Monday, June 27, 2011

...ಜಾತ್ರೆಯಲ್ಲಿ ಊರ ಶಾಸ್ತ್ರಿಗಳು ಮುಂದೆ ನಿಂತು ಮಾಡಬೇಕಾದ ವಿಧಿ ವಿಧಾನಗಳನ್ನೆಲ್ಲಾ ಶಾಸ್ತ್ರೊಕ್ತವಾಗಿ ನಡೆಸಿ ಕೊಟ್ಟರು.ಆಂಜನೇಯ ಸ್ವಾಮಿ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ದೇವಸ್ಥಾನದ ಮುಖ್ಯ ಅರ್ಚಕರು ರಥಕ್ಕೆ ಓರೆಯಾಗಿ ಆನಿಸಿಟ್ಟಿದ್ದ ಏಣಿಯ ಮೆಟ್ಟಿಲನ್ನು ತುಂಬಾ ಜಾಗೂರುಕತೆಯಿಂದ ಏರಲು ಪ್ರಾರಂಭಿಸಿದರು.ಒಂದು ಏಣಿಯ ಮೆಟ್ಟಿಲನ್ನು ಏರಿದಾಗಲೂ ಜನ ಸಮೂಹದ ಭಕ್ತಿ ಪರಾಕಷ್ಟೆ ಮುಗಿಲು ಮುಟ್ಟುತಿತ್ತು.ಕೈ ಮುಗಿದು "...ಆಂಜನೇಯ ವರದ ಗೋವಿಂದ ಗೋವಿಂದ...ಭಕ್ತಾಭಿಮಾನಿ ಗೋವಿಂದ...ಗೋವಿಂದ....."- ಅಂತ ಭಕ್ತಿಯಿಂದ ಹೇಳುತಿದ್ದರು.ಮುಖ್ಯ ಅರ್ಚಕರು ರಥದ ಮೇಲೆ ಕುಳಿತು - ತಲೆಯ ಮೇಲೆ ಹೊತ್ತ ಉತ್ಸವ ಮೂರ್ತಿಯನ್ನು ನಿಧಾನವಾಗಿ ಪೀಠದಮೇಲೆ ಕುಳ್ಳಿರಿಸಿ ಬಾಳೆ ನಾರಿನಿಂದ ಮೆದುವಾಗಿ ಮೂರ್ತಿಗೂ ಮತ್ತು ಹಿಂದೆ ಇದ್ದ ಕಟ್ಟಿಗೆಯ ಹಲಗೆಗೂ ಬಿಗಿದು.ಮಂಗಳಾರತಿ ಮಾಡಿ ರಥದ ಮೇಲಿಂದಲೇ ರಥವನ್ನು ನಡೆಸಲು ಅನುಮತಿ ಕೊಟ್ಟರು.ದೊಡ್ಡ ಗಾತ್ರ ದ ಹಗ್ಗ ಗಳನ್ನು ಹಿಡಿದ ಜನ ಸಮೂಹ -"...ಆಂಜನೇಯ ವರದ ಗೋವಿಂದ ಗೋವಿಂದ...ಭಕ್ತಾಭಿಮಾನಿ ಗೋವಿಂದ...ಗೋವಿಂದ....." -ಉದ್ಗಾರಿಸುತ್ತಲೇ ರಥವನ್ನು ವೀರಾವೇಷದಿಂದ ಎಳೆದು ಪಾದಘಟ್ಟದ ಬಳಿ ನಿಲ್ಲಿಸಿದರು. ಇಡೀ ಗ್ರಾಮಸ್ಥರು ಜಾತ್ರೆಯ ಸಂಭ್ರಮದಲ್ಲಿದ್ದರೆ ಸುಧಾ ಮತ್ತು ಶಾಂತಕುಮಾರ್ ಜಮಿನ್ದಾರ್ ನ ಮಡದಿ ರೇಖಾ ಶಾಂತಕುಮಾರ್ ನ ಅನುಪಸ್ಥಿತಿಯನ್ನು ವಿಪರೀತ ವಾಗಿ ಅನುಭವಿಸುತಿದ್ದರು.ರೇಖಾ " ನಿಮ್ಮಪ್ಪ ಎಲ್ಲಿದ್ದಾರೆ ನೋಡು..." ಅಂತ ಕಣ್ಣಲ್ಲೇ ಕೇಳಿದ ಪ್ರೆಶ್ನೆಗೆ ,"..ಇಲ್ಲಮ್ಮ ಮೆಸೆಜ್ ಮಾಡಿದಿನಿ..ಕಾಲು ರೀಸಿವ್ ಮಾಡ್ತ ಇಲ್ಲ..." ಅಂತ ಮೊಬೈಲ್ ತೋರಿಸಿ ಕೈ ಅಳ್ಲಾಡಿಸಿ ಮಾತಾಡದೆ ಉತ್ತರಿಸಿದ್ದಳು. ಇಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತ್ತಿದ್ದರೆ , ಅಲ್ಲಿ ನೀಲಗಿರಿ ತೋಪಿನಲ್ಲಿ ವಿಪರೀತ ಒಂಟಿತನ ಅನುಭವಿಸುತ್ತಲೇ ಶಾಂತಕುಮಾರ್ ಮರಗಳ ನೆರಳಿನಲ್ಲಿ ಅಂಗಾತ ಮಲಗಿದ್ದ.ಬೀಸಿದ ಗಾಳಿಗೆ ಮರದ ಲೆಕ್ಕವಿಲದಷ್ಟು ಮರದ ಎಲೆಗಳು ಪಟ ಪಟನೇ ಉದಿರಿದವು.ಕೂಗಳತೆಯ ದೂರದಲ್ಲಿ ತುಂಗಭದ್ರ ತಣ್ಣಗೆ ಝುಳು ಝುಳು ಶಬ್ದದಿಂದ ಹರಿಯುತಿತ್ತು.ಶಾಂತಕುಮಾರನಿಗೆ ನದಿಯ ಅಲೆಗಳಂತೆ ನೆನಪಿನ ಪುಟಗಳು ಒಂದೊಂದಾಗಿ ತೆರೆಯಲು ಪ್ರಾರಂಭಿಸಿದವು.
bhaaga - (1) adhayaa (2)ಸುರಷ ಟೆಕ್ನಾಲಿಜಿಸ್ ಪ್ರೈ. ಲಿ.
ಹತ್ತು ವರ್ಷದ ಕೆಳಗಿನ ಮಾತು.
ದೇಶದ ನಂಬರ್ ಒನ್ ಐಟಿ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ನೂರಾರು ಐಟಿ ಕಂಪನಿಗಳು ಕೆಲಸ ಮಾಡುವ ಸರ್ಜಾಪುರ ರಸ್ತೆಯಲ್ಲಿರುವ ಒಂದು ಹೈಟೆಕ್ ಐಟಿ ಕಂಪನಿ ಸುರಷ ಟೆಕ್ನಾಲಿಜಿಸ್ ಪ್ರೈ. ಲಿ.ಈ ಕಂಪನಿಯ ಶಾಖೆಗಳು ಪ್ರಪಂಚದ ವಿವಿಧ ದೇಶಗಳಲ್ಲಿ ಚದುರಿಹೋಗಿದ್ದವು.ಆಮೇರಿಕ,ಇಂಗ್ಲೆಂಡ್,ಯುರೋಪ್ ಮತ್ತು ಗಲ್ಫ ನ ಕೆಲವು ಭಾಗಗಳಲ್ಲಿ.ಈ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಮುಕಾಅ) ಯೇ ನಮ್ಮ ಶಾಂತಕುಮಾರ್ ಜಮಿನ್ದಾರ್.

Tuesday, June 7, 2011

ಹನುಮಪ್ಪ ನ ತೇರು! (ಪ್ರಬಂಧ)

ಭಾಗ - (೨)

ಮತ್ತೊಮ್ಮೆ ಎಲ್ಲರಿಗೂ ಹಳೆಯ ಹರೆಕೆಗಳು,ಪೂರ್ತಿ ಆಗದ ಬಯಕೆಗಳು,ಭಗ್ನ ಗೊಂಡ ಕನಸುಗಳು,ಎಲ್ಲವನ್ನೂ ಪಡೆದುಕೊಂಡದಕ್ಕೆ ಉಪಕಾರ ಸ್ಮರಣೆ,ಹೀಗೆ ಏನೇನೊ ನೆನಪಾದವು.ಜಾತ್ರೆ ಬಂತು ಬಂತು ಅನ್ನುತ್ತಲೇ ಆ ಎಂಟು ಗ್ರಾಮಗಳ ತಮ್ಮ ತಮ್ಮ ನೆಂಟರ ಮನೆಗೆ,ಪರಿಚಯಸ್ಥರ ಮನೆಗೆ ಜನ ಸಮುದಾಯ ಬಂದಿಳಿದರು.ಕಳೆದ ಬಾರಿ ಒಂಟಿಯಾಗಿ ಬಂದಿದ್ದವರು ಈ ಬಾರಿ ಜೊತೆಯಾಗಿ ಬಂದಿದ್ದರು.ಮದುವೆ ಯಾಗಿ ಮಕ್ಕಳಿಲ್ಲದೆ ಬಂದವರು ಈ ಬಾರಿ ಕಂಕುಳಲ್ಲಿ ಮಗುವನ್ನು ಹೊತ್ತು ತಂದಿದ್ದರು.ಮತ್ತೆ ಎಂಟು ಗ್ರಾಮ ಗಳ ತುಂಬಾ ಜನವೊ ಜನ.ತುಂಗ-ಭದ್ರ ನದಿಯ ಆ ಕಡೆಯಿಂದ ಈ ಕಡೆಗೆ,ಈ ಕಡೆಯಿಂದ ಆ ಕಡೆಗೆ ಹುಟ್ಟು ಹಾಕುವ ದೋಣಿಯಲ್ಲಿ ಹೊಗುವುದು,ಬರುವುದು ಸಮಾನ್ಯವಾಗಿತ್ತು.ಆಂಜನೇಯ ಸ್ವಾಮಿ ಉತ್ಸವದ ಕಾರ್ಯಕ್ರಮದ ಮೊದಲ ದಿನದ ಆಕರ್ಷಣೆ ತೆಪ್ಪೊತ್ಸವವಾಗಿತ್ತು.ಆಂಜನೇಯ ಸ್ವಮಿಯ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕಿರಿಸಿದ ತೆಪ್ಪದಲ್ಲಿ ಕುಳ್ಳಿರಿಸುತಿದ್ದರು.ಅಲ್ಲಿ ಸೇರಿದ ಭಕ್ತಾದಿಗಳು ಮುಗಿಲು ಮುಟ್ಟುವಂತೆ ಭಕ್ತಿ ಪರಾಕಷ್ಟೆ ಯಿಂದ "ಆಂಜನೇಯ ಸ್ವಾಮಿ ಗೋವಿಂದ,,,,,,,,,,,,,,,,,,,,,,,," ಕೂಗಿದರು.ಉತ್ಸವ ಮೂರ್ತಿ ಯೊಂದಿಗೆ ದೇವಸ್ಥಾನದ ಮುಖ್ಯ ಅರ್ಚಕರು ಮತ್ತು ತೆಪ್ಪ ನೆಡೆಸುವ ಅಷ್ಟೆ ತೆಪ್ಪದಲ್ಲಿ ಇರುತಿದ್ದದ್ದು.ತೆಪ್ಪವನ್ನು ನದಿಯಲ್ಲಿ ಸ್ವಲ್ಪ ದೂರ ತೇಲಿಸದ ಮೇಲೆ ದೇವಸ್ಥಾನದ ಮುಖ್ಯ ಅರ್ಚಕರು ಉತ್ಸವ ಮೂರ್ತಿಯಲ್ಲಿ ತಲೆಯ ಮೇಲೆ ಹೊತ್ತು ನಿಧಾನವಾಗಿ ತೆಪ್ಪದಿಂದ ಇಳಿದು ಯಾವುದೊ ಶ್ಲೋಕವನ್ನು ಪಠಿಸುತ್ತ ಬುಡಕ್ಕನೆ ಮೂರು ಬಾರಿ ಮುಳಿಗಿ ಮೇಲೆ ಎದ್ದ ಮೇಲೆಯೇ,ನದಿಯ ದಡದಲ್ಲಿದ್ದ ಜನ ಸಮೂಹ ಧಬಧಬನೆ ನದಿಗೆ ಧುಮುಕುತಿದ್ದರು.ಆ ಸಂದರ್ಭ ವಾಸ್ತವದಲ್ಲಿ ದೇವರು ಸ್ನಾನ ಮಾಡಿದ ನೀರು ಆ ನದಿಯಲ್ಲಿ ಮನುಷ್ಯರು ತಮ್ಮ ಬಯಕೆ ಈಡೆರಿಕೆಗೆ ಮನದಲ್ಲಿ ಬಯಕೆಗಳನ್ನು ಅಂದು ಕೊಂಡು ಸ್ನಾನ ಮಾಡಿದರೆ ಅವರ ಬಯಕೆಗಳು ಈಡೆರುವುದು ಅಂತ ಒಂದು ಪ್ರತೀತಿ.

