Friday, August 2, 2019

Published in PRIYANKA AUGUST-2019
**************************************************************
ಬಾಲ್ಕನಿಯ ಖಯಾಲಿ-ನನ್ನದಲ್ಲದ ಸ್ವಗತ
ಸೋನೆ ಜಡಿಯುವ ಒಂದು ಮುಂಜಾವಿನಲ್ಲಿ
ಹಬೆಯಾಡುವ ಕಾಫಿ ಕಪ್ ಜೊತೆ
ಕಣ್ಣಾಡಿಸಿದೆ ಬಾಲ್ಕನಿಯಲ್ಲಿ.

ಕಣ್ಣಡಕದ ಗಾಜುಗಳಿಗೆ ಹಬೆಯಡರಿ
ಎಲ್ಲ ಮಸುಕ ಮಸಕಾದರೂ
ಕೈ ಬೀಸಿ ಕರೆಯುತ್ತಲಿದ್ದವು ಬಾಲ್ಕನಿಯಲ್ಲಿರುವ
ಮತ್ತು ಬಾಲ್ಕನಿಯಾಚೆ ಇರುವ ನನ್ನ ಜೀವಗಳು!

ಹೂ ಕುಂಡದಲ್ಲಿ ಚಿಗುರಿ ನಿಂತ ಗುಲಾಬಿ ಹೂ
ದೊಡ್ಡದೊಂದು ಕುಂಡದಲ್ಲಿ ಒತ್ತಾಗಿ ಬೆಳೆದ ತುಳಸಿ ಗಿಡ
ಮಳೆ ಹನಿಗಳಿಂದ ರಕ್ಷಣೆ ಪಡೆಯಲು
ಆಸರೆ ಪಡೆದು ದಿನ ನಿತ್ಯದ ರೂಢಿಯಂತೆ
ಕಾಳು ಕಡಿಗಳಿಗಾಗಿ ಕಾದು ನಿಂತ ಪರಿವಾಳಗಳು.

ಗಡಿಯಾರದ ಮುಳ್ಳುಗಳಂತೆ ಓಡೋಡಿ
ಬೆಳಗಿನ ಒಂದಿಷ್ಟು ಹೊತ್ತಿಗೆ
ಮನೆಯಲ್ಲಾ ಖಾಲಿ ಖಾಲಿ
ಮನಸ್ಸಿಗೊ ಬಾಲ್ಕನಿಯ ಖಯಾಲಿ!