨೦೧೯ ಕರ್ಮ ವೀರ  ಕನ್ನಡ  ರಾಜ್ಯೋತ್ಸವ  ಕವನ  ಸ್ಪರ್ಧೆ  ತೀರ್ಪುಗಾರ   ಮೆಚ್ಚುಗೆ   ಪಡೆದ  ಕವಿತೆ
****************************************************************************

ವೈತರೇಣೆಯ ನದಿ ಮತ್ತು ಕನಸುಗಳ ವಿಮೆ....!

ಮೆದುಳ ಸುರಳಿಯಲ್ಲಿ ಹೊಳೆದು
ನಿದಿರೆಯ ಮಬ್ಬಲ್ಲೆ ಘಟಿಸಿದಂತೆ ಬೆಳೆದು
ಸಾಕಾರವಾಗದೆಂದೆ ಅರೆಬರೆಯಾಗಿದ್ದೆ -
ಕೊನೆಗೊಳ್ಳುವುದಕ್ಕೆ ಗೊತ್ತು ಗುರಿಯಿಲ್ಲ! * (ಕನಸುಗಳು)

ಮಣಿಕರ್ಣಿಕಾ ಘಾಟಿನ ಹೊಗೆ ಘಾಟಲ್ಲೆ
ದೇಹ ಬಿಟ್ಟಾತ್ಮವು ಸುಪ್ತವಾಗಿ ಗುಪ್ತವಾಗಿ
ಗಮ್ಯದಡಿಗೆ ಚಲಿಸದೆ ನಿಲ್ಲುವುದೆ?
ವೈತರೇಣೆಯ ನದಿಯ ರಕ್ತ, ಕೀವು, ಎಲುಬು, ಮಾಂಸ, ಮಜ್ಜಲೆಗಳ
ಮಡುವಲಿ ಬೇಡವೆಂದರೂ ಕರ್ಮ ಮುಳುಗೇಳಿಸದೆ ಬಿಡುವುದೆ?. *(ಆತ್ಮ)

ಲಂಗು ಲಗಾಮು ಇಲ್ಲದೆ ಬೆಳೆದ ಕನಸು
ರಾಗ ದ್ವೇಷಗಳಲ್ಲೆ ಬೆರೆತು ದೂರ ದೂರ ಸಾಗಿ -
ಮನುಷತ್ವವೆ ಮರೆತು ಎಲ್ಲೆಲ್ಲಿಯೊ ಕಳೆದು ಹೋಗುವ
ಮಾಗದ ಬಾಗದ ಕನಸುಗಳಿಗೆ ಶುಲ್ಕವಿಲ್ಲ!!!

ಆತ್ಮವ ದೂರ ದೂರಕೆ ಎಳೆದು-
“ಮಾಡುದ್ದೋಣ್ಣೊ ಮಹಾ ರಾಯ” ಎಂದು
ಕೀವು, ರಕ್ತದ ಮಡುವಲಿ ಬಿದ್ದು-
ಕುದ್ದು ಹೋಗುತಿಹವು ಆತ್ಮಗಳು ಶಿಕ್ಷೆಯಲಿ ಬೆಂದು
ಆ ಲೋಕದಲಿ ಯಾವ ರೀಯಾಯಿತಿಯೂ ಇಲ್ಲ!!!!

ವೈತರೇಣೆಯ ನದಿಯ ಆ ದಾರಿಯಲಿ
ಏನೆ ಆದರೂ ವಿನಾಯಿತಿ ಕೇಳಿ
ಕನಸಿನರಮನೆಗೆ ಶುಲ್ಕ ಕಟ್ಟದೆ ಕನಸಲೇನೇನೊ ಕಟ್ಟಿ
ಅರ್ಥವಾದುದಕೆ ಅಪಾರ್ಥದಲೇನೋ ಭಾವಿಸಿ –
ಕಾಯಿಸಿ ಬೇಯಿಸಿ ಹುರಿಯುವ ಆ-

ಪಾಷದ ಭಾಷೆಗೆ ರಿಯಾಯಿತಿಯ ಮಾತಿಲ್ಲ
ಕೊನೆಗೆ ಕಾಣುವ ಕನಸುಗಳಿಗೆ ವಿಮೆಯೂ ಇಲ್ಲ!!!

Tuesday, October 29, 2019

---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

WOn First prize in PRAJA PRAGATHI(DAILY) on the Deepavali Occation -2019
*************************************************************
---ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಆ ಕಾಡು ಬಂಡೆಯ ಮೇಲೆ
ನಾಗರಗಳು ಮೂಡಿದ್ದವು.
ನಿಸ್ತೇಜನಾಗಿ ನೋಡುತ್ತಲಿದ್ದೆ ನೋಡುತ್ತಲೆ ಇದ್ದೆ...
ಚಾಂಚಲ್ಯದಲ್ಲಿ ಜಡವಾಗಿ ಜಡದಲ್ಲಿ ಚಂಚಲಿಸಿ
ಮೋಡದಲ್ಲಿ ಅಗ್ನಿಯಾಗಿ ಅಗ್ನಿಯಲ್ಲಿ
ಮಳೆ ಹುಟ್ಟಿದಂತಾಯಿತು !

ನಾಗರಗಳು ಪ್ರೇಮಿಸ ಹತ್ತಿದವು-
ಪ್ರೇಮದ ಉತ್ತುಂಗ ಶಿಖರವನು ಏರಿದವು
ಬಿಸಿಲೇರಿದಂತೆ ಮಿಥುನದ ಪ್ರಮಾಣವೂ
ಹೆಚ್ಚಾಯಿತು!
ಕಣ್ಣು ತಿಕ್ಕಿ ಕೊಳ್ಳುವಷ್ಟರಲ್ಲಿ
ಅಲ್ಲಿ ನಾಗರಗಳಿರಲಿಲ್ಲ!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಮನದ ಒಡೆದ ಬಿಂಬ
ಮುಂದೆ ನಿಂತು ಆತ್ಮ ಸಾಕ್ಷಿಯಂತಾಯಿತು!
ಕಣ್ಣ ಮುಂದಿರುವ ಸತ್ಯ ಮಿಥ್ಯದಂತೆ ಕಂಡು
ಜಾಣ ಕುರುಡು ತೋರಿಸಿ ಅನುಕೂಲ ಸಿಂಧುವಿನಂತೆ
ಮೆರೆದು-‘ಬದುಕೆಂದು ಬರಡು’!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?

ಬೆಂಕಿಯ ಕೆನ್ನಾಲಿಗೆಗೆ
ಧಗ ಧಗಿಸಿ ಹೊತ್ತಿ ಉರಿದು ಸುಟ್ಟು ಭಸ್ಮವಾಯಿತು!
ಉಸಿರು ತಿರುಗಿಸಿಕೊಳ್ಳುವಷ್ಟರಲ್ಲಿ
ಬೂದಿಯಿಂದ ಜೀವ ಅವಿರ್ಭವಿಸಿ ಆಶ್ಚರ್ಯವಾಯಿತು!
ರೂಪಕಗಳ ಕೊಲೆಯಾ ಇಲ್ಲವೆ ಅತ್ಮಹತ್ಯೆಯಾ?
Published in SANJEVANI deepavali Special 2019.
********************************************
                  ಮತ್ತೆ ಮತ್ತೆ ಬುಧ್ದ !!!!

ಲುಂಬಿಣಿಯ ಸಿದ್ದಾರ್ಥ ಕೇಶ ತೂರಿ
ಕಾಂತಕನಿಗೆ ಕಣ್ಣೀರ ವಿದಾಯ ಹೇಳಿ
ಹುಟ್ಟು, ಸಾವು, ರೋಗಗಳ ಮೂಲ ಕೆದಕಲು
ಸಿಧ್ಧನಾಗಿ ಬಧ್ಧನಾಗಿ ಬೋಧಿ ವೃಕ್ಷದ ಕೆಳಗೆ ಬುಧ್ದನಾದ!!!

ಕುಶಿ ನಗರದ ತೋಟದಲಿ
ತಲೆಗೆ ಕೈಕೊಟ್ಟು “ಈ ಮನುಜರ ಪಾಡೇನು?” ಅಂತ
ಯೋಚಿಸಿತ್ತಲೆ ಯೋಚಿಸುತ್ತಲೆ ಯೋಚಿಸುತ್ತಲೆ...ಮಲಗಿದ!!!
ಆದರೇನು ಫಲ? ನೋರಾರು ವರ್ಷಗಳು ಬೇಕಾದವು
ಬುದ್ದನ ನೆನೆದು ಎಲ್ಲವ ಮರೆತು ತಮ್ಮನ್ನು ತಾವು ಅರಿಯಲು !!

ಧನನಂದನು ಲೋಲುಪತೆಯ ಅಂಧಾಕರದಲಿ
ಮುಳುಗಿರಲು ಮಗಧದಲಿ
ರಾಷ್ಟ್ರ ರಕ್ಷಣೆಯ ರಾಜ ಧರ್ಮವ ಪಾಲಿಸುವಂತೆ
ದೈನೇಸಿಯಿಂದ ಬೇಡಿದ ಬಡ ಬ್ರಾಹ್ಮಣ ಭಿಕ್ಷೆಯಂತೆ
ಅಧಿಕಾರದ ಅಮಲು ನೆತ್ತಿಗೇರಿತ್ತು
ಪಾಪದ ಕೊಡವು ತುಂಬಿದ ಬಂದಿತ್ತು!!!
ಜುಟ್ಟು ಹಿಡಿದು ಹೊರ ಹಾಕಿದರು
ಒಡಲಿನ ಬೆಂಕಿ ಜ್ವಾಲಾಮುಖಿಯಾಗಿತ್ತು
‘ನಂದ’ ಸಾಮ್ರಾಜ್ಯದ ನಾಶಕ್ಕೆ ನಾಂದಿಯಾಯಿತು.
ಮೌರ್ಯರ ದರ್ಬಾರು ಮರೆದು ನಿಂತಿತು
ನಂದ ಸಾಮ್ರಾಜ್ಯ ನಂದಿ ಹೋಯಿತು

ಕ್ರೋರಿ ಆಶೋಕ ಚಕ್ರವರ್ತಿ(?) ಜಗವಾಳಲು ಹೋದ,
ನೆತ್ತರು ಕಾಲ ಕೆಳಗೆ ಸುಳಿದು ಹರಿದು
ನದಿ ನೀರಲಿ ನೀರಾಗುತ್ತಿತ್ತು

ಆಕಾಶಕ್ಕೆಲ್ಲಾ ಹಾರಾಡಿದವು ರುಂಡ ಮುಂಡಾದಿಗಳು
ಕೈಲಿದ್ದ ಕತ್ತಿಯ ಬಿಸುಪು ಸಡಿಲವಾಗಿತ್ತು
ನೆತ್ತರು ಹರಿದಂತೆ ಕ್ರೂರ ಮನಸ್ಸು ಕರುಗುತ್ತಲಿತ್ತು.
ಕಳಿಂಗ ಯುಧ್ಧವೇನೊ ಗೆದ್ದಿದ್ದ
ಆದರೆ ಮನಸ್ಸಲಿ ಎಲ್ಲಾ ಕಳೆದುಕೊಂಡು ಸೋತಿದ್ದ.
ತನಗೆ ತಾನು ಆಳಾದ ಯುಧ್ಧಗಳೆಲ್ಲವೂ ಕೀಳಾದವು.

ತನ್ನನ್ನು ತನ್ನೆಲ್ಲವನ್ನೂ ತೊರೆದು
ವರ್ಷಗಳ ಕಾಲ ಬುದ್ಧನ ಅರುಹಲು ಹೊರಟ
ಕತ್ತಿ ಅಲುಗಲಿ ನಲುಗಿದ ಜೀವಕ್ಕೀಗ ಬುಧ್ಧ ಬೇಕಾಗಿತ್ತು
ಹೌದು ಈಗಲೂ ಅಷ್ಟೆ!!!!
ನೆನಪಾಗುವುದು ಬುಧ್ದ ಮತ್ತೆ ಮತ್ತೆ!!!
Published in Samyuktha karnataka 27th Oct 2019 Sunday Supplement.
This story one won first prize in the story competation conducted by 'NIRATA SAHITYA SANGHA' BELTAHANGADI'.
**********************************************************
                                                                    ಪಳುಯುಳಿಕೆ