ಸ್ನಾನದ ನಂತರ ಪ್ರತಿಯೊಬ್ಬರ ಮನದಲ್ಲೂ ಏನೊ ಒಂದಿಲ್ಲ ಒಂದು ಸಂಭ್ರಮ.ಕೆಲವರಿಗೆ ತಮ್ಮ ಬಯಕೆಗಳು ಈಡೆರುವ ಬಗ್ಗೆ ಒಂದು ತೆರೆನಾದ ಸೂಚನೆ ಸಿಕ್ಕಂತೆ ಮಾತಾಡುತಿದ್ದರು.ಇದೆಲ್ಲವೂ ಅವರವರ ಭಾವಕ್ಕೆ ಮತ್ತು ಭಕ್ತಿಗೆ ತಕ್ಕಂತೆ ಇರುತಿತ್ತು.ಮತ್ತೆ ಜನತೆಯ ಗುಜು ಗುಜು,ಗದ್ದಲ,ಮಾತು,ಹರ್‍ಅಟೆ....ಜಗಳ,ದೂರು,ಛಾಡಿ ನಡೆದಿರುತಿತ್ತು.ಯಾರೊ ಅಪರೂಪವಾಗಿ ಬಹಳ ದಿನಗಳ ನಂತರ ಸಿಕ್ಕ ಸ್ನೇಹಿತನನ್ನು ಕಂಡು ತುಂಬ ಆಶ್ಚರ್ಯ ಮತ್ತು ಸಂತೋಷದಿಂದ ಮಾತಾಡಿಸಿದರೆ,ಇನ್ಯಾರೊ ಗ್ರಾಮದಲ್ಲಿ ಹದಿನೈದು ವರ್ಷದ ಹಿಂದೆ ನಡೆದ ಕ್ಷುಲ್ಲಕ ವಿಷಯದ ಮರಾ ಮರಾ ನೆನೆದು ಮರುಗುತಿದ್ದರು.ಇನ್ಯಾರೋ ಅದೇ ವಿಷಯವನ್ನು ನೆನೆದು ನಖಶಿಖಾಂತ ಉರಿದು ಬೀಳುತಿದ್ದರು.ಹಾಗೂ ಹೀಗೂ ಅನ್ನುತ್ತಲೇ ಜಾತ್ರೆಯ ಮೊದಲ ದಿನ ಮುಗಿದು ಹೋಗಿರುತಿತ್ತು.

*********************************

ಮತ್ತೆ ಮರುದಿನ ರಥೋತ್ಸವದ ಸಡಗರ.


ಬೆಳಿಗ್ಗೆಯಿಂದಲೇ ಕೆಲವರಿಗೆ ಸಣ್ಣಗೆ ಶುರುವಾಗಿತ್ತು ಮತ್ತೆ ಯಾಂತ್ರಿಕ ಬದುಕಿನ ಯಾತನೆಗಳು.ಅರ್ಧ ಮನಸ್ಸು ದೇವಸ್ಥಾನದಲ್ಲಿ ಇನ್ನರ್ಧ ತಮ್ಮ ತಮ್ಮ ಆತಂಕಗಳಲ್ಲಿ.ರಥಕ್ಕೆ ಬಣ್ಣ ಬಣ್ಣದ ಬಾವುಟಗಳ ಜೊತೆಗೆ ತೆಂಗಿನ ಗೆರೆ ಮಾವಿನ ಸೊಪ್ಪು ಕಟ್ಟಲಾಗಿತ್ತು.ರಥವನ್ನು ಸಿಂಗರಿಸುವುದಕ್ಕೂ ಮೊದಲು ವರ್ಷಗಳಿಂದ ಮಡುಗಟ್ಟಿದ್ದ ಧೂಳನ್ನು ಕೊಡವಿ ಇಪ್ಪತ್ತು ಅಡಿ ಎತ್ತರದ ರಥಕ್ಕೆ ಮೇಲಿನಿಂದ ಹತ್ತು ಹನ್ನೆರೆಡು ಲೀಟರ್ ನಷ್ಟು ಕಡಲೆ ಎಣ್ಣೆ ಸುರಿದು ಮಜ್ಜನ ಮಾಡಿಸಿ,ಸ್ವಚ್ಚವಾಗಿಸಿ ಅರಿಶಿನ,ಹುರಿಮಂಜು ಮತ್ತು ಸುಣ್ಣ ಬಳಿದು ರಥೊತ್ಸವಕ್ಕೆ ಸಿದ್ಧಮಾಡಿದ್ದರು.ನಿಧಾನವಾಗಿ ಜನ ಸಂದಣಿ ರಥೊತ್ಸವ ನಡೆಯುವ ಸ್ಥಳಕ್ಕೆ ಜಮಾಯಿಸಲು ಶುರು ಮಾಡಿದ್ದರು.ಹೆಂಗಸರು ಬಣ್ಣ ಬಣ್ಣ ದ ರೇಶ್ಮೆ ಸೀರೆಗಳನ್ನು ಉಟ್ಟು ತಲೆತುಂಬಾ ಹೂವು ಮುಡಿದು ಸಿಧ್ಧರಾಗಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಗಂಡಸರು ಒಂದು ಪಂಚೆ ಮೇಲೆ ಒಂದು ಶಲ್ಯ ಹೊದ್ದು ಸೀದಾ ಸಾದಾ ಸಿದ್ಧರಾಗಿ ರಥೋತ್ಸವಕ್ಕೆ ಬಂದಿದ್ದರು.


ದೇವಸ್ಥಾನದಲ್ಲಿ ಮುಗಿಯಬೇಕಿದ್ದ ಸಂಪ್ರದಾಯಗಳು ಇನ್ನು ಮುಗಿದಿರಲಿಲ್ಲ.ಗಂಟೆ,ಜಾಗಟೆ,ನಗಾರಿ ಮತ್ತು ತಾಳ ಒಟ್ಟಿಗೆ ಬಾರಿಸುವ ಯಂತ್ರ ದ ಸದ್ದು ಮಾರು ದೂರ ಇದ್ದ ರಥದ ವರೆಗೂ ಕೇಳಿಸುತಿತ್ತು.ಎಲ್ಲ ವಿಧಿ ವಿಧಾನಗಳು ಮುಗಿದ ಮೇಲೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಮಾಡಿದರು ಮುಖ್ಯ ಅರ್ಚಕರು.ಅದು ರಥೋತ್ಸವದ ಕಾರ್ಯಕ್ರಮಗಳಿ ಚಾಲನೆ ನೀಡುವ ಅಂಕಿತವಾಗಿತ್ತು.ಭಕ್ತಾಭಿಮಾನಿಗಳು ಆಂಜನೇಯ ಸ್ವಾಮಿಯನ್ನು ಪಲ್ಲಕ್ಕಿ ಯಲ್ಲಿ ಹೊತ್ತು ತರುವಾಗ ಮುಗಿಲು ಮುಟ್ಟುವಂತೆ "...ಭಕ್ತಾಭಿಮಾನಿ ಗೋವಿಂದ..ಗೋವಿಂದ...ಆಂಜನೇಯ ವರದ ಗೋವಿಂದ.....ಗೋವಿಂದ.....ಭಕ್ತವತ್ಸಲ ಗೋವಿಂದ...ಗೋವಿಂದ..." ಅಂತ ಕೊಂಡಾಡಿದ್ದರು.


ಪಲ್ಲಕ್ಕಿ ರಥದ ಹತ್ತಿರಕ್ಕೆ ಬರುವುದಕ್ಕೆ ಇನ್ನು ಸಮಯ ವಿತ್ತು.ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವ ವನ್ನು ತಮ್ಮ ವ್ಯಾಪಾರಿ ಬುದ್ಧಿ ಉಪಯೋಗಿಸಿ ಕರ್ಪೂರವನ್ನೊ,ಕಲ್ಲು ಸಕ್ಕರೆಯನ್ನೊ, ಬಾಳೆ ಹಣ್ಣನ್ನೊ,ಉತ್ತತ್ತಿಯನ್ನೊ - ಒಟ್ಟಾಗಿ ಏನಾದರೊಂದು ಮಾರುವುದಕ್ಕೆ ಸಿದ್ಧತೆ ಮಾಡಿಕೊಂಡರು.ಬಿದಿರಿನ ಬುಟ್ಟಿಗಳಲ್ಲಿ,ಇಲ್ಲವೇ ತಳ್ಳು ಗಾಡಿಗಳಲ್ಲಿ - ಒಂದಿಲ್ಲ ಒಂದು ಸಾಧನ ಉಪಯೋಗಿಸಿ ವ್ಯಾಪಾರಕ್ಕೆ ಮುಂದಾದರು.ದೇವರನ್ನು ಹೊತ್ತ ಪಲ್ಲಕ್ಕಿ ರಥದ ಹತ್ತಿರಕ್ಕೆ ಬಂದಂತೆ ಜನ ಸೇರುವುದು ಹೆಚ್ಚಾಯಿತು.ರಥದ ಎಡಕ್ಕೆ,ಬಲಕ್ಕೆ,ಮುಂದೆ,ಹಿಂದೆ - ರಥವನ್ನು ಜನರು ಸುತ್ತುವರಿದರು.ಕೆಲವರ ಕೈಯಲ್ಲಿ ತೆಂಗಿನ ಕಾಯಿ,ಇನ್ನು ಕೆಲವರ ಕೈಯಲ್ಲಿ ಸಣ್ಣ ಬಾಳೆ ಹಣ್ಣು,ಉತ್ತತ್ತಿ.ಪಲ್ಲಕ್ಕಿ ಹತ್ತಿರಕ್ಕೆ ಬಂದ ಮೇಲೆ ಸೇರಿದ ಭಕ್ತ ಸಮೂಹವೆಲ್ಲ "...ಆಂಜನೇಯ ವರದ ಗೋವಿಂದ.....ಗೋವಿಂದ....." ಅಂತ ಭಕ್ತಿಯಿಂದ ಕೂಗಿದ್ದರು.ಎಂಟು ಗ್ರಾಮದ ಮುಖ್ಯಸ್ಥರು ಮತ್ತು "ಆಂಜನೇಯ ಸ್ವಾಮಿ ಸೇವಾ ಸಮಿತಿ" ಸದಸ್ಯರೆಲ್ಲರೂ ರಥದ ಮುಂದೆ ಶ್ವೇತ ವಸ್ತ್ರಧಾರಿಗಳಾಗಿ ನಿಂತಿದ್ದರು.

ದೇವಸ್ಥಾನದ ಮುಖ್ಯ ಅರ್ಚಕರ ಅಣತಿಯಂತೆ ರಥಕ್ಕೆ ಒಂದೊಂದೆ ವಿಧಿ ವಿಧಾನಗಳನ್ನು ಒಬ್ಬಬ್ಬರಾಗಿ ಮಾಡಿಕೊಂಡು ಬಂದರು.ಎಲ್ಲಿಯೂ ಸ್ವಪ್ರತಿಷ್ಟೆ ಕಾಣಿಸುತ್ತಿರಲಿಲ್ಲ ಎಲ್ಲರಲ್ಲೂ ದೇವರು..ಅಂಜನೇಯ ಸ್ವಾಮಿ ..ಮತ್ತು ಅವನ ಅನುಗ್ರಹ ಮಾತ್ರವೇ ಕಾಣುತಿತ್ತು.ಮೆಲ್ಲಗೆ ಪಲ್ಲಕ್ಕಿಯಿಂದ ಉಳಿಸಿದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮುಖ್ಯ ಅರ್ಚಕರು ರಥಕ್ಕೆ ತಲೆಯ ಮೇಲೆ ಹೊತ್ತು ಕೊಂಡರು.ರಥಕ್ಕೆ ನಿಲ್ಲಿಸಲಾಗಿದ್ದ ಏಣಿಯನ್ನು ಒಂದು ಕೈಯಲಿ ಹಿಡಿದು ಮತ್ತೊಂದು ಕೈಯಲ್ಲಿ ತಲೆಯ ಮೇಲೆ ಇರುವ ಆಂಜನೇಯ ಸ್ವಾಮಿಯನ್ನು ಹಿಡಿದು ಏಣಿಯ ಒಂದೊಂದೆ ಮೆಟ್ಟಿಲನ್ನು ಏರಿದರು.ಪ್ರತಿ ಮೆಟ್ಟಿಲು ಏರಿದಾಗಲೊಮ್ಮೆ -"...ಆಂಜನೇಯ ವರದ ಗೋವಿಂದ....ಗೋವಿಂದ..." ಅಂತ ಜನ ಸಮೂಹ ಮಾರ್ಧನಿಸುತಿತ್ತು.ಅರ್ಚಕರು ಮೇಲೆ ತಲುಪಿ ನೆರೆದಿದ್ದ ಸಮೂಹಕ್ಕ ಕೇಳಿಸುವಂತ ಗಟಿಯಾಗಿ ಗಂಟೆ ಬಾರಿಸುತ್ತಾ ಆಂಜನೇಯ ಸ್ವಾಮಿಗೆ ಮಂಗಳಾರತಿ ಮಾಡಿ ಮಾಡಿದರು.ನಂತರ ರಥದ ಒಳಗೆ ಕಟ್ಟಲ್ಪಟ್ಟಿದ್ದ್ಕ ದಪ್ಪ ಆಕಾರ ದ ಹಗ್ಗಗಳು ಸಮಿತಿಯ ಸದಸ್ಯರಲ್ಲಿ ಒಬ್ಬರು ಎಳೆದು ಕೆಳಗೆ ತಂದು ರಥದ ಮುಂದೆ ನಿಂತಿದ್ದ ಗಂಡಸರ ಹತ್ತಿರಕ್ಕೆ ಬೀಸಿದರು.ಹಗ್ಗ ಕೈಗೆ ಬರುತ್ತಲೇ ವೀರಾವೇಷದಿಂದ ರಥವನ್ನು ಎಳೆಯಲು ಮುಂದಾದರು.ರಥ ನಾಲ್ಕು ಹೆಜೆ ಕದಲಿತೊ ಇಲ್ಲವೂ ಆಗಲೇ ಉರ್‍ಇಗೆ ವಾಪಸ್ಸಾಗುವ ದುಗುಡ ಜನತೆಯಲ್ಲಿ ಮಡುಗಟ್ಟಿತ್ತು.

Monday, June 6, 2011

ಹನುಮಪ್ಪ ನ ತೇರು! (ಪ್ರಬಂಧ)

ಭಾಗ - (೧)

ಇನ್ನು ಆ ಕಡೆ ರಥೋತ್ಸವ ಸಂಪೂರ್ಣವಾಗಿ ಮುಗಿದಿರಲಿಲ್ಲ.ರಥವನ್ನು ಒಂದು ಘಟ್ಟದ ವರೆಗು ಎಳೆದು ನಂತರ ಮಂಗಳಾರತಿ ಮಾಡಿ ದ ಮೇಲೆಯೇ ರಥೋತ್ಸವ ಮುಗಿದಂತೆ.ರಥವನ್ನು ಕೇವಲ ನಾಲ್ಕು ಹೆಜ್ಜೆ ಎಳೆದಾಗಿತ್ತು ಎನ್ನಿವಷ್ಟರಲ್ಲೆ ಅಲ್ಲಿದ್ದ ಭಕ್ತ ವೃಂದದ ಕೆಲವರು - "ಮುