Thursday, October 23, 2008

ಕಡೆಯಾದೆ!


ಅವಳೇರುವ ಎತ್ತರಕ್ಕೆ
ಏಣಿಯಾದೆ.
ಎತ್ತರದಲಿ ನಿಂತಮೇಲೆ
ನಾ ಬೆಡವಾದೆ.
ಕಾಲ ಧೂಳಿಗಿಂತಲೂ,
ಕಡೆಯಾದೆ!

Wednesday, October 15, 2008

ಮಳೆ

ಮಾಯದ ಲೋಕವೇ ಈ ಭುವಿಯು,
ಚಿತ್ತವ ಚದುರಿಸೂ ಬಣ್ಣದ ಲೋಕವು.

ಹಸಿ ಹಸಿರು ಭುವಿಯ ಒಡಲು,
ನೋಡಲು ಮೇಲೆ ಚೆಂದದ ಕಾರ್ಮುಗಿಲು.

ಬೆಳ್ಳಿಯ ಗೆರೆ ನಡುವುದು ಹೊಳೆದಿರೆ,
ಕಳೆಯಿತು ಭುವಿಗಂಟಿದ ಕೊಳೆಯು.

ಮಳೆಯೋ ಮಳೆಯೋ ಭುವಿಗಿಳಿಯಿತು.
ಬಯಸದೆ ಬಂದ ಇನಿಯನ ಪರಿಯೂ!

Monday, October 6, 2008

ಶಂಕರಣ್ಣ ನ ನೆನಪು...!


ಮೊನ್ನೆ ಸೆಪ್ಟೆಂಬರ್ ಮೂವತ್ತಕ್ಕೆ ಶಂಕರನಾಗ್ ತೀರಿ ಕೊಂಡು ೧೮ ವರ್ಷಗಳಾಗಿ ಹೋದವು.ನಂಬಲಿಕ್ಕೆ ಆಗ್ತಾ ಇಲ್ಲ, ದಿನಗಳು ಎಷ್ಟು ಬೇಗ ಹೋಗ್ತ ಇದ್ದವಲ್ಲ!ನಾನು ಎಂಟನೇ ತರಗತಿ ಯಲ್ಲಿ ಇದ್ದೆ.ಶಂಕರ್ ನಾಗ್ ಸತ್ತು ಬಿಟ್ರು ಅಂತ ಹಡಗಲಿಗೆ ಸುದ್ದಿ ಬಂತು.ಶಂಕರಣ್ಣನ ಅಭಿಮಾನಿಗಳಮುಖ ನೋಡ್ಲಿಕ್ಕೆ ಆಗಿರಲಿಲ್ಲ.ನನಗಂತೂ ಯ್ಯಾಕ್ಷನ್ ಸಿನಿಮಾಗಳ ಹೀರೋ ಇನ್ನಿಲ್ಲವಲ್ಲ ಅನ್ನಿಸಿತ್ತು.
ಕನ್ನಡಕ್ಕೆ ಮುಂದೆ ಯಾರು 'ಕರಾಟೆ ಕಿಂಗ್'?

ಸೆಪ್ಟೆಂಬರ್ ಮೂವತ್ತು ೧೯೯೦ ಕ್ಕೆ ಕನ್ನಡದ ಒಬ್ಬ ಧೈರ್ಯ ವಂತ,ಎಂಟೆದೆ ಬಂಟ,ಕರಾಟೆ ಕಿಂಗ್, 'ಮಾಲ್ಗುಡಿ ಡೇಸ್' ನ ನಿರ್ದೇಶಕ,ಒಬ್ಬ ಅಧ್ಬುತ ದೂರದೃಷ್ಟಿ ನಾಯಕ ಇನ್ನಿಲ್ಲವಾಗಿದ್ದ.ಕೇವಲ ಕನ್ನಡದಕ್ಕೆ ಅಲ್ಲದೆ, ದೇಶ ದ ಹಿನ್ನೆಲೆಯಲ್ಲಿ ಒಬ್ಬ ಅದ್ಭುತ ನಿರ್ದೇಶಕ, ಕನ್ನಡ ಮತ್ತು ಮರಾಠಿ ರಂಗ ಭೂಮಿ ಒಬ್ಬ ಕ್ರೀಯಾಶೀಲ ನಿರ್ದೇಶಕನ್ನ ಕಳೆದು ಕೊಂಡಿತ್ತು. ಶಂಕರಣ್ಣ ಕೇವಲ ಯ್ಯಕ್ಷನ್ ಕಿಂಗ್ ಮಾತ್ರ ಆಗಿರಲಿಲ್ಲ.ಅವನೊಬ್ಬ ಹೊಸ ತನದ ಹಂಬಲ ಹೊತ್ತ ದಿಗ್ದರ್ಶಕನಾಗಿದ್ದ.ಶಂಕರಣ್ಣ ಗೆ ಕನ್ನಡ ಚಿತ್ರ ರಂಗ ದಲ್ಲಿ ಎರೆಡು ಬಯಕೆ ಗಳಿದ್ದವು.ಒಂದು ಅಣ್ಣಾವ್ರ ಸಿನಿಮಾ ನಿರ್ದೇಶನ ಮಾಡುವುದು ಮತ್ತೊಂದು ಪುಟ್ಟಣ್ಣ ನವರ ನಿರ್ದೇಶನದಲ್ಲಿ ಕೆಲಸ ಮಾಡುವುದು.ಮೊದಲನೆಯದು ಸಾಕರ ಗೊಂಡಿತು.ಆದರೆ ಎರೆಡೆನೆಯದಕ್ಕೆ ಕಾಲ ಕೂಡಿ ಬರಲಿಲ್ಲ.
ಶಂಕರಣ್ಣ ಸತ್ತು ಹೋಗಿದ್ದಾನೆ ಅಂತ ಯಾರು ಹೇಳಿದ್ದು?ಪ್ರತಿ ಆಟೋ ಡ್ರೈವರ್ ನ ಹೃದಯದಲ್ಲೊ ಅವನು ಇನ್ನೂ ಇದ್ದಾನೆ.ರಂಗಶಂಕರ ದ ಪ್ರತಿ ಪ್ರಯೋಗಗಳನ್ನು ಅಲ್ಲಿ ಗಡ್ಡ ನೇವರಿಸುತ್ತಾ ನೋಡುತ್ತಾ ನಿಂತಿದ್ದಾನೆ.ನನ್ನಂತಹ ಇನ್ನೂ ಎಷ್ಟೊ ಕನಸು ಕಾಣುವವರಿಗೆ ಅವನೇ ರೋಲ್ ಮಾಡೆಲ್ ಆಗಿದ್ದಾನೆ.ನಮ್ಮೆಲ್ಲರ ಬಾಲ್ಯ ದ ನೆನಪುಗಳ ನ್ನು ಕೆದಕಿ ಎಲ್ಲೊ ಒಂದು ಕಡೆ ಹಳೆ ಕಡತಗಳನ್ನು ತೆರೆಯುವಂತೆ ಮಾಡಿದ್ದ 'ಮಾಲ್ಗುಡಿ ಡೆಸ್' ನಲ್ಲಿ ಶಂಕರಣ್ಣ ಇದ್ದಾನೆ. ಶಂಕರಣ್ಣ ನೀ ಎಲ್ಲೂ ಹೋಗಿಲ್ಲ ಇಲ್ಲೆ ಇದ್ದೀಯಾ.ನನ್ನ ಕಥೆ ಗಳಲ್ಲಿ,ನಮ್ಮ ಮೆಟ್ರೂ ಪ್ರೊಜೆಕ್ಟ್ ನಲ್ಲಿ,ಬದುಕಿನ ಆಸಕ್ತಿಗಳಲ್ಲಿ,ಓಟದಲ್ಲಿ,ಆತೀವ ಉತ್ಸಾಹದಲ್ಲಿ,ಕನಸುಗಳಲ್ಲಿ,ಕನವರಿಕೆಗಳಲ್ಲಿ....

