Friday, July 11, 2008

ನೀನಿಲ್ಲದೆ?

ಬಿಟ್ಟಿ ಹೋದೆ ನಡು ರಾತ್ರಿಯ,
ದಟ್ಟ ಅರಣ್ಯದಲಿ!
ಬದುಕಿ ಬರುವ ಆಸೆ ಇರಲಿಲ್ಲ-
ನಿನಗಾದರೂ ತೋರಿಸ ಬೇಕಿತ್ತು,
ನೀನಿಲ್ಲದೆ ನಾ ಬದುಕಬಲ್ಲೆನೆಂದು.
ಇನ್ನೂ ಚೆಂದಾಗಿ ಬಾಳಬಲ್ಲೆನೆಂದು.

Thursday, July 3, 2008

ಕಾಡ ಸುಮದ ಪ್ರೀತಿ....!


ಅಲ್ಲಿ ಮಾತಿರಲಿಲ್ಲ.ಬರೀ ಮಾತು ಏನು? ಅಲ್ಲಿ ಏನು ಇರಲಿಲ್ಲ.
ಒಂದು ಪ್ರೀತಿ ಅನಾಥ ವಾಗ್ತ ಇದೆ ಅಂತ ಇಬ್ಬರಿಗೂ ಅನ್ನಿಸಲಿಲ್ಲ.
ಮುಗಿಚಿ ಬಿದ್ದಿತ್ತು ಪ್ರೀತಿ.ಅರ್ಥವಿಲ್ಲದ ಅಹಂಕಾರದ ನಡುವೆ ಗಂಧವೇ ಇಲ್ಲದ ಹಮ್ಮಿನಲ್ಲಿ.
ಅವರಿಬ್ಬರೂ ಊಹಿಸಿರಲಿಲ್ಲ ಅದು ಅವರಿಬ್ಬರ ಪ್ರೀತಿಯು ಕೊನೆಯಾದ ಕ್ಷಣವೆಂದು.ಎರೆಡು ವರುಷದ ತೀವ್ರ ಪ್ರೀತಿ
ಎಲ್ಲವನ್ನು ಕಳೆದುಕೊಂಡು ಹೆಣವಾದ ಕ್ಷಣ!
"ಇನ್ನೆಂದು ನಾ ನಿನ್ನ ಮಾತಡಿಸಲ್ಲ.."
......
............
............
"...ಮುಂದಿನ ನಮ್ಮ ಭೇಟಿ ಯಾವಾಗ...?"
"ನಾನು ಮನಸ್ಸು ಮಾಡಿದಾಗ......"

ಇಷ್ಟೆ ಇದೆ ಕಡೆಯ ಮಾತು.ಅನಂತರದ ದಿನಗಳು ದಾರುಣ ವಾಗಿದ್ದವು.ಇಬ್ಬರಿಗೂ.ಹತ್ತು ವರುಷ ಗಳು ಕಳೆದವು.ಯಾರ ಬಳಿಯೂ ಹೇಳಲಾಗದು.ಹೇಳಬೇಕೆನ್ನಿಸಿದರೂ.ಅರ್ಹರಾದವರು ಯಾರು ಅನ್ನೊ ಅನುಮಾನದಲ್ಲೇ ಬದುಕ ಕವಲು ದಾರಿಯಲ್ಲಿ ಸಾಗಿತ್ತು.ಇಬ್ಬರೂ ಬದುಕ ಕಟ್ಟಿ ಕೊಳ್ಳ ಹತ್ತಿದರು.
" ಈಗ ನಂಗೆ ನಿನ್ನ ಅವಶ್ಯಕತೆ ಇಲ್ಲ.."
"I am the creator"
ನಿಜವಾಗಿಯೂ ಯಾರು ಯಾರಿಗೂ ಅನಿವಾರ್ಯ ವೂ ಆಗಿದ್ದಿಲ್ಲ.ಆವಶ್ಯಕವೂ ಆಗಿದ್ದಿಲ್ಲ.ಅದಿಷ್ಟೂ ಅಪ್ರಬುದ್ಧ ಮನಸ್ಸಿನ ಅಪಕ್ವ ನಿರ್ಧಾರವಾಗಿತ್ತು!ಆ 'ಪ್ರೀತಿ..' ಎನ್ನುವುದಕ್ಕೂ ಮುಂಚೆ ಅವಿರಿಬ್ಬರು ಅರಾಮಾಗೆ ಇದ್ದರು.ಅಸಲಿಗೆ ಅವರು ತಮ್ಮ ತಮ್ಮ ಬದುಕನ್ನು ತಾವು ಹಳಿಗೆ ತಂದರು .ಕಟ್ಟೀ ಕೊಂಡರು.
ಜಗತ್ತಿನ ಯಾವ ಯಾವ ಮೂಲೆ ಯಲ್ಲಿ ಇದ್ದರೆಂದು ಇಬ್ಬರಿಗೂ ಗೊತ್ತಲ್ಲಿದಂತೆ ಬದುಕಿನ ಓಟದಲ್ಲಿ ಬಿದ್ದುಬಿಟ್ಟರು.ಅವಳಿಗೆ ಒಂದು ಗಂಡು ನೋಡಿ ಮನೆಯವರು ವಯಸ್ಸಿಗೆ ಮದುವೆ ಮಾಡಿದರು.ಇವನ ಮನೆಯವರು ಅಷ್ಟೆ ತಕ್ಕ ವಯಸ್ಸಿಗೆ ಮದುವೆ ಮಾಡಿದರು.ಇಬ್ಬರದು ಬೇರೆ ಬೇರೆ ಪುಟ್ಟ ಪುಟ್ಟ ಸಂಸಾರ.ಒಂದೇ ಊರಲ್ಲಿ ಇಬ್ಬರೂ ಇದ್ದರೂ ಎದುರು ಬದುರಾಗುವ ಸಂದರ್ಬ ಬರಲಿಲ್ಲ!
ಹೌದು! ಮುಂದೆಂದು ಅವರಿಬ್ಬರೂ ಒಬ್ಬರೊನ್ನೊಬ್ಬರು ಮಾತಡಿಸಲಿಲ್ಲ.ಒಂದು ಸಣ್ಣ ಭೇಟಿ ಗೂ ಮನಸ್ಸು ಮಾಡಲಿಲ್ಲ!
ಕೇಳಬೇಕೆಂದು ಅಂದುಕೊಂಡಿದ್ದ ಪ್ರೆಶ್ನೆಗಳು ಹಾಗೆ ಉಳಿದವು.ಮಾತು ಅರ್ಧದಲ್ಲೆ ತುಂಡರಿಸಿತ್ತು.

