Sunday, February 13, 2022

ಪಂಡಿತ ದೀನ ದಯಾಳ್ ಉಪಾಧ್ಯಾಯ

Published in 13th Feb -2022 VIkrama


ಫೆಬ್ರವರಿ 10 1968 ಹಸಿರು ಬಣ್ಣದ ನಿಶಾನೆ ಪಟಪಟನೆ ಗಾಳಿಗೆ ಬಡಿದಾಕ್ಷಣ ಲಕ್ನೊರೈಲು ನಿಲ್ದಾಣದಿಂದ ಪಟ್ನಾಕ್ಕೆ

ಹೊರಡುವ ಸಲ್ದಾ ಎಕ್ಸಪ್ರೆಸ್ ಕದಲಲು ಪ್ರಾರಂಭಿಸಿತು.ಖಂಡಿತಾ ಯಾವೊಬ್ಬ ಭಾರತೀಯ ಪ್ರಜೆಗೂ ಒಂದು ಅಂದಾಜಿರಲಿಲ್ಲ

ಆ ಅನರ್ಘ್ಯ ರತ್ನದ ಪ್ರಯಾಣ ಕೊನೆಯ ಪ್ರಯಾಣವಾಗಲಿದೆ ಎಂದು. ಕಡು ಕತ್ತಲ ಮುಂಜಾವು ಸುಮಾರು 2.10ಕ್ಕೆ ರೈಲು

ಮೊಘಸರಾಯೈ ನಿಲ್ದಾಣ ತಲುಪುವಷ್ಟರಲ್ಲಿ ಆ ಅನರ್ಘ್ಯ ರತ್ನ ಕಣ್ಮರೆಯಾಗಿತ್ತು.

@@@@@@@@@@@@@@@@@@@@@@@@@@@@@@@@@@@@@@@@@@@@@@@@@

ಬಾಲ್ಯ ಮತ್ತು ಶಿಕ್ಷಣ:-

ಸೆಪ್ಟೆಂಬರ್ 25 1916 ರಂದು ಮಥುರಾ ಜಿಲ್ಲೆಯ ಫರಾ ನಗರದ ಹತ್ತಿರದಲ್ಲಿರುವ ನಾಗಿಯಾ ಚಂದ್ರಾಬಾನ (ಈಗ ಈ

ಹಳ್ಳಿಯನ್ನು ದೀನದಯಾಳು ಧಾಮ್ ಎಂದು ಕರೆಯಲಾಗುತ್ತದೆ) ಹಳ್ಳಿಯಲ್ಲಿ ಭಗವತಿ ಪ್ರಸಾದ ಉಪಾಧ್ಯಾಯ ಮತ್ತು ರಾಮ್

ಪ್ಯಾರಿ ಉಪಾಧ್ಯಾಯ ದಂಪತಿಗಳ ಮಗನಾಗಿ ದೀನ ದಯಾಳ ಉಪಧ್ಯಾಯರ ಜನನವಾಯಿತು.ಭಗವತಿ ಪ್ರಸಾದ

ಉಪಧ್ಯಾಯರು ಆ ಭಾಗದಲ್ಲಿ ಒಬ್ಬ ಹೆಸರಾಂತ ಜ್ಯೋತಿಷಿಗಳಾಗಿದ್ದರು.ಎಂತಹ ನತದೃಷ್ಟ ಅಂತೀರಾ ದೀನ ದಯಾಳ

ಉಪಧ್ಯಾಯರು ಸುಮಾರು ಎಂಟು ವರ್ಷದವರಿದ್ದಾಗಲೆ ತಮ್ಮ ತಂದೆ ತಾಯಿಯನ್ನು ಕಳೆದು ಕೊಂಡು ಅನಾಥರಾದರು.ತನ್ನ

ಸೋದರಿಯ ಮಗನ ಈ ಪರಿಸ್ಥಿತಿಯನ್ನು ಕಂಡು ಹೃದಯ ಕಿವುಚಿದಂತಾಗಿ ಸೋದರ ಮಾವ ತಮ್ಮ ಪೋಷಣೆಯಲ್ಲಿ

ಬೆಳೆಯಲ್ಲಿಯೆ ದೀನ ದಯಾಳರನ್ನು ಬೆಳೆಯುವಂತೆ ಮಾಡಿದರು.ದೀನ ದಯಾಳರು ತಮ್ಮ ಹೈಸ್ಕೂಲನ್ನು ಸಿಕಾರಿ ಮತ್ತು

ಇಂಟರ್ ಮೀಡಿಯಟ್ ಯನ್ನು ಪಿಲಾನಿ(ರಾಜಸ್ಥಾನ)ಯಲ್ಲಿ ಮುಗಿಸಿ ಮುಂದಿನ ಬ.ಎ. ಪದವಿಯನ್ನು 1935ರಲ್ಲಿ ಸನಾತನ

ಧರ್ಮ ಕಾಲೇಜ್ ಕಾನ್ಪೂರದಿಂದ ಪಡೆದರು.ಯಾವಾಗ ಕಾನ್ಪೂರದ ಸನಾತನ ಧರ್ಮ ಕಾಲೇಜಿಗೆ ಸೇರಿದರೊ ಆಗ ಒಳಗಿದ್ದ

ಹಿಂದುತ್ವ ಮತ್ತು ರಾಷ್ಟ್ರೀಯತೆಯ ಕಿಡಿ ನಿಧಾನವಾಗಿ ನಿಗಿ ನಿಗಿಯಾಗಿ ಉರಿಯಲು ಪ್ರಾರಂಭಿಸಿತು.ಆಗ್ರಾದ ಸೇಂಟ್ ಜಾನ್ಸ

ಕಾಲೇಜಿನಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ದಾಖಾಲಾತಿಯನ್ನೇನೊ ಪಡೆದರು ಆದರೆ ಆ

ಪದವಿಯನ್ನು ಪಡಯಲಾಗಲಿಲ್ಲ.ಸ್ನಾತಕೊತ್ತರ ಪದವಿಯ ಅಭ್ಯಾಸದ ಮಧ್ಯದಲ್ಲಿಯೆ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಜ್ವಾಲೆ

ಧಗ ಧಗನೆ ಉರಿಯುತಿತ್ತು.ಈ ಒಂದು ಜ್ವಾಲೆಯೇ ದೀನ ದಯಾಳ ಉಪಧ್ಯಾಯರ ಸ್ನೇಹಿತ ಬಾಲೂಜಿ ಮಹಾಸಬ್ದೆಯವನಿಗೆ

ದೀನ ದಯಾಳರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ದ ಸಂಸ್ಥಾಪಕರಾದ ಕೆ.ಬಿ.ಹೆಗ್ಡೆವಾರರ ಅವರ ಮುಂದೆ

ನಿಲ್ಲಿಸುವಂತೆ ಮಾಡಿತು . ಯುವ ದೀನ ದಯಾಳರ ಕಣ್ಣಿಯಲ್ಲಿರುವ ಆ ಕಾಂತಿಯನ್ನು ಮತ್ತು ಜ್ಞಾನದ ಪ್ರಭೆಯನ್ನು ಗಮನಿಸಿದ

ಹೆಗ್ಡೆವಾರ್ ದೀನ ದಯಾಳ ಉಪಧ್ಯಾಯರ ತಲೆ ಸವರಿ ಆಶಿರ್ವದಿಸಿದರು.ಅಲ್ಲಿಂದ ಮುಂದೆ ಎಂದೂ ದೀನ ದಯಾಳ

ಉಪಾಧ್ಯಾರು ಹಿಂತಿರುಗಿ ನೋಡಿದ್ದೇ ಇಲ್ಲ.ಹೆಗ್ಡೆವಾರು ದೀನ ದಯಾಳ ಉಪಧ್ಯಾಯರನ್ನು ಶಾಖಾದಲ್ಲಿನ ಕೆಲವೊಂದು

ಚರ್ಚೆಗಳಲ್ಲಿ ಭಾಗಿಯಾಗಿಸಿದರು.ಅಲ್ಲಿಂದ ಶುರುವಾಯಿತು ದೀನ ದಯಾಳ ಉಪಧ್ಯಾಯರ ರಾಷ್ಟ್ರೀಯತೆಯ ಆಲೋಚನೆಗಳ

ಓಟ!!!

