Wednesday, November 21, 2018

ಏಕತಾ ಮೂರ್ತಿ...

                                                                       ಏಕತಾ ಮೂರ್ತಿ

"Intelligence  also has to be devided"?" – ಜಿನ್ಹಾ
“No, Intelligence can not be divided .You have your own intelligence ." – ಸರ್ದಾರ್
  ಇದು ಸರ್ದಾರ ಪಾಟೇಲ್!!!
  ಭಾರತದ ಸ್ವಾತಂತ್ರ ಕಥೆಯ ಜೊತೆ ‘ವಿಭಜನೆ’ ಎನ್ನುವ ಕರಾಳ ಪುಟವನ್ನು ಬ್ರೀಟೀಷರು ಮತ್ತು ಸ್ವಾರ್ಥ ಸಾಧನೆಗೋಸ್ಕರ ಜಿನ್ಹಾ ಮಂಡಿಸಿದ್ದ –‘ಎರೆಡು ರಾಷ್ಟ್ರಗಳ ಸಿಧ್ದಾಂತ’ ವು ತೆರೆದು ಕೊಳ್ಳುತ್ತಿರುವಾಗ ಸರ್ದಾರ್ ಪಟೇಲ್ ತೋರಿದ್ದ ಮುತ್ಸದ್ದಿತನವನ್ನು ಮೇಲಿನ ಸಂಭಾಷಣೆ ತೋರಿಸುತ್ತದೆ.ದೇಶ ವಿಭಜನೆಯ ಕೊನೆ ಹಂತದ ಸಭೆಗಳಲ್ಲಿ ಜಿನ್ಹಾನ ಕುಹಕ ಬುಧ್ದಿಯನ್ನು ಅಲ್ಲಲ್ಲೆ ತಡೆ ಹಿಡಿದು ಹಿಂದುಸ್ತಾನಕ್ಕಿಂತ ಪಾಕಿಸ್ತಾನ ಬಲಾಢ್ಯ ರಾಷ್ಟ್ರವಾಗುವಂತೆ ಜಿನ್ಹಾ ಮಾಡುತಿದ್ದ ಕುತಂತ್ರವನ್ನು ಹದ್ದು ಬಸ್ತಿಗೆ ತಂದದ್ದು ಸರ್ದಾರ ಪಟೇಲ್.
  ಸಾವಿರಾರು ದೇಶ ಪ್ರೇಮಿಗಳ ತ್ಯಾಗ ಮತ್ತು ಬಲಿದಾನಗಳಿಂದ ಭಾರತವು ಸ್ವಾತಂತ್ರವೇನೊ ಆಯಿತು.ಆದರೆ ರಾಷ್ಟ್ರದ ಮುಂದಿದ್ದ ಸವಾಲುಗಳು ಬೆಟ್ಟದಷ್ಟಿದ್ದವು.ಆವುಗಳಲ್ಲಿ  ಮುಖ್ಯವಾದುದು – ದೀಶಿಯ ಪ್ರಾಂತಗಳ ವಿಲೀನ.ಸುಮಾರು ಐದು ನೂರಾ ಐವತ್ತೆರೆಡು  ದೇಶಿಯ ಪ್ರಾಂತಗಳಿದ್ದವು.ಬಹುತೇಕ ಎಲ್ಲಾ ರಾಜ ಮನೆತನಗಳು ಭಾರತದ ಒಕ್ಕೂಟಕ್ಕೆ  ವಿಲೀನವಾಗಲು ಒಪ್ಪಿದವು.ಅದರಲ್ಲೂ ಕೆಲವು ರಾಜರು ಒಪ್ಪದೆ ಹೋದಾಗ ಅವರವರ ಸಾಮರ್ಥ್ಯ ಮತ್ತು ಯೋಗ್ಯತೆಗನುಗುಣವಾಗಿ ಸಭೆಗಳನ್ನು ನಡೆಸಿ, ಇಲ್ಲವೆ ಹೆದರಿಕೆಯ ತಂತ್ರದಿಂದ ಭಾರತದ ಒಕ್ಕೂಟಕ್ಕೆ ಒಪ್ಪಿಕೊಳ್ಳುವಂತೆ ಮಾಡಿದರು.ಆದರೆ ಜೂನಾಗಢ,ಕಾಶ್ಮೀರ ಮತ್ತು ಹೈದರಬಾದ ಮತ್ತು ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ತರುವಲ್ಲಿ ಸರ್ದಾರ ಪಟೇಲ್ ರ ಮುತ್ಸದ್ದಿತನ ತೋರುತ್ತದೆ.
 ಜುನಾಗಢದ ಸಂಸ್ಥಾನದ ರಾಜ ಮೊಹಮ್ಮದ್ ಮೊಹಬ್ಬತ್ ಖಾನ್- (ಮೂರನೆಯ) ಸೆಪ್ಟೆಂಬರ್ ಹದಿಮೂರ 1947 ರಂದು “ಜುನಾಗಢ ಸಂಸ್ಥಾನವು ಪಾಕಿಸ್ತಾನದ ಒಕ್ಕೂಟಕ್ಕೆ ಸೇರಿದೆ” ಎಂದು ಘೋಷಿಸಿಬಿಡುತ್ತಾನೆ.ಮೊದಲೆ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ಸೃಷ್ಟಿಸಲಾಗಿದೆ.ಆದರೆ ಜುನಾಗಢದ ಬಹುಸಂಖ್ಯಾತ ಹಿಂದುಗಳು ರಾಜನ ಘೋಷಣೆ ವಿರುಧ್ಧ ದಂಗೆ ಎದ್ದರು.ಅದೆ ವರ್ಷ ಡಿಸೆಂಬರ್ ನಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಿ ಜುನಾಗಢನ್ನು ಭಾರತದ ಒಕ್ಕೂಟಕ್ಕೆ ತರಲಾಯಿತು. ಕಾಶ್ಮಿರದ್ದು ಇನ್ನೊಂದು ಕಥೆ!!! ಕಾಶ್ಮಿರ ದ ರಾಜ ಮಹಾ ರಾಜ ಹಿರಿ ಸಿಂಗ್ ಭಾರತದ ಒಕ್ಕೂಟ ವ್ಯವಸ್ಥೆಯಲ್ಲೂ  ಬಾರದೆ ಪಾಕಿಸ್ತಾನಕ್ಕು ಹೋಗದೆ ಸ್ವತಂತ್ರ ವೆಂದು ಘೋಷಿಸಿ ಬಿಟ್ಟ.ಆದರೆ ಪಾಪಿ ಪಾಕಿಸ್ತಾನ ಕಾಶ್ಮಿರವನ್ನು ಕಬಳಿಸುವ ಹುನ್ನಾರದಿಂದ ಕಾಶ್ಮಿರದ ಮೇಲೆ ಆಕ್ರಮಣ ಮಾಡಿತು.ಮಹಾರಾಜ ಹರಿ ಸಿಂಗ್ ಭಾರತದ ಸಹಾಯನ್ನು ಕೇಳಿದಾಗ “ಭಾರತದ ಜೊತೆ ವಿಲೀನವಾದರೆ  ಮಾತ್ರ ನಾವು ನಿಮಗೆ ಸಹಾಯವನ್ನು ಮಾಡಬಲ್ಲೆವು” ಎನ್ನುವ ಕಠಿಣ ಸಂದೇಶವನ್ನು ರೆವಾನೆ ಮಾಡುತ್ತಲೆ ಕಬ್ಬಿಣ ಕಾದಾಗಲೆ ಬಡಿಯಬೇಕು ಎನ್ನುವ ಸಿಧ್ದಾಂತವನ್ನು ಬಳಸಿ ಮುತ್ಸದ್ದಿತನವನ್ನು ತೋರಿದ್ದರು ಪಟೇಲ್.ಆ ಕಡೆ ಪಾಕಿಸ್ತಾನದ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಕೊನೆಗೆ  ಅಕ್ಟೋಬರ್ 26 1947 ರಂದು ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳಲು ಕಾಶ್ಮೀರದ ರಾಜ ಮಹಾರಜ ಹರಿ ಸಿಂಗ್ ಒಪ್ಪಿಕೊಳ್ಳುತ್ತಾನೆ.ಆದರೆ ಎಲ್ಲಾ ರಾಜ ಸಂಸ್ಥಾನಗಳ ಭಾರತ  ಒಕ್ಕೂಟದ ವಿಲೀನಕ್ಕಿಂತ ಭಿನ್ನ ಮತ್ತು ರೋಚಕವಾದ ಇತಿಹಾಸವನ್ನು ಹೊಂದಿರುವುದೆಂದರೆ ಹೈದರಬಾದಿನ ವಿಲೀನ.
ಆಪರೇಷನ್ ಪೋಲೊ:-
  ಹೈದರಬಾದ್ ಪ್ರಾಂತವನ್ನು ಹೈದರಬಾದಿನ ನಿಜಾಮರ ಸಂತತಿಯಾದ ಮೀರ್ ಒಸ್ಮಾನ ಅಲಿ ಖಾನ್ ಆಳುತಿದ್ದನು.ಆದರೆ ಹೈದರಬಾದ್ ಪ್ರಾಂತವು ಹಿಂದೂ ಬಾಹುಳ್ಯದಿಂದ ಕೂಡಿದ್ದ ಭಾಗವಾಗಿತ್ತು.ಹೈದರಬಾದ್ ನಿಜಾಮನು ಭಾರತ ಸ್ವಾತಂತ್ರದ ನಂತರ ತಾನು ಸ್ವತಂತ್ರವಾಗಿಯೆ ಇರುವೆ ಎಂದು ಘೋಷಿಸಿ ಕೊಂಡಿದ್ದ.ಆದರೆ ಅವನ ಮನಸ್ಸಿನಲ್ಲಿ ಹೈದರಬಾದ್ ಪಾಕಿಸ್ತಾನದ ಭಾಗವಾಗಬೇಕು ಎನ್ನುವದಾಗಿತ್ತು.ಭಾರತವು ಸ್ವತಂತ್ರವಾಗಿ ಪಾಕಿಸ್ತಾನವೆನ್ನುವ ರಾಷ್ಟ್ರ ಉದಯವಾದಾಗ ಇದೆ ಹೈದರಬಾದಿನ ನಿಜಾಮ ಪಾಕಿಸ್ತಾನಕ್ಕೆ  ಒಂದು ದೊಡ್ಡ ಮೊತ್ತದ ಸಹಾಯವನ್ನು ಮಾಡಿ ತನ್ನ ‘ಮುಸ್ಲಿಂ’ ಪ್ರೇಮವನ್ನು ಯಾವುದೆ ಮುಜುಗರವಿಲ್ಲದೆ ತೋರಿರುತ್ತಾನೆ.ಈ ನಿಜಾಮನನ್ನು ನಿಯಂತ್ರಿಸುತ್ತಿದ್ದುದು - the most cruel villain of the Hyderbad story, ಅದೆ ಖಾಸಿಂ ರಿಜ್ವಿ!!!!.
   ಖಾಸಿಂ ರಿಜ್ವಿ ‘ರಜಾಕರ’ ಎನ್ನುವ ಸೇನೆಯ ತೆರೆನಾದ ಖಾಸಗಿ  ತಂಡವನ್ನು ಕಟ್ಟಿಕೊಂಡು ಹೈದರಬಾದಿನ ಸುರಕ್ಷೆಗೆ ಹೋರಾಡುತ್ತಿರುವ ಒಬ್ಬ ಬಂಡು ನಾಯಕ!!.(‘ರಜಾಕರ’ ರ ಹಾವಳಿ ಮತ್ತು ಉಪಟಳಗಳನ್ನು ತಿಳಿಯ ಬೇಕಾದರೆ ಈಗಿನ ಹೈದರಬಾದ ಕರ್ನಾಟಕ ಭಾಗದ 85 ವಯಸ್ಸು ದಾಟಿರುವ ಹಿರಿಯರನ್ನು ಕೇಳಿ).ಇದೆ ಖಾಸಿಂ ರಿಜ್ವಿ ಆಗಿನ ಗೃಹ ಖಾತೆಯ ಮಂತ್ರಿ ಮತ್ತು ಉಪ ಪ್ರಧಾನಿಯಾಗಿದ್ದ ಸರ್ದಾರ್ ಪಟೇಲರನ್ನು ಮುಖತಃ ಭೇಟ್ಟಿಯಾಗಿ –“ಹೈದರಬಾದ್ ಸ್ವತಂತ್ರ ರಾಷ್ಟ್ರ ಮತ್ತು ಹೈದರಬಾದಿನ ಮೇಲೆ ಏನಾದರು ಶಕ್ತಿ ಪ್ರದರ್ಷನಕ್ಕೆ ಭಾರತವು ನಿಂತರೆ,ಭಾರತದ ಸೈನ್ಯವು  ಒಂದು ಕೋಟಿ ನಲವತ್ತು ಲಕ್ಷ ಹಿಂದುಗಳ ಹಣವನ್ನು ನೋಡ ಬೇಕಾಗುತ್ತದೆ” ಎಂದು ಹೆದರಿಸಿದಾಗ.ಅಷ್ಟೆ ಸಮಾಧಾನದಿಂದ “ನೀವು ಹಿಂದುಗಳ ಹೆಣವನ್ನು ಉರುಳಿಸುವ ವರೆಗು ನಾವು ಸುಮ್ಮನಿರುತ್ತೆವೆಯೆ?” ಎಂದು  ಖಡಕ್ ಉತ್ತರವನ್ನು ಕೊಟ್ಟು ‘ಆಪರೇಷನ್ ಪೋಲೊ’ ಗೆ ಹಸಿರು ನಿಶಾನೆಯನ್ನು ತೋರಿಸುತ್ತಾರೆ.ಮುಂದೆ ಕೆವಲ 108 ಗಂಟೆಗಳಲ್ಲಿ ಹೈದರಬಾದ್ ಭಾರತದ ಮುಂದೆ ಮಂಡಿಯೂರಿ ಕುಳಿತು ಬಿಟ್ಟಿತು.
  ಹೀಗೆ ಹಿಂದುಸ್ಥಾನಕ್ಕೆ ತಲೆ ನೋವಾಗಿದ್ದ ಮೂರು ದೇಶಿಯ ಪ್ರಾಂತಗಳನ್ನು ಭಾರತದ ಒಕ್ಕೂಟಕ್ಕೆ ತಂದಿದ್ದರು ಸರ್ದಾರ ಪಟೇಲ್,ಐದುನೂರ ಐವತ್ತರೆಡು ಪ್ರಾಂತಗಳನ್ನು ಭಾರತದಲ್ಲಿ ವಿಲೀನ ಗೊಳಿಸದೆ ಯಾವುದಾದರೊಂದು ಪ್ರಾಂತ ಭಾರತದ ಒಕ್ಕೂಟದ ವ್ಯವಸ್ಥೆಯಿಂದ ಹೊರಗಡೆ ಉಳಿದಿದ್ದೇ ಆಗಿದ್ದರೆ ಭಾರತದ ಭೂಪಟ ಈಗಿನಂತೆ ಇರುತ್ತಿರಲಿಲ್ಲ.ಹೀಗೆ ಎಲ್ಲಾ ಪ್ರಾಂತಗಳನ್ನು ಏಕತೆಯೊಳಗೆ ಬಂಧಿಸಿದ ‘ಉಕ್ಕಿನ ಮನುಷ್ಯ’ಗೆ ಈಗ  ತಡವಾಗಿಯಾದರು ನಾವು ಗೌರವ ತೋರುವ ಸಮಯ.ರಾಷ್ಟ್ರದ ಅಖಂಡತೆಯನ್ನು ಸಾರಿ ನಾಡಿನ ಏಕತೆಯ ಹರಿಕಾರನಾಗಿದ್ದ ಪಟೇಲ್ ರ ಬೃಹತ್ ಮೂರ್ತಿಯನ್ನು ಸ್ಥಾಪಿಸುವುದು ಅದೆ ‘ಏಕತೆಯ ಮೂರ್ತಿ’!!!.ಇದು ಭಾರತೀಯರಾದಂತಹ ನಾವು ತೋರಿಸುತ್ತಿರುವ ಗೌರವ,ಭಕ್ತಿ,ಪ್ರೀತಿ ಮತ್ತು ವಿಶ್ವಾಸ!!!
 2010 ರಲ್ಲಿ ಆಗಿನ ಗುಜರಾತ ಸರ್ಕಾರ Sardar Vallabhbhai Patel Rashtriya Ekta Trust (SVPRET) ಎನ್ನುವಂತಹ ಒಂದು ಸಂಸ್ಥೆಯನ್ನು ಸ್ಥಾಫನೆಮಾಡಿತು, ಸರ್ದಾರ ಪಟೇಲರ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಜವಬ್ದಾರಿಯನ್ನು ಆ ಸಂಸ್ಥೆಗೆ ವಹಿಸಲಾಯಿತು. ಆಕ್ಟೋಬರ್ 31 2014 ರಲ್ಲಿ ಆಗಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ–‘ Statue of Unity’ ಗೆ ಭೂಮಿ ಪೂಜೆ ಮಾಡಿದರು. Sardar Vallabhbhai Patel Rashtriya Ekta Trust (SVPRET) ಸಂಘಟನೆಯ ಉಸ್ತುವಾರಿಯಲ್ಲಿ ಈ ಯೋಜನೆಯು ಪ್ರಗತಿಯಲ್ಲಿದೆ.ಇದೆ ಅಕ್ಟೋಬರ್ 31 ಕ್ಕೆ ಇದರ ಉದ್ಘಾಟನೆಯೂ ಆಗಲಿದೆ.
   ‘Statue of Unity’ ಯ ಕೆಲವು ಅಂಕಿ ಸಂಖ್ಯೆಗಳು:-
ಮೂರ್ತಿಯ ಎತ್ತರ:-182 ಮೀಟರಗಳು,ಪ್ರಪಂಚದ ಅತಿ ಎತ್ತರದ ಮೂರ್ತಿ
ಎಲ್ಲಿ:-ನರ್ಮದಾ ನದಿಯ ಆಣೆಕಟ್ಟೆಯ ದ್ವೀಪವಾದಂತಹ ‘ಸಾಧು ಬೇಟ್’ನಲ್ಲಿ.
ಮೂರ್ತಿ ತಯಾರಿಕೆ ಬೇಕಾಗಿರುವ ಸಾಮಾಗ್ರಿಗಳ ವಿವರ:- 75000 ಘನ ಮೀಟರ್ ನಷ್ಟು ಸಿಮೆಂಟ್,5700 ಮೆಟ್ರಿಕ್ ಟನ್ ನಷ್ಟು ಉಕ್ಕು,18500 ಟನ್ ನಷ್ಟು ಉಕ್ಕಿನ ಸಲಾಖೆಗಳು ಮತ್ತು 22500 ಟನ್ ಗಳಷ್ಟು ಕಂಚು
ಖರ್ಚು:-2063 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ
ಗುತ್ತಿಗೆ:-ಭಾರತದ ಕಂಪನಿಯಾಗಿರತಕ್ಕಂತಹ ‘ಲಾರ್ಸನ್ ಅ್ಯಂಡ್ ಟರ್ಬ್ಯೊ’

ಬಾಲ್ಯ ಮತ್ತು ಹೋರಾಟದ ಹಾದಿ:-
   1885 ಆಕ್ಟೋಬರ್ 31 ರಂದು( ದಿನಾಂಕಕ್ಕೆ ಯಾವುದೆ ಅದಿಕೃತ ದಾಖಲೆಗಳಿಲ್ಲ.ಆದರೆ ಪಟೇಲ್ ತಾವು ಮೆಟ್ರಿಕ್ಯುಲೆಷನ್ ಪರೀಕ್ಷೆಗಾಗಿ ಭರ್ತಿ ಮಾಡಿದ ಅರ್ಜಿಯಲ್ಲಿ ತಾವೆ ಯೋಚಿಸಿ ನಮೂದಿಸಿದ ದಿನಾಂಕವಾಗಿದೆ) ನಾಡಿಯೆಡ್ (ಈಗಿನ ಗುಜರಾತ್ ನಲ್ಲಿ) ಜನಿಸಿದರು.ತಂದೆಯ ಹೆಸರು ಝವೇರ ಭಾಯ್ ಪಾಟೇಲ್ ಮತ್ತು ತಾಯಿ ಲಾಡ್ ಬಾಯಿ.ತಂದೆಯು ಒಕ್ಕಲುತನವನ್ನು ನಡೆಸಿಕೊಂಡು ಬರುತಿದ್ದರು ಮತ್ತು ವಲ್ಲಭಬಾಯ್ ಪಟೇಲ್ ರು ಸಹ ತಂದೆ ಗೆ ಹೊಲಗಳಲ್ಲಿ ಸಹಾಯ ಮಾಡುತ್ತಾ ತಮ್ಮ ಪ್ರೌಢ ಶಿಕ್ಷಣದ ನಂತರ ಕಾನೂನು ಶಿಕ್ಷಣಕ್ಕಾಗಿ ಲಂಡನ್ ಗೆ ಪ್ರಯಾಣ ಬೆಳೆಸಿದರು.ಲಂಡನ್ ನಲ್ಲಿ ಬ್ಯಾರಿಷ್ಟರ್ ನ್ನು ಪಡೆದು ಭಾರತಕ್ಕೆ ಮರಳಿದ ಪಟೇಲರು ಸ್ವಲ್ಪ ಸಮಯದ ವರೆಗೂ ಗೋಧ್ರಾದಲ್ಲಿ ಸ್ವಂತ ವಕೀಲಿಕೆಯನ್ನು ನಡೆಸಿದರು ಮತ್ತು ಅವರ ಆದಾಯವು ಚೆನ್ನಾಗಿಯೆ ಇತ್ತು.1917 ರಲ್ಲಿ ಪಟೇಲರು ಗುಜರಾತ್ ಸಭಾದ ಕಾರ್ಯದರ್ಶಿಗಳಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ್ನು ಪ್ರತಿನಿಧಿಸಿದರು.ನಂತರದಲ್ಲಿ ನಡೆದದ್ದು ಇತಿಹಾಸ:
ವಲ್ಲಭ ಬಾಯಿ ‘ಸರ್ದಾರ’  ಆದದ್ದು:-1918 ರಲ್ಲಿ ಪಟೇಲರು  ‘ಕರ ನಿರಾಕರಣೆ ಚಲುವಳಿ’ಯ ನೆತೃತ್ವ ವಹಿಸಿದರು.ಇದರಿಂದ ಒಂದು ದೊಡ್ಡ ರೈತ ಸಮುದಾಯದ ನಾಯಕರಾಗಿ ಬಿಂಬಿತರಾದರು.ಕೊನೆಗೆ ರೈತರ ಮತ್ತು ಪಟೇಲರ ಶಾಂತಿ ಯ ಹೋರಾಟದ ಫಲವಾಗಿ ಬ್ರಿಟೀಷರು ರೈತರ ಭೂಮಿಗಳನ್ನು ಅವರ ಸ್ವಾಧೀನಕ್ಕೆ ವಾಪಸ್ಸು ಕೊಟ್ಟರು.ಹೀಗೆ ಬಾರ್ಡೊಲಿ ಸತ್ಯಾಗ್ರಹದಲ್ಲಿ ಅಲ್ಲಿನ ಮಹಿಳೆಯರು ಪಟೇಲರಿಗೆ ಇನ್ನು ಮುಂದೆ ನೀವು ನಮ್ಮ ನಾಯಕರು ಅಂದರೆ ‘ಸರ್ದಾರ’ ಎನ್ನುವ ಉಪನಾಮವನ್ನು ಕೊಟ್ಟರು.
 ಇಂತಹ ಮಹಾನ್ ನಾಯಕ ಡಿಸೆಂಬರ್ 1950 ರಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟರು and that is the end of the story.ಇನ್ನೊಬ್ಬ ನಾಯಕ ಅವರಿಗೆ ಸರಿಸಮಾನವಾಗಿ ಯಾರು ನಿಲ್ಲಲಿಲ್ಲ.ಆದರೆ ಪಟೇಲರ ಎಲ್ಲಾ ಕೆಲಸಗಳಲ್ಲಿಯೂ ನಾವು ಅವರನ್ನು ಈಗಲೂ ನೆನಯುತ್ತೇವೆ. ರಾಷ್ಟ್ರಕ್ಕಾಗಿ ಏನೆಲ್ಲವನ್ನು ಸಾಧನೆ ಮಾಡಿದ ಮಹಾನ್ ನಾಯಕನಿಗೆ ಯಾವತ್ತೊ ‘ಭಾರತ ರತ್ನ’ ವನ್ನು ಕೊಡಬಹುದಾಗಿತ್ತು.ಆದರೂ "Better late than never" 1991 ರಲ್ಲಿ ಅವರಿಗೆ ಭಾರತ ರತ್ನವನ್ನು ಕೊಡಲಾಯಿತು.