Monday, February 7, 2011

ಅವಳಿಗಾಗಿ...!॒

ನಿನ್ನ ಈ ನಗುವಿಗೆ ಸಾವಿರ,
ಕಾರಣಗಳಿರಬಹುದು.
ಆದರೆ ನನ್ನ ಈ ಅಳುವಿಗೆ
ಒಂದೇ ಕಾರಣ ಅದು ನಿನ್ನ 'ಪ್ರೀತಿ'
******************************
ನೀ ಹೆಜ್ಜೆ ಇಟ್ಟಡೆಯಿಂದ ನನ್ನ ಬಾಳು,
ಕವನಗಳ ಸಾಲು ಸಾಲು,
ಬರೆದು ಬರೆದು ಆಯಿತೇ ,
ನನ್ನ ಬಾಳು ಹಾಳು?
************************
ಮುಗಿಯದ ಮಾತು ನೂರಿಹವು,
ನಮ್ಮಿಬ್ಬರ ನಡುವೆ.
ಬತ್ತಿ ಹೋಗಿದೆ ಒಲವು,
ಹಮ್ಮು-ಬಿಮ್ಮುಗಳ ನಡುವೆ!

ತಕ ತಕ ನೆ ಕುಣಿಯುತಿಹವು,
ಉತ್ತರವಿಲ್ಲದ ಪ್ರೆಶ್ನೆಗಳು.
ಕೂಗಿ ಕೇಳಲು ದನಿ ಇರಲಿಲ್ಲ.
ಸೂರೆ ಮಾಡಿದ್ದವು ಭಗ್ನ ಕನಸುಗಳು

ತಿರುಗಿ ನೋಡದೆ ಹೊರ್‍ಅಟು ಹೋದೆ,
ನಾನಲ್ಲೆ ನಿಂತಿದ್ದೆ ನೀ ಬರುವೆ ಎಂದು!
ದಿನಗಳೇ ಕಳೆದರು ಬಾರದೆ ಹೋದೆ,
ನೀ ಸುಖವ ಕಂಡಿದ್ದೆ ಇನ್ನೊಬ್ಬರ ತೆಕ್ಕೆ ಯಲಿ ಮಿಂದು!

No comments: