Friday, October 19, 2018

ಅರ್ಬನ್ ನಕ್ಸಲ್ ಎನ್ನುವ....


ಅರ್ಬನ್ ನಕ್ಸಲ್ ಎನ್ನುವ....

   ತೀರ ಇತ್ತೀಚಿನ ಶಬ್ದಗಳಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದು ಒಂದು ಲೆಕ್ಕದಲ್ಲಿ ಮೋದಿ ಸರ್ಕಾರವನ್ನು ಕಾಡಲು ಶರುವಾಗಿರುವ ನಿಜವಾದ ಅರ್ಥದಲ್ಲಿ ಅಷ್ಟೇನು ದೊಡ್ಡದಾಗಿರದ  ಶಬ್ದ ‘ಅರ್ಬನ್ ನಕ್ಸಲ್’. ನಕ್ಸಲ್ ಎನ್ನುವ ಶಬ್ದಕ್ಕೆ ಸುಮಾರು ದಶಕಗಳ ಇತಹಾಸವೆ ಇದೆ.ಆದರೆ ಅರ್ಬನ್ ನಕ್ಸಲ್(ನಾಡ ನಕ್ಸಲ್) ಎನ್ನುವುದುಕ್ಕೆ ಕೇವಲ ಕಲವು ಪುಟಗಳನ್ನಷ್ಟೆ ತಿರುವಿದರೆ ಸಾಕು.ಆದರ ಇತಿಹಾಸ,ಆಳ,ಅಗಲ ಅರ್ಥವಾಗಿ ಹೋಗುತ್ತೆ

ನಕ್ಸಲ್ ರ ಆದಿ ಮತ್ತು ಉಗಮ:-

 ಪಶ್ಚಿಮ ಬಂಗಾಲದ ನಕ್ಸಲ್ ಬಾರಿ ಎನ್ನುವ ಸ್ಥಳದಲ್ಲಿ ಉಗಮ ವಾದ ಒಂದು ಹೋರಾಟದ ಮಾದರಿ.ಇದು ಮಾವೋ ಸಿಧ್ದಾಂತಗಳಿಂದ ಪ್ರಭಾವಿತವಾಗಿ ವ್ವವಸ್ಥೆಯ ವಿರುಧ್ಧ ಹೋರಾಡುತ್ತಾ ತೀಕ್ಷ್ಣ ಮತ್ತು ತೀವ್ರತರವಾದ ಬದಲಾವಣೆಯನ್ನು ಬಯುಸುತ್ತಲೆ ಶಸ್ತ್ರಸಜ್ಜಿತ ಹೋರಾಟಕ್ಕೆ ಅಣಿಯಾದ ಒಂದು ಎಡ ಪಂಥೀಯ ಸಂಘಟನೆ. ಈ ಹೋರಾಟಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಉದ್ದೇಶದಿಂದ ಈ ಮಾವೋವಾದಿ ಹೋರಾಟವನ್ನು  ರಾಜಕೀಯವಾಗಿ ಬಲಿಷ್ಟವಾಗಿಸಲು ಸಿಪಿಐ (ಮಾವೋ) ಎನ್ನುವ ಸಂಘಟನೆ 2004 ರಲ್ಲಿ ಒಂದು ಸಂಘಟಿತ ಸಂಘಟನೆಯನ್ನಾಗಿ ಸ್ಥಾಪಸಲಾಯಿತು ಆರ್ಥಿಕವಾಗ ಹಿಂದುಳಿದ ಪ್ರದೇಶಗಳಲ್ಲಿ ಮವೋ ಸಿಧ್ದಾಂತ ಗಳನ್ನು ಪ್ರಚಾರ ಪಡಿಸುತ್ತಲೆ ಅಲ್ಲಿನ ಅತೃಪ್ತ ನಾಗರಿಕರನ್ನು ಶಸ್ತ್ರ ಸಜ್ಜಿತ ಹೋರಾಟಕ್ಕೆ ಪ್ರಚೋದನೆ ನೀಡುವುದು ಮತ್ತು ಹೋರಾಟಗಳನ್ನು ಪ್ರಖರವಾಗಿ ವಿಸ್ತಾರ ಮಾಡುವುದು.ಸಿ.ಪಿ.ಐ(ಮಾವೋ) ಸಂಘಟನೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು.ಭಾರತದ ರಾಜ್ಯಗಳಾದ ಓಡಿಶ್ಶಾ,ಬಿಹಾರ,ಮಧ್ಯ ಪ್ರದೇಶ,ಪಶ್ಚಿಮ ಬಂಗಾಳ,ಜಾರ್ಖಂಡ್,ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವಾರು ಜಿಲ್ಲೆಗಳನ್ನು ಈ ಮಾವೋ ವಾದಿಗಳು ತಮ್ಮ ಪ್ರಾಭಲ್ಯವನ್ನು ಈಗಾಗಲೆ ಸ್ಥಾಪಿಸಿಯಾಗಿದೆ.ಬಿಬಿಸಿಯ ಒಂದು ಅಂದಾಜಿನ ಪ್ರಕಾರ  1990 ರಿಂದ 2010 ರ ವರೆಗಿನ ಅವಧಿಯಲ್ಲಿ ಸುಮಾರು ಆರು ಸಾವಿರ ಜೀವಗಳ ಬಲಿಯಾಗಿವೆ(ಇದರಲ್ಲಿ ನಾಗರಿಕರು,ಸಿಅರ್ಪಿ ಎಫ್,ಮತ್ತು ಮಾವೋ ಉಗ್ರರು ಸೇರಿದ್ದಾರೆ). ಆದರೆ ಇದರ ಹೋರಾಟದ ಮಾದರಿ ಮತ್ತು ವೈಖರಿಯನ್ನು ಗಮನಸಿದ ಸರ್ಕಾರವು ಈ ಸಿ.ಪಿ.ಐ(ಮಾವೋ)  ಸಂಘಟನೆಯನ್ನು ಯು.ಪಿ,ಏ(ಎರಡನೆ ಬಾರಿ) ಸರ್ಕಾರವು ನಿರ್ಭಂಧಿಸಿದೆ,

ಅರ್ಬನ್ ನಕ್ಸಲ್:-

  ಈಗಿನ ಮಾತಲ್ಲ 2013 ರಲ್ಲೆ ಆಗಿನ ಕೇಂದ್ರದ ಯು.ಪಿ,ಎ ಸರ್ಕಾರವು ಸುಪ್ರಿಂ ಕೋರ್ಟಿಗೆ ಸಲ್ಲಿಸಲಾಗಿರುವ ಒಂದು ಕೌಂಟರ್ ಆಫ್ಡಿವೇಟ್ ನಲ್ಲಿ ಶಿಕ್ಷಕ ವೃತ್ತಿಗೆ ಸಂಬಂದಿಸಿದವರು,ಹೋರಾಟಗಾರು ಹಾಗೂ ಬರಹಗಾರರು ಕೆಲವೊಂದು ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಮತ್ತು ಆ ಎಲ್ಲಾ ಸಂಘಟನೆಗಳನ್ನು ಮಾವೋವಾದಿಗಳು ‘ಮಾನವ ಹಕ್ಕು’ ಎನ್ನುವ ತಲೆಬರಹದಡಿಯಲ್ಲಿ ಸುರಕ್ಷಿತವಾಗಿರುಸುತಿದ್ದಾರೆ.ಈಗ ಬಂದಿರುವ ವಿಚಾರ ಆಗಷ್ಟ್ 2018 ರಲ್ಲಿ ಐದು ಮಾವೋ ಉಗ್ರರ ವಿಚಾರಗಳನ್ನು ಪೋಷಿಸುತ್ತಿರುವ ಐವರನ್ನು ಭೀಮಾ ಕೋರೆಗಾಂವ್ ನಲ್ಲಿ ನಡೆದ ದಂಗೆಯ ವಿಚಾರವಾಗಿ ಬಂಧಿಸಲಾಗಿದೆ.ಅಲ್ಲದೆ ಮಾವೋ ಉಗ್ರರು ನಮ್ಮ ಪ್ರಧಾನ ಮಂತ್ರಿಯಾದ ನರೆಂದ್ರ ಮೋದಿಯನ್ನು ಹತ್ಯಗೈಯುವ ಒಂದು ಯೋಜನೆಯನ್ನೂ ಇಲ್ಲಿ ಪ್ರಸ್ತಾಪಲಾಗಿದೆ.ಮೊದಲೆ ಸಿ.ಪಿ.ಐ(ಮಾವೋ) ಒಂದು ನಿರ್ಭಂಧಿಸಿದ ಸಂಘಟನೆ.ಅದರಲ್ಲೂ ಈ ಸಂಘಟನೆಗೆ ನಗರದಲ್ಲಿದ್ದುಕೊಂಡು ಆರ್ಥಿಕ ಸಹಾಯ ಮತ್ತು ಇನ್ನಿತರೆ ನಗರಗಳಿಂದ ಮಾತ್ರ ಒದಗಿಸಬಹುದಾಂತಹ ಸಹಾಯ ಮತ್ತು ಅನುಕೂಲಗಳನ್ನು ಮಾವೋ ಉಗ್ರರಿಗೆ ಒದಗಿಸುತ್ತಿದ್ದಾರೆ.ಈಗ ಎಲ್ಲಕಿಂತಲೂ ಹಾಸ್ಯಸ್ಪದ ಎನ್ನುವಂತೆ ನಗರದಲ್ಲಿರುವ ಕೆಲವು ಬುಧ್ದಿ(?) ಜೀವಿಗಳು ‘ನಾನು ನಗರ ನಕ್ಸಲ್’ ಎನ್ನುವ ಹಣೆ ಪಟ್ಟಿಯನ್ನು ಹಾಕಿಕೊಂಡು ತಿರುಗಾಡುತಿದ್ದಾರೆ.

 

‘ಮಹದಾಯಿ ಕಣಿವೆ ತಿರುವು ಯೋಜೆನೆ’ ಮತ್ತು ಕಳಸಾ ಬಂಡೂರೊ ನಾಲ ಜೋಡಣೆ ಯೋಜನೆ


‘ಮಹದಾಯಿ ಕಣಿವೆ ತಿರುವು ಯೋಜೆನೆ’ ಮತ್ತು ಕಳಸಾ ಬಂಡೂರೊ ನಾಲ ಜೋಡಣೆ ಯೋಜನೆ

   ಸುಮಾರು ಹದಿನಾಲ್ಕು ವರುಷಗಳ ಹಿಂದಿನ ಮಾತು ನಾನಾಗ ಬಳ್ಳಾರಿಯಲ್ಲಿದ್ದೆ.ಯಥಾ ಪ್ರಕಾರ ತಮಿಳು ನಾಡು ಕಾವೇರಿ ವಿಷಯಕ್ಕಾಗಿ ಕ್ಯಾತೆ ತೆಗೆದಿತ್ತು.ಹಳೇ ಮೈಸೂರು ಭಾಗ ಅದರಲ್ಲಿಯೂ ಕಾವೇರಿ ಕಣಿವೆಯ ಜಿಲ್ಲೆಗಳು ಧಗ ಧಗನೆ ಹೊತ್ತಿ ಉರಿಯುತ್ತಿದ್ದವು.ನಂತರದ ದಿನಗಳಲ್ಲಿ ಬೆಳಗಾವಿ ವಿಷಯವಾಗಿ  ಮಹಾರಾಷ್ಟ್ರ ಕಾಲು ಕೆದರಿಕೊಂಡು ಜಗಳಕ್ಕೆ ಬಂದಿತ್ತು ಮತ್ತು ಆಗೊಮ್ಮೆ ಈಗೊಮ್ಮೆ ಸಣ್ಣಗೆ ಆಂದ್ರಪ್ರದೇಶವೂ ತುಂಗಾಭದ್ರ ಮತ್ತು ಕೃಷ್ಣ ನೀರಿನ ಹಂಚಿಕೆಯ ವಿಷಯವಾಗಿ ಕ್ಯಾತೆ ತೆಗೆಯುತ್ತಲೆ ಇದ್ದರೂ ಉತ್ತರ ಕರ್ನಾಟಕದ ಈ ವಿಷಯಗಳಿಗೆ ಕಾವೇರಿ ಕಣಿವೆಯ ಜಿಲ್ಲೆಗಳಿಂದ ಅಷ್ಟಾಗಿ ಸಹಕಾರ ಮತ್ತು ಬೆಂಬಲ ಸಿಗುತ್ತರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಆರ್.ಬೊಮ್ಮಾಯಿವರು ಒಂದು ಸಂದರ್ಷನದಲ್ಲಿ ಹೇಳಿದ್ದು ನನಗೆ ಈಗಲು ನೆನಪಿದೆ “ ಕಾವೇರಿ ಮತ್ತು ಕೃಷ್ಣ ಎರೆಡು ನದಿಗಳು ಕರ್ನಾಟಕದ ಎರೆಡು ಕಣ್ಣುಗಳು” ಎಂದು.ಆದರೂ  ಕಾವೇರಿಗೆ ಇರುವ ಕಾವು ಕೃಷ್ಣೆಗೇಕಿಲ್ಲ  ಎಂದು ಮನಸ್ಸಿನಲ್ಲೆ ಕೊರಯುತ್ತಿತ್ತು.ಈ ಆಕ್ರೋಶ ಕಿಡಿಯಿಂದ ‘ಕಾವೇರಿಗೆ ಇರುವ ಕಾವು ಕೃಷ್ಣೆಗೇಕಿಲ್ಲ’ ಒಂದು ಸುದಿರ್ಘ ಲೇಖನವನ್ನು ಆಗಿನ ಕಾಲಕ್ಕೆ ಪ್ರಕಟವಾಗುತ್ತಿದ್ದ ‘ಸಂಗ್ರಾಮ’ ಪತ್ರಿಕೆಯಲ್ಲಿ ಬರೆದಿದ್ದೆ. ಇದಾಗಿ ಸುಮಾರು ಹದಿನಾಲ್ಕು ವರುಷಗಳು ಕಳೆದಿವೆ. ಈಗ ನಾನು ಬೆಂಗಳೂರು ನಿವಾಸಿ ಇಲ್ಲಿಯೇ ಕೆಲಸ.ತೀರ ಇತ್ತೀಚಿನವೆರೆಗೂ  ನಡೆದ ಕನ್ನಡ ಪರ ಹೋರಾಟಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ.ಬೆಳಗಾವಿ ವಿಚಾರವಿರಲಿ,ಕೃಷ್ಣೆಯ ವಿಚಾರವಿರಲಿ ಅಥವಾ  ಮಹಾದಾಯಿ ನದಿ ತಿರುವು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆಗಳೆ ಇರಲಿ ಜನ ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ಕೊಡುತ್ತಿದ್ದಾರೆ ಮತ್ತು ಮುಕ್ತ ಮನಸ್ಸಿನಿಂದ ಸಹಕರಿಸುತ್ತಿದ್ದಾರೆ.ಅಲ್ಲದೆ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರು ಉತ್ತರ ಕರ್ನಾಟಕದ ಭಾಗಗಳ ಬಗ್ಗೆ ಒಂದು ಅಂಥಃ ಕರಣ ತುಂಬಿದ ಕಾಳಜಿ ಮತ್ತು ಕನಿಕರವನ್ನು ನಾನು ಇಲ್ಲಿನ ಜನತೆಯುಲ್ಲಿ ಗಮನಿಸಿದ್ದೇನೆ.ಈಗ ಬರೆಯ ಬೇಕಾಗಿರುವ ವಿಚಾರ –‘ಮಹಾದಾಯಿ ನದಿ ತಿರುವು ಮತ್ತು ಕಳಸಾ ಬಂಡೂರಿ ನಾಲಾ ಯೋಜನೆ’!!!!

