Friday, January 7, 2011

ರುಂಡ ದ ಮೇಲೆ ದೀಪ ದ ಆರತಿ!

ಬಲಿತ ಕೋಣ ಕೆಳೆಗೆ ಬಿದ್ದು,
ವಿಲವಿಲ ನೆ ಒದ್ದಾಡಿತ್ತು!
ಇನ್ನೂ ಪ್ರಾಣ ಪಕ್ಷಿ ಹಾರಿರಲಿಲ್ಲ!
ಕಣ್ಣುಗಳನ್ನು ಅಗಲಿಸಿ ಬಿದ್ದಲ್ಲಿಂದಲೇ,ಒಮ್ಮೆ ಸುತ್ತಲೂ ನೋಡಿತು,
'ಅ ಜಾತ್ರೆಯ ಕೋಣ'!ಯಾರಾದರೂ ಬದುಕಿಸುವರೆ ಎಂದು?
ಬದುಕುಸುವವರು ಅಲ್ಲಿ ಯಾರು ಇರಲಿಲ್ಲ!
ಎಲ್ಲರು ಸಾಯಿಸಲೇ ಅವುಡುಗಚ್ಚಿದ್ದರು!
ಇನ್ನೊಂದೇ ಹೊಡತ-ರಕ್ತ ಚಿಮ್ಮಿ ರುಂಡ ಮುಂಡಗಳ ಬೇರೆಯಾಗಿದ್ದವು!

"ಅಮ್ಮ ಗೆ ಇನ್ನು ರಕ್ತ ಹತ್ತಿಲ್ಲ"- ಜೋಯಿಸರು,ಭಯದಿಂದ ಕೂಗಿದರು!
"ಅಮ್ಮಗೆ ರಕ್ತ ಹತ್ತಲೇ ಬೇಕು, ಇಲ್ಲದೆ ಹೋದರೆ ಉರ್‍ಇಗೆ ಆಪತ್ತು"ಮತ್ತೆ ಕೂಗಿದರು!
ಅಮ್ಮಗೆ ರಕ್ತ ಹತ್ತುವ ವರೆಗೂ ಬಲಿಗಳಾಗಲಿ!
ಎನ್ನುವುದು,ಕ್ಷಣದ ನಿರ್ಧಾರ ವಾಗಿತ್ತು!
ಮತ್ತೊಂದು ಬಲಿತ ಕೋಣ ದ ಬಲಿ!ಆದರೂ ರಕ್ತ ತಾಯಿಗೆ ಸಿಡಿಯಲಿಲ್ಲ!
ಮೂರನೆಯ ಬಲಿಗಾದರೂ,ತಾಯಿ ತಪ್ಪುಗಳನ್ನೆಲ್ಲಾ ಮನ್ನಿಸುವಳೆ?
ಮನದಲ್ಲೆ ಎಲ್ಲರೂ ಪ್ರಾರ್ಥಿಸಿದರೂ,
ಕಣ್ಮಿಚ್ಚಿ ತೆರೆಯುವಷ್ಟರಲ್ಲಿ,ರಕ್ತದ ಓಕುಳಿ!

ಜೋಯಿಸರು ಉತ್ಸವ ಮೂರ್ತಿ ಯನ್ನೆಲ್ಲ ಹುಡುಕಿದರೂ,
ಅಲ್ಲೆಲ್ಲೊ ಕಂಡು ಕಾಣದಂತಿದ್ದ ಕಲೆ -ಕಂಡು(ಹುಡುಕಿ),
"ಅಮ್ಮ ನಮ್ಮ ಕ್ಷಮಾ ಮಾಡ್ಯಾಳ"ಕೈ ಮುಗಿದು ಹೆಳಿದ್ದರು!

ಎಳೆದು ಹಾಕಿದರು ಕೋಣ ದ ದೇಹವನ್ನು,
ರುಂಡ ದ ಮೇಲೆ ದೀಪ ವಿಟ್ಟು ಬೆಳಗಿದರು ಆರತಿಯನ್ನು!
ನಿರಮ್ಮಳವಾದರು ಮನ್ನಿಸಿಹಳೆಂದು ತಾಯಿ ಎಲ್ಲವನ್ನು!
ಧೀರೇಂದ್ರ ನಾಗರಹಳ್ಳಿ

ಮತ್ತೆ ಎಲ್ಲ ನೆನಪಾಯಿತು!