Tuesday, July 1, 2008

ಓ ! ಗೆಳತಿ

ನನ್ನೆದೆಯ ಮೇಲೆ ಒದ್ದೊಡುವ,
ಇರಾದೆ ಇದ್ದಿದ್ದೇ ಆಗಿದ್ದರೆ?
ಒಂದು ಸಣ್ಣ ಕಣ್ಸನ್ನೇ ಸಾಕಿತ್ತು
ಈ ಹೃದಯವನ್ನೇ ಹಾಸಿರುತಿದ್ದೇ
ನನ್ನ ಪಾದದಡಿಗೆ.

ಅವಳಿಗಾಗಿಯೇ...!

ಅಷ್ಟಾಗಿ ಇದನ್ನ ಬರೆದಿದ್ದಾದರೂ ಏಕೆ?ಇದು ಯಾರಿಗಾಗಿ?
ಅವಳಿಗಾಗಿಯೇ...! ನಿಜ.
ಆದರೇ ಅವನು ಅವಳಿಗಾಗಿಯೇ ಬರೆದಿದ್ದೊ ಅಥವಾ ಅವಳಿಗಾಗಿ ಕೆಲವು ಹೇಳಲೇಬೇಕಾಗಿರುವುದೋ?
ಅದು ಬರೆದಾದಿ ನಂತರವೂ ನನಗೆ ಸ್ಪಷ್ಟವಾಗಿಲ್ಲ.ಒಟ್ಟಾಗಿ ಬರೆದೆ,ಅವಳಿಗಾಗಿ..!ಇಲ್ಲಿ
ಪ್ರೀತಿ ಯ ತೀವ್ರತೆ ಯೂ ಇದೆ ಅದರ ಜೊತೆಯಲ್ಲೇ ದ್ರೋಹ ದ ಧಗೆಯೂ ಇದೆ!ಯಾರ ಪ್ರೀತಿ?ಯಾರ ದ್ರೋಹ?
ಅದ್ಯಾವುದು ಇಲ್ಲಿ ಮುಖ್ಯವಾಗಿ ಇಲ್ಲ.ಇಲ್ಲಿ ನಾನು ನನ್ನ ಕಾಲೇಜು ದಿನಗಳಲ್ಲಿ ನೋಡಿದ ಆ ಪ್ರೇಮ ಕಥೆ ಗಳನ್ನೆ ವಿಧ ವಿಧ ವಾಗಿ
ಇಲ್ಲಿ ದಖಾಲಿಸುತ್ತ ಬಂದೆ.ಅದೇ ಈ ಅವಳಿಗಾಗಿ..!ಕಾಲೇಜು ದಿನಗಳ ಸ್ನೇಹಿತರು "ಮತ್ತೊಮ್ಮೆ ಅದೆ ತರಹದ
ಹನಿ ಗಳನ್ನು ಬರೆಯೂ....! ಪುಸ್ತಕ ಮಾಡು .ಒಟ್ಟಾಗಿ ಓದಲು ಸಿಗುತ್ತೆ" ಅಂತ ಹೇಳಿದ್ದ ರಿಂದ ಇದಕ್ಕೆ ಜೀವ ಬಂತು.
ಇಷ್ಟು ಮಾತ್ರದ ವಿವರದೊಂದಿಗೆ...