RSS ನೊಂದಿನಗಿನ ಒಡನಾಟ:- 1942 ರಿಂದ ಪೂರ್ಣ ಪ್ರಮಾಣದಲ್ಲಿ RSS ನೊಂದಿನಗೆ ಬೆಸೆದುಹೋದರು.ಎರೆಡು ವರ್ಷಗಳ

ತೀಕ್ಷ್ಣ ತರಬೇತಿಯ ನಂತರ RSS ನ ಪರಿಚಾರಕರಾಗಿ ನಿಯುಕ್ತರಾದರು.ದೀನ ದಯಾಳ ಉಪಾಧ್ಯಾಯರ ರಾಷ್ಟ್ರೀಯತೆ

ಜ್ವಾಲೆ ನಿಧಾನವಾಗಿ ಒಂದೊಂದೆ ಮೆಟ್ಟಲಿನ್ನು ಏರಲು ಅನುವು ಮಾಡಿಕೊಟ್ಟಿತು.ಲಕ್ಷ್ಮಿ ಪುರ ಜಿಲ್ಲೆ ಪ್ರಚಾರಕರಾದ ನಂತರ


1955 ರಲ್ಲಿ ಉತ್ತರ ಪ್ರದೇಶದ ಪ್ರಾಂತೀಯ ಪ್ರಚಾರಕರಾದರು, RSS ನೊಂದಿಗಿನ ನಂಟಿಗೂ ಮೊದಲೆ ಅಂದರೆ

1940ರಲ್ಲಿಯೆ ‘ರಾಷ್ಟ್ರ ಧರ್ಮ’ ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಕಟಿಸಲು ಶುರು ಮಾಡಿದ್ದರು.ಈ ಪತ್ರಿಕೆಯ ಮೂಲ ಉದ್ದೇಶ

ರಾಷ್ಟ್ರೀಯತೆ ಮತ್ತು ಹಿಂದುತ್ವವಷ್ಟೇಯಾಗಿತ್ತು!!!

ಜನಸಂಘದೊಂದಿಗಿನ ಪ್ರಯಾಣ:-

1951ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಕೇವಲ ಒಂದು ಧರ್ಮವನ್ನು ಗುರಿಯಾಗಿಸಿ ಮತ್ತೊಂದು ಧರ್ಮದ ತುಷ್ಟೀಕರಣಕ್ಕಾಗಿ

ನಡೆಯುತ್ತಿದ್ದ ರಾಜಕೀಯ ದಾಳಗಳಿಂದ ಹೊರಬಂದು ರಾಷ್ಟ್ರೀಯ ಜನ ಸಂಘವನ್ನು ಸ್ಥಾಪಿಸಿದರು.ದೀನ ದಯಾಳ

ಉಪಾಧ್ಯಾಯರು ರಾಷ್ಟ್ರೀಯ ಜನಸಂಘದಲ್ಲಿ ಎರಡನೇಯ ನಾಯಕರಾಗಿ ಬೆಳೆದರು.ಶ್ಯಾಮಾ ಪ್ರಸಾದ ಮುಖರ್ಜಿಯೆ ಸ್ವತಃ

ಹಲವು ಬಾರಿ ಹೇಳಿದ್ದರು- “ನನಗೆ ದೀನ ದಯಾಳು ಉಪಾಧ್ಯಾಯರಂತಹ ಇಬ್ಬರು ನಾಯಕರು ಸಿಕ್ಕರೆ ಸಾಕು ದೇಶವನ್ನು

ಎಲ್ಲಿಯೊ ಕೊಂಡೊಯ್ಯಬಹುದು”, ಎಂದು.1952ರಲ್ಲಿ ಜನಸಂಘದ ಮಹಾಮಂತ್ರಿಯಾಗಿ ದೀನ ದಯಾಳ ಉಪಾಧ್ಯಾಯರನ್ನು

ನೇಮಿಸಲಾಯಿತು.1967-1968 ರಲ್ಲಿ ನಡೆದ ಕ್ಯಾಲಿಕಟ್ ಅಧಿವೇಶನದಲ್ಲಿ ಭಾರತೀಯ ಜನಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿ

ನೇಮಕರಾದರು.