ಯುದ್ಧ ರಂಗದಿ ಚಕ್ರದ ಕೀಲು ಮುರಿದು,
ತಿರುಗದಾದಗ,
ಕೈ ಬೆರಳ ಇಟ್ಟು ಕೈಕೆ ಮಾಡಿದ್ದಳು,
ಮಹದುಪಕಾರ ದಶರಥಗೆ!

ಮುಂದೊದು ದಿನ ರಾಮ ನ ಕಾಡಿಗೆ ಆಟ್ಟಿ,
ಭರತ ನ ಪೀಠದಲ್ಲಿ ಕೂಡಿಸುವ ಪ್ರಯತ್ನ,
ನಡೆಯಲು ಅದು ಕಾರಣವಾಯಿತು!

ಆದರೆ ಚಕ್ರ,ಕೀಲು,ರಥ ಎಲ್ಲವನ್ನು
ಕಾಲ ಚಕ್ರದ ತಿರುಗಣಿಯಲ್ಲಿ,
ಮರೆತು ಹೋಗಿದ್ದ ದಶರಥ!

**********************
ಕೃಷ್ಣನ ಆದೆಶದಂತೆ,
ಕರ್‍ಣ ನ ಧರ್ಮ ಸಂಕಟದಲಿ ಸಿಲುಕಿಸಿ,
'ಭಾಷೆ'-ಪಡೆದ ಕುಂತಿ!
ಹಿಂದೆ ನಡೆದುದು ಎಲ್ಲವನ್ನು,
ಮರೆತು ಬಿಟ್ಟಿದ್ದಳು.
ಮಗನ ವಿರುದ್ಧವೇ ಇನ್ನೊಬ್ಬ ಮಗ ನಿಂತಿರುವುದು ಕಂಡು,
ಒಳಗೊಳಗೆ ಕುದ್ದು ಹೋಗಿದ್ದಳು!
***********************
ಭೂಮಿಯೇ ಒಡೆದು ಹೋಗುವಂತೆ ಆರ್ಭಟಿಸಿ,
ಶಪಥ ಗೈದ ಭೀಷ್ಮ ನಿಗೆ,
'ಇಚ್ಛಾ ಮರಣಿ'- ವರ!
ಶರಶಯ್ಯೆ ಯಲಿ ಮಲಗಿಯೂ,
ಎಲ್ಲವನ್ನೂ ಕಂಡು ಅನುಭವಿಸಿ ,
ತಿಲ ತರ್ಪಣ ದ ಭಾಗ್ಯ ಎಲ್ಲರಿಂದಲೂ ಸಿಗುವ ವರ
ಪಡೆದು .ಕೊನೆಗೂ ಚಿರ ನಿದ್ರೆಯಲಿ ಮಲಗಿದ!
********************
ಶಕುಂತಲೆಯ ಕಂಡು ಮೋಹ ಗೊಂಡು,
ಗಾಂಧರ್ವ ವಿವಾಹ ವಾಗಿ,
ಮರೆಯದಿರು ಎಂದು ಹೊರಟ ದುಷ್ಯಂತ ನೇ,
ಶಕುಂತಲೆ ಯ ಮರೆತಿದ್ದ.
ಕೈಗಿಟ್ಟ ಉಂಗುರ ವೇ ಮತ್ತೆಲ್ಲ,
ನೆನಪುಗಳ ಮರುಕಳಿಸುವಂತೆ ಮಾಡಿತ್ತು!
*************************************
ಭೂಮಿ ಗುಂಡಾಗಿದೆ ಎಂದು,
ಮತ್ತೊಮ್ಮೆ ರಿಮೊಟ್ ಕಂಟ್ರೊಲ್ ನ ಗುಂಡಿ ಒತ್ತಿತ್ತಿರುವಾಗ,
ಒಂದಾದ ಮೇಲೆ ಇನ್ನೊಂದು -ಹೀಗೆ ತರಾವರಿ
ಕಾರ್ಯಕ್ರಮಗಳನ್ನು ಟೀವಿ ಯಲ್ಲಿ ನೋಡಿದಾಗ,
ಮತ್ತೆ ಎಲ್ಲ ನೆನಪಾಯಿತು!