Monday, June 7, 2010

ಭಕ್ತಿ ಭಂಡಾರಿ-'ಬಸವಣ್ಣ'


ಜಗದ ಜಾಡ್ಯ ತೊಳೆಯಲು,
ಜನರ ಮೌಢ್ಯ ಕಳೆಯಲು,
ಅವತರಿಸಿದ ಈ ಭಕ್ತಿ ಭಂಡಾರಿ,
ವೀರಶೈವ ಧರ್ಮ ದ ರುವಾರಿ!

ಜಾತಿ ವಿಜಾತಿ ಹೊಡೆದೊಡಿಸಲು
ಎಲ್ಲರನೂ ಕರೆ ತಂದೆ,
ಕಿತ್ತೊಗೆದು ಸಂಪ್ರದಾಯದ ಉರುಳು.
ಕೈವಲ್ಯ ಸಾಧನೆ ಗೆ ನಿಜ ಭಕ್ತಿ ಸರಿ ಎಂದೆ.

ನ ಜ್ಯೋತಿ ಮನ ಮನದಲಿ ಬೆಳಗಲು
ಕಾಯಕದಲ್ಲೇ ಇದೆ ಎಂದೆ ದೈವದ ತಿರುಳು.
ಅಶಕ್ತರಲೇ ದೈವ ವನು ಕಂಡು,
ಎಲ್ಲರಿಗೂ ಒಬ್ಬನೇ ತಂದೆ ಅವ 'ಶಿವ' ನೆಂದೆ.

ವಚನದಲಿ ಎಲ್ಲ ಬರೆದು,ಸಿಂಹಾಸನವ ತೊರೆದು,
ಸಂಗಮದಲಿ ಐಕ್ಯ ವಾದೆ!
ಜಂಗಮಕಳಿವಿಲ್ಲ,ಕಪಟ ನಾಟಕದಲಿ ಸುಖವಿಲ್ಲ ವೆಂದು,
ಜಗಕ್ಕೆಲ್ಲಾ ಗುರು ವಾದೆ!