Thursday, February 10, 2011

ದೇಶಿ ಸಂಸ್ಕೃತಿಯ ತಲ್ಲಣ ಮತ್ತು ತವಕ...!

ಈಗ ಎಲ್ಲಡೆ ಜಾಗತಿಕರಣ ದ ಮಾತು!ಜಾಗತಿಕರಣ ದ ಲಾಭ-ನಷ್ಟ,ಒಳಿತು-ಕೆಡಕು ಹೀಗೆಒಂದಲ್ಲ ಒಂದು ಮಾತು,ಚರ್ಚೆ, ವಿಚಾರ,ಮಂಥನ ಕಾರ್ಯಕ್ರಮಗಳು.ಆದರೆ ಇವೆಲ್ಲವೂ ನಡೆಯುತ್ತಿರುವುದು ನಗರಗಳಲ್ಲಿ.ಒಂದು ದುರಂತ ಅಂತ ಹೇಳಿದ್ರೆ ಜಾಗತೀಕರಣ ಕಬಳಿಸ್ತಾ ಇರೋದು ನಮ್ಮ ಹಳ್ಳಿಗಳನ್ನ,ನಮ್ಮ ಹಳ್ಳಿ ಕಸುಬುಗಳನ್ನ,ನಮ್ಮ ಭೂಮಿಗಳನ್ನ.ನಗರಗಳಲ್ಲಿ ನಡಿತಾ ಇರೊ ಈ ಯಾವ ಚರ್ಚೆಗಳು ನಗರ ಬಿಟ್ಟು ಒಂದಿಂಚು ಸರಿತಾ ಇಲ್ಲ.ಹೀಗಾಗಿ ನಮ್ಮ ಹಳ್ಳಿಗಳ ಸ್ಥಿತಿ ಕೇಳುವಾಹಾಗಿಲ್ಲ! ಇಲ್ಲಿ ಮೂಲಭೂತ ವಾಗಿ ಕಾಡುವ ಪ್ರಶ್ನೆ ಏನು ಅಂತ ಕೇಳಿದ್ರೆ - ಏನಿದು ದೇಶಿ ಸಂಸ್ಕೃತಿ?ಇದಕ್ಕೆ ಉತ್ತರ ಪುಟ ಪುಟಗಟ್ಟಳೆ ಬರೆಯಬಹುದು.ಆದರೆ ತುಂಬಾ ಸರಳವಾಗಿ ಬರೆಯುವುದಾದರೆ "ನಮ್ಮದಾಗಿರುವುದೇ ದೇಶಿ".ಇದು ಊಟ,ಬಟ್ಟೆ,ಮಾತು,ಶೈಲಿ,ವಿಧಾನ ಹೀಗೆ ಯಾವುದಾದರೂ ಆಗಿರಬಹುದು. ಪ್ರಪಂಚ ಚಿಕ್ಕದಾಯಿತು, ದೇಶ ಗಳು ಹತ್ತಿರ ಹತ್ತಿರಕ್ಕೆ ಬಂದವು,ಪೂರ್ವ-ಪಶ್ಚಿಮ ಎನ್ನುವ ದೇಶಗಳ ಪರಿಭಾಷೆ ಬದಲಾಗಿ ಎಲ್ಲವೂ "ಜೀವನ ಶೈಲಿ' ಅನ್ನುವ ಲೆಕ್ಕಕ್ಕೆ ಬಂದು ನಿಂತಿದೆ.ನಮ್ಮ ಸಂಕೃತಿ,ಆಚಾರ,ವಿಚಾರ ನಡುಗೆ ಎಲ್ಲ ಬದಲಾಗಿದೆ ಮತ್ತು ಇನ್ನು ಬದಲಾಗುತ್ತಿದೆ.ಇದು 'ಪ್ರಪಂಚ ಚಿಕ್ಕದಾದುರ' ಫಲ.ನಮ್ಮ ಅವಿಭಕ್ತ ಕುಟುಂಬಗಳು ಈಗ 'ನ್ಯೂಕ್ಲಿಯರ್ ಫ್ಯಮಿಲಿ' ಅನ್ನುವ ಎರವನು ಶಬ್ದದಿಂದ ಬದಲಾಗುತ್ತ ನಮ್ಮತನ ವನ್ನೆ ಮರೆತುಬಿಟ್ಟಿದ್ದೇವೆ. ನಮ್ಮ ಹಳ್ಳಿಗಳಲ್ಲೆ ಇರುವುದು ದೇಶಿ ಸಂಕೃತಿಯ ಕಲರವ ಅದರಲ್ಲಿ ಎರೆಡು ಮಾತಿಲ್ಲ.'ಮೆಟ್ರೊ ಸಿಟಿ'ಗಳಿಂದ ಪ್ರಾರಂಭ ವಾಗಿ ಎರೆಡನೆ ದರ್ಜೆ ಯ ಶಹರ ಗಳನ್ನು ಸ್ವಲ್ಪ ಸ್ವಲ್ಪ ವೇ ಅಪೋಷಣೆ ತಗೊಂಡು ಈಗ ಮೆಲ್ಲಗ ತಹಶಿಲ್ ಪಟ್ಟಣಗಳತ್ತ ಹೆಜ್ಜೆ ಹಾಕಿದೆ ಈ ದೇಶಿ ಸಂಕೃತಿ ನುಂಗುವ ರಾಕ್ಷಸ.ಬಹುಶಃ ಇನ್ನು ಕೆಲವೆ ವರ್ಷಗಳ ಮಾತು ತಹಶಿಲ್ ಪಟ್ಟಣಗಳಲ್ಲೂ ವಿದೇಶಿ ಕಂಪನಿಗಳ ಮಾಲ್ ಸಂಕೃತಿ ಬರುವುದು ತಡವಿಲ್ಲ.ಒಮ್ಮೆ ಈ ವಿದೇಶಿ ಮಾಲ್ ಗಳು ಪ್ರವೇಶಿಸಿದವು ಎಂದರೆ ಮುಗಿತು- ನಮ್ಮ ಶಾಸ್ತ್ರೀಯ ಕುಂಬಾರಿಕೆ,ಚೆಮ್ಮಾರಿಕೆ,ಚಿನಿವಾರದವರು,ಹೂಗಾರರು ಹೇಳ ಹೆಸರಿಲ್ಲದಹಾಗೆ ಹೋಗಿಬಿಡ್ತಾರೆ.ಇಲ್ಲಿ ಇನ್ನೊಂದು ಜಿಗ್ನಾಸೆ ಇದೆ.ಬದಲಾಗುತ್ತಿರುವ ಕಾಲ ಮಾನದಲ್ಲಿ ನಾವು ಬದಲಾಗಬೇಕು.ಖಂಡಿತ ಒಪ್ಪುವ ಮಾತೆ ಸರಿ.ಹಿಂದೆ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದವರು ಈಗಲೂ ಅದರಿಂದಲೇ ನಾನು ಅನ್ನ ಕಂಡುಕೊಳ್ಳುತ್ತೇನೆ ಅನ್ನುವುದು ತುಂಬ ಹಸ್ಯಾಸ್ಪದ.ಈಗ ಕಾಲ ಬದಲಾಗಿದೆ ಟೈಪ್ ರೈಟರ್ ಬಿಟ್ಟು ಈಗ ಕಂಪ್ಯುಟರ್ ಕಲಿಯುವ ಅನಿವಾರ್ಯತೆ ಇದೆ.ನಮ್ಮನ್ನು ನಾವು ಕಾಲಕ್ಕೆ ತಕ್ಕಂತೆ ಸಿದ್ಧಮಾಡಿಕೊಳ್ಳುವ ಅನಿವಾರ್ಯತೆ ಇದೆ.ಆ ಲೆಕ್ಕಚಾರದಲ್ಲಿ ನೋಡಿದರೆ ನಮಗೆ ಒಂದು ಕಡೆಯಿಂದ ಬದಲಾಗುವ ಅವಕಾಶವನ್ನು ಈ ಜಾಗತಿಕರಣ ಕಲ್ಪಿಸಿಕೊಟ್ಟಗ್ಯೂ ನಮ್ಮ ಅಭೂತ ಪೂರ್ವ ಸಂಕೃತಿ ಯನ್ನು ನುಂಗುತ್ತ ಇದೆ.ಇದೆ ಈಗ ನಮ್ಮೆಲ್ಲರ ಆತಂಕದ ಮೂಲ. ನಾವು ಬದಲಾವಣೆ ಬಯಸ್ತೇವೆ ಆದರೆ ಆ ಬದಲಾವಣೆಗೆ ನಾವು ತೆರೆ ಬೇಕಾಗುರುವ ದಂಡ ತುಂಬಾ ದುಬಾರಿಯಾಗಿದೆ.ಬೇರೆ ದೇಶಗಳದ್ದು ಹಾಗಲ್ಲ ಅಲ್ಲಿ ನಮ್ಮ ತರಹ ಶತಮಾನಗಳ ಹಳೆಯದಾದ ನಂಬಿಕೆಗಳಿಲ್ಲ,ಆಚಾರ-ವಿಚಾರಗಳಿಲ್ಲ,ಇದೆಲ್ಲಕಿಂತ ಮಿಗಿಲಾಗಿ ಆ ಎಲ್ಲ ನಂಬಿಕೆಗಳೊಂದಿಗೆ ಬೆಸೆದು ಕೊಂಡಿರುವ ಭಾವನಾತ್ಮಕ ಸಂಬಂಧ ಎಲ್ಲಕಿಂತ ಹೆಚ್ಚು.
ಕೊನೆಯದಾಗಿ
ಬದಲಾವಣೆಯಗಾಳಿ ಬರಲಿ
ನಮ್ಮತನವನ್ನು ಹೊತ್ತುತರಲಿ.

Monday, February 7, 2011

ಅವಳಿಗಾಗಿ...!॒

ನಿನ್ನ ಈ ನಗುವಿಗೆ ಸಾವಿರ,
ಕಾರಣಗಳಿರಬಹುದು.
ಆದರೆ ನನ್ನ ಈ ಅಳುವಿಗೆ
ಒಂದೇ ಕಾರಣ ಅದು ನಿನ್ನ 'ಪ್ರೀತಿ'
******************************
ನೀ ಹೆಜ್ಜೆ ಇಟ್ಟಡೆಯಿಂದ ನನ್ನ ಬಾಳು,
ಕವನಗಳ ಸಾಲು ಸಾಲು,
ಬರೆದು ಬರೆದು ಆಯಿತೇ ,
ನನ್ನ ಬಾಳು ಹಾಳು?
************************
ಮುಗಿಯದ ಮಾತು ನೂರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿದೆ ಒಲವು,
ಹಮ್ಮು-ಬಿಮ್ಮುಗಳ ನಡುವೆ!

ತಕ ತಕ ನೆ ಕುಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೇಳಲು ದನಿ ಇರಲಿಲ್ಲ.
ಸೂರೆ ಮಾಡಿದ್ದವು ಭಗ್ನ ಕನಸುಗಳು

ತಿರುಗಿ ನೋಡದೆ ಹೊರ್‍ಅಟು ಹೋದೆ,
ನಾನಲ್ಲೆ ನಿಂತಿದ್ದೆ ನೀ ಬರುವೆ ಎಂದು!
ದಿನಗಳೇ ಕಳೆದರು ಬಾರದೆ ಹೋದೆ,
ನೀ ಸುಖವ ಕಂಡಿದ್ದೆ ಇನ್ನೊಬ್ಬರ ತೆಕ್ಕೆ ಯಲಿ ಮಿಂದು!

Friday, February 4, 2011

ಆವಳಿಗಾಗಿ....!


ನಿನ್ನ ನೆನಪುಗಳಿಗೆ ಕಾರಣವಿಲ್ಲ,
ಸುಮ್ಮನೆ ಅಡರುತ್ತವೆ ಮನ ಬಂದಂತೆ,
ನನ್ನ ಕಣ್ಣುಗಳು ಬೇರೇನು ಹುಡುಕಲ್ಲ,
ನಿನ್ನ ಬಿಂಬ ಕಣ್ಣು ತುಂಬಿ ಬಂದಂತೆ.
***************************
ಹೋಗುವ ನಿನಗೆ ನೂರೆಂಟು ಕಾರಣ!
ಆದರೆ ಹೋಗುವ ಮುನ್ನ,
ಹುಸಿಯದಾದರೂ ಸೈ
ಒಂದು ಕಾರಣಕೊಟ್ಟು ಹೊರಡಬಹುದಿತ್ತಲ್ಲಾ?
*****************************
ಕೆನ್ನೆಯ ಇಳಿಜಾರಿನಲ್ಲಾದ,
ಕೆಂಬಣ್ಣ-ನನ್ನ ಮುತ್ತಿನ ಮತ್ತೆಂದು
ನಂಗೊತ್ತು!
ದಿನ ದಿನವೂ ಹೀಗೆ ಸಿಗುತಿರು,
ಇಂಚಿಂಚು ಮುತ್ತಿಡುವೆ,
ತಿಳಿದಿರು-ನೀ ನನ್ನ ಸ್ವತ್ತು!