ರಾಷ್ಟ್ರೀಯತೆಯ ಗುರುತು ಮತ್ತು ಅಂತ್ಯೋದಯ:- 1947 ಭಾರತಕ್ಕೆ ಸ್ವಾತಂತ್ರವೆನೊ ಬಂತು.ಆದರೆ ಭಾರತದ ಬಹುತೇಕ

ವಿಚಾರಗಳೆಲ್ಲವೂ ಪಶ್ಚಿಮದಿಂದ ಪ್ರಭಾವವಾಗಿದ್ದವು.ಪರಿಸ್ಥಿತಿಯನ್ನು ಅವಲೋಕಸಿದ ಪಂಡಿತ ದೀನ ದಯಾಳ

ಉಪಾಧ್ಯಾಯರು ಎಲ್ಲಿಯವರೆಗೂ ನಾವು ರಾಷ್ಟ್ರೀಯತೆಯನ್ನು ನಮ್ಮ ಜನ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲವೊ

ಅಲ್ಲಿಯವರೆಗೂ ಪ್ರಗತಿಯು ಕಷ್ಟ ಸಾಧ್ಯವೆ ಎಂದು ನಂಬಿದ್ದರು.ಅಲ್ಲದೆ ಸರ್ಕಾರದ ಪ್ರತಿಯೊಂದು ಯೋಜನೆಗಳು ರಾಷ್ಟ್ರದ

ಕೊನೆಯ ಪ್ರಜೆಗೂ ಸುಲಭವಾಗಿ ಸಿಗವಂತಾಗಬೇಕು. ಎನ್ನುವುದಾಗಿತ್ತು.ಇದೆ ಅವರ ಅಂತ್ಯೋದಯದ ಪರಿಕಲ್ಪನೆ.

@@@@@@@@@@@@@@@@@@@@@@@@@@@@@@@@@@@@@@@@

ದೀನ ದಯಾಳ ಉಪಧ್ಯಾಯರ ಸಾವು:- ಫೆಬವ್ರವರಿ 10 ರ ರಾತ್ರ ಲಕ್ನೊ ರೈಲು ನಿಲ್ದಾಣದಲ್ಲಿ ತಮ್ಮನ್ನು ಬೀಳ್ಕೊಡಲು

ಬಂದಂತಹ ಅಭಿಮಾನಿಗಳತ್ತ ಕೈಬೀಸಿ ಪ್ರಯಾಣವನ್ನು ಪ್ರಾರಂಭಿಸಿದರು. ಆದರೆ ಫೆಬ್ರವರಿ 11ರ ಮಧ್ಯರಾತ್ರಿಯಲ್ಲಿ

ಸುಮಾರು 2.10ಕ್ಕೆ ದೀನ ದಯಾಳ ಉಪಾಧ್ಯಾರು ಮೊಘಲಸರಾಯ ನಿಲ್ಧಾಣ ಬರುವಷ್ಟರಲ್ಲಿ ಕಾಣೆಯಾಗಿದ್ದರು.ಅವರ ಶವವು

748 ಅಡಿ ದೂರದ traction pole ಹತ್ತಿರ ಸಿಕ್ಕಿತ್ತು.ಇಡಿ ರಾಷ್ಟ್ರವೆ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಕಳೆದುಕೊಂಡಂತಾಗಿತ್ತು

,ವಿಧಿ!!!

ನಂತರದಲ್ಲಿ ನಡೆದ ಸಿ.ಬಿ.ಐ ತನಿಖೆಯಲ್ಲಿ ದೀನ ದಯಾಳ ಉಪಧ್ಯಾಯರನ್ನು ಚಲಿಸುತಿದ್ದ ರೈಲಿನಿಂದ ತಳ್ಳಿ ಸಾಯಿಸಲಾಗಿದೆ

ಎಂದು ವಿಷದವಾಯಿತು. ದೀನ ದಯಾಳ ಉಪಾಧ್ಯಾಯರನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಆ ದುರುಳ ಡಕಾಯಿತನಿಗೆ

ಸ್ವಲ್ಪವೇ ದೀನ ದಯಾಳರ ವ್ಯಕ್ತಿತ್ವದ ಅರಿವಿದ್ದರೂ ಹಾಗೆ ಮಾಡುತ್ತಿರಲಿಲ್ಲವೇನೊ.

ಮುಂದೆ ನಡೆದ ಏಕ ವ್ಯಕ್ತಿ ಸಮೀತಿ ಅಂದರೆ ಬಾಂಬೆ ಹೈಕೋರ್ಟನ ನಿವೃತ್ತ ನ್ಯಾಯ ಮೂರ್ತಿ ವೈ.ವಿ.ಚಂಡ್ರಚೂಡರ

ನೇತೃತ್ದದ ಸಮಿತಿಯು ಸಹಾ ಸ.ಬಿ.ಐ ಅವರ ಅಭಿಪ್ರಾಯವನ್ನೆ ಅನುಮೋದಿಸಿತು.

@@@@@@@@@@@@@@@@@@@@@@@@@@@@@@@@@@@@@@@@@@@@


ಪಂಡಿತ ದೀನ ದಯಾಳ ಉಪಧ್ಯಾಯರು ಈಗ ನಮ್ಮ ನಡುವೆ ಇಲ್ಲ.ಆದರೆ ಅವರ ಅಭೂತಪೂರ್ವ ರಾಷ್ಟ್ರೀಯತೆಯ ಕಲ್ಪನೆ ಮತ್ತು

ಅಂತ್ಯೋದಯ ಪರಿಕಲ್ಪನೆಗಳಲ್ಲಿ ಈಗಲು ಇದ್ದಾರೆ ಮತ್ತು ಮುಂದೆಯೂ ಸಹಾ...

Friday, June 18, 2021

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ

Published in April 2021 Karmaveera( on Yugadi issue) 

ತಿರುಗಿ ಬಂತು ಶುಭ ಕ್ಷಣದಿ ಆದಿ ಹಬ್ಬವು

ನೋಡಿದಡೆ ಮಾವು, ಬೇವು ಚಿಗುರೆಲೆಗಳ ತೋರಣವು

ಹೊನಲಾಯಿತು ಹೊಸತು ಆಸೆ ಹೊಸತು ಬಯಕೆ ನಮ್ಮವು

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ !!!


ಹಾಡ ಮರೆತ  ಕಾಡ ಹಕ್ಕಿ ಚಿಗುರು ತಿಂದು ದನಿಯ ಎತ್ತಿ 

ಹೊಸ ಹಾದಿ ತೆರೆಯಿತೆಂದು ನೋವು-ನಲಿವು ಒಂದೇ ಎಂದು

ಹೊಸತು ರಾಗ ಹಾಡಿದೆ ಸ್ವಾಗತವ ಕೋರಿದೆ 

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ !!!


ನೆಲದೊಡಲ ಪಸೆಯಲೂ ವಾಸಂತಿಯ ಹಸಿರಲು 

ಬರುತಲಿದ ಚೈತ್ರ ತಾ ಭೂಮಿ ಬಾನು ಬೆಸೆಯಲು

ಕಾಣುತಿದೆ ಛಲವು ಪುಟಿಯುತಿದೆ ಜೀವ ಸೆಲೆಯು

ಹೊಸತು ಗಾಳಿ ಬೀಸಿದೆ ಬದಲಾವಣೆ ಕಾದಿದೆ !!!

Sunday, May 9, 2021

ಜೀವ ಮತ್ತು ಜೀವನ

Published in 16th May Vikrama

************************************


ಪ್ರಪಂಚವೆ ನಲುಗಿ ಮನುಜ ಕುಲವೆಲ್ಲಾ

ಕೊರಗಿ, ಸೊರಗಿ, ನರಳಿ - ನರಳಿ ಸಾಯುತಿರುವಾಗ

ಮನೆಯಲ್ಲೆ ಇದ್ದು ಬಿಡೋಣಾ...

ಕರೋನಾ ಪಿಡುಗಿನ ಕೊಂಡಿ ಕಳಚಿ ಬಿಡೋಣಾ.


ಮನೆಯಿಂದ ಹೊರ ಬಂದರೆ ಯಾರಿಗೆ ಗೊತ್ತು..

ಯಾವ ಸೊಂಕಿನ ಸಂಪರ್ಕಕ್ಕೆ ಬಂದೇವು?

ಮನೆಯಲ್ಲೆ ಇದ್ದು ಬಿಡೋಣಾ...

ಕರೋನಾ ಪಿಡುಗಿನ ಕೊಂಡಿ ಕಳಚಿ ಬಿಡೋಣಾ.


ಹೆದರದೆ, ಬೆದರದೆ, ಆತಂಕಗೊಳ್ಳಲ್ಲದೆ

ಎಚ್ಚರಿಕೆಯಿಂದ ಎಲ್ಲವ ಅರಿತು ಜಗದ -

ಜನರ ಕೊನೆಗೆ ನಮ್ಮ ಒಳಿತಿಗಾಗಿ

ಮನೆಯಲ್ಲೆ ಇದ್ದು ಬಿಡೋಣಾ...

ಕರೋನಾ ಪಿಡುಗಿನ ಕೊಂಡಿ ಕಳಚಿ ಬಿಡೋಣಾ.


ಹೆಗಾದರೂ ಬದುಕಿದರೆ ಜೀವ ಇರುವುದು ಚೆಂದದ ಜೀವನ..

ಜೀವವೆ ಇರದೆ ಹೋದರೆ ಎಲ್ಲಿಯ ಜೀವನ

Wednesday, April 14, 2021

ಗಾಂಢೀವಿ ಗರ್ವ ಭಂಗ!

Published in 4th April 2021 Vikrama

*******************************************

 (ಕುರುಕ್ಷೇತ್ರ ಯುಧ್ಧದ ಕೊನೆಯಲ್ಲಿ ಅರ್ಜುನ ಗೆಲುವೆಲ್ಲಾ ತನ್ನಿಂದಲೇ ಎಂದು ಅಹಂನಿಂದ ಬೀಗುತ್ತಿರುವಾಗ,ಕೃಷ್ಣ ಅರ್ಜುನನ ಗರ್ವವನ್ನು

ಭಂಗ ಮಾಡಿ ಗೆಲುವಿನ ನಿಜವಾದ ಕಾರಣವನ್ನು ತೋರಿಸುತ್ತಾನೆ)

ವಿಜಯ ಧ್ವಜಕೆ

ವಿಧಾತ ಸಾರಥಿಯಾಗಿರಲು

ವಿಶ್ವರೂಪದಿಂ ಉಪದೇಶಿಸಿ

ವಿಕ್ರಮ ಸಾಧಿಪೆ ಸಮರದೋಳ್! | 1 |


ಬಂದಾಪತ್ತು ಪರಿಹರಿಸಿ ಅಭಯನಾಗಿ

ನೆರಳಂತೆ ಕಾದಿಹನು ಅರ್ಜುನಂಗೆ

ಧರ್ಮ ಪರ ನಿಂತು ಅಯ್ಯುಕ್ತನಾಗಿ

ಯುದ್ಧ ರಂಗದಿ ಮುನ್ನುಗ್ಗುತಿದೆ ‘ಧರ್ಮ’ ಅಜೇಯನಾಗಿ | 2 |


ಕಾಂತೇಯನ ಬಾಣಗಳು ಮಳೆಗಳಂದದಿ

ಕಿರೀಟಿಯ ಹರಿದು ಹಾಕಲು ಬರುತಿರಲು

ಕಿಶೋರ ರಥವ ಭೂಮಿಗೊತ್ತಿ ಕೆಳಗಿಳಿಸಿ

ಕರುಣಾಳಾಗಿದ್ದ ಹತ್ತು ಹಲವು ಬಾರಿ | 3 |

ಹತ್ತಾರು ತಂತ್ರಗಳ ಹೆಣೆದ ಕೃಷ್ಣ

ಹಣಿದಿದ್ದ ಕರ್ಣ, ಭೀಷ್ಮ ಮತ್ತು ದ್ರೋಣ!

ದಯಾನಿಧಿ ಮಾಯೆಯ ಅರಿಯದ

ಧನಂಜಯ ಗೆಲುವೆಲ್ಲಾ ತನ್ನಿಂದಲೆಂದು ಬೀಗಿದ | 4 |


ವಿಷ್ಣು ರಥದ ಮೇಲಿರುವ ಹನುಮ ತೋರಿಪೆ-

ವಿಭಸ್ತುಗೆ ಹೆಜ್ಜೆ ಹೆಜ್ಜೆಗೂ ಕಾಯ್ತಿರುವಂತೆ.

ಜಗದೊಡೆಯ ರಥದಿಂದಿಳಿದೊಡನೆ ಭಸ್ಮವಾಯಿತು ರಥವು

ಬೀಗುತ್ತಿದ್ದ ಜಿಷ್ನುವಿನ ಗರ್ವ ಅನಂತನ ಮುಂದೆ ಭಂಗವಾಯಿತು.| 5 |

Tuesday, December 15, 2020

ಅಲ್ಲಿ –ಇಲ್ಲಿ

Published in 6th December 2020 Karmaveera

************************************************


ಅಲ್ಲಿ - ಇಲ್ಲಿ, ಅಲ್ಲ-

ಇಲ್ಲಿ-ಅಲ್ಲಿಯೂ ಅಲ್ಲ-

ಎಲ್ಲೆಲ್ಲಿಯೂ ಇಲ್ಲ!


ಭೂಮಿಯ ಮೇಲು ಅಲ್ಲ

ಭೂಮಿಯ ಕೆಳಗೂ ಇಲ್ಲ!

ಇಹದೊಳಗೂ ತುಂಬಿಲ್ಲ ಪರದೊಳಗೂ ಮೆರೆದಿಲ್ಲ!


ನಾ ದಿನ ನಿತ್ಯ ಕುಟ್ಟುವ ಲ್ಯಾಪ್-ಟಾಪ್‌ ನೊಳಗೂ

ಅವಿತಿಲ್ಲ !ಕಟ್ಟುವ ಲಾಜಿಕ್‌ ನೊಳಗೂ ಸೇರಿಲ್ಲ.

ಅಲ್ಲಿ-ಇಲ್ಲಿ, ಇನ್ನೆಲ್ಲಿ?


ಮಾಡುವ ಕೆಲಸದೊಳಗಿಲ್ಲ

ನೋಡುವ ನೋಟದಲೂ ಮುಳುಗಿಲ್ಲ

ಅಲ್ಲಿ – ಇಲ್ಲಿ, ಇನ್ನೆಲ್ಲಿ?


ಅಲ್ಲಿ-ಇಲ್ಲಿಯೊಳಗಿಣ ಶಬ್ದಗಳಿಗಿಲ್ಲ

ವೆತ್ಯಾವಷ್ಟು.ಇದ್ದರು ಅಷ್ಟೆ ಒಂದಕ್ಷರದ

ವೆತ್ಯಾಸಷ್ಟೆ!


ಆ ಅಲ್ಲಿ – ಇಗೂ ಇಲ್ಲೆ ಎಲ್ಲಿ

ಕಾಲ ಬುಡದಲ್ಲಿ, ತೋರುಬೆರೆಳ ಸನಿಹದಲ್ಲೆ

ಉಸಿರ ಸ್ಪರ್ಷದಲ್ಲೆ!


ಎಲ್ಲವೂ ಇಲ್ಲೆ

ಯಮನು ಕೇಳಿದ ಆ “ವೇಗದ” ಪ್ರಶ್ನೆಗೆ

ಧರ್ಮನುತ್ತರಿಸಿದ ಉತ್ತರದ ʼಮನಸಿನʼ ಸುಳಿಯೊಳಗೆ

ಸಿಗ್ಮಂಡ್‌ ಫ್ರಾಡ್‌ ನ ಕನಸಿನ ಕನವರಿಕಯೊಳಗೆ

ಅಷ್ಟೆ!!!!

Thursday, December 3, 2020

ತೊಂದರೆ ಇಲ್ಲ


Published in 29/11/2020 VIKRAMA

***************************************

ಮಸೀದಿ ಕೆಡವಿದ್ದರ ಬಗ್ಗೆಯೆ

ಬರೆಯುತ್ತೀರಿ ಅದರ ಬಗ್ಗೆಯೆ ಮಾತಾಡುತ್ತೀರಿ,

ಆದರೆ ಮಸೀದಿ ಕೆಳಗಿದ್ದ ದೇವಸ್ಥಾನದ ಬಗ್ಗೆ

ಒಮ್ಮೆಯಾದರೂ ಯೋಚಿಸಿ.


ಸುಖಾ-ಸುಮ್ಮನೆ ಉನ್ಮತ್ತ ಜನ ಸಮುದಾಯ

ಮಸೀದಿ ಕೆಡುವುದಕ್ಕೆ ಮುಂದಾಗಲಿಲ್ಲ.

ಶ್ರೀ ರಾಮನ ದೇವಸ್ಥಾನದ ಮೇಲಿರುವ ಮಸೀದಿಯ ನೋಡಿ

ಕೈಕಟ್ಟಿ ಕೂಡುವ ಜಾಯಮಾನ ನಮ್ಮದಲ್ಲ.

ಇದನ್ನು ಪೌರಷದ ಪ್ರದರ್ಶನವೆನ್ನುವುದಾದರೂ ತೊಂದರೆ ಇಲ್ಲ!


ಕೋಟಿ ಕೋಟಿ ಹೃದಯ ಸಾಮ್ರಾಜ್ಯದ ಮಾರ್ಯಾದ

ಪುರುಷೋತ್ತಮನ ದೇವಸ್ಥಾನದ

ಮೇಲೆಯೆ ಮಸೀದಿ ನಿಂತಿದ್ದರೆ, ನೋಡುತ್ತಾ ಸುಮ್ಮನಿರಿ ಅಂದರೆ

ಆಗುವುದಿಲ್ಲ!ನಮ್ಮನ್ನು ಪರಧರ್ಮ ಅಸಹಿಷ್ಣು ಅಂದರೂ ತೊಂದರೆ ಇಲ್ಲ.

ನಮ್ಮ ಸಹಿಷ್ಣಿತೆಗೆ ಸಿಕ್ಕ ಮರ್ಯಾದೆ ಎಂದು ಸುಮ್ಮನಾಗುತ್ತೇವೆ.


ದೇಶ ವೀಭಜನೆಯ ಕರಾಳ ಕಥೆಯೆ ಹೇಳುತ್ತದೆ

ಎಷ್ಟು ಜನ ಹಿಂದುಗಳ ಮಾರಣ ಹೋಮ ನಡೆಯಿತೆಂದು

ದೇಶದೊಳಗಿದ್ದು ದೇಶ ದ್ರೋಹವೆಸಗುವವರಿಗೂ ಮನ್ನಿಸಿ

ನಮ್ಮವರೆಂದು ಪೊರೆದೆವು.

ಆದರೂ ನಮ್ಮನ್ನು ಜರಿದಿರಿ.ಪರವಾಗಿಲ್ಲ!!!


ನಮ್ಮನ್ನು ಜರಿದರೂ ಅಸಹಿಷ್ಣು ಅಂದರೂ ಪರವಾಗಿಲ್ಲ!

ತೊಂದರೆ ಇಲ್ಲ!!

Tuesday, August 4, 2020

ಮುಕ್ತದ ಹಪಾ ಹಪಿಯೂ...

This was published in Karmaveera Aug -2 -2020 issue
*******************************************

ಇಳಿ ಸಂಜೆಯ ಮಳೆ ನಿಲ್ಲುವುದಿಲ್ಲವಂತೆ
ಹಾಗೆ ನಿಂತರೂ ಘಂಟೆಗಳವರೆಗಿನ ಘನ ಮಳೆ ಯಂತೆ
ಕಾನನ ಹೊಕ್ಕಾಗಿತ್ತು ದಾರಿ ಸವಿಸಲೆ  ಬೇಕಾಗಿತ್ತು !!

ಆಕಾಶಕ್ಕೆ ತೂತು ಬಿದ್ದಂತೆ ಮಳೆ ಹೊಯ್ಯುತಿದ್ದರೆ
ಮುಸಲ ಧಾರೆಯೆ ಸೈ ಮತ್ತು ಕುಂಭ ದ್ರೋಣವೂ ಹೌದು
ಅದರ ಮೇಲೆ  ಕೇವಲ ಮಿಂಚು ಹುಳುವಿನ ಬೆಳಕು !

ಅಕ್ಕ ಪಕ್ಕದಲಿ ಆಸರೆಗೆ ಸ್ಥಳವಿಲ್ಲ ಎಲ್ಲಿಯೂ
ಮುಂದೆ ನೋಡಿದರೆ ದಾರಿಯೆ ಸುಳಿಯದು
ಹಿಂತುರಿಗಿ ನೋಡಿದರೆ ಏನೇನು ಕಾಣದು  !

ಕಾರ್ಗತ್ತಲ ಕಾನನದ ಪಯಣವು ಶೂನ್ಯದಲ್ಲಿ ನಿಂತಂತೆ !!
ದಾರಿ ಕಾಣದೆ ನಿಂತಲ್ಲೆ ನಿಂತು ಬಂಧನದಂತೆ
ಯ್ಯಾರು ನನ್ನ ತಲುಪದಿರುವ  ಮುಕ್ತದಂತೆ !

ಈ  ಪರಿಸ್ಥಿತಿ ಮುಕ್ತವೆಂದು ಸಂತೈಸಿ ಕೊಂಡೆ
ಮರುಕ್ಷಣವೆ ನುಸುಳಿತ್ತು ಮುಕ್ತವೂ ಬಂಧನವೆಂದು
ಮುಕ್ತದ ಹಪಾ ಹಪಿಯೂ ಬಂಧನವೆ!!