ಮೋಹನ ಮದುವೆಯಾಗಿ ಮಕ್ಕಳಾಗಿ ಆಗಲೆ ಸುಮಾರು ವರ್ಷಗಳಾಗಿ ಹೋದಾಗಲೂ ಇನ್ನೂ ಬಿಡದೆ ಅವಳ ನೆನಪು
ಕಾಡುತ್ತಿತ್ತು.ಈಗ ಮೋಹನ ಆಮೇರಿಕಾದ ಸ್ಯಾನ್ಪ್ರಾನ್ಸಿಸ್ಕೊಗೊ ಕಂಪನಿಯಿಂದ ಪ್ರೋಜೆಕ್ಟ್ ಕೆಲಸಕ್ಕಾಗಿ
ಹೋಗಿದ್ದಾನೆ.ಅದೊಂದು ವಾರಾಂತ್ಯದ ಬಿ.ಬಿ.ಸಿ ಸುದ್ದಿ ವಾಹಿನಿಯಲ್ಲಿ ಹಂಪೆಯ ಬಗ್ಗೆ ಒಂದು ಡಾಕ್ಯೂಮೆಂಟರಿಯನ್ನು
ನೋಡಿದ.ಆ ಕ್ಷಣದಿಂದಲೆ ವಿಪರೀತವಾಗಿ ವಿಚಲಿತನಾಗಿಬಿಟ್ಟ.ತನ್ನ ದುಗುಡುವನ್ನು ಕಡಿಮೆ ಮಾಡಿಲಿಕ್ಕಾಗಿಯೆ
ಭಾರತದಲ್ಲಿಯರಿವ ತನ್ನ ಹೆಂಡತಿಗೆ ಒಂದು ಈ ಮೇಲ ಬರೆಯುಲು ಶುರುವಿಟ್ಟ.
ಹಲೋ ಹನಿ,
ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ 'ಅಕ್ಷರಗಳು ' ಅಂತ ಆಶ್ಚರ್ಯ ಆಗಬಹುದು.ಈ ಮೇಲಿಗೆ
ಒಂದು ಕಾರಣವಿದೆ.ಈ ವಾರಾಂತ್ಯದಲ್ಲಿ ಬಿ.ಬಿ.ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು
ನೋಡಿದೆ.ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು.ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ
ಹಂಪೆಯ ವಿವರವನ್ನು ಕೊಡಲಾಯಿತು.ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ - ನಾನು
ನಿಜವಾಗಿಯೂ ಸತ್ತೆ ಹೋದೆ.ಆ ಸಾಲು ಸಾಲು ಮುರಿದು ಹೋದ ಮಂಟಪಗಳು,ಛಾವಣಿಯಿಲ್ಲದೆ ನಿಂತಿರುವ
ದೇವಸ್ಥಾನಗಳು,ಪ್ರತಿ ಉತ್ಖನನನಕ್ಕೂ ದೊರಕುತ್ತಿರುವ ಭಗ್ನ ವಿಗ್ರಹಗಳು, ಬಿರು ಬಿಸಿಲು,ಮಳೆ,ಛಳಿಗಳಿಗೆ ಮೈಯೊಡ್ಡಿ
ನಿಂತಿರುವ ಕಾಡು ಬಂಡೆಗಳು, ನನ್ನ ಎಲ್ಲ ನೆನಪುಗಳನ್ನು ಒಮ್ಮೆಲೆ ಮನದ ಮೂಲೆಯಿಂದ ಎತ್ತಿ ಪಡಸಾಲೆಗೆ ತಂದು
ಹಾಕಿದವು .ಎಷ್ಟೆ ಆ ನೆನೆಪುಗಳಿಂದ ಹೊರಬರಲು ಪ್ರಯತ್ನಿಸಿದರು,ಹೊರಬರಲಾಗಲಿಲ್ಲ. ಹಂಪೆಯ ಆ ಮುರುಕಲು
ಮಂಟಪಗಳಲ್ಲಿಯೆ ನಾನು ಮತ್ತು ಅವಳು ಅಡ್ಡಾಡಿದ್ದೆವು ನಮ್ಮಿಬ್ಬರ ಗಹನ ಪ್ರೇಮಕ್ಕೆ ಆ ಮಂಟಪಗಳೇ ಸಾಕ್ಷಿ ಆಗಿದ್ದವು
.ಎಂತಹ ದುರಂತ ನೋಡು ಅದೆ ಮಂಟಪಗಳಲ್ಲಿಯೆ ನಾನು ಮತ್ತು ಅವಳು ಬೇರೆ ಆಗುವ ಮಾತು ಆಗಿತ್ತು .ಹಾಳು
ಹಂಪೆಯಂತಿಯೆ ಪ್ರೇಮವೂ 'ಹಾಳು ಹಾಳು ಆಗಿತ್ತು. '
ಅಲ್ಲಿಯ ಮುರುಕಲು ಮಂಟಪದಂತೆಯೆ, ಛಾವಣಿಯಿಲ್ಲದ ದೇವಸ್ಥಾನಗಳಂತೆಯೆ,ಬಿಸಿಲು,ಮಳೆ ಮತ್ತು ಛಳಿಗೆ
ಮೈಯಿಡ್ಡಿದ ಕಲ್ಲು ಬಂಡೆಯಂತೆಯೆ ನನ್ನ ಜೀವನವು ಆಗಿತ್ತು.'ಅದೃಷ್ಟಕ್ಕೆ ನೀನು ಸಿಕ್ಕೆ ಮತ್ತೆ ನಾನು ನಕ್ಕೆ ' .ನನ್ನ ಎಲ್ಲ
ಪ್ರೇಮಾಲಾಪಗಳ ನಡುವೆಯೂ ನನ್ನನ್ನು ಮೆಚ್ಚಿದೆ, ಒಪ್ಪಿದೆ,ಮದುವೆಯೂ ಆದೆ.ಎಲ್ಲವನ್ನೂ ತಿಳಿದು ನೀನು ನನ್ನನ್ನು
ವರಿಸಿದ್ದು ನಿನ್ನ ಔದಾರ್ಯ.ನಮ್ಮ ಮದುವೆಯಾದಾಗ ಮೊಬೈಲಗಳು ಇರಲಿಲ್ಲ.ಇಬ್ಬರು ಬೇರೆ ಬೇರೆ ಊರಲ್ಲಿದ್ದರು ಪ್ರತಿ
ವಾರಕ್ಕೊಮ್ಮೆ ತಪ್ಪದೆ ಪತ್ರ ಬರೆಯುತ್ತಿದ್ದೆವು.ಆದರೆ ಈಗ ಮೊಬೈಲು ಬಂದ ಮೇಲೆ ಪತ್ರ ಬರೆಯುವುದನ್ನೆ ಮರೆತು
ಬಿಟ್ಟಿದ್ದೇವೆ.ನಿನ್ನ ಮತ್ತು ಮಕ್ಕಳ ನೆನಪಾದರೆ ಸಾಕು ವಿಡಿಯೋ ಕಾಲ್ ಮಾಡುತ್ತೇನೆ.ಆದರೆ ಮೊನ್ನೆ ರಾತ್ರಿ ಅಂದರೆ
ನಿಮ್ಮ ಬೆಳಗಿನ ಜಾವಕ್ಕೆ ನೋಡಿದ ಬಿ.ಬಿ.ಸಿ ಕಾರ್ಯಕ್ರಮ ನನ್ನ ಎಲ್ಲ ನೆನಪುಗಳನ್ನು ಬಡಿದೆಬ್ಬಿಸಿತು.ಆಕ್ಷಣಕ್ಕೆ ನನ್ನ
ಮನಸ್ಸಿಗೆ ತೋಚಿದ್ದನ್ನು ಈ ಮೇಲಲ್ಲಿ ಬರೆದಿದ್ದೇನೆ.ನನ್ನ ಮನಸ್ಸು ಹಗುರವಾಗಿದೆ ನಿನ್ನ ಮನಸ್ಸು ಭಾರವಾಗಿದೆ
ಅಂತಲೂ ಗೊತ್ತು.ನೀನು ಇದನ್ನು ಓದುವಷ್ಟರಲ್ಲಿ ನಾನು ಘಾಢ ನಿದ್ರೆಯಲ್ಲಿರುತ್ತೇನೆ .ಇನ್ನೇನು ನಾನು ಭಾರತಕ್ಕೆ
ವಾಪಸ್ಸು ಬರುವ ದಿನಗಳು ಸಮೀಪಿಸಿವೆ .ಇನ್ನೆಂದು ನಿಮ್ಮನ್ನು ಬಿಟ್ಟು ಇಷ್ಟು ದಿನ ಇರೆನು
ಕನಸಲಿ ಬರುವೆ
ಇಂತಿ ನಿನ್ನ
ಹಬ್ಬಿ

Friday, October 11, 2019

Published in VIKRAMA (VIJAYA DASHAMI SPECIAL-2019)

                       ಅಳಿಲ ಅಳಲು

ವೀರಾಧಿವೀರ ನರ-ವಾನರ ಸೈನ್ಯದ ನಡುವೆ
ನನಗೇನು ಕೆಲಸ? ಹಾಗೆಂದೆ ಕುಳಿತೆ
ಒಮ್ಮೆಯಾದರು ನಿನ್ನ ಕರುಣಾ ಚಕ್ಷುಗಳಿಗೆ
ನಾ ಬೀಳಬೇಕು ಮತ್ತು ನಿನ್ನ ಸೇವೆಯಲಿ ನನಗೂ ಪಾಲು ಬೇಕು!

ಹೆದರಿ ತೆವಳುತ ಬಂದೆ ಜೀವ ಕೈಲಿ ಹಿಡಿದು-
ಏಕೆಂದರೆ ಪರಮ ವೀರರ ರಣ ಕುಣಿತವದು.
ನೀನೊ ಪರಮ ಪುರುಷೋತ್ತಮನು
ಏನೆಂದು ಸೇವೆಗೈಯಲಿ ಕುಬ್ಜ ನಾನು
ನಿನ್ನ ಕಣ್ಣಿಗೆ ಬೀಳಲಿಲ್ಲ, ಸೇವೆಯೂ ಮಾಡಲಿಲ್ಲ
ಜೀವ ಕನಲಿತು ಮನಸ್ಸು ಅದುರಿತು
ಯಾವುದಕ್ಕೆ ಲಾಯಕ್ಕು ನಾನೆಂದು

ಕುಬ್ಜನಾದರೇನಂತೆ ಸಣ್ಣಗೆ ಮರಳ ಗಣಿಗಾರಿಕೆ ನಡೆಸಿ
ಮೈಗಂಟಿದ ಮರಳನೆ ಬಂಡೆಗಲ್ಲುಗಳ ಸಂದಿಗೊಂದಿಗಳಲಿ
ಕೊಡವಿ, ಮೈದಡವಿ, ನಿನ್ನದೆ ಪಾದತಲದಲಿ ಕೈಮುಗಿದು ನಿಂತೆ
ಸಾರ್ಥಕವಾಯಿತು ಬದುಕು
ನಿ ನನ್ನ ಬೆನ್ನು ಸವರಿದಾ ಸುದಿನವು!!

ಹಿಡಿ-ಹಿಡಿ ಉಸುಕನೆತ್ತಿದೆನಾಗ ಅಸುರ ಸಂಹಾರ ಯಾಗಕೆ
ಸೀತಾನ್ವೇಷಣೆಗೆ.
ನಡೆದಿಹುದೀಗ ಅನುದಿನವೂ ಭೂಮಿ

Wednesday, September 18, 2019

Published in 18th/09/2019 Mangala
*******************************************
                               ಭೂಗೋಳದ ಆ ತುದಿಯಿಂದ ಈ ತುದಿಯವರೆಗೆ....!

“Peace cannot be kept by force; it can only be achieved by understanding.”

― Albert Einstein
                                                            ಮಧ್ಯಂತರದ ನಂತರ....