Friday, October 3, 2008

'ಒಂದು ಕಪ್ ಹಾಲು' (ಸಣ್ಣ ಕಥೆ)

ಅಂದು ಬೆಳಗ್ಗಿನಿಂದಲೇ ಉಪವಾಸ ವಿದ್ದಿದ್ದರಿಂದಲೇ ಏನೋ,ನೀಲಕಂಠ ನಿಗೆ ಏನೋ ಒಂದು ತೆರೆನಾದ ಸಂಕಟ.ಕೆಲಸದ ಒತ್ತಡದಲ್ಲಿ ಬರೀ ಕಾಫಿ ಮತ್ತು ಚಹಾ ಬಿಟ್ಟರೆ ಗಂಟಲಿಗೆ ಏನೂ ಇಳಿದಿರಲಿಲ್ಲ.ಮೊದಲೇ ನಿರ್ಧೆಶಕ ನ ಜವಾಬ್ದಾರಿ.ಅದು ಈ ದಾರವಾಹಿಗೆ ಪ್ರಾಯೋಜಕರಾಗುರುವರು ಕನ್ನಡ ಚಿತ್ರೋದ್ಯಮದ ಹೆಸರಾಂತ ನಿರ್ಮಾಪಕರು.ಹೀಗಾಗಿ ಈ ದಾರವಾಹಿ ಯು ನೀಲಕಂಠ ನಿಗೆ ಬಹು ಮುಖ್ಯವಾಗಿತ್ತು.ಈ ದಾರವಾಹಿ ಯಲ್ಲಿ ಕೊಂಚ ಹೆಸರು ಗಳಿಸಿದರು ಈಗಿರುವ ಹೆಸರಿಗೆ ಅದೂ ಸೇರಿ ಖಂಡಿತಾ 'ಬೆಳ್ಳಿತೆರೆ' ಗೆ ಕಾಲಿರಸಬಹುದು ಎನ್ನುವ ಲೆಕ್ಕಚಾರ ಅವನದಾಗಿತ್ತು.
ಇದೆಲ್ಲವನ್ನು ಮನದಲ್ಲಿರಿಸಿಕೊಂಡು ಅವನು ಸಿದ್ಧಪಡಿಸಿದ ಚಿತ್ರಕಥೆ ಯನ್ನು ನಿರ್ದೇಶನಕ್ಕೆ ಅಣಿಮಾಡದೆ ತಾನೆ ಕುಳಿತು ಸಾಕಷ್ಟು ಓದು,ಮಾಹಿತಿಗಳನ್ನು ಕಲೆ ಹಾಕಿ,ಮನುಷ್ಯನ ಹುಟ್ಟಿನ ಮೂಲ,ಸಂಬಂಧಗಳ ಎಳೆ,ಅವರ ನಡುವಳಿಕೆಗಳು..ಹೀಗೆ ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಿ ಬರೆಯಲು ಕುಳಿತ. ಬರೆಯುವ ಭಾಗಗಳನ್ನು ಮುಗಿಸಿದ ಮೇಲೆ ಹಂತ ಹಂತವಾಗಿ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದ.
ಕಥೆ ಹಂದರ ತಲೆಯಲ್ಲಿ ಸಿದ್ಧವಾಗಿತ್ತು.ಆ ಕಥೆ ಮೇಲಿ ತಿಳಿಸಿದ ಹರವನ್ನೂ ಒಳಗೊಂಡಿತ್ತು.ಅದಿಸ್ಟಲ್ಲದೆ ಬದುಕು,ಇಲ್ಲಿನ ಸಂಭ್ರಮ-ಸಡಗರ,ಬದುಕಲ್ಲಿನ ಅನೀರಿಕ್ಷೀತ ತಿರುವು,ಅಘಾತ -ಇವೆಲ್ಲವನ್ನೂ ಬಳಸಿ ಬೆಳೆದಿತ್ತು.ಇನ್ನೂ ಅವನಿಗೆ ಉಳಿದಿದ್ದು ದರವಾಹಿ ಯ ಹೆಸರು: ಅದಕ್ಕೆ ಅವನು ಅಲೋಚಿಸಿ ಇಟ್ಟ ಹೆಸರು - 'ಇಷ್ಟೇ ಅಲ್ಲಾ...!'.
ಆ ದಿನ ರಾತ್ರಿ ಮನೆಗೆ ಬರು ಹೊತ್ತಿಗೆ ಸುಮಾರು ಹನ್ನೊಂದು ವರೆ ಆಗಿತ್ತು.ಬೆಳಿಗ್ಗೆ ಆರು ಗಂಟೆಗೆ ಮನೆ ಬಿಟ್ಟವನು ನಡು ರಾತ್ರಿ ಮನೆಗೆ ಹಿಂತುರಿಗಿದ್ದ. ಕಾರಲ್ಲಿ ಬರುತ್ತಿರುವಾಗಲೇ ಸಂಕಟ ಅತಿಯಾಗಿತ್ತು. ದಾರಿಯುದ್ದಕ್ಕೂ ಎಲ್ಲರಿಗೂ ಮನೆಗೆ ಹೋಗುವ ಆತುರ.ಟ್ರಾಫಿಕ್ ಸಿಗ್ನಲ್ ಇದೆಯೂ ಇಲ್ಲವೂ ಅದ್ಯಾವುದನ್ನೂ ನೋಡದೇ ಒಟ್ಟಾಗಿ ಎಲ್ಲರೂ ಓಡಿದ್ದೇ ಓಡಿದ್ದು.
ಇಡೀ ಬೆಂಗಳೂರೇ ನಿದ್ರೆ ಗೆ ಜಾರುವ ಸಮಯ.ಮುಂಜಾವಿನಿಂದ ಪ್ರತಿ ದಾರಿ ಹೋಕರಿಗೂ ಮೈಯೊಡ್ಡಿ ಇನ್ನು ಆಗಲಾರದು ಎನ್ನುವಂತೆ ರಸ್ತೆಗಳು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸುವಂತೆ ಮಲಗಿದ್ದವು.ಮುಖ್ಯ ರಸ್ತೆಗಳಲ್ಲಿ ಸುಮರಾಗಿ ವಾಹನಗಳು ಕಂಡುಬಂದರೂ ಬಡವಾಣೆ ಪ್ರವೇಶಿಸಿತಿದ್ದಂತೆಯೇ ಕತ್ತರಿ ರಸ್ತೆ ಗಳಲ್ಲಿ ಆಗಸಕ್ಕೆ ಮುಖಮಾಡಿ ನಾಲ್ಕು ದಾರಿಗಳಿಗೂ ಬೆಳಕ ಚೆಲ್ಲಿ ನಿಂತ ಹ್ಯಾಲೋಜನ್ ನ ಮಬ್ಬುಗತ್ತಲು.ಹಾದಿ ತಪ್ಪಿ ಬರುವಂತೆ ಕಾಣುವ ನಾಯಿಗಳು.ಬದುಕಲ್ಲಿ ಏನೆ ಬರಲಿ ಕೇವಲ ಹುಂಬ ಧೈರ್ಯದಿಂದಲೇ ಎದುರಿಸುತ್ತೇನೆ ಎನ್ನುವಂತೆ ಕಾಣುತ್ತಿರುವ ಕೇವಲ ಲಾಠಿ ಹಿಡಿದ ಪೋಲಿಸರನ್ನು ಬಿಟ್ಟರೆ ದಾರಿಯಲ್ಲಿ ಯಾವ ನರ ಪಿಳ್ಳೆ ಯೂ ಇಲ್ಲ.ಮನೆಯ ತಿರುವಿಗೆ ಬರವಷ್ಟರಲ್ಲಿ ಮಬ್ಬುಗತ್ತಲು ಮಾಯಾವಾಗಿ ಮನೆಗಳ ಕಿಟಕಿ ಗಳಿಂದ ಹೊರಬರುತಿದ್ದ ರಾತ್ರಿ ದೀಪದ ಬೆಳಕು ಮಾತ್ರ ಇತ್ತು.ರಸ್ತೆಯ ನಾಯಿಗಳು "ಯಾರಿದು...?" ಅಂತ ತಲೆ ಎತ್ತಿ ನೋಡಿ," ಅಯ್ಯೂ ಇವ ನಮ್ಮವ !" ಅನ್ನುವಂತೆ ತಲೆಯನ್ನು ಮತ್ತೆ ಭೂಮಿಗೆ ಹಾಕಿ ಮಲುಗಿದವು.ಮನೆಯ ಬಾಗಿಲು ತೆರೆಯುವಷ್ಟರಲ್ಲಿ 'ಸಂಕಟ' ತಾರಕಕ್ಕೇರಿತ್ತು. ಮನೆಯಲ್ಲಾ ತಡಕಾಡಿದ.ತಂದಿಟ್ಟಿದ್ದ ಬ್ರೆಡ್, ಹಣ್ಣು..ಎಲ್ಲವೂ ಮುಗಿದು ಹೋಗಿತ್ತು.ಆದರೆ ರೆಫ್ರಿಜೇಟರ್ ನಲ್ಲಿ ಹಾಲು ಮಾತ್ರ ಇತ್ತು.
****************************
ಹಾಲಿನ ಬಟ್ಟಲಿನಿಂದ ಒಂದಿಷ್ಟು ಹಾಲನ್ನು ಮತ್ತೊಂದು ಚಿಕ್ಕ ಬಟ್ಟಲಿಗೆ ಬಗ್ಗಿಸಿ ಬಿಸಿ ಮಾಡಲು ಗ್ಯಾಸ್ ಸ್ಟೋವ್ ಮೇಲೆ ಇಟ್ಟ.ಆ ಹೊತ್ತಿಗಾಗಲೇ ತಲೆ ಸಿಡಿತಾ ಇತ್ತು.
"ಹಸಿವೆ ಯಿಂದ ಇರಬೇಡ್ವೂ ಸಂಕಟನೂ ಹೆಚ್ಚಾಗುತ್ತೆ ಮತ್ತೆ ತೆಲೆ ನೋವು ಶುರುವಾಗುತ್ತೆ.."
ಸುಧಾ ಹೇಳುತಿದ್ದ ಮಾತು ನೆನಪಾಯಿತು.ಮನೆಯಲ್ಲಿ ಯಾರು ಇಲ್ಲದ್ದರಿಂದಲೋ ಎನೋ, ಮನೆ ಬಿಕೋ ಎನ್ನುತ್ತ ಇತ್ತು, ಮನಸ್ಸು ಅಯೋ ಮಯವಾಗಿತ್ತು.ತಲೆ ನೋವು ವಿಪರೀತವಾಗಿ ಕಾಡಲು ಶುರುವಾಯಿತು.ಮಲಗುವ ಕೋಣೆಯ ಅಲಮಾರದಲ್ಲಿದ್ದ ಸಂಗೀತಾ ಳ ದುಪ್ಪಟ್ಟ ತೆಗೆದು ತೆಲೆಗೆ ಬಿಗಿದ.ಕೈ ಗೆ ಹಿಡಿತ ಸಿಗಲಿಲ್ಲ.
"ಇಲ್ಲಿ ಬಿಡು ನಂಗೆ,ನಾನು ಕಡ್ತೇನೆ " ತನ್ನದೇ ದುಪಟ್ಟವನ್ನು ಒಮ್ಮೆ ಗಟ್ಟಿಯಾಗಿ ಸುಧಾ ಬಿಗಿದಿದ್ದಿಳು.ಮತ್ತೊಮ್ಮೆ ಸುಧಾಳ ಮಾತು ನೆನಪಾಗಿತ್ತು.ಈಗಂತೂ ತಡೆಯಲಾಗಲಿಲ್ಲ.ತೆಳ್ಳಗೆ ಹನಿಗಳು ಕಣ್ಣಲ್ಲಿ ಸಾಲುಗಟ್ಟಿದ್ದವು.ಮನಸು ಯಾವುದೋ ಕಳೆದು ಹೋದ ಅನನ್ಯ ವಸ್ತುವಿಗೆ ವಿಲ ವಿಲ ಒದ್ದಾಡಿತ್ತು.
ಹಾಲು ಉಕ್ಕೇರಿ ಬಂತು.ಅದಕ್ಕೂಂದಿಷ್ಟು ಸಕ್ಕರೆ ಹಾಕಿ ಚಿಕ್ಕದೊಂದು ಕಪ್ ಗೆ ಸುರಿದ.ಆ ಹೊತ್ತಿಗಾಗಲೇ ಗಡಿಯಾರದಲ್ಲಿ ಗಂಟೆ ಒಂದಾಗಿತ್ತು.ರಾಜ್ ಕಪೂರ್ ಹಿಟ್ಸ ನ ಗೀತೆಗಳ ಒಂದು ಸಿಡಿ ಯನ್ನು ಸಿಸ್ಟಮ್ ಗೆ ಸಿಕ್ಕಿಸಿ ಮೆಲ್ಲಗೆ ವಾಲ್ಯೂಮ್ ಇಟ್ಟನು.
ತಲೆ ನೋವು ಮತ್ತು ಸಂಕಟಗಳೆರೆಡು ವಿಪರೀತವಾಗಿತ್ತು.ಕೈಲಿದ್ದ ಹಾಲಿನ ಕಪ್ ನ್ನು ತುಟಿಗೆ ಸೇರಿಸಿ ಒಂದು ಗುಟುಕನ್ನು ಹೀರುವಷ್ಟರಲ್ಲು ಮನಸ್ಸು ಎಲ್ಲೊ ತಿರುಗುತಿತ್ತು.ಆದರೂ ಹೊಟ್ಟೆ ತಣ್ಣಾಗಗಿತ್ತು. ಆದರೆ ಮನಸ್ಸು ಅಶಾಂತಿಯಿಂದಲೇ ನಲುಗಿತ್ತು.
"..ಮೈ ಆವಾರ ಹೂಂ...ಆವಾರ ಹೂಂ..." ಮುಖೆಶ್ ಜಿ ಯ ಮಧುರ ಕಂಠಸಿರಿ ಯಿಂದ ಹಾಡು ಹರಿಯ ತೊಡಗಿತ್ತು.ಹಾಗೆ ಗುಟುಕಿನ ಮೇಲೆ ಗುಟುಕು ಹಾಲು ಕುಡಿಯುವ ಹೊತ್ತಿಗೆ ಮನಸ್ಸು ಮಾತಾಡ ತೊಡಗಿತು.
" ಸುಧಾಳನ್ನು ಪ್ರೀತಿ ಮಾಡಿದ್ದು ಏಕೆ?"
"ಸುಧಾಳನ್ನು ಬಿಟ್ಟಿದ್ದು ಏಕೆ?"
"ಸಂಗಿತಾಳನ್ನು ಮದುವೆಯಾಗಿದಿನಿ ಇನ್ನಾದರೂ ಸುಧಾ ಳ ನೆನಪು ಬರಬಾರದು"
ಇವೆಲ್ಲವೂ ಕೇವಲ ಅವನಿಗೆ ಪ್ರೆಶ್ನೆಗಳಾಗಿರಲಿಲ್ಲ.ಅವೆಲ್ಲವೂ ಬದುಕಿನ ಪ್ರಮುಖ ನಿರ್ಧಾರಗಳ ಮೂಲ ವನ್ನೇ ಕೆದಕಿತ್ತು.
ಸುಮಾರು ಹತ್ತು ವರ್ಷದ ಹಿಂದೆ ಸಂಗೀತಾಳನ್ನು ಮದುವೆ ಯದಾಗ ಸಂಭ್ರಮ ವೆನೋ ಇತ್ತು.ಆದರೆ ಎಲ್ಲೂ ಓಂದು ಕಡೆ ಎಲ್ಲವನ್ನು ಸಂಗೀತಾಳ ಮುಂದೆ ಹೇಳಿಕೊಳ್ಳಬೇಕೆನ್ನಿಸುತ್ತಿತ್ತು. ಆದರೆ ಕಾಲ ಕೂಡಿ ಬರಲಿಲ್ಲ.ಈಗ ಅವರಿಬ್ಬರಿಗೂ ಆರು ವರ್ಷದ ಮಗು 'ಕೃಷ್ಣ'.ಸಂಸಾರ ಚೆಂದಾಗಿದೆ.ಸಂಗಿತಾಳು ಅಷ್ಟೆ.ಹೀಗೆ ಯಾವತ್ತಾದರೂ ಒಂಟಿಯಾಗಿದ್ದಾಗ ಹಳೆಯ ನೆನಪುಗಳು ಅವನ್ನು ಕೊರೆಯಲಿಕ್ಕೆ ಶುರು ಮಾಡುತ್ತಿದ್ದವು.
ಕಪ್ ನಲ್ಲಿದ್ದ ಹಾಲು ಮುಗಿತಾ ಬಂತು.ಆದ್ರೆ ಸಂಕಟ ಹಾಗೆ ಇತ್ತು.ನಿಲಕಂಠ ನಿಗೆ ಅಮ್ಮ ಹೇಳುತಿದ್ದ ಮಾತು ನೆನಪಿಗೆ ಬಂತು " ಒಂದು ಕಪ್ ಹಾಲು ಕುಡಿ ಸಂಕಟವಿದ್ದರೆ,ಕಡಿಮೆ ಯಾಗುತ್ತೆ...".ಹಾಲೂ ಕುಡಿದಾಗಿತ್ತು,ಆದ್ರೆ ಸಂಕಟ ಹಾಗೇ ಇತ್ತು.

Wednesday, October 1, 2008

...ಯಕ್ಷಗಾನ

...ಮುಂದಿನ ಕೆಲವು ದಿನಗಳ ನಂತರ ನಮ್ಮೆನೆಯವರೆಲ್ಲಾ ಸೇರಿ ಕೊಂಡು
ಇಡುಗುಂಜಿ ಸಿದ್ದಿ ವಿನಾಯಕ ನ ದರ್ಶನಕ್ಕೆ ಹೋದೆವು.ನನ್ನ ಅಕ್ಷರ ಸಹ ಹಿಡಿದಿಟ್ಟಿದ್ದು ಅಲ್ಲಿನ ಹಸಿರು,ಆ ಬೆಟ್ಟ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಊರು ಎನ್ನುವ ಹೆಸರಿದ್ದರೂ ಕೇವಲ ನಾಲ್ಕಾರು ಮನೆಗಳ ಕಾಡಿನ ಜೀವನ.ನನಗೆ ಆಗಲೇ ಅಲ್ಲಿಯ ಜೀವನ ಅಪ್ಯಾಯಮಾನ ವಾಗಿ ಹೋಯಿತು.ಕಣ್ಣು ತುಂಬಿ ಕೊಂಡು ಬಂದೆ.ಆದರೆ ನನ್ನ ಮತ್ತು ನನ್ನನ್ನೇ ಆ ಪರಿಸರ ಮತ್ತು ಎಲ್ಲಕ್ಕಿಂತ ಮಿಗಿಲಾಗಿ 'ಯಕ್ಷಗಾನ' ಆವರಿಸಿ ಬಿಟ್ಟಿತ್ತು.ನನಗೆ ಆ ಗುಂಗಿ ನಿಂದ ಹೊರಬರಲು ಆಗಲೆ ಇಲ್ಲ.ಇದಲ್ಲೆವನ್ನು ತಣಿಸಿಲೆಂದೆ ಏನೂ ಗೊತ್ತಿಲ್ಲ 'ಚಂದನ' ವಾಹಿನಿ ಯಲ್ಲಿ ಪ್ರಸಾರ ವಗುತ್ತ ಇದ್ದ 'ಯಕ್ಷಗಾನ' ತಪ್ಪದೆ ನೊಡುತ್ತಾ ಇದ್ದೆ.
ನಂತರ ದ ದಿನಗಳಲ್ಲಿ ನನಗೆ ಕೆರೆಮನೆ ಶಂಭು ಹೆಗಡೆ ಯವರ ವಕ್ತಿತ್ವ ದ ಪರಿಚಯ ವಾಯಿತು.ಅವರನ್ನೆ ಮತ್ತು ಸಂಪೂರ್ಣವಾಗಿ 'ಯಕ್ಷಗಾನ' ಕ್ಕೆ ಮೀಸಲಿಟ್ಟ ಅವರ ಕುಟುಂಬ ನನಗೆ ಈ ಜಾಗತೀಕರಣ ದ ಬೆನ್ನಲ್ಲಿ ಬೆರಗಾಗಿತ್ತು.
ಹೀಗೆ ನನಗೆ ಗೊತ್ತಿಲ್ಲದೆ 'ಯಕ್ಷಗಾನ' ನನ್ನನ್ನ ಆವರಿಸಿ ಬಿಟ್ಟಿದೆ.