ಮಲಪ್ರಭ ನದಿಯ ಉಗಮ ಮತ್ತು ಆರು ಹಳ್ಳಗಳ ಜೋಡನೆ ಯೋಜನೆ:

  ಮಲಪ್ರಭ ನದಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟಿ ಸುಮಾರು 304 ಕಿಲೋಮೀಟರ್ ಗಳಷ್ಟು ಕ್ರಮಿಸಿ, ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.1962 ಮಲಪ್ರಭ ನದಿಗೆ ಅಡ್ಡಲಾಗಿ ಬೆಳಗಾವಿ ಜಿಲ್ಲೆಯ ಸೌದತ್ತಿಯ ಬಳಿ ಡ್ಯಾಮ್ ಕಟ್ಟುವುದಕ್ಕೆ ಭೂಮಿ ಪೂಜೆ ಮಾಡಲಾಯಿತು. ಈ ಯೋಜನೆ ಸುಮಾರು ಹತ್ತು ವರ್ಷಗಳ ನಂತರ ಅಂದರೆ 1972 ಕ್ಕೆ ಲೋಕಾರ್ಪಣೆಯಾಯಿತು.37 ಟಿ.ಎಮ್.ಸಿ ನೀರನ್ನು ಹಿಡಿದಿಡುವ ಗಾತ್ರವನ್ನು ಹೊಂದಿರುವ ಈ ಡ್ಯಾಮಿನ ಮೂಲ ಉದ್ದೇಶ ಬೆಳಗಾವಿ,ಧಾರವಾಡ,ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ತಾಲೂಕಿಗಳಿಗೆ ನೀರುಣಿಸುವದಾಗಿತ್ತು.ಸರಿ ಸುಮಾರು ನಲವತ್ತೈದು ವರ್ಷಗಳು ಕಳೆದರು ನವಿಲು ತೀರ್ಥ(ರೇಣುಕ ಸಾಗರ)ದ ಡ್ಯಾಮ್ ಭರ್ತಿಯಾಗಿರುವುದು ಕೆವಲ ಬೆರಳಣಿಕೆಯಷ್ಟು ಮಾತ್ರವೇ.ಹಾಗಾಗಿ ಬೆಳಗಾವಿ,ಧಾರವಾಡ,ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ತಾಲೂಕಿಗಳಿಗೆ ನೀರುಣಿಸುತ್ತೇವೆ ಎಂದು ಹೊರಟ ಸರ್ಕಾರಗಳ ಭರವಸೆ ಮತ್ತು ಭರವಸೆಯಾಗಿಯೂ ಉಳಿಯಿತು.ಆದರೆ ಡ್ಯಾಮ್ ಎದೆ ಸೆಟೆದು ನಿಂತಿದ್ದು ಮಾತ್ರ ಕಾಣಿಸಿತು.

   ನವಿಲು ತೀರ್ಥ ಅಥವಾ ರೇಣುಕಾ ಸಾಗರ ಡ್ಯಾಮ್ ಪ್ರಾರಂಭಕ್ಕೂ ಮೊದಲೆ ಒಂದು ದೂರ ದೃಷ್ಟಿಯುಳ್ಳ ಯೋಜನೆಗೆ ಗುದ್ದಲಿ ಪೂಜೆ ನೆರವೇರಿತ್ತು.ಆದೆ ಮಲೆಪ್ರಭೆಯ ಪ್ರಭಾವಲಯದಲ್ಲಿ ಹರಿಯುವ ಆರು ಹಳ್ಳಗಳನ್ನು  ಕಳಸಾ,ಬಂಡೂರಿ,ಹರತಾಳ.ಗುರ್ಕಿ,ಚುರ್ಲಿ,ಪೋಟ್ಲಾ ಮಲೆಪ್ರಭೆಗೆ ಸೇರಿಸುವುದು.ಅಂದರೆ 1960 ಆಕ್ಟೋಬರ್ 2ರಂದು ಈ ಆರು ಹಳ್ಳಗನ್ನು (ಕಳಸಾ,ಬಂಡೂರಿ,ಹರತಾಳ.ಗುರ್ಕಿ,ಚುರ್ಲಿ,ಪೋಟ್ಲಾ) ಮಲೆಪ್ರಭೆಗೆ ಸೇರಿಸಿ ಅದರಿಂದ ಮಲೆಪ್ರಭೆಯ ಹರಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸುವ ಯೋಜೆನೆಯನ್ನು ಕೈಗೊಳ್ಳಲಾಯಿತು,ಅಲ್ಲದೆ ಈ ಯೋಜನೆಗೆ ‘ಮಹದಾಯಿ ಕಣಿವೆ ತಿರುವು ಯೋಜೆನೆ’ಅಂತ ಹೆಸರಿಡಲಾಯಿತು.ಈ ‘ಮಹದಾಯಿ ಕಣಿವೆ ತಿರುವು ಯೋಜೆನೆ’ ಎನ್ನುವ ಹೆಸರೆ ಮುಳುವಾಗಿಬಿಟ್ಟಿತು.ಕಾರಣ ಇಷ್ಟೆ ಯೋಜನೆಯ ಹೆಸರಲ್ಲಿರುವ ‘ಮಹಾದಾಯಿ’!!!!

ಮಹಾದಾಯಿ ನದಿಯ ಉಗಮ ಮತ್ತು ಹರಿವು:

   ಬೆಳಗಾವಿ ಜಿಲ್ಲೆಯ ದೆವಣಗಾಂವ್ ನಲ್ಲಿ ಹುಟ್ಟುವ ಮಹಾದಾಯಿ ನದಿ, ಸುಮಾರು  80 ಕಿಮಿ .ಗಳಷ್ಟು ಕ್ರಮಿಸಿದ ನಂತರ ಗೋವಾ ರಾಜ್ಯದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. 29 ಕಿ.ಮೀ ಗಳಷ್ಟು ಕರ್ನಾಟಕದಲ್ಲಿ ಕ್ರಮಿಸಿ ನಂತರ 52 ಕಿ.ಮಿಗಳಷ್ಟು ಗೋವಾದಲ್ಲಿ ಕ್ರಮಿಸಸುವ ಇದೇ ಮಹಾದಾಯಿ ನದಿಯನ್ನು  ಗೋವಾದಲ್ಲಿ ಮಾಂಡೋವಿ ಎಂದು ಕರೆಯಲಾಗುತ್ತದೆ.ಈ ಮಹಾದಾಯಿ ನದಿಯಿಂದ ಬಳಕೆಗೆ ಅರ್ಹವಾಗಿರುವ ಸುಮಾರು 210 ಟಿ.ಎಮ್.ಸಿ ಗಳಷ್ಟು ನೀರು ಗೋವಾದಲ್ಲಿ ಸಮುದ್ರ ಸೆರುವ ಮೊದಲು ಪೋಲಾಗುತ್ತದೆ ಅಂದರೆ ಗೋವಾದಲ್ಲಿ ಈ ನದಿಯ ನೀರುನ್ನು ಯಾವುದೇ ಉದ್ದೇಶಕ್ಕಾಗಿ ಬಳಸುತ್ತಿಲ್ಲ.ಈ ನದಿಯ ಹರಿವಿನಲ್ಲಿ 52 ಟಿ.ಎಮ್.ಸಿ ಕರ್ನಾಟಕದ ಪಾಲಾಗಿರುವುದು.ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕುಡಿಯು ಉದ್ದೇಶಕ್ಕಾಗಿ ಬಳಸಿಕೊಳ್ಳುವುದಕ್ಕಾಗಿ 1978ರಲ್ಲಿ ಆಗಿನ ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. ‘ಮಹದಾಯಿ ಕಣಿವೆ ತಿರುವು ಯೋಜೆನೆ’ ಜಾರಿಯಾದರೆ ಗೋವಾದಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಅಲ್ಲದೆ ಮಾಂಡೋವಿ ನದಿ ಸಮುದ್ರ ಸೇರುವ ಸ್ಥಳದಲ್ಲಿ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ವಾದಿಸಿತ್ತು.ಯಾವಾಗ ಇದು ಮೂರು ರಾಜ್ಯಗಳ ನಡುವಿನ ನೀರಿನ ಹಂಚಿಕೆ ವಿಚಾರವಾಗಿ ಪರಿವರ್ತನೆಯಾಯಿತೊ ಆಗ ಕೇಂದ್ರ ಸರ್ಕಾರ ‘ಮಹದಾಯಿ ನ್ಯಾಯಾಧಿಕರಣ’ವನ್ನು ರಚಿಸಿತು.ಯಾವಾಗ ನ್ಯಾಯಾಧಿಕರಣ ರಚಿಸಲಾಯಿತೊ ಆಗ ಕರ್ನಾಟಕ ಸರ್ಕಾರ ‘ಮಹದಾಯಿ ಕಣಿವೆ ತಿರುವು ಯೋಜೆನೆ’ ಯನ್ನು ತಾತ್ಕಾಲಿಕ ವಾಗಿ ಕೈ ಬಿಟ್ಟು 2002 ರಲ್ಲಿ ಎಸ್.ಎಮ್.ಕೃಷ್ಣ ಸರ್ಕಾರ ಕೇವಲ ಹಾಳೆಗಳಲ್ಲಿ ಮಾತ್ರ ಇದ್ದ ಕಳಾಸಾ ಮತ್ತು ಬಂಡೂರಿ ನಾಲಾ ಜೋಡನೆಯ ಯೋಜನೆಗೆ ಕೈ ಹಾಕಿತು.