ದಿನ ದಿನವೂ ಸರಳಾದೇವಿಯವರ ‘ಬಾವರಿ’ ಯ ಸ್ವಲ್ಪ ಸ್ವಲ್ಪವೆ ಕಡೆಮೆಯಾಗುತ್ತಾ ಬಂತು.ಮೊದ ಮೊದಲು
ಅವರ ಊಟ ಎಲ್ಲರಿಗೂ ಕ್ಲೀಷೆಯಂತೆ ಕಾಣುತ್ತಿದ್ದರೂ, ನಂತರದ ದಿನಗಳಲ್ಲಿ ರೂಢಿಯಾಗಿ ಹೋಯಿತು.ಹೀಗೆ
ದಿನಗಳು,ವಾರಗಳು ಕಳೆದವು.ಸರಳಾದೇವಿಯವರ ದೇಹವೇನೊ ಕೃಷವಾಗುತ್ತಾ ಹೋಯಿತು.ಆದರೆ ಯಾರೂ
ಬಯಸದೆ ಇದ್ದರೂ ಎಲ್ಲರ ಮನಸ್ಸಿನಲ್ಲಿದ್ದ,ಆದರೂ ಯಾರು ಬಾಯಿ ಬಿಟ್ಟು ಹೇಳದೆ ಇದ್ದ ಅವರ ಸಾವಿನ ಸೂಚನೆ
ಯಾರಿಗೂ ಕಾಣಿಸಲಿಲ್ಲ.ಮನೆಯವರಲ್ಲರಿಗೂ ಸರಳಾದೇವಿಯವರ ಈ ತರಹದ ದಿನಗಳನ್ನು ನೋಡಲು
ಕಷ್ಟವಾಗಿತ್ತು.’ಸಾವು’ ಬರಬೇಕು ಇಲ್ಲವೆ ‘ಸಂತರಾ’ ಬಿಟ್ಟುಬಿಡಬೇಕು.ಆದರೆ ದೀಕ್ಷೆ ಬಿಡುವ ಮಾತು ಹೇಳುವುದನ್ನು
ಯಾರಿಗೂ ಧೈರ್ಯವಿರಲಿಲ್ಲ.ಪಿಂಕಿಯೇನೊ ಅಜ್ಜಿಗೆ ಹೇಳಿದ್ದಳು,ಆದರೆ ಅಜ್ಜಿ ಕೇಳಬೇಕಲ್ಲಾ?ಸರಳಾದೇವಿಯವರ
‘ಸಲ್ಲೇಖನ’ ದ ದಿನಗಳು ಯಥಾಪ್ರಕಾರ ಸಾಗಿದ್ದವು.
‘ಸಲ್ಲೇಖನ’ದ ದಿನಗಳಲ್ಲಿಯೆ ಶ್ರವಣಬೆಳಗೊಳಕ್ಕೆ ಹೋಗಬೇಕು ಮತ್ತು ಗೊಮ್ಮಟನ ಕಾಲಿಗೆ ನಮಸ್ಕರಿಸಬೇಕು,
ಎನ್ನುವ ಆಸೆ ಸರಳಾದೇವಿಯವರ ಮನದಲ್ಲಿತ್ತು.ಅವರ ಆಸೆಯಂತೆ ಕುಟುಂಬದ ಸದಸ್ಯರೆಲ್ಲರೂ
ಸರಳಾದೇವಿಯರ ಜೊತೆಗೆ ಶ್ರವಣಬೆಳಗೊಳವನ್ನು ತಲುಪಿದರು.ಸರ್ವಸಂಗ ಪರಿತ್ಯಾಗಿಗಳು,ಹಾದಿ
ಬೀದಿಯುದ್ದಕ್ಕೂ,ಯಾವ ಮತ್ತು ಯಾರ ಪರಿವೆ ಇಲ್ಲದೆ ಬ್ರಹಾಂಡದ ಸೂಕ್ಷಾಣು ಸೂಕ್ಷ ಜೀವಿಗಳಿಗೂ ಕೂಡ
ಒಂದಿಷ್ಟೂ ಹಿಂಸೆಯಾಗಬರಾದು ಎನ್ನುವಂತೆ ಬದುಕಿರುವ ನೂರಾರು ಸನ್ಯಾಸಿಗಳನ್ನು ಕಂಡರು. ಆ ಮಂದಸ್ಮಿತ
ದೈವದ ಮುಂದೆ ಸರಳಾದೇವಿಯವರ ಪರಿವಾರದವರು ಕೈಮುಗಿದು ನಿಂತಿತು.ಎಂತಹ ಶಾಂತ
ಮುಖಭಾವ,ರಾಜನಾಗಿದ್ದರನಂತೆ ಅದೆಲ್ಲ ಏಕೆ? ಯುಧ್ಧಗಳನ್ನು ಕಂಡಿದ್ದರೇನೆಂತೆ ಹಿಂಸೆ ಎನ್ನವುದು ಬೇಡವೆ
ಬೇಡ, ಎಂದು ಸಾರುತ್ತಿರುವಂತೆ ಭಾಸವಾಯಿತು.ಪಿಂಕಿಯೂ ಸಹ ಗೊಮ್ಮಟನ ಮುಂದೆ ನಿಂತಳು ಪಿಂಕಿಗೆ ತಾನು
ಎಷ್ಟು ಚಿಕ್ಕವಳು ಅಂತ ಅನ್ನಿಸುವುದಕ್ಕೆ ಶುರುವಾಯಿತು.ಚಿಂತೆ ಇಲ್ಲದೆ ಧ್ಯಾನಿಸಿದಳು-.ಬಾಹುಬಲಿಯ ದೈತ್ಯ
ರೂಪ - ಹೃದಯ ವೈಶಾಲ್ಯತೆ,ಹಸನ್ಮುಖ - ಕಲ್ಮಶರಹಿತ. ಪಿಂಕಿ ಆ ಅಹಿಂಸಾವಾದಿಯನ್ನು ಉಂಗುಷ್ಠದಿಂದ
ನೆತ್ತಿಯ ವರೆಗೂ ನೋಡಿದಳು, ಮತ್ತೆ ಮತ್ತೆ ನೋಡಿದಳು.ಆ ಹಸನ್ಮುಖದಲ್ಲಿ ಎನೋ ಒಂದು ಸಂದೇಶ-ಶಾಂತಿ
ಬಯಸುತ್ತಿರುವಂತೆ ಮನಸ್ಸಿಗೆ ಮತ್ತು ಜಗತ್ತಿಗೆ!!
ಒಂದೇ ಒಂದು ಬಾಹುಬಲಿ ಮತ್ತು ಭರತರ ನಡುವಿನ ಯುಧ್ಧ ಬಾಹುಬಲಿಯನ್ನು ಜಿಗುಪ್ಸೆಯ ಮಡುವಿಗೆ
ನೂಕಿತ್ತು. ಭರತನ ನೆಲದಲ್ಲಿಯೆ ನಿಂತು ‘ಸರ್ವಜ್ಙ’ ಜ್ಞಾನಕ್ಕಾಗಿ ತಹತಹಿಸಿದ,ವರುಷಗಟ್ಟಲೆ ಕದಲದೆ ನಿಂತು
ತಪಸ್ಸು ಮಾಡಿ ಸರ್ವಜ್ಙ’ ಜ್ಞಾನ ಪಡೆದನು.ಇದು ಪಿಂಕಿ ತಾನು ಶಾಲೆಯಲ್ಲಿ ಓದಿದ್ದ ಇತಿಹಾಸ.ಈಗ ತನ್ನ
ಕಣ್ಮುಂದೆ ಚಿತ್ರಪಟವಾಗಿ ಸರಿಯುತ್ತಾ ಹೋಯಿತು.ಆ ಒಂದು ಯುಧ್ದ ಶಾಂತಿಗಾಗಿ ತಹತಹಿಸುವಂತೆ
ಮಾಡಿದರೆ,ಇಲ್ಲಿ ಪ್ರತಿದಿನವೂ ಯುಧ್ದ,ಮನಸ್ಸಿನಲ್ಲಿ ಅಷ್ಸೆ ಅಲ್ಲ ಭೂಗೋಳದ ಆ ತುದಿಯಿಂದ ಈ ತುದಿಯವರೆಗೆ
.ಆದರೆ ಯಾರೂ ಶಾಂತಿಯ ಪಡೆಯುವುದರ ಬಗ್ಗೆ ಯೋಚಿಸುತ್ತಿಲ್ಲ.ಆದರೆ ಎಲ್ಲರಿಗೂ ಬೇಕು ಶಾಂತಿ!!!

ದೂರದ್ಯಾವುದೊ ದೇಶದಲ್ಲಿ ಉಗ್ರರ ಅಟ್ಟಹಾಸ-ಹಸುಳೆ,ಹೆಂಗಸು ಎನ್ನುವ ಲೆಕ್ಕ ವಿಡದೆ ಸಿಕ್ಕ ಸಿಕ್ಕವರನ್ನು
ಸಿಗಿದು ಹಾಕಿದ್ದರು.ಮೋಬೈಲ್ ನಲ್ಲಿ ಓದಿದ ಸುದ್ದಿ ಭೀಕರವಾಗಿತ್ತು.ಸಾವಿರಾರು ಸಾವುಗಳು! ಪಿಂಕಿಗೆ ಯಾವುದು
ಅರ್ಥವಾಗಲಿಲ್ಲ.ಇಲ್ಲಿ ತನ್ನ ಅಜ್ಜಿ ಮತ್ತು ಸರ್ವ ಸಂಗ ಪರಿತ್ಯಾಗಿಗಳು ಸೂಕ್ಷಾಣು ಸೂಕ್ಷ ಜೀವಿಗಳಿಗೂ
ಹಿಂಸೆಯಾಗಬಾರದೆಂದು ಬದುಕುತ್ತಿದ್ದರೆ, ಬಿತ್ತರವಾದ ಸುದ್ದಿಯಲ್ಲಿ ಕೇವಲ ಸಾವನ್ನು ಮಾತ್ರ ಮನುಷ್ಯರು
ಬಯಸುತ್ತಿದ್ದರು.ಈ ವಿಷಯ ಅಜ್ಜಿಗೆ ಗೊತ್ತಾಗಿ ಹೋದರೆ ವ್ರತಕ್ಕೆ ಭಂಗ ಬರುತ್ತೆ ಯಾವ ಕ್ಷಣದಲ್ಲಿಯೂ
ಗೊತ್ತಾಗಬಾರದು,
’ಅಹಿಂಸಾ ಪರಮೋ ಧರ್ಮ’.!!!!
********************************************************************
. ಪಿಂಕಿಯ ಅಜ್ಜಿಯ ‘ಸಲ್ಲೇಖನ’ವೂ ಯಾವುದೆ ಅಡೆತಡೆ ಇಲ್ಲದೆ ಭರ್ಜರಿಯಾಗಿಯೆ ಸಾಗಿತ್ತು. ಹಾಗೆಯೆ
ತಿಂಗಳುಗಳು ಕಳೆದವು ಸರಳಾದೇವಿಯವರು ಈಗ ಘನ ಆಹಾರದಿಂದ ದ್ರವ ಆಹಾರಕ್ಕೆ
ಹೊರಳಿದ್ದಳು.ಸರಳಾದೇವಿಯವರ ಉದ್ದೇಶ ಕೇವಲ ‘ಕೈವಲ್ಯ ಜ್ಞಾನ’ ಸಾಧನೆ ಮಾತ್ರವಾಗಿತ್ತು.ಅಲ್ಲದೆ
ತೀರ್ಥಂಕರರು ಅನುಭವಿಸುವ -ಹುಟ್ಟು ಸಾವುಗಳಿಂದ ಮುಕ್ತಗೊಂಡ ಮೋಕ್ಷ ಸಾಧನೆಯಾಗಿತ್ತು. ’ಸಂತರಾ’ ದ
ಮೊದಲ ದಿನದಿಂದಲೆ ಮೋಕ್ಷಕ್ಕೆ ಹತ್ತಿರ ವಾದಂತೆ ಭಾಸವಾಗುತ್ತಿತ್ತು.ಆಹಾರದ ಪ್ರಮಾಣ ಕಡಿಮೆಯಾದಂತೆ
ಅಷ್ಟರ ಮಟ್ಟಿಗೆ ಮೋಕ್ಷ ಪ್ರಯಾಣದ ಹಾದಿಯು ಸವೆದಂತೆ ಅನ್ನಿಸುತಿತ್ತು. ಘನ ಆಹಾರದಿಂದ ದ್ರವ ಆಹಾರಕ್ಕೆ
ಪರಿವರ್ತನೆ ಯಾದಾಗಲಂತೂ ದೇಹ ನಿಜವಾದ ಅರ್ಥದಲ್ಲಿ ಹಗುರವಾಗಿತ್ತು.ಸರಳಾದೇವಿಯರಿಗೆ ಮೋಕ್ಷವಿನ್ನು
ದೂರವಿಲ್ಲ ಎನ್ನುವಂತೆ ಅನ್ನಿಸುತ್ತಿತ್ತು.ಹಿಂಸೆ ನೋಡಬಾರದು ಅದು ಸಲ್ಲದು. ಈ ವ್ರತದಲ್ಲಿ ಅದನ್ನೂ
ಕಟ್ಟುನಿಟ್ಟಿನಿಂದ ಸಾಧಿಸಬೇಕು.ಅಜ್ಜಿಯೂ ಅಷ್ಟೆ ‘ಅಹಿಂಸಾ’ ವ್ರತವನ್ನೂ ತುಂಬಾ ಸೂಕ್ಷ್ಮವಾಗಿ ಪಾಲಿಸುತಿದ್ದರು.ಆ
ಒಂದು ದಿನ ಆಕಸ್ಮಿಕವಾಗಿ ಟೆಲಿವಿಷನ್ ನಲ್ಲಿ ಉಗ್ರರ ಅಟ್ಟಹಾಸದ ಪ್ರಸಾರವನ್ನು ಆಕಸ್ಮಿಕವಾಗಿ
ಸರಳಾದೇವಿಯವರು ನೋಡಿಬಿಟ್ಟರು. ಮುಗಿಯಿತು ಇನ್ನು ತನ್ನ ಸಂತರಾಕ್ಕೆ ಅರ್ಥವಿಲ್ಲವೆಂದು ಧಡಬಡನೆ
ಬಸದಿಯ ತೀರ್ಥಂಕರರ ಬಳಿ ಓಡಿದರು.ಅದು ಉದ್ದೇಶಪೂರ್ವಕವಾಗಿ ನೋಡಿದ ಧೃಶ್ಯವಲ್ಲ ಆಕಸ್ಮಿಕವಾಗಿ
ಕಂಡಿದ್ದು ಪರವಾಗಿಲ್ಲ ವೆನ್ನುವ ಪರಿಹಾರ ದೊರೆಯಿತು.ಸರಳಾದೇವಿಯರಿಗೆ ಸಮಾಧಾನವಾಯಿತು.ಇದೆಲ್ಲಕ್ಕಿಂತ
ಹೆಚ್ಚಾಗಿ ಮನೆ ಮಂದಿಯೆಲ್ಲಾ ನಿಟ್ಟುಸಿರು ಬಿಟ್ಟರು.ಆಕಸ್ಮಿಕವಾಗಿ ಸಂಭವಿಸಿದ ಘಾತಕ್ಕೆ ತಮ್ಮ ತಾಯಿ,ಅತ್ತೆ,ಅಜ್ಜಿ
ಏನನ್ನು ಮಾಡಿಕೊಂಡುಬಿಡುತ್ತಾಳೆ ಎನ್ನುವ ಆತಂಕದಲ್ಲಿದ್ದರು ಮನೆಯವರೆಲ್ಲರೂ.ಮನೆಗೆ ವಾಪಸ್ಸಾದ ಅಜ್ಜಿ
ಯಥಾಪ್ರಕಾರ ತನ್ನ ಸಲ್ಲೇಖನದಲ್ಲಿ ಮುಳುಗಿಹೋದಳು.
*****************************************************
                                                              ಮಧ್ಯಂತರದ ಮೊದಲು...

ಸರಿ ಸುಮಾರು ಐದು ನಿಮಿಷಗಳ ಕಾಲ ಜಾಕಿಗೆ ಹಾಡನ್ನು ಶುರು ಮಾಡಲು ಬಿಡಲಿಲ್ಲ, ಆ ಪರಿಯ
ಸಂಭ್ರಮದಲ್ಲಿ ಮಿಂದೆದ್ದರು.ಕೆಲ ಹುಡುಗಿಯರು ಭಾವಾವೇಶಕ್ಕೆ ಒಳಗಾಗಿ ಅತ್ತು ಬಿಟ್ಟರು.ಜಾಕಿ ಹಾಡನ್ನು
ಶುರುಮಾಡಿದ ಆ ಕ್ಷಣ,ಒಂದು ನೀರವ ಮೌನ!!! ಬಾಯಿ ತೆರೆದು ಒಂದೇ ಅಳತೆಯಲ್ಲಿ ತನ್ಮಯನಾಗಿ ಮೈಕಲ್
ಜಾಕ್ಸನ್ ನ ಹಾಡೊಂದನ್ನು ಜಾಕಿ ಹೇಳಲು ಪ್ರಾರಂಭಿಸಿದಂತೆ ಒಬ್ಬೊಬ್ಬರು ತಮಗೆ ತೋಚಿದಂತೆ ಅದರಲ್ಲಿ

ಲೀನವಾಗಿ ಹೋದರು.ಕೆಲವರು ಸಣ್ಣಗೆ ತಮ್ಮೊಳಗೆ ತಾವು ಗುನುಗಿಕೊಂಡರು,ಕೆಲವರು ಚಿಟಿಕೆ ಹೊಡೆದು
ಆನಂದಿಸಿದರು,ಇನ್ನು ಕೆಲವರು ತಮ್ಮ ಕಾಲುಗಳನ್ನು ಹಾಡಿನ ರಿದಮ್ ಗೆ ತಕ್ಕಂತೆ ಆಡಿಸುತ್ತಾ
ಸಂಭ್ರಮಿಸಿದರು.ಪಿಂಕಿಯೂ ಹಾಗೆ ತನ್ನ ಕಾಲುಗಳನ್ನು ರಿದಮ್ ಗೆ ತಕ್ಕಂತೆ ಕುಣಿಸುತ್ತಾ ಸಂಭ್ರಮಿಸಿದಳು.ಹಾಡು
ಮುಗಿಯುತ್ತದಂತೆ ಪಿಂಕಿಯೂ ಸಹ ಜಾಕಿಯ ಜೊತೆ ಗೂಡಿ ಪಲ್ಲವಿಯನ್ನು ಹಾಡಹತ್ತಿದಳು. ಪಿಂಕಿ ಪಲ್ಲವಿಯನ್ನು
ಹಾಡುತ್ತ ತನ್ನ ಕಾಲುಗಳನ್ನು ಕುಣಿಸುತ್ತಾ ಮತ್ತೆ ಕೈಯನ್ನು ಬಡಿಯುತ್ತಾ ಸಂಭ್ರಮಿಸಿದಳು.ತಾನು ತನ್ನ ಗೆಳೆತಿಯರ
ಜೊತೆ ವರ್ಷದ ಕೊನೆಯಲ್ಲಿ ಕಂಪನಿಯಲ್ಲಿ ನಡೆಸುವ ‘ಸಂಭ್ರಮಾಚರಣೆ’ಯಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮ
ಮುಗಿಯುವ ಹಂತಕ್ಕೆ ಬಂದಿತ್ತು.ಜಾಕಿ ಇನ್ನು ಫಾಸ್ಟ್ ಬೀಟ್ ಎನ್ನುವಂತಹ ಹಾಡುಗಳನ್ನು ಹಾಕಿ ಮುಕ್ತ ‘ಡ್ಯಾನ್ಸ
ಫ್ಲೋರ್’ ಗೆ ಅನುವು ಮಾಡಿಕೊಟ್ಟ.ಅಲ್ಲಿ ಸೇರಿದ್ದ ಕಂಪನಿಯ ಜನರಲ್ಲೇನಕರು ‘ಮಧು ಲೋಕ’ ದ ಕಡೆ ಹೆಜ್ಜೆ
ಹಾಕಿದರು,ಇನ್ನು ಕೆಲವರು ಆ ಹೊತ್ತಿಗಾಗಲೇ ಓಲಾಡುತ್ತಾ ‘ಡ್ಯಾನ್ಸ ಪ್ಲೋರ್’’ ಕಡೆ ಅಡ್ಡಾ ದಿಡ್ಡಿ ಹೆಜ್ಜೆ ಹಾಕುತ್ತ
ಸಾಗಿದರು.ಪಿಂಕಿಯ ಗೆಳತಿಯರು ತೇಲಾಡಲು ಪಿಂಕಿಯನ್ನೂ ಎಳೆದು ಕೊಂಡು ಹೋದರು.ಅವರೆಲ್ಲಾ ಕೈಯಲ್ಲಿ
ಒಂದೊಂದು ಬೀಯರ್ ಬಾಟಲಿಗಳನ್ನು ಹಿಡಿದು ಅದರ ಒಗರು ರುಚಿಯನ್ನು ಆನಂದಿಸ ಹತ್ತಿದರು.ಪಿಂಕಿಗೂ
ಕುಡಿಯುವಂತೆ ಹೇಳಿದರು.ಆದರೆ ಪಿಂಕಿ ‘ನನಗೆ ಈಗ ಇದರ ಅಭ್ಯಾಸವಿಲ್ಲ,ಮುಂದೆ ತೀರಾ ಅನಿವಾರ್ಯ ವೆಂದರೆ
ನೋಡುವ” ಎಂದು ಹೇಳಿ ಜಾರಿಕೊಂಡಳು.ಉಳಿದವರೆಲ್ಲರು ಅಕ್ಷರಶಃ ಆಲ್ಕೋಹಾಲ್ ನಲ್ಲಿ
ಮಿಂದೆದ್ದರು.ಮಧ್ಯರಾತ್ರಿ ಸರಿಯಿತು ಇನ್ನೇನು ಎಲ್ಲಾ ಮುಗಿದಿತ್ತು ಎಲ್ಲರೂ ಮನೆ ಕಡೆ ಹಜ್ಜೆ ಹಾಕಿದರು. ಪಿಂಕಿಯ
ತಲೆಯಲ್ಲಿ ಕೇವಲ ಬೀಯರ್ ದೆ ಕೋಲಾಹಲ-ಬೀಯರ್ ಕುಡಿಯುವುದೊ, ಇಲ್ಲವೂ,ಕುಡಿದರೆ ಏನು ತಪ್ಪು?ಇಲ್ಲ
ಕುಡಿಯಬಾರದು! ಅದು ಹಿಂಸೆ,ನಾವು ‘ಅಹಿಂಸಾ ವಾದಿ’ಗಳು.ಬೀಯರ್ ನಲ್ಲಿ ನೊರೆಂಟು ಸೂಕ್ಷಾಣು
ಜೀವಿಗಳಿರುತ್ತವೆ, ಅವುಗಳ ಸಾವಿನಿಂದಲೆ ಆಲ್ಕೋಹಾಲ್ ಆಗಿ ಪರಿವರ್ತನೆ
ಆಗುವುದು,ಕುಡಿಯಬಾರದು.ಸರ್ವತಾಃ!!! ನೀರಿನಲ್ಲಿಯೂ ಸಹ ಅಷ್ಟೆ ತಾನೆ ಎಷ್ಟೊ ಸೂಕ್ಷ್ಮಾಣು
ಜೀವಿಗಳಿರತ್ತವೆ?ಆದರೆ ನೀರು ಅನಿವಾರ್ಯ,ನೀರಿಲ್ಲದೆ ಬದುಕಲಾಗದು.ಆದರೆ ಬೀಯರ್ ಎನೂ ಅನಿವಾರ್ಯವಲ್ಲ
ಅದಿಲ್ಲದೆ ಬದುಕಬಹುದು.
*********************************************************************
ಮನೆ ಮಂದಿಯೆಲ್ಲರೂ ಪಿಂಕಿಯ ನಾನಿ ಅಕ್ಕ ಪಕ್ಕ ಕುಳಿತು ಏನನ್ನೊ ಮನವರಿಕೆ ಮಾಡಲು
ಪ್ರಯತ್ನಿಸುತ್ತಿರುವುದನ್ನು ಪಿಂಕಿ ಗಮನಿಸದಳು.ನಂತರದಲ್ಲಿ ಪಿಂಕಿಗೆ ತಿಳಿದ ವಿಚಾರವೆನೆಂದರೆ ಪಿಂಕಿಯ ಅಜ್ಜಿ
ಅಂದರೆ ಪಿಂಕಿಯ ತಂದೆ ದಿನೇಶ್ ಲಾಲ್ ಚಂದ್ ರ ತಾಯಿ ಅರ್ಥಾತ್ ದಿವಂಗತ ಷಾ ಪೋಜಾಜಿವನೆ ಚಂದ್
ಜೈನ್ ರ ಹಂಡತಿ ಸರಳಾದೇವಿ ಮರುದಿನದಲ್ಲಿ ಸಲ್ಲೇಖನಕ್ಕೆ ಸಂಕಲ್ಪ ಮಾಡಿರುವುದು ಎನ್ನುವುದು .’ಸಂತರಾ’
ಅಥವಾ ‘ಸಲ್ಲೇಖನ’ ಎನ್ನುವ ದೀಕ್ಷೆ ಸಣ್ಣದಾಗಿರಲಿಲ್ಲ.ಅದು ಜೈನ್ ಸಂಪ್ರದಾಯದ ಶ್ರೇಷ್ಠ ದೀಕ್ಷೆಗಳಲ್ಲಿನ ಕೆಲವೆ
ಕಲವು ದೀಕ್ಷೆಗಳಲ್ಲಿ ಒಂದಾಗಿತ್ತು.ನಿಧಾನವಾಗಿ ಘನ ಆಹಾರ ಕಡಿಮೆ ಮಾಡುತ್ತ ನಂತರದ ದಿನಗಳಲ್ಲಿ ದ್ರವ
ಆಹಾರಕ್ಕೆ ಬಂದು ಕೇವಲ ದ್ರವ ಆಹಾರದಿಂದ ಜೀವ ಹಿಡಿದುಕೊಂಡು ಬದುಕಿರಬೇಕು.ಮುಂದಿನ ದಿನಗಳಲ್ಲಿ ದ್ರವ
ಆಹಾರವನ್ನು ತೊರೆದು ಬಿಡಬೇಕು.ಯಾವುದೆ ಅನ್ನ ನೀರು ಇಲ್ಲದೆ ಜೀವ ಹಾಗೆ ಹೊರಟು ಹೋಗಬೇಕು.ಇದು
ಜೈನ್ ಸಂಪ್ರದಾಯದ ಶ್ರೇಷ್ಠ ದೀಕ್ಷೆಗಳಲ್ಲಿ ಒಂದಾಗಿತ್ತು.ಎಲ್ಲರೂ ಅವರವರಿಗೆ ತೋಚಿದಂತೆ ಹೇಳುವಷ್ಟು
ಹೇಳಿಯಾಗಿತ್ತು.ಕೊನೆಗೆ ಬೇಸತ್ತು ಎದ್ದು ಹೋಗಿಬಿಟ್ಟರು.ಈಗ ಪಿಂಕಿಯ ಸರದಿಯಾಗಿತ್ತು.ನಾನಿಯ ಪಕ್ಕದಲ್ಲಿ
ಕುಳಿತು ನಿಮಗೆ ಸಲ್ಲೇಖನದ ಅವಶ್ಯಕತೆ ಇಲ್ಲ.ನೀವು ಇನ್ನು ಬಾಳುತ್ತೀರಿ, ನಿಮಗಿನ್ನು ಆಯುಷ್ಯವಿದೆ, ಅಲ್ಲದೆ

ಸಾವನ್ನು ನಾವು ನಾವೇ ಸ್ವಾಗತಿಸ ಬಾರದು ಸಾವು ತಾನಗೆ ತಾನು ಬರಬೇಕು. ಸರಳಾದೇವಿಯವರು
ಪಿಂಕಿಯನ್ನು ಕುರಿತು ನೀನಿನ್ನು ಚಿಕ್ಕವಳು ನಿನಗಿದು ಅರ್ಥ ಆಗುವುದಿಲ್ಲ ಎಂದು ಅವಳನ್ನು ಅವಳ ಮಾತನ್ನು
ಒಂದೇ ಏಟಿನಲ್ಲಿ ತಳ್ಳಿ ಹಾಕಿದ್ದರು.
ಮರುದಿನ ನಸುಕಿನಲ್ಲಿಯೆ ಎಲ್ಲರೂ ಎದ್ದು ಮತ್ತು ಎಲ್ಲ ರೀತಿಯಿಂದ ಸಿಧ್ದಳಾದ ಸರಳಾದೇವಿಯವರ ಜೊತೆ
ಮನೆಯ ಹತ್ತಿರದಲ್ಲೆ ಇದ್ದ ಬಸದಿಗೆ ಹೊರಟರು.ಪಿಂಕಿಯು ಅಜ್ಜಿಯ ಜೊತೆಯಲ್ಲಿಯೆ ಮನೆಯಿಂದ ನಿಧಾನವಾಗಿ
ನಡೆದು ಕೊಂಡು ಬಂದಳು.ನಾನಿಯ ಹೆಜ್ಜೆ ತುಂಬಾ ಸೋಕ್ಷ್ಮ ವಾಗಿದ್ದವು,ಕಾಲಡಿ ಸಿಕ್ಕು ಯಾವುದೆ ಜೀವಿಗಳು
ಸಾಯಬಾರದು, ಹಿಂಸೆ ಮಹಾಪರಾಧ.ಎಲ್ಲಾ ಜೀವಿಗಳಿಗೂ ಜೀವಿಸುವ ಹಕ್ಕಿದೆ ಎನ್ನುವುದಾಗಿತ್ತು.ಪಿಂಕಿಯು ತನ್ನ
ಅಜ್ಜಿ ಇಡುತ್ತಿದ್ದ ಆ ಸೂಕ್ಷ್ಮ ಹೆಜ್ಜೆಗಳನ್ನು ಗಮನಿಸಿದಳು.ಬೇರೆಯವರಿಗೆ ಹಿಂಸೆ ಬಯಸದ ಜೀವ ತನಗೆ ತಾನೆ
ಹಿಂಸಿಸುತ್ತಿದೆಯಲ್ಲಾ?ಇಲ್ಲ ದೇಹ ದಂಡನೆ ಸಾಧು ಅದು ಮೋಕ್ಷದ ಒಂದು ಸಾಧನೆ ಎನ್ನುವ ಹಿಂದೆಂದೊ ಅಜ್ಜಿ
ಹೇಳಿದ್ದ ಉತ್ತರ ನೆನಪಾಗಿತ್ತು. ಬಸದಿಯ ಒಳಗೆ ತೀರ್ಥಂಕರರ ಸನ್ನಿಧಾನದಲ್ಲಿ ಸಕಲ ಪದ್ಢತಿಗಳಂತೆ
ಸರಳಾದೇವಿಯವರಿಗೆ ಸಲ್ಲೇಖನದ ದೀಕ್ಷೆ ಬೋಧಿಸಲಾಯಿತು.ಪಿಂಕಿಯ ಅಜ್ಜಿ ನಿರುಮ್ಮಳಾಗಿ ದೀಕ್ಷೆ ಪಡೆದು
ನಮಸ್ಕರಿಸಿದಳು.ಪಿಂಕಿಯ ಅಜ್ಜಿ ಸರಳಾದೇವಿ ಸಲ್ಲೇಖನದ ದೀಕ್ಷೆ ಮನೆಯ ಇತರ ಇನ್ಯಾವುದೆ ಸದಸ್ಯರನ್ನು
ಪಿಂಕಿಯನ್ನು ಕಾಡಿದಷ್ಟು ಕಾಡಿರಲಿಲ್ಲ.ಪಿಂಕಿ ತಂದೆ ದಿನೇಶ್ ಆಯಿತು ಅವನ ಹೆಂಡತಿ ಟೀನಾ ಆಯಿತು,ಪಿಂಕಿಯ
ಸೋದರತ್ತೆ ಅನಿತಾಳಾಯಿತು ಮತ್ತೆ ಇನ್ನಿತರ ಬಂಧು ಮಿತ್ರರು ದೀಕ್ಷಾ ಸಮಾರಂಭಕ್ಕೆ ಬಂದಿದ್ದರು ಆದರೆ
ಅಷ್ಟಾಗಿ ವಿಚಲಿತಲಾಗದೆ ಇದ್ದರು.ಕಾರಣ ಅವರೆಲ್ಲರೂ ಸುಮಾರು ದಿನಗಳಿಂದ ಹೇಳುವಷ್ಟು
ಹೇಳಿಯಾಗಿತ್ತು.ಅಲ್ಲದೆ ಅವರವರ ಬೇರೆ ಬೇರೆ ಆದ್ಯತೆಗಳ ಮಧ್ಯದಲ್ಲಿ ನಿಧಾನವಾಗಿ ಮೈಮರೆತು ಈ ವಿಚಾರ
ಸೈಡ್ ವಿಂಗ್ ಗೆ ಸರಿಯುತ್ತಾ ಹೋಗಿತ್ತು.ಎಲ್ಲಾ ವಿಧಿ ವಿಧಾನಗಳು ಮುಗಿದು ಹೋದವು.ಅಲ್ಲಿ ಇನ್ನು
ತರ್ಕ,ವಿಚಾರ,ಸಂಭಾಣೆಗಳಿಗೆ ಅರ್ಥವಿರಲಿಲ್ಲ,ಆಗಿ ಹೋಗಿದ್ದನ್ನು ಒಪ್ಪಿಕೊಳ್ಳಬೇಕು.ಜೀವನದ ಎಷ್ಟೋ
ಪರಿಸ್ಥಿತಿಯಂತೆ!!!

                                                     ಇದು ಕೊನೆಯಂತೂ ಅಲ್ಲ...

ಆ ದಿನ ಪಿಂಕಿ ಕೆಲಸದ ವಿಪರೀತ ಒತ್ತಡದಲ್ಲಿ ಮುಳುಗಿ ಹೋಗಿದ್ದಳು.ಇನ್ನು ಆಗುವುದಿಲ್ಲ ಎನ್ನುವಂತೆ
ಪಿಂಕಿಯನ್ನು ಆ ದಿನದ ಒತ್ತಡ ಹಿಂಡಿ ಹಾಕಿದ್ದವು.ಬೇಡ ಬೇಡ ಅನ್ನುತ್ತಿದ್ದರು ಅವಳ ಮನಸ್ಸು ಆಫಿಸ್ ನ ಒತ್ತಡದ
ಕೆಲಸದ ಕಡೆ ಎಳೆದುಕೊಂಡು ಹೋಗುತ್ತಿತ್ತು.ಎಷ್ಟೆ ತಪ್ಪಿಸಿಕೊಂಡು ಹೊರಬಂದರು ಆಗುತ್ತಿರಲಿಲ್ಲ.ಕಾರಣ ಅದು
ಭಯಂಕರ ಒತ್ತಡದಿಂದ ಕೂಡಿದ ಕೆಲಸವಾಗಿತ್ತು.ಅವಳಿಗೆ ಆ ಒಂದು ಒತ್ತಡದಿಂದ ಆ ಕ್ಷಣಕ್ಕೆ ಮುಕ್ತಿ ದೊರೆಯ
ಬೇಕಾಗಿತ್ತು.ಅದು ವಾರಾಂತ್ಯ!!! ಈಗೀಗ ಪಿಂಕಿಯ ಸ್ನೇಹಿತರು ಅವಳನ್ನು ‘ಆಲ್ಕೊಹಾಲ್ ಮಜ್ಜನ’ ಕ್ಕೆ
ಪೀಡಿಸುವುದು ನಿಂತು ಹೋಗಿತ್ತು.ಆ ದಿನ ಎಲ್ಲರ ಜೊತೆ ತಾನಾಗಿಯೆ ಪಬ್ಬಿನ ದಾರಿ ತುಳಿದಳು. ಮನಸ್ಸಿನಲ್ಲಿ
ಅಳುಕು ತುಂಬಿತ್ತು.ಆದರೆ ಆ ಕ್ಷಣದ ಒತ್ತಡ ಮುಕ್ತಿಗಾಗಿ ಅದು ‘ಸಿಧ್ಧ ಔಷಧಿ’ ಎಂದು ಯಾರೊ ಹೇಳಿದ್ದರು.ಪಿಂಕಿಗೂ

ಸಹಾ ಆ ಒಂದು ಚಕ್ರತೀರ್ಥದಿಂದ ಹೊರಬರಬೇಕಾಗಿತ್ತು.ಉಳಿದವರನ್ನೆಲ್ಲಾ ಹಿಂಬಾಲಿಸಿ ಹೊರಟಳು.ಪಬ್ಬಿನ
ಮಬ್ಬು ಗತ್ತಲೆಯಲ್ಲಿ ಎಲ್ಲರ ಜೊತೆ ಹರಟುತ್ತಾ ಕುಳಿತಳು.ಸಣ್ಣಗೆ ಇದ್ದ ಅಳುಕು ದೈತ್ಯ ರೊಪ ಪಡೆದು ‘ಪಾಪ ಪ್ರಜ್ಞೆ’
ಯಂತೆ ಕಾಡ ತೊಡಗಿತು.ಒಂದರೆಕ್ಷಣ ಕಣ್ಮುಚ್ಚಿ ಕುಳಿತಳು.ಶ್ರವಣ ಬೆಳಗೊಳದ ಗೊಮ್ಮಟನ ವಿರಾಟ ರೂಪ
ಕಣ್ಮುಂದೆ ಬಂದು ನಿಂತಿತು.ಇನ್ನೇನು ಎಲ್ಲರ ಬೀಯರ್ ಗ್ಲಾಸ್ ಗಳು ಒಟ್ಟಾಗಿ ತಾಗಿಕೊಂಡು ‘ಚೀ..ಯ....ರ್ಸ’
ಎನ್ನಬೇಕು.ಆ ಹೊತ್ತಿನಲ್ಲಿ ಬೀಯರ್ ಬಾಟಲಿಯನ್ನು ಟೇಬಲ್ ನ ಮೇಲಿಟ್ಟು ಒಂದೇ ಓಟದಲ್ಲಿ ಮನೆಕಡೆ
ಓಡಿದಳು.ದಾರಿಯುದ್ದಕ್ಕೂ ಬೀಯರ್ ಹೀರಲು ಬಯಸಿದ್ದಕ್ಕಾಗಿ ವಿಪರೀತ ‘ಪಾಪ ಪ್ರಜ್ಞೆ’ ಕಾಡುತ್ತಿತ್ತು.ಎಂತಹ
ಘಾತವಾಗುತ್ತಿತ್ತು.ಏನಿದು ಹಿಂಸೆಯ ವಕಾಲತ್ತು ವಹಿಸುತ್ತಿದ್ದೇನೆ?’ ತನಗೆ ತಾನೇ ಕೇಳಿಕೊಂಡಳು.ಎಲ್ಲಾ
ಪರಿಸ್ಥಿತಿಯ ಕೈಗೊಂಬೆ ಎನ್ನುವ ವಿತಂಡವಾದವೂ ತೂರಿ ಬಂದದ್ದಾಯಿತು.ತಾನು ಜೈನಳೆನ್ನುವ ತರ್ಕದ ಮುಂದೆ
ಉಳಿದೆಲ್ಲವೂ ಗೌಣವಾಗಿ ಹೋದವು.ಮನೆಗೆ ಬಂದವಳೆ ತನ್ನ ನಾನಿಯ ಮುಂದೆ ಕುಳಿತು ಅತ್ತು ಬಿಟ್ಟಳು.ಅಜ್ಜಿ
ಪಿಂಕಿಯ ತಲೆ ಸವರಿ ಸಮಾಧಾನ ಮಾಡಿದರು.ಸರಳಾದೇವಿ ತಾನು ಹಿಡಿದಿರುವ ‘ಸಲ್ಲೇಖನ’ ವ್ರತ ’ದಿಂದ
ಬೇಸತ್ತು ಹೀಗೆ ಅಳುತ್ತಿರಬಹುದೆಂದು ಅಂದುಕೊಂಡಿದ್ದಳು.ಆದರೆ ಪಿಂಕಿಗೆ ವಿಪರೀವಾದ ‘ಪಾಪಪ್ರಜ್ಞೆ’ ಅಪರಾಧಿ
ಭಾವವನ್ನು ತರಿಸಿತ್ತು.ಪಿಂಕಿಗೆ ಆ ಮಟ್ಟದಲ್ಲಿ ಅಪರಾಧಿ ಭಾವ ಬರಲು ತಾನು ಕೇವಲ ಜೈನಳು ಅನ್ನುವ ಒಂದೆ
ಕಾರಣವಾಗಿರಲಿಲ್ಲ.ಪಿಂಕಿಯ ಅಜ್ಜಿ ಮನೆಯಲ್ಲಿ ‘ಸಂತರಾ’ ಪಡೆದು ಸಾವನ್ನು ಆಹ್ವಾನಿಸಿ ಮೋಕ್ಷಕ್ಕೆ
ಹಾತೊರುತ್ತಿದ್ದರೆ ತಾನು ಕೇವಲ ಸಣ್ಣದೊಂದು ಒತ್ತಡ ನಿಭಾಯಿಸಲಾಗದೆ ಹಿಂಸೆಯ ದಾರಿ ಹಿಡಿಯುತ್ತಿದ್ದದು
ಯಾವ ಧರ್ಮ? ತನ್ನನ್ನು ತಾನೆ ಪ್ರಶ್ನಿಸಿಕೊಂಡಳು.ಈ ಪ್ರಶ್ನೆ ಮತ್ತು ಇನ್ನೂ ಈ ತರಹದ ಹತ್ತಾರು ವ್ಯಂಗ್ಯಗಳು
ಪಿಂಕಿಯನ್ನು ತಿವಿಯುತ್ತದ್ದಲಿದ್ದವು.

ಇನ್ಯಾವುದೊ ಅರಿಯದ ರಾಷ್ಟ್ರದಲ್ಲಿ ಮತ್ತಮ್ಮೆ ಉಗ್ರರ ನರ್ತನ.ಯುಗಾದಿಗೆ ಮೊದಲು ಉದುರುವ
ಹಣ್ಣೆಲೆಗಳಂತೆ ಪಟಪಟನೆ ಜೀವಗಳು ಉದುರಿದ್ದವು.ಹಿರಿ ಜೀವ,ಹಸುಳೆ,ಅಸಾಹಕರು ಎನ್ನದಂತೆ ಸಿಕ್ಕ ಸಿಕ್ಕವರನ್ನು
ಸಿಗಿದು ಹಾಕಿದ್ದರು.ಆ ಸುದ್ದಿಯಿಂದ ತಪ್ಪಿಸಿಕೊಳ್ಳಲು ಪಿಂಕಿ ಚಾನಲ್ ನ್ನು ಬದಲಿಸಲು ಪ್ರಾರಂಭಿಸಿದಳು.ಎಲ್ಲಾ
ಚಾನಲ್ ನಲ್ಲೂ ಅದೇ ಸುದ್ದಿ.ಆ ‘ಹಿಂಸೆ’ಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು.ಮನಸ್ಸು ಮತ್ತದೆ ಸುದ್ದಿ ಕಡೆ
ಹೊರಳುತ್ತಿತ್ತು.ಮನದೊಳಗಿನ ಯುಧ್ದ ಮತ್ತೊಮ್ಮೆ ಜಾಗೃತ ಗೊಂಡಿತ್ತು.ವಿಷಯ ಸಣ್ದದಿರಬಹುದು ಆದರೆ
ಕುರುಕ್ಷೇತ್ರಕ್ಕೆ ಕಾರಣವಾಗಿತ್ತು.ಮತ್ತದೆ ಬೀಯರ್ ವಿಚಾರ!!!!.ಕುಡಿದರೆ ಏನು ತಪ್ಪು?ಸೂಕ್ಷ್ಮಾಣು ಜೀವಿಗಳು
ಸಾಯಲೇ ಬೇಕು,ಅದು ವಿಧಿ ನಿಯಮ.ಹುಟ್ಟುವ ಜೀವಿ ಸಾಯಲೆ ಬೇಕು ಅದರಂತೆ ಸಾಯುತ್ತವೆ.ಅದು ಒಂದು
ಪೇಯವಾಗಿ ಪರಿವರ್ತನೆಯಾಗುವುದು ಪ್ರಕೃತಿ .ಒಮ್ಮೆ ತರ್ಕ ಮತ್ತೊಮ್ಮೆ ವಿತಂಡ,ಮೊಗದೊಮ್ಮೆ ನೆಪ ಹೀಗೆ
ಅವಳ ಯುಧ್ಧ ಸಾಗಿತ್ತು.ಕುಡಿಯುವ ನಿರ್ಧಾರ ಮಡಿಯೇ ಬಿಟ್ಟಳು!!
ತಾನು ಕುಡಿಯಲೇಬೇಕು ಎನ್ನುವ ನಿರ್ಧಾರ ಮಾಡಿಯಾಗಿತ್ತು.ಸುಮ್ಮನೆ ಎನೋ ಒಂದು ನೆಪ ಮಾಡಿಕೊಂಡು
ಹೊರಟಳು,ತನ್ನ ಎಲ್ಲಾ ಬಾಲಂಗೋಚಿಯ ಸಂಗಡ,ಅವರೆಲ್ಲರಗೊ ಆಶ್ಚರ್ಯ!.ಪಿಂಕಿಯ ನಡಿಗೆಯಲ್ಲಿದ್ದ ವೇಗ ಪಬ್
ಹತ್ತಿರವಾದಂತೆ ನಿಧಾನವಾಗಿ ಕಡಿಮೆಯಾಗುತ್ತ ಹೋಯಿತು.ಸರಕ್ಕನೆ ಯುದ್ಧ ಭೂಮಿಯಾಗಿತ್ತು ಮನಸ್ಸು.ಅಕ್ಷರಶಃ
ತನ್ನೇಲ್ಲಾ ಯುಧ್ದಕ್ಕೆ ಒಂದು ಅಂಕ ಪರೆದೆ ಎಳೆದು ಬಿಟ್ಟಳು.ಅಳುಕಿನಲ್ಲಿಯೇ ಒಳ ನಡೆದಳು.ಯಾವುದೇ ಮತ್ತೊಂದು

ಯುಧ್ದಕ್ಕೆ ಆಸ್ಪದ ಕೊಡದೆ ಬೀಯರ್ ಹೀರಿ ಬಿಟ್ಟಿದ್ದಳು,ಪಿಂಕಿ,ಒಂದಾದ ಮೇಲೆ ಇನ್ನೊಂದು ಪೆಗ್.ಅದರ ಒಗರು
ರುಚಿಯನ್ನು ವಾಕರಿಸುತ್ತಲೆ ಅನುಭವಿಸುತದ್ದಳು.ಮೊದಲ ಅನುಭವ ಸ್ವಲ್ಪ ನಿರಾಳ ಭಾವ ತಂದಿತ್ತು,ಎಲ್ಲದರಿಂದ
ಮುಕ್ತಿ ಹೊಂದಿದ ಅನುಭವ ನೀಡಿತ್ತು.ಕುಡಿದ ಅಮಲಿನಲ್ಲೆ ಮನೆ ತಲುಪಿದಳು.ಪಿಂಕಿಗೆ ಬೇರೆ ಯಾರನ್ನು
ಎದುರಿಸುವುದು ಅಷ್ಟು ಕಷ್ಟವಾಗಲಿಲ್ಲ.ಆದರೆ ತನ್ನ ಅಜ್ಜಿಯನ್ನು ಎದುರಿಸುವುದಕ್ಕೆ ಆಗಲಿಲ್ಲ.ಸಲ್ಲೇಖನವೆನ್ನುವ ಕಠಿಣ
ವ್ರತದಿಂದ ಮರಣಶಯ್ಯೆಯಲ್ಲಿರುವ ಅಜ್ಜಿಯನ್ನು ನೋಡಿದಳು,ತನ್ನ ಮೇಲೆಯೆ ತನಗೆ ಅಸಹ್ಯ ಬರುವಂತೆ
ಆಗಿತ್ತು.ಥಟನೆ ಮನೆಗೋಡಿ ಪಶ್ಚತ್ತಾಪದಿಂದ ಬೆಂದು ಹೋದಳು. ಈಗ ಅವಳಲ್ಲಿ ಯುಧ್ದ ಶುರವಾಗಲಿಲ್ಲ.ಏಕೆಂದರೆ
ಅಲ್ಲಿ ಯುಧ್ದಕ್ಕೆ ಅವಕಾಶವಿರಲಿಲ್ಲ ಕಾರಣ ಅಲ್ಲಿ ಯಾವ ವೈರಿಗಳು ಇರಲಿಲ್ಲ.ಆ ಕ್ಷಣದಲ್ಲಿ ಎಲ್ಲವೂ
ನಿಚ್ಚಳವಾಗಿತ್ತು,ತನ್ನಲ್ಲಿನ ಯುದ್ಧ ಯ್ಯಾರ್ಯಾರ ನಡುವೆ ಎನ್ನುವಂತೆ.ಅದರೇ ಕೇವಲ ಕೇಲವೆ ನಿಮಿಷಗಳ
ಮಾತು.ನಂತರದಲ್ಲಿ ಮತ್ತದೇ ‘ಪಾಪ ಪ್ರಜ್ಞೆ’ ರಾತ್ರಿ ಕಳೆದಳು.ನಿದ್ದೆ ಬರಲಿಲ್ಲ.ಯಾವುದೋ ಒಂದು ಹೊತ್ತಿನಲ್ಲಿ
ಮಂಪರಿಗೆ ಜಾರಿದ್ದಳು.ಕಣ್ಣು ಬಿಡುವಷ್ಟರಲಲ್ಲಿ ಆಗಲೇ ಸುಮಾರು ಬೆಳಕಾಗಿ ಸುಮಾರು ಹೊತ್ತಾಗಿತ್ತು.ತನ್ನ
ನಾನಿಯ ಬಳಿ ಹೋದಳು.ವಿಪರೀತವಾಗಿ ಕ್ಷೀಣವಾಗಿ ಹೋಗಿದ್ದರು ಇನ್ನೆಷ್ಟು ದಿನಗಳು? ಅನ್ನುವಂತಾಗಿತ್ತು.ಆ
ದಿನದಿಂದ ದ್ರವ ಆಹಾರವನ್ನೂ ವರ್ಜಿಸಲು ಅಜ್ಜಿ ನಿರ್ಧರಸಿದ್ದಳು.ಪಿಂಕಿಗೆ ಹಿಂದಿನ ದಿನದ ‘ಹ್ಯಾಂಗೋವರ್’ ಇನ್ನೂ
ಸಂಪೂರ್ಣವಾಗಿ ಇಳಿದಿರಲಿಲ್ಲ.ಕಣ್ಣುಗಳು ಉರಿಯುತ್ತಿದ್ದವು,ಕಾಲುಗಳಲ್ಲಿ ನಿಶಕ್ತಿ.ತನ್ನ ಅಜ್ಜಿ ಏನೋ ಒಂದು
ಪರಮಾರ್ಥ ಸಾಧನೆಗೆ ದಿನದಿಂದ ಆಹಾರ ಕಡಿಮೆ ಮಾಡುತ್ತ ಬರುತ್ತಿದ್ದರೆ ತಾನು ಯಾವುದೊ ಒಂದು
ಕಾರಣವಾಗಿರದ ಕಾರಣ ಎತ್ತಿಕೊಂಡು ಕುಡಿಯಬಾರದನ್ನು ಕುಡಿದು ಬಂದಿದ್ದಕ್ಕೆ ತನ್ನ ಮೇಲೆ ತನಗೆ ಅಸಹ್ಯ
ಬರುವಷ್ಟರ ಮಟ್ಟಿಗೆ ಬೇಸರ ಹುಟ್ಟಿತ್ತು.
*******************************************************************************
ಸರಳಾದೇವಿಯವರ ದೇಹವೂ ಹಿಂದೆಂದಿಗಿಂತಲೂ ಕೃಷವಾಗಿತ್ತು.ಈಗ ಯಾವೊಂದು ಆಹಾರದ
ಅಧಾರವಿಲ್ಲದೆ ಉಸಿರನ್ನು ಹಿಡಿದಿದ್ದರು.ಅದೊಂದು ಇಳಿಸಂಜೆ ಸೋನೆ ಮಳೆ ಜಡಿಯುತ್ತಾ ಇತ್ತು.ನಗರದ ಒಂದು
ಪ್ರತಿಷ್ಠಿತ ಹೊಟೆಲ್ ನ ಮೂಲೆಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದರು.ಅದರ ಪರಿಣಾಮದಿಂದ ಬಸ್ಸಿನಿಂದ ಇಳಿದು
ಮನೆಕಡೆ ಹೊರಡತ್ತಲಿದ್ದ ಅಮಾಯಕ ತಾಯಿ ಮತ್ತು ಆಕೆಯ ಎರೆಡು ವರ್ಷದ ಹೆಣ್ಣು ಕಂದಮ್ಮ ಸುಟ್ಟು
ಕರಕಲಾಗಿದ್ದರು.ಕೋಣೆಯ ಒಂದು ಬದಿಯಲ್ಲಿದ್ದ ಮಂಚದಲ್ಲಿ ಮಲಗಿದ್ದ ಸರಳಾದೇವಿ ಟೀವಿಯಲ್ಲಿ ಬರುತ್ತಲಿದ್ದ ಆ
ಸುದ್ದಿ ಕೇಳುತ್ತಲೆ ಸಣ್ಣಗೆ ಕದಲಿದಳು.ಕದಲಿದ್ದರ ಪರಿಣಾಮದಿಂದ ಮಂಚ ಮತ್ತು ಮಂಚದ ಸುತ್ತಲಿದ್ದ ಕೆಲವಾರು
ವಸ್ತುಗಳು ರಪ್ ರಪ್ ನೆ ಕೆಳಬಿದ್ದವು.ಆ ಹೊತ್ತಿಗೆ ಇನ್ನೂ ತಮ್ಮ ಅಂಗಡಿ ಕಾರು ಬಾರು ಮುಗಿಸಿಕೊಂಡು ಮನೆಯ
ಯಾವ ಗಂಡಸರು ಮನೆಗೆ ಮರಳಿರಲಿಲ್ಲ.ಮನೆಯಲ್ಲಿದ್ದವರು ಓಡೋಡಿ ಕೋಣೆಯ ಬಳಿ
ಬಂದರು.ಸರಳಾದೇವಿಯವರ ತೆರೆದ ಕಣ್ಣುಗಳು ಹಾಗೆಯೇ ಇದ್ದವು.ಬಾಯಿ ಮತ್ತು ಮೂಗಿನಿಂದ ಏನೊ ಒಂದು
ತರಹದ ದ್ರವ ವಸರುತ್ತಿತ್ತು.ಹತ್ತಿರ ಹೋಗಿ ಖಾತ್ರಿ ಮಾಡಿಕೊಂಡರು.ಕ್ಷಣ ಮಾತ್ರದಲ್ಲಿ ಮನೆಯ ಮಕ್ಕಳು ಅಂಗಡಿಗೆ
ಬೀಗ ಜಡೆದು ಓಡೋಡಿ ಬಂದರು.ಎಲ್ಲರೂ ಶ್ವೇತವಸ್ತ್ರಧಾರಿಗಳಾಗಿ ಮುಂದಿನ ಕಾರ್ಯಕ್ರಮಕ್ಕೆ
ಅಣಿಯಾದರು.ಕೇವಲ ಕೇಲವೇ ಘಂಟೆಗಳಲ್ಲಿ ಸುದ್ದಿ ನಗರದ ತುಂಬೆಲ್ಲಾ ಹರಡಿತು.ಎಲ್ಲಾ ಬಂಧು ಮಿತ್ರರು ಮನೆ
ಮುಂದೆ ನೆರೆದರು.ಪಿಂಕಿಯೂ ಓಡೋಡಿ ಬಂದಳು.ಅಜ್ಜಿ ಹುಟ್ಟು ಮತ್ತು ಸಾವಿನ ಚಕ್ರದಿಂದ
ಮುಕ್ತಳಾಗಿದ್ದಾಳೆ.ನಮಗೆಂದು ಮುಕ್ತಿ ?ಮನಸ್ಸಿನಲ್ಲಿಯೇ ಅಂದುಕೊಂಡಳು.

ಶಾಸ್ತ್ರೋಕ್ತವಾಗಿ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಆದ ಮೇಲೆ,ಪಿಂಕಿ ಅಜ್ಜಿಗೆ ನಮಸ್ಕರಿಸಲು
ಮುಂದಾದಳು.ಪಿಂಕಿಗೆ ನಮಸ್ಕರಿಸಲು ಮನಸ್ಸು ಬರಲಿಲ್ಲ.ಹಿಂಸೆಯನ್ನೆ ಹಾಸಿ ಹೊದ್ದು ಮಲಗಿದ ನಮ್ಮಂತಹ ಜನಕ್ಕೆ
ಅಹಿಂಸೆಯನ್ನು ವರಿಸಿ ಅದರಂತೆ ಬದುಕಿ ಮೋಕ್ಷದ ಹಾದಿಯಲ್ಲಿರುವ ಅಜ್ಜಿಗೆ ನಮಸ್ಕರಿಸುವ ಯೋಗ್ಯತೆ ಇಲ್ಲವೆಂದು
ಕೊಂಡು ಮೇಲೆದ್ದಳು. ನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ನಂತರ ಮತ್ತೊಂದು ಘಟನೆ ನಡೆದಿತ್ತು.ಲೆಕ್ಕಕ್ಕೆ
ಸಿಗದಷ್ಟು ಸಾವು ಮತ್ತು ನೋವು ಸಂಭವಿಸಿದ್ದವು.ಅಜ್ಜಿಯ ಹೆಣವನ್ನು ಮೇಲೆ ಎತ್ತಲಾಯಿತು ಪಿಂಕಿಗೆ ದುಃಖ
ತಡೆಯಲಾಗಲಿಲ್ಲ.

Friday, August 2, 2019

Published in PRIYANKA AUGUST-2019
**************************************************************
ಬಾಲ್ಕನಿಯ ಖಯಾಲಿ-ನನ್ನದಲ್ಲದ ಸ್ವಗತ
ಸೋನೆ ಜಡಿಯುವ ಒಂದು ಮುಂಜಾವಿನಲ್ಲಿ
ಹಬೆಯಾಡುವ ಕಾಫಿ ಕಪ್ ಜೊತೆ
ಕಣ್ಣಾಡಿಸಿದೆ ಬಾಲ್ಕನಿಯಲ್ಲಿ.

ಕಣ್ಣಡಕದ ಗಾಜುಗಳಿಗೆ ಹಬೆಯಡರಿ
ಎಲ್ಲ ಮಸುಕ ಮಸಕಾದರೂ
ಕೈ ಬೀಸಿ ಕರೆಯುತ್ತಲಿದ್ದವು ಬಾಲ್ಕನಿಯಲ್ಲಿರುವ
ಮತ್ತು ಬಾಲ್ಕನಿಯಾಚೆ ಇರುವ ನನ್ನ ಜೀವಗಳು!

ಹೂ ಕುಂಡದಲ್ಲಿ ಚಿಗುರಿ ನಿಂತ ಗುಲಾಬಿ ಹೂ
ದೊಡ್ಡದೊಂದು ಕುಂಡದಲ್ಲಿ ಒತ್ತಾಗಿ ಬೆಳೆದ ತುಳಸಿ ಗಿಡ
ಮಳೆ ಹನಿಗಳಿಂದ ರಕ್ಷಣೆ ಪಡೆಯಲು
ಆಸರೆ ಪಡೆದು ದಿನ ನಿತ್ಯದ ರೂಢಿಯಂತೆ
ಕಾಳು ಕಡಿಗಳಿಗಾಗಿ ಕಾದು ನಿಂತ ಪರಿವಾಳಗಳು.

ಗಡಿಯಾರದ ಮುಳ್ಳುಗಳಂತೆ ಓಡೋಡಿ
ಬೆಳಗಿನ ಒಂದಿಷ್ಟು ಹೊತ್ತಿಗೆ
ಮನೆಯಲ್ಲಾ ಖಾಲಿ ಖಾಲಿ
ಮನಸ್ಸಿಗೊ ಬಾಲ್ಕನಿಯ ಖಯಾಲಿ!

Friday, July 26, 2019

ಸಮಾಧಿಗಳ ಮೇಲೆ ಸಾಮ್ರಜ್ಯ

Published in 10th March 2019 Samyuktha karnataka
*******************************************************
ಸಮಾಧಿಗಳ ಮೇಲೆ ಸಾಮ್ರಜ್ಯ

ವೀಣ ವಿಪರೀತವಾದ ಒತ್ತಡದಲ್ಲಿ ಸಿಲುಕಿ ಬೆಂದು ಹೋಗಿದ್ದಳು.ಎಲ್ಲಾ ಸಂಪರ್ಕ ಮಾಧ್ಯಮದ ಆಧುನಿಕ ಯುಗದಲ್ಲಿ ಕಳೆದು
ಹೋಗಿದ್ದಳು.ಸವ್ಯವಸ್ಥಿತವಾದ ಸಾರಿಗೆ ವ್ಯವಸ್ಥೆಯಲ್ಲಿಯೂ ಒಂಟಿಯಾಗಿದ್ದಳು.ಎಲ್ಲವನ್ನೂ ಹೊಂದಿಯೂ ಯಾವುದು ಬೇಕು?
ಮತ್ತು ಯಾವುದು ಬೇಡ? ಎನ್ನುವ ಗೊಂದಲದಲ್ಲಿ ಬಿದ್ದು ಏನು ಇಲ್ಲದವಳಂತಾಗಿದ್ದಳು.ಒಟ್ಟಾಗಿ ಎಲ್ಲಾ ಉಂಟು ಎನೂ ಇಲ್ಲ
ಎನ್ನುವಂತಾಗಿತ್ತು ಅವಳ ಜೀವನ!!!ಕೊರಳ ಸೆರೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ‘ನೋವು’ ಒಂದು ಸುಸಂಧರ್ಭಕ್ಕಾಗಿ
ಕಾಯುತ್ತಿತ್ತು.ಬಿಕ್ಕಿ ಬಿಕ್ಕಿ ಅತ್ತಳು ಸ್ವಲ್ಪ ಮನದ ಭಾರ ಇಳಿದಂತಾಗಿತ್ತು.ಭರಿಸಲಾಗದ ನೋವು ಎದೆಯಾಳದಲ್ಲಿ ಮುಚ್ಚಿ
ಲಾವದ ರೀತಿಯಲ್ಲಿ ಒಳಗೆ ಕುದಿಯುತ್ತಲಿತ್ತು.ಆ ಬೃಹತ್ ನಗರದ ಸದ್ದು ಗದ್ದಲ ಮನಸ್ಸಿಗೆ ಅಹಿತವಾಗಿತ್ತು.ಏಕತಾನದ
ಬದುಕು ಕಸಿವಿಸಿ ಯಂತಾಗಿತ್ತು.ಎಲ್ಲೊ ದೂರದ ಬೆಟ್ಟ ಗುಡ್ಡಗಳೆಡೆಗೆ,ಹೆಸರಿಲ್ಲದ ಕಾಡು ಸುಮದ ವಾಸನೆ ಸಿಗುವ
ಕಡೆ,ಸ್ವಛ್ಛಂದ ಗಾಳಿ ಮತ್ತು ನಿರ್ಮಲವಾಗಿ ತನ್ನಷ್ಟಕ್ಕೆ ತಾನು ಹರಿಯುತ್ತಿರುವ ನೀರಿನ ಕಡೆಗೆ ಹೊರಡುವಂತೆ ಮನಸ್ಸು
ಅವಳನ್ನು ತಳ್ಳುತ್ತಲಿತ್ತು.
ಹೊರಟೆ ಬಿಟ್ಟಳು!ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಕೊಡಚಾದ್ರಿಗೆ!ಹೊಟ್ಟೆ ಹಸಿದವನಿಗೆ ಅನ್ನ ಸಿಗದೆ ಪರದಾಡುವ
ಪರಿಸ್ಥಿತಿಯಲ್ಲಿ ಕೈ ಮುಷ್ಠಿಗೆ ಸಿಕ್ಕ ಅನ್ನವನ್ನು ಒಂದೇ ಉಸಿರಿನಲ್ಲಿ ತಿನ್ನಲು ಪ್ರಯತ್ನಿಸುವಂತಹ ಪರಿಸ್ಥಿತಿ
ವೀಣಾಳದ್ದಾಗಿತ್ತು.ಹುಚ್ಚೆದ್ದು ಬೆಳದ ಕಾಡು,ಕಣ್ಣು ಹಾಸಿದಷ್ಟು ಹಸಿರು,ಸ್ವಚ್ಛಂದ ಗಾಳಿ,ಎಲ್ಲಿಂದಲೊ ತೇಲಿ ಬರುತ್ತಲಿದ್ದ ಕಾಡ
ಸುಮದ ಪರಿಮಳ ,ವೀಣಾಳನ್ನು ನಾಡಿನ ಎಲ್ಲಾ ಗೊಂದಲಗಳನ್ನು ಮರೆಯುವಂತೆ ಮಾಡಿದ್ದವು.ಎಷ್ಟೊ ಪಕ್ಷಿಗಳನ್ನು
ಕಂಡಳು.ಅವಿಷ್ಟರಲ್ಲಿ ಗುಬ್ಬಿ,ಮರ ಕುಟುಗ,ಗಿಳಿ ಕೇವಲ ಇವಿಷ್ಟನ್ನು ಮಾತ್ರ ವೀಣಾಳಿಗೆ ಗುರುತಿಸಿಲು
ಸಾಧ್ಯವಾಯಿತು.ಗುಬ್ಬಚ್ಚಿಗಳ ದೊಡ್ಡದೊಂದು ದಂಡನ್ನೆ ನೋಡಿದಳು.ಎಲ್ಲೋ ನೋಡಿದ ನೆನಪು.ಹಳ್ಳಿಯಲ್ಲಿ ಶಾಲೆಗೆ
ಹೋಗುವಾಗ ನೋಡಿದ್ದು ನೆನಪಾಯಿತು.ಅಲ್ಲದೆ ಮಟ್ಟಸವಾಗಿ ಗುಬ್ಬಿ ಕಟ್ಟಿದ ಗೂಡನ್ನು ನೋಡಿದ್ದ ನೆನಪಾಯಿತು.ಆದರೆ ಹಳ್ಳಿ
ಬಿಟ್ಟಾದ ಮೇಲೆ ಗುಬ್ಬಿಗಳನ್ನು ನೋಡಿದ ನೆನಪಾಗಲಿಲ್ಲ.ತಾನು ನಡೆದಾಡುತ್ತಿದ್ದ ಕಾಡಿನಲ್ಲಿ ಕೂಗಳತೆ ದೂರದಲ್ಲಿ
ದೊಡ್ಡದೊಂದು ಗುಬ್ಬಿ ಸಮೂಹವನ್ನೆ ನೋಡಿದಳು.ಒಂದೆರೆಡು ಗುಬ್ಬಿಗಳನ್ನು ಹಿಡಿದು ಮಾತಾಡಿಸುವ ವ್ಯರ್ಥ ಪ್ರಯುತ್ನವನ್ನು
ಮಾಡಿದಳು.ಗುಬ್ಬಿಗಳು ತೀರ ಸಂಕೋಚದ ಜೀವಿಗಳು ಯಾರಾದರು ಹತ್ತಿರಕ್ಕೆ ಬರುತ್ತಿದ್ದಾರೆ ಎನ್ನುವ ಸೂಚು ಸಿಕ್ಕರೆ
ಸಾಕಿತ್ತು ಹಾರಿಬಿಡುತ್ತವೆ.ಆಂತಹದರಲ್ಲಿ ಮನುಷ್ಯನ ಸುಳಿವಿರದ ಕಾಡಿನಲ್ಲಿ ಮನುಷ್ಯರೊಬ್ಬರು ಹತ್ತಿರಕ್ಕೆ ಬರುತ್ತಿದ್ದಾರೆ ಎಂದು
ಗೊತ್ತಾದರೆ ಅಲ್ಲೇ ಕುಳಿತಿರತ್ತವೆಯೇ?
ನೆಲದಲ್ಲಿನ ಆಹಾರವನ್ನು ಹೆಕ್ಕಿ ತಿನ್ನ್ನುತ್ತಿದ್ದ ಗುಬ್ಬಚ್ಚಿಯನ್ನು,ಮರದ ಮರೆಯಲ್ಲಿ ನಿಂತು ನೋಡಿದಳು.ಮನುಷ್ಯರ ವಾಸನೆ
ಗ್ರಹಿಸಿದ ಗುಬ್ಬಚ್ಚಿ ಹಾರಿ ಹೋಗಿ ಮತ್ತೊಂದು ಮರದ ಟೊಂಗೆಯ ಮೇಲೆ ಕುಳಿತಿತು.ನಿಧಾನವಾಗಿ ವೀಣ ಗುಬ್ಬಚ್ಚಿ ಕುಳಿತಿದ್ದ
ಮರದ ಬಳಿ ಹೋದಳು ಮತ್ತೊಮ್ಮೆ ಗುಬ್ಬಚ್ಚಿ ಹಾರಿ ಹೋಯಿತು. ವೀಣ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಗುಬ್ಬಚ್ಚಿ ಹಾರಿ
ಹೋದ ಕಡೆ ತಾನು ಹೋಗುತ್ತಿದ್ದಳು.ಅವರಿಬ್ಬರ ಕಣ್ಣಾ ಮುಚ್ಚಾಲೆ ನಡೆದೆ ಇತ್ತು.ವೀಣ ಸುಸ್ತಾಗಿ ಒಂದು ಮರದ ಕೆಳಗೆ
ಕುಳಿತು ಬಿಟ್ಟಳು.ಗುಬ್ಬಚ್ಚಿ ತಾನೇ ತಾನಾಗಿ ವೀಣ ಕುಳಿತಿದ್ದ ಮರದ ಎದುರಿನ ಮರದ ಟೊಂಗೆಯ ಮೇಲೆ ಬಂದು
ಕುಳಿತಿತು.ಇದನ್ನು ಗಮನಿಸಿದ ವೀಣ ಬೇಕರಿಯಿಂದ ತಂದಿದ್ದ ಹುರಿಗಾಳನ್ನು ಒಣಗಿದ ಒಂದು ಎಲೆಯ ಮೇಲೆ ಹಾಕಿ
ಮರೆಯಾಗಿ ನಿಂತಳು.ವೀಣ ಮರೆಯಾಗಿ ನಿಂತದ್ದನ್ನು ಗಬ್ಬಚ್ಚಿ ಗಮನಿಸಿತ್ತು. ಆದರೂ ಹೊಟ್ಟೆ ಹಸಿವಿನಿಂದ ಹಾರಿ ಬಂದು

ಹುರಿಗಾಳನ್ನು ಹೆಕ್ಕಿ ತಿಂದಿತು.ವೀಣ ದೂರದಲ್ಲಿಂದಲೇ ಮತ್ತೊಂದು ಒಣಗಿದ ಎಲೆಯ ಮೇಲೆ ತಾನು ತಂದಿದ್ದ ಬಿಸ್ಲೆರಿ
ನೀರನ್ನು ಸುರಿದಳು.ಕಾಳು ತಿಂದಾದ ಮೇಲೆ ನೀರನ್ನು ಕುಡಿದು ಗಿಬ್ಬಚ್ಚಿ ಹಾರದೆ ಅಲ್ಲೆ ಕುಳಿತ್ತಿತ್ತು.ವೀಣ ಮರದ ಮರೆಯಿಂದ
ತನ್ನ ಹತ್ತಿರಕ್ಕೆ ಬರುತ್ತಿರುವುದನ್ನು ಗಮನಿಸಿತು ಆದರೂ ಹಾರದೆ ಅಲ್ಲೆ ಕುಳಿತ್ತಿತ್ತು.ಆ ಹೊತ್ತಿಗಾಗಲೆ ವೀಣ ಎನ್ನುವ ಮನುಷ್ಯ
ಪ್ರಾಣಿ ತನಗೆ ಯಾವ ಹಾನಿಯನ್ನು ಮಾಡುವುದಿಲ್ಲ ಎನ್ನುವುದು ಖಾತ್ರಿಯಾಗಿತ್ತು.ಹಾಗಾಗಿ ವೀಣ ಹತ್ತಿರ ಬರುತ್ತಿದ್ದರೂ
ಹಾರದೆ ಅಲ್ಲೆ ಕುಳಿತಿತ್ತು.ಈಗ ವೀಣ ಮತ್ತು ಗುಬ್ಚಚ್ಚಿಯ ಮಧ್ಯೆ ಸಲುಗೆ ಬೆಳೆದಿತ್ತು.ಆ ಗುಬ್ಬಚ್ಚಿಯ ಜೊತೆ ಅಂತಃಕರಣದಿಂದ
ಮಾತಾಡಿದಳು,ತನ್ನ ಬಗ್ಗೆ ಹೇಳಿದಳು ಅಲ್ಲದೆ ತಾನಿರುವ ನಗರಕ್ಕೆ ಯಾವಗಲಾದರು ಬರುವಂತೆ ಆಹ್ವಾನ ಕೊಟ್ಟಳು.ನಂತರ
ಮನಸ್ಸಿಲ್ಲದ ಮನಸ್ಸಿಂದ ನಗರದ ಕಡೆ ಮುಖ ಮಾಡಿದಳು.
ಗುಬ್ಬಚ್ಚಿಗೆ ವೀಣಾಳ ನಗರಕ್ಕೆ ಹೋಗಿ ಅವಳನ್ನು ಮಾತಾಡಿಸಿಕೊಂಡು ಬರಬೇಕೆನ್ನುವ ಬಯಕೆ ಉತ್ಕಟವಾಗಿತ್ತು.ಆದರೆ
ನಗರದ ಗದ್ದಲ,ಶಬ್ದ,ವಿದ್ಯುತ್ ಕಾಂತೀಯ ತರಂಗಳ ಭಯ ಗುಬ್ಬಚ್ಚಿಯನ್ನು ನಗರಕ್ಕೆ ಬರದಂತೆ ಹೆದರಿಸಿದ್ದವು.ಆದರೆ
ವೀಣಾಳ ವಿಶ್ವಾಸ ಭರಿತ ಅಂತಃಕರಣದ ಮಾತುಗಳು ಗುಬ್ಬಚ್ಚಿಯನ್ನು ಪ್ರತಿ ಬಾರಿಯೂ ನಾಡಿಗೆ ಬರುವಂತೆ
ಪ್ರೇರೆಪಿಸುತ್ತಿದ್ದವು.ನಗರದಲ್ಲಿ ತಾನು ಭೇಟಿಯಾಗಿದ್ದ ಗುಬ್ಬಚ್ಚಿ ಬಂದೇ ಬರುತ್ತದೆ ಎನ್ನುವ ವಿಶ್ವಾಸವಿತ್ತು.ಗುಬ್ಬಚ್ಚಿಗಾಗಿ
ರಟ್ಟಿನಿಂದ ಒಂದು ಗೂಡು ಕಟ್ಟಿ ಗುಬ್ಬಚ್ಚಿಗಾಗಿ ಕಾದು ಕುಳಿತಳು.
ಅಂದು ಮಾರ್ಚ 20 ! ವಿಶ್ವ ಗುಬ್ಬಚ್ಚಿಯ ದಿನ.
ಮಾಹಿತಿ ತಂತ್ರಜ್ಞಾನದ ತನ್ನ ಕಂಪನಿಯ ತಾರಸಿಯ ಮೇಲೆ ,ಕಂಪನಿಯ ಉದ್ಯೋಗಿಗಳೆಲ್ಲಾ ಸೇರಿದ್ದರು. ವಿಶ್ವ ಗುಬ್ಬಚ್ಚಿ
ದಿನದ ಅಂಗವಾಗಿ ಕೃತಕ ಗೂಡುಗಳನ್ನು ನಿರ್ಮಿಸಿ ಅದರಲ್ಲಿ ಕೃತಕ ಗುಬ್ಬಚ್ಚಿಗಳನ್ನಿಟ್ಟು ಅದರ ಮುಂದೆ ನಿಂತು ಫೋಟೂ
ತೆಗೆಸಿಕೊಳ್ಳುತ್ತಿದ್ದರು.ವಿಪರ್ಯಾಸವೆಂದರೆ ಅವರು ನಿರ್ಮಿಸಿದ್ದ ಆ ಗೂಡುಗಳು ದೊಡ್ಡ ಆ್ಯಂಟಾನಗಳ
ನರೆಳಿನಲ್ಲಿದ್ದವು.ಗುಂಪಿನಲ್ಲಿದ್ದ ವೀಣ ದೂರದಿಂದಲೇ ಹಾರಿ ಬರುತ್ತಿದ್ದ ಯಾವುದೋ ಗುಬ್ಬಚ್ಚಿ ಬರುತ್ತಿದ್ದನ್ನು ಗಮನಿಸಿದಳು.
ಸ್ವಲ್ಪ ಹತ್ತಿರಕ್ಕೆ ಬಂದಮೇಲೆ ಆ ಗುಬ್ಬಚ್ಚಿ ತಾನು ಕಾಡಿನಲ್ಲಿ ನೋಡಿದ್ದ ಗುಬ್ಬಚ್ಚಿಯೇ ಎಂದು ಗುರುತಿಸಿದಳು.ತಾರಸಿಯ
ಅಂಚಿಗೆ ಹೋಗಿ ಅದನ್ನು ಕೈ ಬೀಸಿ ಕರೆದಳು.ಗುಬ್ಬಚ್ಚಿಯ ಇನ್ನು ಸ್ವಲ್ಪ ಹತ್ತಿರಕ್ಕೆ ಕಾಣಿಸಿತು.ಆದರೆ ಗುಬ್ಬಚ್ಚಿಯ ಹಾರಾಟದ
ವೇಗ ಮಾತ್ರ ಕ್ಷೀಣಿಸುತ್ತಾ ಬಂತು.ಗಾಳಿಯ ವೇಗವೇ ಆ ಗುಬ್ಬಚ್ಚಿಯನ್ನು ಹಾರಿಸಿಕೊಂಡು ಹೋಗುತ್ತಿತ್ತು.ಆದರೂ ತನ್ನ ಛಲ
ಬಿಡದ ಗುಬ್ಬಚ್ಚಿ ವೀಣಾಳ ಬಳಿ ಬರುತ್ತಲಿತ್ತು.ಆದರೆ ನೋಡು ನೋಡುತ್ತಿರುವಷ್ಟರಲ್ಲೆ ಗುಬ್ಬಚ್ಚಿ ಮೇಲಿನಿಂದ ರಭಸವಾಗಿ
ತಾರಸಿ ಮೇಲೆ ಬಿದ್ದಿತು.ವೀಣಾ ಕಂಗಾಲಾಗಿ ಅದರ ಬಳಿ ಓಡಿ ಬಂದಳು.ಮೇಲಿನಿಂದ ಬಿದ್ದಿದ್ದ ರಭಸಕ್ಕೆ ಮತ್ತೊಮ್ಮೆ ಗುಬ್ಬಚ್ಚಿ
ಹಾರಿ ಬಿದ್ದಿತು.ವೀಣಾ ನೀರನ್ನು ಹಿಡಿದು ಓಡಿ ಬಂದಳು.ಒಂದೇ ಒಂದು ಹನಿಯನ್ನು ಅದರ ಬಾಯಿಗೆ ಹಾಕಿದಳು.ನೀರನ್ನು
ಗುಟುಕಿಸಿದ ಮೇಲೆ ಇನ್ನೊಂದು ಹನಿಯನ್ನು ಅದು ಕುಡಿಯಲಿಲ್ಲ.
ವೀಣಾಳಿಗೆ ಭಯಂಕರ ಪಾಪಪ್ರಜ್ಞೆ ಕಡ ಹತ್ತಿತು.ಜೀವ ಹಿಂಡುವ ನೋವಾಯಿತು.ಸಮಾಧಿಗಳ ಮೇಲೆ ಸಾಮ್ರಜ್ಯಗಳ
ಸಾಧಿಸಿದ್ದಕ್ಕೆ ಅಸಹ್ಯ ಬಂತು.

ಜೀವ ಕಿನ್ನರಿಯಲ್ಲಿತ್ತು (ಕಥನ ಕಾವ್ಯ)

Pubished in Kastuir Aug 2019
*********************************************
ಜೀವ ಕಿನ್ನರಿಯಲ್ಲಿತ್ತು
(ಕಥನ ಕಾವ್ಯ)

ನಿಷಾಧಿಯ ಆ ಸಂಧಿ ಕಾಲದಲ್ಲಿ
ಕಾಯುತಲಿದ್ದ ಚಂದ್ರನು ಸರದಿಯಲಿ
ತೇಲಿತ್ತು ಮನ ಸ್ವಛ್ಛಂದ ಗಾಳಿಯಲ್ಲಿ ಕಂಪಾದ ಗಂಧದಲ್ಲಿ!

ಬೆಟ್ಟದಡಿಯಲಿ ಕಾಡು ಬಂಡೆ ಕಾಣಿತೊಂದು
ಹೆಣ್ಣಿನಾಕರದ ಆದನು ನೋಡಿರಲಿಲ್ಲ ಹಿಂದೆಂದು
ಬಂಡೆ ಸವರಲು ಆಸೆ ಚಿಗರೊಡೆದು ಬಂತು

ಏನಾಶ್ಚರ್ಯ ಕಲ್ಲು ಉಸಿರಾಡುತ್ತಿತ್ತು
ಆ ಕಾಡಲ್ಲೆನಗೆ ಸಣ್ಣಗೆ ಭಯ ಆವರಿಸಿತ್ತು!
ನನ್ನುಸಿರ ಸ್ಪರ್ಷದಿಂದ ಸುಂದರಿಯ ಅವತಾರವೂ ಆಗಿತ್ತು

ಅವಳು ದೇವ ಲೋಕದ ಕಿನ್ನರಿಯಂತೆ
ಹೆಸರು ಮರೆತ ‘ಋಷಿ’ ಶಾಪದಿಂದ ಕಲ್ಲಾಗಿ ಅವತರಿಸಿದಳಂತೆ
ಮನುಷ್ಯ ಸ್ಪರ್ಶದಿಂದ ಶಾಪ ವಿಮೋಚನೆಯೆಂದು ಋಷಿ ಹೇಳಿದ್ದನಂತೆ!

ನನ್ನ ಶಾಪ ವಿಮೋಚನೆ ಮಾಡಿದ ದೇವನೆಂದಳು-
ನನ್ನ ಹಿಂದೆಯೆ ಹಿಂಬಾಲಿಸಿ ಬಂದಳು
“ನನ್ನ ಮದುವೆಯಾಗು “ ಎಂದು ದೈನಿಸಿ ಕೇಳಿದಳು.

ಮೊದಮೊದಲು ದೂರವಿರಸಿದೆ
ನಂತರದಿ ದಾರಿ ಇರದೆ ಕನಿಕರದಿ ಒಳ ಕರೆದೆ
ಮನದಲಿರಸದೆ, ಕೇವಲ ಮನೆಯಲಿರಿಸಿದೆ

ಕಿನ್ನರಿ ವಿಷಯ ಗಿಣಿ ಸಾಕಿದ ಮಾಯಾವಿ ಅರಿತನು
ನಿಧಿಗಾಗಿ ಕಿನ್ನರಿ ಜೀವ ಗಿಳಿಯೊಳಗಿಳಿಸಲು ಹವಣಿಸಿದನು
ಶತಾಯಗತಾಯ ಕಿನ್ನರಿ ಅಪಹರಿಸಲು ಪ್ರಯತ್ನಿಸಿದನು.

ಬಚ್ಚಿಟ್ಟೆ ಮನೆಯಲ್ಲಿ ಪ್ರೇಮವೆಂದಲ್ಲ ಗತಿ ಇಲ್ಲವೆಂದು!
ನನಗರಿವಿಲ್ಲದಂತೆ ಅನುರಾಗವಾಯಿತು,ಪ್ರೇಮವೂ ಆಯಿತು.
ಕಿನ್ನರಿಯಲ್ಲಿಯೆ ನನ್ನ ಮನಸ್ಸು ನೆಲೆ ನಿಂತಿತು.

ನನ್ನ ಕಣ್ತಪ್ಪಿಸಿ ಕಿನ್ನರಿಯ ‘ಜೀವ’ ಗಿಳಿಯೊಳಗೆ ಇಳಿಸಿದನು
ಇಷ್ಟೆಲ್ಲದರ ಮಧ್ಯೆ ನನ್ನ ಜೀವ ಕಿನ್ನರಿಯೊಳಗಿತ್ತು.
ಕಿನ್ನರಿಯ ವಿಹರದಲಿ ನನ್ನ ಜೀವ ಬೆಂದು ಹೋಗಿತ್ತು.