Friday, February 4, 2011

ಆವಳಿಗಾಗಿ....!


ನಿನ್ನ ನೆನಪುಗಳಿಗೆ ಕಾರಣವಿಲ್ಲ,
ಸುಮ್ಮನೆ ಅಡರುತ್ತವೆ ಮನ ಬಂದಂತೆ,
ನನ್ನ ಕಣ್ಣುಗಳು ಬೇರೇನು ಹುಡುಕಲ್ಲ,
ನಿನ್ನ ಬಿಂಬ ಕಣ್ಣು ತುಂಬಿ ಬಂದಂತೆ.
***************************
ಹೋಗುವ ನಿನಗೆ ನೂರೆಂಟು ಕಾರಣ!
ಆದರೆ ಹೋಗುವ ಮುನ್ನ,
ಹುಸಿಯದಾದರೂ ಸೈ
ಒಂದು ಕಾರಣಕೊಟ್ಟು ಹೊರಡಬಹುದಿತ್ತಲ್ಲಾ?
*****************************
ಕೆನ್ನೆಯ ಇಳಿಜಾರಿನಲ್ಲಾದ,
ಕೆಂಬಣ್ಣ-ನನ್ನ ಮುತ್ತಿನ ಮತ್ತೆಂದು
ನಂಗೊತ್ತು!
ದಿನ ದಿನವೂ ಹೀಗೆ ಸಿಗುತಿರು,
ಇಂಚಿಂಚು ಮುತ್ತಿಡುವೆ,
ತಿಳಿದಿರು-ನೀ ನನ್ನ ಸ್ವತ್ತು!

No comments: