Tuesday, December 15, 2020

ಅಲ್ಲಿ –ಇಲ್ಲಿ

Published in 6th December 2020 Karmaveera

************************************************


ಅಲ್ಲಿ - ಇಲ್ಲಿ, ಅಲ್ಲ-

ಇಲ್ಲಿ-ಅಲ್ಲಿಯೂ ಅಲ್ಲ-

ಎಲ್ಲೆಲ್ಲಿಯೂ ಇಲ್ಲ!


ಭೂಮಿಯ ಮೇಲು ಅಲ್ಲ

ಭೂಮಿಯ ಕೆಳಗೂ ಇಲ್ಲ!

ಇಹದೊಳಗೂ ತುಂಬಿಲ್ಲ ಪರದೊಳಗೂ ಮೆರೆದಿಲ್ಲ!


ನಾ ದಿನ ನಿತ್ಯ ಕುಟ್ಟುವ ಲ್ಯಾಪ್-ಟಾಪ್‌ ನೊಳಗೂ

ಅವಿತಿಲ್ಲ !ಕಟ್ಟುವ ಲಾಜಿಕ್‌ ನೊಳಗೂ ಸೇರಿಲ್ಲ.

ಅಲ್ಲಿ-ಇಲ್ಲಿ, ಇನ್ನೆಲ್ಲಿ?


ಮಾಡುವ ಕೆಲಸದೊಳಗಿಲ್ಲ

ನೋಡುವ ನೋಟದಲೂ ಮುಳುಗಿಲ್ಲ

ಅಲ್ಲಿ – ಇಲ್ಲಿ, ಇನ್ನೆಲ್ಲಿ?


ಅಲ್ಲಿ-ಇಲ್ಲಿಯೊಳಗಿಣ ಶಬ್ದಗಳಿಗಿಲ್ಲ

ವೆತ್ಯಾವಷ್ಟು.ಇದ್ದರು ಅಷ್ಟೆ ಒಂದಕ್ಷರದ

ವೆತ್ಯಾಸಷ್ಟೆ!


ಆ ಅಲ್ಲಿ – ಇಗೂ ಇಲ್ಲೆ ಎಲ್ಲಿ

ಕಾಲ ಬುಡದಲ್ಲಿ, ತೋರುಬೆರೆಳ ಸನಿಹದಲ್ಲೆ

ಉಸಿರ ಸ್ಪರ್ಷದಲ್ಲೆ!


ಎಲ್ಲವೂ ಇಲ್ಲೆ

ಯಮನು ಕೇಳಿದ ಆ “ವೇಗದ” ಪ್ರಶ್ನೆಗೆ

ಧರ್ಮನುತ್ತರಿಸಿದ ಉತ್ತರದ ʼಮನಸಿನʼ ಸುಳಿಯೊಳಗೆ

ಸಿಗ್ಮಂಡ್‌ ಫ್ರಾಡ್‌ ನ ಕನಸಿನ ಕನವರಿಕಯೊಳಗೆ

ಅಷ್ಟೆ!!!!

Thursday, December 3, 2020

ತೊಂದರೆ ಇಲ್ಲ


Published in 29/11/2020 VIKRAMA

***************************************

ಮಸೀದಿ ಕೆಡವಿದ್ದರ ಬಗ್ಗೆಯೆ

ಬರೆಯುತ್ತೀರಿ ಅದರ ಬಗ್ಗೆಯೆ ಮಾತಾಡುತ್ತೀರಿ,

ಆದರೆ ಮಸೀದಿ ಕೆಳಗಿದ್ದ ದೇವಸ್ಥಾನದ ಬಗ್ಗೆ

ಒಮ್ಮೆಯಾದರೂ ಯೋಚಿಸಿ.


ಸುಖಾ-ಸುಮ್ಮನೆ ಉನ್ಮತ್ತ ಜನ ಸಮುದಾಯ

ಮಸೀದಿ ಕೆಡುವುದಕ್ಕೆ ಮುಂದಾಗಲಿಲ್ಲ.

ಶ್ರೀ ರಾಮನ ದೇವಸ್ಥಾನದ ಮೇಲಿರುವ ಮಸೀದಿಯ ನೋಡಿ

ಕೈಕಟ್ಟಿ ಕೂಡುವ ಜಾಯಮಾನ ನಮ್ಮದಲ್ಲ.

