Monday, May 9, 2011

ಅವಳಿಗಾಗಿ...!

ನಾ ಮುತ್ತಿಟ್ಟಲಾಗಲೊಮ್ಮೆ ,
ನಾಚುತಿದ್ದೆ ನಾನು, ಅವಳು ನಾಚದಿರುವುದಕ್ಕೇ!
ನಾ ಕೊಟ್ಟ ಮುತ್ತು ಮೊದಲ ಮುತ್ತಾಗಿರಲಿಲ್ಲ,
ನನಗಿಂತ ಮೊದಲೇ ಇನ್ಯಾರೂ ಮುತ್ತಿಟ್ಟದ್ದರು ಅದಕ್ಕೇ!
-----------------------------------------
ಆ ಮುಗುಳು ನಗೆಗೆ ನಾ ಜಾರಿ ಬಿದ್ದೆ,
ಸಿಹಿ ಮಾತಿಗೆ ಸೋತು ಗೆದ್ದೆ.
ನಿ ಸಿಗಲಾರದೆನಾ ಮಲಗಿ ಮಲಗಿ ಸೊರಗಿದ್ದೆ!
-------------------------------
ಹೋಗುವ ನಿನಗೆ ನೂರೆಂಟು ಕಾರಣ!
ಆದರೆ ಹೋಗುವ ಮುನ್ನ,
ಹುಸಿಯದಾದರೂ ಸೈ
ಒಂದು ಕಾರಣಕೊಟ್ಟು ಹೊರಡಬಹುದಿತ್ತಲ್ಲಾ?
--------------------------
ನೀ ಹೆಜ್ಜೆ ಎತ್ತಿಟ್ಟಲಾಗಲೊಮ್ಮೆ,
ಕಮರುವವು ಗರಿಕೆಗಳು;
ನೀ ನಂಜಿನ ಪಂಜು.
ಇಷ್ಟು ವರ್ಷ ನಿಭಾಯಿಸಿದ ನಾನು,
ಪ್ರತಿ ಕ್ಷಣ ಕುಡಿದಿರುವೆ ಆ ನಂಜು.