Friday, June 18, 2021

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ

Published in April 2021 Karmaveera( on Yugadi issue) 

ತಿರುಗಿ ಬಂತು ಶುಭ ಕ್ಷಣದಿ ಆದಿ ಹಬ್ಬವು

ನೋಡಿದಡೆ ಮಾವು, ಬೇವು ಚಿಗುರೆಲೆಗಳ ತೋರಣವು

ಹೊನಲಾಯಿತು ಹೊಸತು ಆಸೆ ಹೊಸತು ಬಯಕೆ ನಮ್ಮವು

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ !!!


ಹಾಡ ಮರೆತ  ಕಾಡ ಹಕ್ಕಿ ಚಿಗುರು ತಿಂದು ದನಿಯ ಎತ್ತಿ 

ಹೊಸ ಹಾದಿ ತೆರೆಯಿತೆಂದು ನೋವು-ನಲಿವು ಒಂದೇ ಎಂದು

ಹೊಸತು ರಾಗ ಹಾಡಿದೆ ಸ್ವಾಗತವ ಕೋರಿದೆ 

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ !!!


ನೆಲದೊಡಲ ಪಸೆಯಲೂ ವಾಸಂತಿಯ ಹಸಿರಲು 

ಬರುತಲಿದ ಚೈತ್ರ ತಾ ಭೂಮಿ ಬಾನು ಬೆಸೆಯಲು

ಕಾಣುತಿದೆ ಛಲವು ಪುಟಿಯುತಿದೆ ಜೀವ ಸೆಲೆಯು

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ !!!

Sunday, May 9, 2021

ಜೀವ ಮತ್ತು ಜೀವನ

Published in 16th May Vikrama

************************************


ಪ್ರಪಂಚವೆ ನಲುಗಿ ಮನುಜ ಕುಲವೆಲ್ಲಾ

ಕೊರಗಿ, ಸೊರಗಿ, ನರಳಿ - ನರಳಿ ಸಾಯುತಿರುವಾಗ

ಮನೆಯಲ್ಲೆ ಇದ್ದು ಬಿಡೋಣಾ...

ಕರೋನಾ ಪಿಡುಗಿನ ಕೊಂಡಿ ಕಳಚಿ ಬಿಡೋಣಾ.


ಮನೆಯಿಂದ ಹೊರ ಬಂದರೆ ಯಾರಿಗೆ ಗೊತ್ತು..

ಯಾವ ಸೊಂಕಿನ ಸಂಪರ್ಕಕ್ಕೆ ಬಂದೇವು?

ಮನೆಯಲ್ಲೆ ಇದ್ದು ಬಿಡೋಣಾ...

ಕರೋನಾ ಪಿಡುಗಿನ ಕೊಂಡಿ ಕಳಚಿ ಬಿಡೋಣಾ.


ಹೆದರದೆ, ಬೆದರದೆ, ಆತಂಕಗೊಳ್ಳಲ್ಲದೆ

ಎಚ್ಚರಿಕೆಯಿಂದ ಎಲ್ಲವ ಅರಿತು ಜಗದ -

ಜನರ ಕೊನೆಗೆ ನಮ್ಮ ಒಳಿತಿಗಾಗಿ

ಮನೆಯಲ್ಲೆ ಇದ್ದು ಬಿಡೋಣಾ...

ಕರೋನಾ ಪಿಡುಗಿನ ಕೊಂಡಿ ಕಳಚಿ ಬಿಡೋಣಾ.


ಹೆಗಾದರೂ ಬದುಕಿದರೆ ಜೀವ ಇರುವುದು ಚೆಂದದ ಜೀವನ..

ಜೀವವೆ ಇರದೆ ಹೋದರೆ ಎಲ್ಲಿಯ ಜೀವನ

Wednesday, April 14, 2021

ಗಾಂಢೀವಿ ಗರ್ವ ಭಂಗ!

Published in 4th April 2021 Vikrama

*******************************************

 (ಕುರುಕ್ಷೇತ್ರ ಯುಧ್ಧದ ಕೊನೆಯಲ್ಲಿ ಅರ್ಜುನ ಗೆಲುವೆಲ್ಲಾ ತನ್ನಿಂದಲೇ ಎಂದು ಅಹಂನಿಂದ ಬೀಗುತ್ತಿರುವಾಗ,ಕೃಷ್ಣ ಅರ್ಜುನನ ಗರ್ವವನ್ನು

ಭಂಗ ಮಾಡಿ ಗೆಲುವಿನ ನಿಜವಾದ ಕಾರಣವನ್ನು ತೋರಿಸುತ್ತಾನೆ)

ವಿಜಯ ಧ್ವಜಕೆ

ವಿಧಾತ ಸಾರಥಿಯಾಗಿರಲು

ವಿಶ್ವರೂಪದಿಂ ಉಪದೇಶಿಸಿ

ವಿಕ್ರಮ ಸಾಧಿಪೆ ಸಮರದೋಳ್! | 1 |


ಬಂದಾಪತ್ತು ಪರಿಹರಿಸಿ ಅಭಯನಾಗಿ

ನೆರಳಂತೆ ಕಾದಿಹನು ಅರ್ಜುನಂಗೆ

ಧರ್ಮ ಪರ ನಿಂತು ಅಯ್ಯುಕ್ತನಾಗಿ

ಯುದ್ಧ ರಂಗದಿ ಮುನ್ನುಗ್ಗುತಿದೆ ‘ಧರ್ಮ’ ಅಜೇಯನಾಗಿ | 2 |


ಕಾಂತೇಯನ ಬಾಣಗಳು ಮಳೆಗಳಂದದಿ

ಕಿರೀಟಿಯ ಹರಿದು ಹಾಕಲು ಬರುತಿರಲು

ಕಿಶೋರ ರಥವ ಭೂಮಿಗೊತ್ತಿ ಕೆಳಗಿಳಿಸಿ

ಕರುಣಾಳಾಗಿದ್ದ ಹತ್ತು ಹಲವು ಬಾರಿ | 3 |

ಹತ್ತಾರು ತಂತ್ರಗಳ ಹೆಣೆದ ಕೃಷ್ಣ

ಹಣಿದಿದ್ದ ಕರ್ಣ, ಭೀಷ್ಮ ಮತ್ತು ದ್ರೋಣ!

ದಯಾನಿಧಿ ಮಾಯೆಯ ಅರಿಯದ

ಧನಂಜಯ ಗೆಲುವೆಲ್ಲಾ ತನ್ನಿಂದಲೆಂದು ಬೀಗಿದ | 4 |


ವಿಷ್ಣು ರಥದ ಮೇಲಿರುವ ಹನುಮ ತೋರಿಪೆ-

ವಿಭಸ್ತುಗೆ ಹೆಜ್ಜೆ ಹೆಜ್ಜೆಗೂ ಕಾಯ್ತಿರುವಂತೆ.

ಜಗದೊಡೆಯ ರಥದಿಂದಿಳಿದೊಡನೆ ಭಸ್ಮವಾಯಿತು ರಥವು

ಬೀಗುತ್ತಿದ್ದ ಜಿಷ್ನುವಿನ ಗರ್ವ ಅನಂತನ ಮುಂದೆ ಭಂಗವಾಯಿತು.| 5 |