ಇದನ್ನು ಪೌರಷದ ಪ್ರದರ್ಶನವೆನ್ನುವುದಾದರೂ ತೊಂದರೆ ಇಲ್ಲ!


ಕೋಟಿ ಕೋಟಿ ಹೃದಯ ಸಾಮ್ರಾಜ್ಯದ ಮಾರ್ಯಾದ

ಪುರುಷೋತ್ತಮನ ದೇವಸ್ಥಾನದ

ಮೇಲೆಯೆ ಮಸೀದಿ ನಿಂತಿದ್ದರೆ, ನೋಡುತ್ತಾ ಸುಮ್ಮನಿರಿ ಅಂದರೆ

ಆಗುವುದಿಲ್ಲ!ನಮ್ಮನ್ನು ಪರಧರ್ಮ ಅಸಹಿಷ್ಣು ಅಂದರೂ ತೊಂದರೆ ಇಲ್ಲ.

ನಮ್ಮ ಸಹಿಷ್ಣಿತೆಗೆ ಸಿಕ್ಕ ಮರ್ಯಾದೆ ಎಂದು ಸುಮ್ಮನಾಗುತ್ತೇವೆ.


ದೇಶ ವೀಭಜನೆಯ ಕರಾಳ ಕಥೆಯೆ ಹೇಳುತ್ತದೆ

ಎಷ್ಟು ಜನ ಹಿಂದುಗಳ ಮಾರಣ ಹೋಮ ನಡೆಯಿತೆಂದು

ದೇಶದೊಳಗಿದ್ದು ದೇಶ ದ್ರೋಹವೆಸಗುವವರಿಗೂ ಮನ್ನಿಸಿ

ನಮ್ಮವರೆಂದು ಪೊರೆದೆವು.

ಆದರೂ ನಮ್ಮನ್ನು ಜರಿದಿರಿ.ಪರವಾಗಿಲ್ಲ!!!


ನಮ್ಮನ್ನು ಜರಿದರೂ ಅಸಹಿಷ್ಣು ಅಂದರೂ ಪರವಾಗಿಲ್ಲ!

ತೊಂದರೆ ಇಲ್ಲ!!

Tuesday, August 4, 2020

ಮುಕ್ತದ ಹಪಾ ಹಪಿಯೂ...

This was published in Karmaveera Aug -2 -2020 issue
*******************************************

ಇಳಿ ಸಂಜೆಯ ಮಳೆ ನಿಲ್ಲುವುದಿಲ್ಲವಂತೆ
ಹಾಗೆ ನಿಂತರೂ ಘಂಟೆಗಳವರೆಗಿನ ಘನ ಮಳೆ ಯಂತೆ
ಕಾನನ ಹೊಕ್ಕಾಗಿತ್ತು ದಾರಿ ಸವಿಸಲೆ  ಬೇಕಾಗಿತ್ತು !!

ಆಕಾಶಕ್ಕೆ ತೂತು ಬಿದ್ದಂತೆ ಮಳೆ ಹೊಯ್ಯುತಿದ್ದರೆ
ಮುಸಲ ಧಾರೆಯೆ ಸೈ ಮತ್ತು ಕುಂಭ ದ್ರೋಣವೂ ಹೌದು
ಅದರ ಮೇಲೆ  ಕೇವಲ ಮಿಂಚು ಹುಳುವಿನ ಬೆಳಕು !

ಅಕ್ಕ ಪಕ್ಕದಲಿ ಆಸರೆಗೆ ಸ್ಥಳವಿಲ್ಲ ಎಲ್ಲಿಯೂ
ಮುಂದೆ ನೋಡಿದರೆ ದಾರಿಯೆ ಸುಳಿಯದು
ಹಿಂತುರಿಗಿ ನೋಡಿದರೆ ಏನೇನು ಕಾಣದು  !