                                        

ಕಳಸಾ ಬಂಡೂರಿ ನಾಲಾ ಯೋಜನೆ

   ಮಹಾದಾಯಿ ನದಿಯಲ್ಲಿ  ಕರ್ನಾಟಕದ ಪಾಲಾಗಿರುವ ೊಟ್ಟು 52 ಟ.ಎಮ್.ಸಿ. ನೀರಿನಲ್ಲಿ ಕೇವಲ 7.56 ಟಿ.ಎಮ್.ಸಿ ನೀರನ್ನು ಬಳಸಿ ಮಲಪ್ರಭೆಗೆ ಸೇರಿಸಿ ಅದರಿಂದ ಧಾರವಾಡ (ಧಾರವಾಡ,ಹುಬ್ಬಳ್ಳಿ,ಕಲಘಟಗಿ,ನವಲಗುಂದ,ಕುಂದಗೋಳ),ಬೆಳಗಾವಿ(ಖಾನಾಪುರ,ರಾಮದರ್ಗ,ಸೌದತ್ತಿ, ,ಬೈಲಹೊಂಗಲ,) ಬಾಗಲ ಕೋಟೆ(ಬಾದಾಮಿ) ಮತ್ತು ಗದಗ( ಗದಗ,ನರಗುಂದ,ರೋಣ)ಜಿಲ್ಲೆಯ 13 ತಾಲೂಕು ಹಾಗೂ 900 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿತ್ತು.ಆದರೆ ಗೋವಾದಲ್ಲಿ ಬಿ.ಜೆ.ಪಿ.ಸರ್ಕಾರದ  ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್ ಮಾಂಡೋವಿ ನದಿ ಪಾತ್ರದಲ್ಲಿ ಜೀವ ಸಂಕುಲಗಳಿಗೆ ತೊಂದರೆಯಾಗುತ್ತದೆ ಎನ್ನುವ ವಿಚಾರ ಮುಂದಿಟ್ಟು ನಿಗದಿತ ಕಾಮಾಗಾರಿಗೆ ತಡೆಯಾಜ್ಞೆಯನ್ನು ತರಲಾಗಿತು.2006 ಹೆಚ್.ಡಿ.ಕುಮಾರ ಸ್ವಾಮಿಯ ಸರ್ಕಾರ ಯೋಜೆನಯನ್ನು ಕೈಗೆತ್ತಿಕೊಂಡು ಸೆಪ್ಟೆಂಬರ್ 22 2006ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಕಳಾಸ ಹಳ್ಳವನ್ನು ಸುಮಾರು 5 ಕಿ.