Thursday, December 27, 2018


ಪಾಕಿಸ್ತಾನದ ಮಗ್ಗಲ ಮುಳ್ಳು ಬಲೂಚಿಸ್ತಾನ....
ಮೈ ಪಾಕಿಸ್ತಾನಿ ನಹಿ ಹೂಂ! ಮೇರಾ ಪೆಹಚಾನ್ ಬಲೋಚಿ ಹೈ” ಹಾಗಂತ ಹೇಳುತ್ತಿದ್ದ ಆ ಹಡುಗಿಯ ಕಣ್ಣಲ್ಲಿ ಮಿಂಚು ಧ್ವನಿ ಯಲ್ಲಿ ಕಂಚು ತುಂಬಿತ್ತು
ಬಲೋಚಿಗರಿಗೆ ತಮ್ಮನ್ನು ತಾವು ‘ಪಾಕಿಸ್ತಾನಿ’ ಗಳೆಂದು ಒಪ್ಪಿಕೊಳ್ಳುವುದಕ್ಕೆ ಮನಸ್ಸು ತಯಾರಿಲ್ಲ, ಇನ್ನು ತಮ್ಮನ್ನು ಪಾಕಿಸ್ತಾನದ ಒಂದು ಭಾಗವೆಂದು? ಛೇ ...! ಸಾಧ್ಯವೇ ಇಲ್ಲ.
“ನೆನಪಿಡಿ,ಇತಿಹಾಸದಲ್ಲಿ ಎಂದೂ ಪಾಕಿಸ್ತಾನವಿರಲಿಲ್ಲ ಆದರೆ ಇತಿಹಾಸದ ಪುಟಗಳಲ್ಲಿ ಬಲೋಚಿಗರ ಶ್ರೀಮಂತ ಸಂಸ್ಕೃತಿ ಸೇರಿಹೋಗಿದೆ”-ಬಲೋಚಿ
ಹೀಗೆ ಯಾವ ದಿಕ್ಕಿನಿಂದಲೂ ತಮ್ಮನ್ನು ತಾವು ಪಾಕಿಸ್ತಾನದ ಭಾಗವೆಂದು ಒಪ್ಪಿಕೊಳ್ಳಲು ತಯಾರಿಲ್ಲದ ಜನತೆಯನ್ನು ಪಾಕಿಸ್ತಾನದ ಭಾಗವಾಗಿಸಿದ್ದೆ ಒಂದು ‘ರಾಜಕೀಯ ಷಡ್ಯಂತ್ರ’!!!ಪಾಕಿಸ್ತಾನದ ವಿಷಯ ಪ್ರಸ್ತಾಪವಾದಗಲೆಲ್ಲಾ ಹೇಗೆ ಜಿನ್ಹಾ ನೆನಪಾಗುತ್ತಾರೆ ಹಾಗೆ ಬಲೋಚಿಗರು ಜಿನ್ಹಾ ನೆನೆಯುತ್ತಲೆ ಆಕ್ರೋಶದಿಂದಲೇ ಬಂಡೇಳುತ್ತಾರೆ.
ಬಲೋಚಿಸ್ತಾನ:-
ಪಾಕಿಸ್ತಾನ ಹುಟ್ಟುವುದಕ್ಕೂ ಮೊದಲು ಬಲೋಚಿಸ್ತಾನದ ಅಸ್ತಿತ್ವವಿತ್ತು. ಬಲೋಚಿಸ್ತಾನ್ ಎನ್ನುವುದು  ನಾಲ್ಕು-ಕಲಾಟ್,ಲಾಸ್ ಬೆಲಾ,ಮಕರನ್ ಮತ್ತು ಖರಾನ್ ರಾಜ್ಯಗಳನ್ನೊಳಗೊಂಡ ಪಾಕಿಸ್ತಾನದ ನೈರುತ್ಯ ಭಾಗಕ್ಕಿರುವ  ಭೂ ಪ್ರದೇಶ. ಮೊದಲಿನಿಂದಲೂ ಕಲಾಟ್ ನ ಖಾನ್ ಮತ್ತು ಜಿನ್ಹಾ ನಡುವೆ ಒಂದು ಸುಮುಧರ ಬಾಂಧ್ಯವ್ಯವಿತ್ತು . ಆಗಿನ್ನು ಬಲೋಚಿಸ್ತಾನದ ಕೆಲವು ಭಾಗಗಳು ಬ್ರೀಟಿಷರ ಕೈಯಲ್ಲಿದ್ದ ಕಾಲ .ಹಾಗಾಗಿ  ಸ್ವತಃ ಜಿನ್ಹಾರೆ ಬಲೋಚಿಸ್ತಾನ್ ಸ್ವಾತಂತ್ರದ ವಕಾಲತ್ತು ವಹಿಸಿದ್ದರು.ಆಗಷ್ಟ್ 11 1947ರಂದು ಬ್ರೀಟಿಷರು ಕಲಾಟ್ ನ್ನು ಸ್ವಾತಂತ್ರವೆಂದು ಘೋಸಿಸಿದರು.ಈ ಘಟನೆಯಾದ ಕೇವಲ ನಾಲ್ಕು ದಿನಗಳ ನಂತರ ಜಗತ್ತಿನ ಭೂಪಟದಲ್ಲಿ ಇನ್ನೊಂದು ರಾಷ್ಟ್ರ,ಅಂದರೆ ಪಾಕಿಸ್ತಾನವೆನ್ನುವ ದ್ವೇಷದಿಂದ ಹುಟ್ಟಿದ ಮತ್ತೊಂದು ರಾಷ್ಟ್ರದ ಉಗಮವಾಯಿತು.ಆಗ ಕಲಾಟ್ ರಾಜ್ಯಕ್ಕೆ(ಬಹುತೇಕ ಬಲೂಚಿಗರು ಇರುವ ಪ್ರದೇಶ) ಕೆಲವು ಒಪ್ಪಂದಗಳನ್ನು ಪಾಕಿಸ್ತಾನ ಮತ್ತು ಕಲಾಟ್ ನ ರಾಜನ ನಡುವೆ ಬ್ರಿಟಿಷ್ ಸರ್ಕಾರ ಬರೆದಿತ್ತು. ಅದರಲ್ಲಿ ಮುಖ್ಯವಾಗಿ ವಿದೇಶಾಂಗ ನೀತಿಗಳು ಮತ್ತು ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸ್ವಾಯತ್ತತೆ ಇರುವುದಾಗಿತ್ತು.
 ಬಲೋಚಿಸ್ತಾನದ ಭೂಭಾಗ ಮತ್ತು ಅಲ್ಲಿನ ಜನರ ಮನಸ್ಥಿತಿಯನ್ನು ಚೆನ್ನಾಗಿಯೆ ಅರಿತಿದ್ದರು ಜಿನ್ಹಾ.ಆಗಸ್ಟ್ 1947 ರಂದು ಸ್ವಾತಂತ್ರ ಹೊಂದಿದ ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆಗಿದ್ದ ಮೊಹದಮದ್ ಅಲಿ ಜಿನ್ಹಾ ಒಂದು ಷಡ್ಯಂತ್ರವನ್ನು ರಚಿಸಿ ಬಲೋಚಿಸ್ತಾನವನ್ನು ಪಾಕಿಸ್ತಾನಕ್ಕೆ ಸೇರಿಸುವಂತೆ’ಖಾನ್ ಆಫ್ ಕಲಾಟ್’ ಗೆ ಸಂದೇಶ ರೆವಾನಿಸಿದ್ದನು.ಬಲೋಚಿಸ್ತಾನ ಪಾಕಿಸ್ತಾನವನ್ನು ಸೇರುವುದಕ್ಕೆ ಒಂದು ಉದ್ದೇಶವನ್ನೂ ರಚಿಸಿದ್ದನು ಆದೇನೆಂದರೆ “ನಾವೆಲ್ಲರು ಮುಸಲ್ಮಾರು”!!!
ಏಕೆ ಪಾಕಿಸ್ತಾನಕ್ಕೆ ಬಲೋಚಿಸ್ತಾನ ಬೇಕು:-
1.ಸುಮಾರು ಶೇ,44 ಪಾಕಿಸ್ತಾನದ ಭಾಗ ಬಲೋಚಿಸ್ತಾನವನ್ನು ಒಳಗೊಂಡಿದೆ
2.ನೈಸರ್ಗಿಕವಾಗಿ ದೊರೆಯುವ ಅನಿಲ ಮತ್ತು ಖನಿಜ ಸಂಪತ್ತಿನಿಂದ ಬಲೋಚಿಸ್ತಾನ ಭಾಗ ಶ್ರೀಮಂತವಾಗಿದೆ
3.ಮತ್ತೆ ತೀರ ಇತ್ತೀಚಿನ ಬೆಳವಣಿಗೆಗಳಲ್ಲಿ ಚೀನಾ ಮತ್ತು ಇರಾನಗಳಿಗೆ ಸಂಪರ್ಕ ಕಲ್ಪಿಸುವ ವ್ಯಪಾರ,ವ್ಯವಹಾರ ಮತ್ತು ವಾಣಿಜ್ಯಾತ್ಮಕವಾಗಿ ಬೆಳೆಯಲು ಹೆಬ್ಬಾಗಿಲಾಗಿದೆ.
  ಪಾಕಿಸ್ತಾಕ್ಕೂ ಮೊದಲೆ ವ್ಯವಸ್ಥಿತವಾದ ಸಂಸತ್ತನ್ನು ಹೊಂದಿದ್ದ ಬಲೋಚಿಸ್ತಾನದಲ್ಲಿ ಜಿನ್ಹಾರ ಪ್ರಸ್ತಾಪವನ್ನು ಫೆಬ್ರವರಿ 1948ರಂದು House of Commons and a House of Lords ಮುಂದೆ ಪ್ರಸ್ತಾಪಿಸಲಾಯಿತು.ಆದರೆ ಸಂಸತ್ತಿನ ಎರೆಡೂ ಮನೆಗಳು ಜಿನ್ಹಾರ ಪ್ರಸ್ತಾಪವನ್ನು ತೀಕ್ಷ್ಣವಾಗಿ ತಿರಸ್ಕರಿಸದ್ದವು.ಅದಾದ ಕೆಲವೆ ದಿನಗಳ ನಂತರದಲ್ಲಿ ಉಳಿದ ಮೂರು ರಾಜ್ಯಗಳಾದ ಲಾಸ್ ಬೆಲಾ,ಮಕರನ್ ಮತ್ತು ಖರಾನ್ ಪಾಕಿಸ್ತಾನಕ್ಕೆ ಸೇರುವುದಕ್ಕೆ ಒಪ್ಪಿಕೊಂಡಿವೆ ಎನ್ನುವ ಸುದ್ದಿಯನ್ನು ಬೇಕು ಅಂತಲೆ  ಕಲಾಟ್ ನ ಖಾನಗೆ ತಲುಪಿಸಿದರು.ಆ ಹೊತ್ತಿಗಾಗಲೆ ಪಾಕಿಸ್ತಾನದ ದುರ್ಬುದ್ದಿಯಿಂದ  ನಲುಗಿ ಹೋಗಿದ್ದ ಖಾನ್(ಕಲಾಟ್) .ಅಷ್ಟೆ ಅಲ್ಲದೆ ಪಾಪಿ ಪಾಕಿಸ್ತಾನ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾರ್ಚ್ 1948ರಂದು ಬಲೋಚಿಸ್ತಾನದ ಕರಾವಳಿ ಮೇಲೆ ಆಕ್ರಮಣ ಮಾಡಿ ‘ಕಲಾಟ್ ನ ಖಾನ್’ ನನ್ನು ಒತ್ತಾಯ ಪೂರ್ವಕವಾಗಿ ಪಾಕಿಸ್ತಾನವನ್ನು ಸೇರುವಂತೆ ಸಹಿ ಹಾಕಿಸಿಕೊಂಡರು.ಅಲ್ಲಿಗೆ ಒಂದು ಶ್ರೀಮಂತ ಸಂಸ್ಕೃತಿ,ಅಪರಿಮಿತ ಖನಿಜ ಸಂಪತ್ತನ್ನು ಹೊಂದಿದ್ದ ಭೂಬಾಗವನ್ನು ಕಬಳಿಸವು ಹುನ್ನಾರಕ್ಕೆ ಜಯ ಸಿಕ್ಕಂತಾಗಿತ್ತು.ಆದರೆ ಬ್ರಿಟಿಷರಿಂದ ಸ್ವತಂತ್ರ ಹೊಂದಿ ಸುಮಾರು 227 ದಿನಗಳ ಕಾಲ ಸ್ವತಂತ್ರ ರಾಷ್ಟ್ರವಾಗಿದ್ದ ಬಲೋಚಿಸ್ತಾನವನ್ನು ರಾಷ್ಟ್ರದ ಭೂಪಟದಲ್ಲಿಯೆ ಇರದ ರಾಷ್ಟ್ರ ನಿರ್ನಾಮ ಮಾಡಿಯಾಗಿತ್ತು.ಅಲ್ಲಿಂದ ಇಲ್ಲಿಯ ವರೆಗೆ ಬಲೋಚಿಸ್ತಾನದ ಸ್ವಾತಂತ್ರಕ್ಕೆ ನಡೆದ ಹೋರಾಟದ್ದೆ ಒಂದು ರಕ್ತ ಸಿಕ್ತ ಅಧ್ಯಾಯ.