ಕಾರ್ಗತ್ತಲ ಕಾನನದ ಪಯಣವು ಶೂನ್ಯದಲ್ಲಿ ನಿಂತಂತೆ !!
ದಾರಿ ಕಾಣದೆ ನಿಂತಲ್ಲೆ ನಿಂತು ಬಂಧನದಂತೆ
ಯ್ಯಾರು ನನ್ನ ತಲುಪದಿರುವ  ಮುಕ್ತದಂತೆ !

ಈ  ಪರಿಸ್ಥಿತಿ ಮುಕ್ತವೆಂದು ಸಂತೈಸಿ ಕೊಂಡೆ
ಮರುಕ್ಷಣವೆ ನುಸುಳಿತ್ತು ಮುಕ್ತವೂ ಬಂಧನವೆಂದು
ಮುಕ್ತದ ಹಪಾ ಹಪಿಯೂ ಬಂಧನವೆ!!

Monday, February 24, 2020

Poem which was published in VIKRAMA 23rd Feb 2020.I Support CAA.
***********************************************************
ಗುರುತು ಕೇಳುತ್ತೇವೆ ಅಷ್ಟೆ!!!

ಇದು ನಮ್ಮನಿಮ್ಮೆಲ್ಲರ ನಾಡೆ
ಇಂದು ನಿನ್ನಯಿಂದಿಲ್ಲ ಸಾವಿರಾರು ವರ್ಷಗಳಿಂದಲೂ
ನಾವು ನೀವೇಲ್ಲರೂ ಒಟ್ಟಾಗಿ ಬದುಕ ಕಟ್ಟಿ
ಬಾಳ್ವೆ ಮಾಡಿದಿವಿ!!!
ಅಂದು-ಇಂದು-ಎನ್ನದೆ ಹಿಂದೆ ಮುಂದೆ ನೋಡದೆ
ಪರಕೀಯರ ಆಕ್ರಮಣವಾದಾಗ ಘರ್ಜಿಸಿ ಒಂದಾಗಿ
ಮುಂದಾಗಿ ದಾಳಿ ಮಾಡಿದಿವಿ,

ಕಾಲನ ಗತಿಯೊಳಗೆ ನೊಂದು ಬೆಂದು
ಹಿಂದು-ಮುಂದು ನೋಡದೆ ಇದ್ದೆಲ್ಲವನೂ ತೊರೆದು
ಉಟ್ಟ ಬಟ್ಟೆಯೊಳಗೆ ಒಡಲ ಮರಿಗಳೊಡನೆ
“ನಮಗಾರು ಗತಿಯಿಲ್ಲ” ವೆಂದು ದೇಹಿ ಎನ್ನುತಲೆ
ಒಳ ಬಂದಿರಿ!!!
ಗಂಜಿಕೊಟ್ಟೆವು ಅನ್ನ ಕೊಟ್ಟೆವು ನೆಮ್ಮದಿಯಾಗಿ ಮಲಗಿರಲು
ನಿಮ್ಮ ಬಿಡಾರಗಳ ಕಾಯ್ದೆವು!!
ಇದು ನಾವು ನಮ್ಮ ಭಾರತವು!!!

ದೇಹಿ ಎಂದರೆ ನಿಮಗಿದೋ ಇಲ್ಲಿ ಆಶ್ರಯ!
ರಾಮನಾಳಿದ ನಾಡಲಿ ರಾಮನ ಸಂತಾನಕ್ಕೆ
ಇದೋ ನಿಮ್ಮ ಭೂಮಿ ಇಲ್ಲಿದೆ ನಿಮ್ಮ ಹಕ್ಕು
ಗುರುತು ಕೇಳುತ್ತೇವೆ ಅಷ್ಟೆ ನೀವು ಓಡಿ ಬಂದಿದಕ್ಕೆ
ದೇಹಿ ಎಂದು ಅಂಗಲಾಚಿ ಬೇಡಿದ್ದಕ್ಕೆ!!!
ಇಲ್ಲಿಯ ನಮ್ಮ ನಿಮ್ಮ ನಡುವಿನ ಭಾತೃತ್ವಕ್ಕೆ
ಯಾವತ್ತು ಕುಂದಿಲ್ಲ,ಆದರೆ ಓಡಿ ಬಂದವರಗೆ
ಗುರುತು ಕೇಳುತ್ತೇವೆ ಅಷ್ಟೆ!!!