ಮೀ ಸುರಂಗದ ಮೂಲಕ ಮಲಪ್ರಭ ನದಿಗೆ ಸೇರಿಸುವುದು,ಪೋಟ್ಲಾ ಹಳ್ಳವನ್ನು ಒಂದುವರೆ ಕಿ.ಮೀ ಸುರಂಗದ ಮೂಲಕ ಕಳಸಾ ಹಳ್ಳಕ್ಕೆ ,ಹಾಗೂ ಹರತಾಳ ಹಳ್ಳವನ್ನು ಒಂದು ಕಿ,ಮಿ ನಾಲೆಯ ಮೂಲಕ ಕಳಸಾ ಹಳ್ಳಕ್ಕೆ ಸೇರಿಸುವ ಕಾಮಾಗಾರಿಯನ್ನು ಪ್ರಾರಂಭಿಸಲಾಯಿತು.ಆದರೆ ಗೋವಾರ ಸರ್ಕಾರ ಸುಪ್ರೀಮ್ ಕೋರ್ಟಗೆ ಹೋಗಿ ಈ ಯೋಜನೆಗೆ ತಡೆಯಾಜ್ಞೆಯನ್ನು ತರಲಾಯಿತು.ಸುಮಾರು ಒಂದುವರೆ ವರ್ಷಗಳ ಕಾಲ ದಾಖಾಲಾತಿಗಳನ್ನು ಕೊಡದೆ ಕಾಲ ಕಳೆದ ಗೋವಾ ಸರ್ಕಾರಕ್ಕೆ ಸುಪ್ರೀಮ್ ಕೋರ್ಟ ಛೀ ಮಾರಿ ಹಾಕಿ  ಗೋವಾದ ಅರ್ಜಿಯನ್ನು ವಜಾಗೊಳಿಸಿತು.ಈ ಕ್ಷಣಕ್ಕೆ ನಮ್ಮ ಸರ್ಕಾರ ಎಚ್ಚೆತ್ತುಕೊಂಡು ಕಾಮಾಗಾರಿಯನ್ನು ತುರಾತುರಿಯಲ್ಲಿ ಮುಗಿಸಿಬಿಡಬೇಕಾಗಿತ್ತು.ಆದರೆ ನಮ್ಮ ರಾಜಕೀಯ ಪಕ್ಷಗಳ ಕೆಸರೆಚಾಟ, ಮತ್ತು ವಿಳಂಬ ನೀತಿ ಕಾಮಾಗಾರಿಯನ್ನು ಅಲ್ಲಿಗೆ ನಿಲ್ಲಿಸಿ ಬಿಟ್ಟಿತು.

                     

   
ಇದಿಷ್ಟು ಕೇವಲ ಕಳಸಾ  ನಾಲಾ ಜೋಡನೆ ವಿಚಾರ ಇನ್ನು ಬಂಡೂರಿ ನಾಲಾ ಜೋಡನೆಗೆ ಇನ್ನೆಷ್ಟು ದಶಕಗಳು ಕಾಯಬೇಕೊ? ಅಲ್ಲದೆ ಮಹದಾಯಿ ನದಿ ನೀರಿನಲ್ಲಿ ಕರ್ನಾಟಕದ ಪಾಲಾದ 52 ಟಿ.ಎಮ್.ಸಿ ನೀರನ್ನು ಬಳಸಿಕೊಳ್ಳಲು ಇನ್ನೆಷ್ಟು ದಶಕಗಳು ಕಳೆಯಬೇಕೊ?ಮಿಲಿಯನ್ ಡಾಲರ್ ಪ್ರಶ್ನೆ!!!


References: