Monday, October 29, 2007

ಅರ್ದ...!(ಉಳಿದರ್ದ ದ ಹುಡುಕಾಟದಲ್ಲಿ...?)

ಹಾಲಿನ ನಾಗಪ್ಪ..."ಹಾಲೂ....." ಎಂದು ಕೂಗಿದಾಗ ,ನಂದಿನಿ ಅಡುಗೆ ಮನೆಯಲ್ಲಿ ಸೀರೆ ಸರಿ ಮಾಡಿಕೊಳ್ಳುತ್ತಿದ್ದಳು.ಇನ್ನೊಮ್ಮೆ ನಾಗಪ್ಪ ಕೂಗಿದರೆ , ಮಲಗಿರುವ ರಾಕೇಶ್ ಮತ್ತು ಮುನ್ನಿ ಎಲ್ಲಿ ಎದ್ದುಬಿಡುತ್ತಾರೊ ಎಂದು ಕೈಗೆ ಸಿಕ್ಕ ಪಾತ್ರೆ ಯನ್ನು ಎತ್ತಿ ಕೊಂಡಳು.ಕಣ್ಣಲ್ಲೆ ಸುಮಾರು ಒಂದುವರೆ ಲೀಟರ್ ಹಾಲಿಗೆ ಸಾಕಾಗುತ್ತೊ ಇಲ್ಲವೂ ಎಂದು ಲೆಕ್ಕ ಹಾಕಿ,ತಲೆಗೆ ಕಟ್ಟಿದ್ದ ಟವಲ್ ನ್ನು ಸರಿಪಡಿಸಿ ಕೊಳ್ಳುತ್ತಾ....ತಲಬಾಗಿಲಿಗೆ ದಡಬಡಾಯಿಸಿದಳು.ತಲಬಾಗಿಲನ್ನು ಮತ್ತಗೆ ಶಬ್ದವಾಗದಂತೆ ತೆರೆದಳು. ನಾಗಪ್ಪ"ಮಾಮೂಲೇನಮ್ಮಾ.....?" ಎಂದು ಕೇಳಿದ್ದಕ್ಕೆ ,ಏನೋ ಲೆಕ್ಕಚಾರ ಹಾಕಿ"ಒಂದು ಕಾಲು ಲೀಟರ್ ಎಕ್ಸಟ್ರಾ ಹಾಕಿ ಬಿಡು " ಎಂದಳು.ನಾಗಪ್ಪ ಹಾಲು ಹಾಕಿ ತನ್ನೆರೆಡು ಕ್ಯಾನ್ ಗಳನ್ನು ಕೈಲಿ ಹಿಡಿದು ಕೊಂಡು ಗಾಡಿ ಯ ಆಜುಬಾಜು ಇದ್ದ ಹಿಡಿಗಳಿಗೆ ಹಾಕಿ,ಗಾಡಿ ಸ್ಟಾ‍ಟ್ ಮಾಡಿ ಹೊರಟೇ ಬಿಟ್ಟ!ಆದರೆ ನಂದಿನಿ ಹಾಲಿನ ಬಟ್ಟಲನ್ನು ಕೈಲಿ ಹಿಡಿದು ನಾಗಪ್ಪನ್ನೆ ನೋಡುತ್ತ ನಿಂತಿಬಿಟ್ಟಳು."ಹಿಂದಿನಿಂದ ನೋಡಿದರೆ ರಾಕೇಶ್ ತರಹನೇ ಕಾಣ್ತಾನೆ.ಆ ನಡಿಗೆ ರಾಕೇಶ್ ನಡಿಗೆ ಇದ್ದ ಹಾಗೆ ಇದೆಯಲ್ಲಾ?" ಎಂದು ಕೊಳ್ಳುತ್ತಿರುವಾಗಲೇ ಥಟ್ಟನೇ ಬೆಚ್ಚಿ ಬಿದ್ದು.."ಅಯ್ಯೂ...ನಂಗೇನಾಗಿದೆ..?ಏನಿದು..? ಛೇ..! ಹಾಗಗಬಾರದು ಎಂದು ಗುನುಗುನುಗುತ್ತಾ ಹಾಲನ್ನು ಅಡುಗೆ ಮನೆಯ ಕಟ್ಟೆಯ ಮೇಲೆ ಇಟ್ಟಳು.ಆಗಲೇ ಏಳುವರೆ ಆಗಿತ್ತು."ಲೇಟಾಗಿ ಹೋಗುತ್ತಲ್ಲಾ..?" ಎನ್ನುತ್ತಾ.."ಮುನ್ನಿ...ರಾಕೇಶ್...."ಎಂದು ಕೂಗುತ್ತಾ ಬೆಡ್ ರೂಮ್ ಗೆ ಹೋದಳು.ಮುನ್ನಿ ಯ ತಲೆ ಸವರುತ್ತಾ"ಮು..ನ್ನಿ...ಏಳಮ್ಮಾ ಲೇಟಗ್ತ ಇದೆ" ಎನ್ನುವಷ್ಟರಲ್ಲಿ ರಾಕೇಶ್ ಎದ್ದು " ನಂಗೆ ಇವತ್ತು ಲೇಟಾಗ್ತ ಇದೆ ಎನ್ನುತ್ತಲೇ ಟವಲ್ ಎತ್ತಿಕೊಂಡು ಬಾತ್ ರೂಮ್ ಕಡೆ ಓಡಿದ.ಅಷ್ಟರಲ್ಲಿ ಮುನ್ನಿ ಎದ್ದು ಕುಳಿತಿದ್ದಳು.ಮುನ್ನಿ ಯ ತಲೆ ಸವರುತ್ತಾ..ಏಳಮ್ಮಾ ಲೇಟಾಗುತ್ತೆ ಬೇಗ ಬ್ರಷ್ ಮಾಡಿ ಬಾ ಹಾಲು ಕೊಡ್ತೆನೆ . ಎನ್ನುತ್ತ ಮುನ್ನಿಯನ್ನು ಎಬ್ಬಿಸಿ ಕಳಿಸಿದಳು. ಎರ್ರಾಬಿರ್ರಿ ಯಾಗಿದ್ದ ಹಾಸಿಗೆ ಯನ್ನು ಸರಿಪಡಿಸಲು ಅಣಿಯಾದಳು.ನಂದಿನಿ ಸೀರೆ ಮೇಲಕ್ಕೆ ಕಟ್ಟಿ.ಓಂದೊಂದು ಹೊದಿಕೆ ಮಡಿಚಿ ಮಡಿಚಿ ಇಟ್ಟಳು.ಹಾಸಿಗೆಯ ಮೇಲೆ ಇದ್ದ ಬಣ್ಣ ಬಣ್ಣದ ಹೂಗಳ ಬೆಡ್ ಸ್ಪ್ರೆಡ್ ನ್ನು ಏಳೆದು ಏಳೆದು ಸರಿ ಪಡಿಸಿದಳು.ಇನ್ನೇನು ಹೊರಡ ಬೇಕು ಎನ್ನುವಷ್ಟರಲ್ಲಿ ಆ ಹಾಸಿಗೆಯ ತುಂಬಾ ಇದ್ದ ಬಣ್ಣ ಬಣ್ಣ ದ ಹೂಗಳು ಏನೋ ಸುಸ್ತಾಗಿ ಮಲಗಿದಂತೆ ಕಂಡವು.ಪ್ರತಿ ದಿನದ ಲವ ಲವಕೆ ಚೈತನ್ಯ ಆ ಹೂಗಳಲ್ಲಿ ಇರಲಿಲ್ಲ.ಸೊರಗಿ ನೆಲದ ಕಡೆ ಮುಖಮಾಡಿದಂತೆ ಕಾಣಿಸ್ತ ಇತ್ತು.ನಂದಿನಿಗೆ ನಂಬಲಾಗಲಿಲ್ಲ."Oh! my God what is this...? ನಂಗೆ ಏನಾಗಿದೆ ?ಏನಿದು ತಪ್ಪಾಯ್ತು...!" ಎಂದು ಕೈ ಮುಗಿದು ಗಲ್ಲ ಗಲ್ಲ ತಟ್ಟಿ ಕೊಂಡ ಹಿಂತಿರುಗಿಯೂ ನೋಡದೆ, ಬೆಡ್ ರೂಮ್ ಬಾಗಿ ಹಾಕಿ ,ಕಿಚನ್ ಕಡೆ ಓಡಿದಳು. *****************************************************************
ನಂದಿನಿಗೆ ಈಚೀಚಿಗೆ ಅನ್ನಿಸೋಕೆ ಶುರುವಾಗಿತ್ತು..!"ಇದೇನಿದು..? ಮುನ್ನಿ ಹುಟ್ಟಿ ಯಾಗಿದೆ.ಅವಳಿಗಾಗಲೆ ಎಂಟು ವರ್ಷ.ಹಿಂದೆ ಯಾವತ್ತೂ ಈ ಭಾವನೆ ಬಂದಿರಲಿಲ್ಲ.ಆದರೆ ..ಇದೇನಿದು...? ತೀರಾ ಇತ್ತೀಚಿನ ದಿನಗಳಲ್ಲಿ ನಂಗೇನೋ ಕಡಿಮೆ ಆಗಿದೆ..? ಎಲ್ಲಾ ಇದೆ...! ನನ್ನದು ತುಂಬು ಸಂಸಾರ.ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ರಾಕೆಶ್.ನಮ್ಮಿಬ್ಬರ ಪ್ರೀತಿಯನ್ನೆ ಬಸಿದು ಬೆಳೆದಂತಿರುವ ಮುನ್ನಿ. ಮನೆಯಲ್ಲಿ ಏನಕ್ಕೂ ಕೊರತೆಯಗಿಲ್ಲ.ಎಲ್ಲಾ ಇದೆ. ಮನೆ ಹೊಕ್ಕರೆ ತೀರ ,ಆಮೇರಾಕದಲ್ಲಿ ಕಳೆದಿದ್ದರಿಂದಲೋ ಏನೋ...? ಎಂತಹ ಮನೆ...?ಕೈತುಂಬ ಸಂಬಳ!!! ಖರ್ಚಿಗೆ ಯೋಚಿಸದ ರಾಕೇಶ್!ಆರಡಿ ಎತ್ತರದ ಆಜಾನುಬಾಹು!ಸತತವಾಗಿ ಆರೇಳು ವರ್ಷ ಜಿಮ್ ಗೆ ಹೋಗಿ ಕಡೆದಿಟ್ಟ ದಷ್ಟಪುಷ್ಟ ವಾದ ದೇಹ.ಯಾವುದರಲ್ಲಿ ಕಡಿಮೆ ಅವನು?ಸ್ವಿಮ್ಮಿಂಗ್..?ಡ್ಯಾನ್ಸ್..?..ಕುದುರೆ ಓಟ...?ಅಷ್ಟೆ ಅಲ್ಲ .....ಬೆವರಿಳಿಸಿ ಆಡುವ ಅವನ ಆಟ ......ಅದು ಅಷ್ಟು ಸುಲಭವಾಗಿ ನಿಲ್ಲದ ಆಟ....?"
" ಆದ್ರೂ ಏನಿದು...?ನನ್ನನ್ನ ಕಾಡ್ತ ಇರೂದು...?" " ಛೇ ..! ಯಾವುದು ನನ್ನ ಕಡ್ತಾ ಇಲ್ಲ! ಏನೂ ಇಲ್ಲ.ಮಣ್ಣೂ ಇಲ್ಲ ಮಸಿಯೂ ಇಲ್ಲ"ಎಂದು ಕೊಳ್ಳುತ್ತ ಎದ್ದ ಕ್ಷಣದಲ್ಲೆ ಮೋಜಾಯಿಕ್ ಟೈಲ್ಸ್ ನಲ್ಲಿನ ಚುಕ್ಕೆ ಚುಕ್ಕೆ ಗಳೆಲ್ಲಾ ಸೇರಿ ಪುಟ್ಟ ಪುಟ್ಟ ಮಿಡಿ ನಾಗರಗಳಾಗಿದ್ದವು.ಒಮ್ಮೆ ಹಿಂತುರಿಗಿ ನೋಡಿದ ನಂದಿನಿ "ಏನಿದು...? ನನ್ ಕಾಡ್ತಾ ಇರೋದು...?ನನ್ನನ್ನ ಕಾಡ್ತ ಇರೋದು ಅದೇನಾ...? "........................................"

****************************************************
"ಮುನ್ನಿ....ಮುನ್ನಿ ..." ಎಂದು ಕಿಚನ್ ನಿಂದ ಕೂಗುತ್ತ ಬಂದ ನಂದಿನಿ"ಮುನ್ನಿ ...ಶಶಿ,ಬೇಬಿ ನಾ ಕರ ಕೊಂಡು ಹೊರಗಡೆ ಆಡ್ಕೊಳ್ಳಿ ಹೋಗಿ.." ಎನ್ನುತ್ತಾ ಸುಮಾರು ಗಂಟೆಗಳಿಂದ ಎನನ್ನೋ ಕಿಚನ್ ನಲ್ಲಿ ಮಾಡ್ತ ಇದ್ದ ನಂದಿನಿ ಹೊರಬಂದಳು .ಊದಿದ ಕಣ್ಣುಗಳನ್ನು ಮತ್ತು ತನ್ನ ಹಣೆ ಯ ಮೇಲೆ ಸಾಲುಗಟ್ಟಿದ್ದ ಬೆವರಿನ ಹನಿಗಳನ್ನು ತಾನು ಉಟ್ಟಿದ್ದ ಸೀರೆ ಸೆರಗಿನಿಂದ ಒರೆಸಿಕೊಳ್ಳುತ್ತಾ ಹಾಲ್ ನಲ್ಲಿ ಆನಂದ್ ಮತ್ತು ಸೌಮ್ಯ ಜೊತೆ ಮಾತಾಡುತ್ತ ಕುಳಿತಿದ್ದ ರಾಕೇಶ್ ನ ಬಳಿ ಬಂದು ನಿಂತಳು. ರಾಕೇಶ್ ಬೆನ್ನ ಮೇಲೆ ಕೈ ಇಟ್ಟಳು ರಾಕೇಶ್.." ಏನು...?" ಎಂಬಂತೆ ನೋಡಿದ "ಎಲ್ಲಾ ರೆಡಿಯಾಗಿದೆ ಲೇಟ್ ಮಾಡೂದು ಬೆಡ .ಬೆಗ ಊಟಕ್ಕೇಳಿ..? "ಎಂಬಂತೆ ಕಣ್ಣಲ್ಲೆ ಉತ್ತರಿಸಿದ್ದಳು. "ನಡೀಯೋ...ಏಳೋ...""ನೀವು ಏಳೀ .." ಎಂದು ಸೌಮ್ಯ ಳನ್ನು ಎಬ್ಬಿಸಿದ ರಾಕೇಶ್ .ನಂದಿನಿ ಸೌಮ್ಯ ಳನ್ನೇನೊ ನಸು ನಕ್ಕು ಅಹ್ವಾನಿಸಿದಳು.ಆದರೆ ಅವಳಿಗೆ ಆನಂದ್ ನನ್ನು ನೊಡಲಾಗಲಿಲ್ಲ.ಏನೋ ಒಂದು ತರಹದ ಹಿಂಜರಿಕೆ ,ಹೆದರಿಕೆ ಅವಳನ್ನ ಕಾಡ್ತ ಇತ್ತು.ಸೌಮ್ಯ,ಆನಂದ್ ಮತ್ತು ರಾಕೇಶ್ ಸ್ವಲ್ಪ ಅವಸರದಲ್ಲೇ ಹೊದರು.ಅಲ್ಲೆ ನಿಂತಿದ್ದ ನಂದಿನಿ ತನ್ನ ಸೆರಗಿನಿಂದ ಮುಖ ಒರೆಸಿಕೊಳ್ಳುತ್ತಾ ಇದ್ದ ನಂದಿನಿಯ ನೊಟ ಅಚನಕ್ಕಾಗಿ ಆನಂದ್ ನನ್ನು ಗಮಸಿದ್ದಳು.ಇದನ್ನು ಗುರುತಿಸಿದ ಆನಂದ್ ನ ನೊಟವೂ ಸೇರಿತ್ತು.ಆದರೆ ಆನಂದ್ ತನ್ನ ನೊಟವನ್ನು ಚಕ್ಕನೆ ಬದಲಿಸಿದ್ದ ಇದಲ್ಲವನ್ನು ನಂದಿನಿ ಗಮನಿಸಿದ್ದಳು.
ಅವಳ ಎದೆಯಲ್ಲಿ ನೋರಾರು ನಗಾರಿಗಳು..!ಗಂಟಲಲ್ಲಿ ದಶಕಗಳ ಬಾಯರಿಕೆ!ಮೈಯ ಮೂಲೆ ಮೂಲೆ ಯಲ್ಲೂ ಮಿಂಚು. "ನಾನು ಆನಂದ್ ನ ನೊಡ್ತಾ ಇರೋದು ಇದೆ ಮೊದಲಲ್ಲ?ರಾಕೇಶ್ ನ ಮದುವೆ ಆದಾಗಿನಿಂದ ನೊಡ್ತ ಇದ್ದಿನಿ! ಆದ್ರೂ ಯಾವತ್ತೂ ಮನಸು ಹೀಗೆ ಏನೋ 'ಘಾತ' ಬಯಸಿರಲಿಲ್ಲ.ಎಲ್ಲೋ ತಪ್ಪಾಗ್ತ ಇದೆ.ಏನೋ 'ಘಾತ'ವಾಗಲಿದೆ..!ನಾನು ಬಯಸುತ್ತಾ ಇರೋದು ತಪ್ಪು!'ಅದು' ಆಗಬಾರದು.ನನಗೆ ರಾಕೇಶ್ ನೇ ಸರ್ವಸ್ವ.ನನ್ನ 'ಎಲ್ಲಾ' ಅವನೇ!ನನಗೆ'ಎಲ್ಲಾ' ಅವನಿಂದಲೇ ಅಂತ ಅಂದುಕೊಳ್ತಾ ಇದ್ರೆ...................................ಅದು ಕಳ್ಳ ಹೆಜ್ಜೆ ಇಟ್ಟು ಬರ್ತಾ ಇತ್ತು..!ಬೆಕ್ಕು....!!!!!!!!!!!!ಒಳಗಡೆ ರೆಫ್ರಿಗೆರೆಟರ್ ನಲ್ಲಿ ಇಡಲು ಮರೆತಿದ್ದ ಹಾಲನ್ನು ಯಾರದ್ರೂ ನೊಡ್ಯಾರು ಅನ್ನೋ ಆತಂಕದಲ್ಲಿ ಎಲ್ಲವನ್ನು ಹೀರಿ ತನ್ನ ಮೀಸೆಗಂಟಿದ್ದ 'ಹನಿ' ಏನನ್ನಾದರೂ ಯರದ್ರೂ ನೋಡ್ಯಾರು ಎನ್ನೋ ಅತಂಕದಲ್ಲಿ ನಾಲಿಗೆಯಿಂದ ಸವರಿಕೊಳ್ಳುತ್ತಾ ಕಳ್ಳ ಕಳ್ಳ.....ಹೆಜ್ಜೆ ಇಡ್ತಾ ನಂದಿನಿಯ ಮುಂದೆ ಸಾಗಿ ಹೋಗಿತ್ತು!"ನೋಡು ನಾನ್ ಕಣ್ಮುಚ್ಚಿ ಎಲ್ಲ ಹಾಲು ಹೀರಿ ಬಿಟ್ಟೆ...!ಹೊಟ್ಟೆ ತುಂಬಿ ಹೋಯ್ತು.ಎಷ್ಟೊತ್ತು ಅಂತ ಹಿಸಿದಿರಲಿ?ಅದೂ ಸುಲಭವಾಗಿ ಸಿಕ್ತಿರಬೇಕಾದರೆ...?ನಾನ್ಯೇಕೆ...? ನಂಗೆ ನಾನೆ ಮೋಸ ಮಾಡಿಕೊಳ್ಳಲಿ...?".ಅಂತ ಬೆಕ್ಕಿನ ಕಳ್ಳ ಹೆಜ್ಜೆ ಹೇಳಿತ್ತು. ಆ ಕಡೆ ಆನಂದಗೂ ಅನ್ನಿಸೋಕೆ ಶುರುವಾಗಿತ್ತು."ನಂದಿನಿ ಹಿಂದೆಂದೂ ಹೀಗಿರಲಿಲ್ವಲ್ಲಾ?ಅವಳ ನೋಟ ಬದಲಾಗಿದೆ.ಇಷ್ಟು ದಿನ ಇಲ್ಲದ್ದೂ ಈಚೀಚಿಗೆ ಹೀಗೆ ನಂದಿನಿ? ಅವಳ 'ಎಲ್ಲಾ'ಬದಲಾಗಿದೆ.ಇದು ಹೀಗೇಕೆ...?ಅನ್ನೋ ಗೊಂದಲದಲ್ಲೆ ಮುಳುಗಿದ್ದ.
*************************************************************************
ಅದು ಮಟ ಮದ್ಯಾಹ್ನ.ನಡು ನೆತ್ತಿ ಮೇಲೆ ಸೂರ್ಯ.ಯಾವುದೋ ಲೋನ್ ವಿಚಾರವಾಗಿ ಡಾಕ್ಯುಮೆಂಟು ಕೊಡಲೇ ಬೇಕಾಗಿರುವುದರಿಂದ :ಅಲ್ಲದೆ ಅಂದೇ ಕಡೆಯ ದಿನವಾಗಿದ್ದರಿಂದ ರಾಕೇಶ್ ಊರಲ್ಲಿ ಇಲ್ಲದ್ದರಿಂದ ಆನಂದ್ ಗೆ,ರಾಕೇಶ್ ಕಾಲ್ ಮಾಡಿ " ಮನೆಗೆ ಹೋಗಿ ನಂದಿನಿ ಹತ್ರ ಆ ಡಾಕ್ಯುಮೆಂಟು ಇಸಿದುಕೊಂಡು ಸಬ್ಮಿಟ್ ಮಾಡಲು ಹೇಳಿದ್ದ. ಆನಂದ್ ಗೆ ಭಯ ಶುರುವಾಗಿ ಹೋಗಿತ್ತು..! ರಾಕೇಶ್ ಬೇರೆ ಊರಲ್ಲಿ ಇರಲಿಲ್ಲ.ನಂದಿನಿಯ ಹಳೆಯ 'ನೋಟ' ಬೇರೆ ಸಾಮನ್ಯ ವಾಗಿರಲಿಲ್ಲ "ಅಯ್ಯೂ...! ಅವಳು ಸಾಧ್ವಿ ಸತಿ.ಆ ತರಹದ್ದು ಏನು ಆಗಲ್ಲ...!ಅವಳಿಗೆ ಮದುವೆ ಆಗಿ ಏಂಟು ವರ್ಷದ ಮಗುವಿದೆ.ಅಷ್ಟಲ್ಲದೆ ನಾನೂ ಎರೆಡು ಮಕ್ಕಳ ತಂದೆ!ಛೇ! ಎನೂ ಆಗಲ್ಲ.ಎಂದು ಕೊಂಡು ರಾಕೇಶ್ ನ ಮನೆಗೆ ಬಂದೆ ಬಿಟ್ಟ! ನಂದಿನಿ ಗೆ ಮನಸು "ಏನೋ ತಪ್ಪು ಮಾಡ್ತ ಇದ್ದೀಯಾ...! " ಅಂತ ಹೇಳ್ತಾನೇ ಇತ್ತು.ಸ್ವಲ್ಪ ಭಯ,ವಿಪರೀತ ಗಿಲ್ಟ್ ಮನದಲ್ಲಿ ತುಂಬಿ ಹೋಗಿತ್ತು.ಕಿಚನ್ ನಲ್ಲಿ ಆನಂದ್ ಗಾಗಿ ಹಾಲು ಕಾಯಿಸ್ತಾ ಇದ್ದಳು.ಆ ಬೆಂಕಿಯ ಕೆನ್ನಾಲೆಗಳು ಧಗ ಧಗಿಸುತ್ತಿದ್ದವು.ಪಾದಡಯಲ್ಲೆಲ್ಲಾ'ಮಿಡಿ ನಾಗರಗಳು' ಸಳ ಬಳಿಸುತ್ತಿದ್ದವು.ಹಾಲಿಗೊಂದಿಷ್ಟು ಸಕ್ಕರೆ, ಬದಾಮಿ ಎರಡನ್ನು ಬೆರೆಸಿ ಆನಂದ್ ಗೆ ಕೊಟ್ಟಳು.ನಂದಿನಿ ಏನೋ ಅವನ್ನ ನೊಡ್ತಾ ನಿಂತುಬಿಟ್ಟಳು.ಆದರೆ ಆನಂದ್ ಮಾತ್ರ ಹಾಲು ಕುಡಿಯುತ್ತಾ,ನೆಲನೋಡುತ್ತಾ ಕುಳಿತುಬಿಟ್ಟಿದ್ದ.ಅವನಿಗೆ ತಲೆ ಎತ್ತುವ ಧೈರ್ಯ ವಿರಲಿಲ್ಲ.ತಲೆ ಎತ್ತಿದರೆ ಎಲ್ಲಿ 'ಅದು' ನಡೆದು ಹೋಗುತ್ತೋ ಅನ್ನೋ ಭಯ! ಆದರೇ ನಂದಿನಿ ಅವನನ್ನು 'ಅದು' ನಡೆಸಿಬಿಡುವಂತೆ ಕಣ್ಣಲ್ಲೇ ಕೇಳ್ತಾ ಇದ್ದಳು. ಆ ಕಡೆ ಮೂಲೆ ಯಲ್ಲಿ ಹಲ್ಲಿ ಲೊಚ ಲೊಚಿಸ್ತಾ ಇತ್ತು. ಆನಂದ್ ಗೆ ಈಗ"........' ಆದೇನೋ' ಆಗಬಹುದು ಆದರೇ ಯಾರಿಗಾದ್ರೂ ಗೊತ್ತಾದ್ರೆ..."? ಅನ್ನೋ ಭಯ."ಯಾರಿಗೂ ಗೊತ್ತಾಗಬಾರದು ತಾನೇ..? ಯಾರಿಗೂ ...ಯಾರಿಗೂ ಗೊತ್ತಾಗಲ್ಲ.ಬಾಗಿಲು ಹಾಕಿದಿನಿ.ಇಲ್ಲಿ ನಾನಿದಿನಿ ಗೋಡೆ,ಬಾಗಿಲು,ಕಿಟಕಿ...ಮಂ....ಚ ಅಷ್ಟೇ ಇರೋದು.ಇನ್ನೇನೂ ಇಲ್ಲ...!" ಅನ್ನುತ್ತಲೇ ಬೆಡ್ ರೂಮ್ ನ ಕಿಟಕಿಯ ಕರ್ಟನ್ ಗಳನ್ನೆಲ್ಲಾ ಎಳೆದು ಕತ್ತಲಾಗಿಸಿದಳು.ಬಾಗಿಲನ್ನೂ ಹಾಕಿ ಸೂರ್ಯ ನೂ ಇಣುಕದಂತೆ ಮಾಡಿದಳು. ಕತ್ತಲಾಯಿತು................! ಒಬ್ಬರಿಗೊಬ್ಬರು ಕಾಣದಾಯಿತು.ಹೆದರಿಕೆ ,ಹಿಂಜರಿಕೆ...ಎಲ್ಲವನ್ನೂ ಹಿಂದಕ್ಕೆ ತಳ್ಳಿ ಸಣ್ಣದೊಂದು 'ಮಿಣಕ್' 'ಮಿಣಕ್' ದೀಪವನ್ನೆಷ್ಟೇ ಹಚ್ಚಿದ್ದ. ಆನಂದ್...! ನಂದಿನಿ ಅದೇ ಕಾಟ್ ಮೇಲೆ ಕಣ್ಮುಚ್ಚಿ ಧ್ಯನಸ್ಥ ಸ್ಥಿತಿ ಯಲ್ಲಿದ್ದಳು.ಆನಂದಗೆ ಅದೇನೋ ಆಶ್ಚರ್ಯ ವೆನಿಸಿತು.ಆದರೂ ಉಕ್ಕಿ ಬಂದಿದ್ದ 'ಕಾಮ'ವನ್ನಿ ಅದುಮಿಟ್ಟೂ ಕೊಳ್ಳಲಾಗದೆ ಅವಳ ಹತ್ತಿರ ಹೋಗಿ ಭುಜದ ಮೇಲೆ ಕೈಯಿಟ್ಟ.ನಂದಿನಿ ಬೆಸ್ತು ಬಿದ್ದವಳಂತಾದರೂ ದ್ರುಢ ವಾಗಿಯೇ ತನ್ನ 'ಆ ಧ್ಯಾನಸ್ಥ' ಸ್ಥಿತಿ ಯನ್ನು ಮುಂದುವರೆಸಿದ್ದಳು.
ಆ .............................
...............................
..................................................
........... 'ಎಲ್ಲಾ' ಮುಗಿದು ಹೋಗಿತ್ತು..! ಚಂಗನೆ ಅಲಮಾರದ ಮೇಲಿಂದ ಎಗರಿ ಸಣ್ಣಗೆ ಬಿಟ್ಟಿದ್ದ ಬಾಗಿಲ ಸಂದಿನಲ್ಲಿ ತೂರಿ ಹಾಲ್ ಕಡೆ ನಡೆದು ಹೋಗಿತ್ತು ಆ ಕಳ್ಳ ಬೆಕ್ಕು! ಅನಂದ್ ಭಯಂಕರ 'ಗಿಲ್ಟ್' ನಿಂದ ತತ್ತರಿಸಿ ಹೋಗಿದ್ದ.ತಲೆ ಎತ್ತಲಾಗದಂತೆ ಮುಖಮಾಡಿ ಕುಳಿತಿದ್ದ.ಕಣ್ಣಲ್ಲಿ ಹನಿಗಳು ಸಾಲುಗಟ್ಟಿದ್ದವು. ನಂದಿನಿಯ ಕಣ್ಣುಗಳು ಇನ್ನೂ ಮುಚ್ಚಿಯೇ ಇದ್ದವೂ.ಅವಳ ಮೊಗದಲ್ಲಿ 'ದಶಕಗಳ ತ್ರುಪ್ತಿ'! ಮಂದಹಾಸ!ತನಗಷ್ಟೆ ಕೇಳುಸುವಂತೆ ಮೆತ್ತೆಗೆ ಹೇಳಿದ್ದಳು.
" ಥ್ಯಾಂಕ್ಸ್ ರಾಕೇಶ್....!!!!!!!!"
........................!
........................!!!!

***********
ಧೀರೇಂದ್ರ ನಾಗರಹಳ್ಳಿ