ಬಲೋಚಿಗರ ಸ್ವಾತಂತ್ರ ಹೋರಾಟ:-
 ಪಾಕಿಸ್ತಾನದಲ್ಲಿರುವ ಐದು ಪ್ರಾವಿನೆನ್ಸಗಳಲ್ಲಿ ಬಲೋಚಿಸ್ತಾವೂ ಒಂದು.- ಪಂಜಾಬ,ಸಿಂಧ್,ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ.ಮೊದಲಿನಿಂದಲೂ ವಿದೇಶ ನೀತಿ ಮತ್ತು ರಕ್ಷಣಾ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸ್ವಾಯತ್ತತೆ ಬೇಕೆಂದು ಬಯಸಿದ್ದ ಬಲೋಚಿಗರಿಗೆ ಜಿನ್ಹಾನ ನಡೆ ಹಿಂದಿನಿಂದ ತಿವಿದ ಚಾಕುವಿನಂತಾಗಿತ್ತು.ಆ ಕ್ಷಣದಿಂದಲೆ ತಮ್ಮ ‘ಅಸ್ತಿತ್ವಕ್ಕಾಗ ಬಲೊಚಿಗರು ಹೋರಾಟ ನಡೆಸುತ್ತಲೆ ಇದ್ದಾರೆ. ಒಮ್ಮೆ ಉಗ್ರವಾಗಿದ್ದು ಮೊಗದಮ್ಮೆ ಸಾತ್ವಿಕವಾಗಿ ಕೇವಲ ರಾಜ ನೀತಿಗಳಿಂದ ಪಾಕಿಸ್ತಾವನ್ನು ಹಣಿಯುವ ಪ್ರಕ್ರಿಯೆ  1948ರಿಂದ ಇಲ್ಲಿಯ ವರೆಗೆ ನಡೆದೆ ಇದೆ!ಇದರಲ್ಲಿ – ‘ಬಲೂಚ ಲಿಬರೇಷನ್ ಆರ್ಮಿ, ಬಲೂಚ ರಿಪಬ್ಲಿಕನ್ ಆರ್ಮಿ,ಬಲೂಚ ಲಿಬರೇಷನ್ ಫ್ರಂಟ್,ಬಲೂಚಿ ರೆಪಬ್ಲಿಕನ್ ಪಾರ್ಟಿ,ಪ್ರಮುಖವಾದ ಸಂಘಟನೆಗಳು. ಈ ಸ್ವತಂತ್ರ ಹೋರಾಟದಲ್ಲಿ ಅಕ್ಬರ್ ಬುಕ್ತಿ ಹೆಸರು ಮುಂಚುಣಿಯಲ್ಲಿತ್ತು. ಪಾಕಿಸ್ತಾನದ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜಕೀಯವಾಗಿ ಪಾಕಿಸ್ತಾನವನ್ನು ಹಣಿಯಲು ಭುಕ್ತಿ ಹವಣಿಸಿದ್ದರು.ಆದರೆ ಯಾವಾಗ ರಾಜಕೀಯ ದಾಳಗಳು ಫಲ ಕೊಡದೆ ಹೋಯಿತೊ, ಶಸ್ತ್ರಾಸ್ತ ಹೋರಟಕ್ಕೆ  ಅಣಿಯಾದರು.ಆದರೆ 2006 ರಲ್ಲಿ  ಪಾಕಿಸ್ತಾನದ ಪಿತೋರಿಯಿಂದ ಅಕ್ಬರ್ ಬುಕ್ತಿಯನ್ನು ಹತ್ಯೆಗೈಯಲಾಯಿತು.ಇಂತಹ ಎಷ್ಟೋ ಹೊರಾಟಗಾರರನ್ನು ಮತ್ತು ಹೋರಾಟಗಳನ್ನು ಮಣಿಸಲು ಪಾಕಿಸ್ತಾನ ಅಡ್ಡದಾರಿ ಹಿಡಿದಿದ್ದಾಗಿದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಬಲೂಚಿಗರು ತಮ್ಮ ಹೋರಾಟಕ್ಕೆ ಬೆಂಬಲ ಸಿಗಬೇಕು ಎನ್ನುವ ಉದ್ದೇಶದಿಂದ ಪಾಕಿಸ್ತಾನ ಎಸಗಿದ ಪಾಪ ಕೃತ್ಯಗಳ ಒಂದು ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.ಆ ಪಟ್ಟಿಯಲ್ಲಿರುವ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
·         ಬಲೂಚಿಗರ ಕಣ್ಮರೆ
·         ಮಾನವ ಹಕ್ಕುಗಳ ಉಲ್ಲಂಘನೆ
·         ಬಲೂಚಿಸ್ತಾನ ಸ್ವಾತಂತ್ರ ಹೋರಾಟಗಾರರ ಅಪಹರಣ
·         ಮತ್ತು ಎಲ್ಲಕಿಂತ ಮಿಗಲಾದದ್ದು ಪಾಕಿಸ್ತಾನಕ್ಕು ಮೊದಲೆ ಬೇರೆ ರಾಷ್ಟ್ರವೆಂದು ಗುರುತಿಸಿಕೊಂಡಿದ್ದನ್ನು ಮೊಸದಿಂದ ಅತಿಕ್ರಮಗೊಳಿಸಲಾಗದೆ
·         ಬಲೂಚಿಗರ ಬಡತನಕ್ಕೆ ಗಮನ ಕೊಡದ ಪಾಕಿಸ್ತಾನದ ರಾಜಕೀಯ ಹಿತಾಸಕ್ತಿ
·         ಮರೀಚಿಕೆಯಾಗಿರುವ ಅಭಿವೃಧ್ಧಿಗಳು

ಭಾರತದ ಪಾತ್ರ:-ಭಾರತಕ್ಕೆ ಯಾವುದೆ ತೆರೆನಾದ ಸಂಬಂಧವಿರದ ಭೂಭಾಗವಾಗಿರುವ ಬಲೂಚಿಸ್ತಾನದ ಸ್ವಾತಂತ್ರ ಪಾಕಿಸ್ತಾನವನ್ನು ಹಣಿಯುವ ಒಂದು ತಂತ್ರ ಹೊರತು ಬೇರೆನು ಆಗಿರಲಿಕ್ಕೆ ಸಾಧ್ಯವಿಲ್ಲವೆಂದು ಭಾರತದ ಭದ್ರತಾ ಸಲಹೆಗಾರರಾಗಿರುವ – ಅಜಿತ್ ಧೋವಲ್ ಅವರೆ ಕೆಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.ಇದರ ಒಂದು ತಂತ್ರವೆನ್ನುವಂತೆ  ನಮ್ಮ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರು ಸಹಾ ಆಗಸ್ಟ್ 15 2016ರಂದು ಬಲೋಚಿಸ್ತಾನದ ಜನತೆಗೆ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿಕೆ ಕೊಟ್ಟಿದ್ದರು.ಇದಾದ ನಂತರ ಬಲೂಚಿಸ್ತಾನದಲ್ಲಿ ಒಂದು ಸಂಚಲನವೆ ಸೃಷ್ಟಿಯಾಗಿತ್ತು.ಬಲೂಚಿಗರು ಈಗಲೂ ಭಾರತದ ಕಡೆ ತಮ್ಮ ಆಸೆಗಣ್ಣಿನಿಂದ ನೋಡುತ್ತಲೆ ಇದ್ದಾರೆ.ಹೇಗೆ ಭಾರತವು ಪೂರ್ವ ಪಾಕಿಸ್ತಾನಕ್ಕೆ ತನ್ನ ಸಹಾಯಹಸ್ತ ಚಾಚಿ ಅದನ್ನು ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಡಿಸಿ ಬಂಗ್ಲಾ ಎನ್ನುವ ಒಂದು ಹೊಸ ರಾಷ್ಟ್ರ ನಿರ್ಮಾಣಕ್ಕೆ ಸಹಾಯಮಾಡಿತೊ , ಅದೆ ರೀತಿ ಭಾರತವು ಬಲೂಚಿಗರ ಹೋರಾಟಕ್ಕೆ ಸಹಾಯ ಮಾಡಿ ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಬಲೂಚಿಗರ ಅಸ್ತಿತ್ವ ಕಾಪಾಡಬೇಕು.ಎನ್ನುವುದು ಬಲೂಚಿಗರ ಬಹುದಿನದ ಬಯಕೆ.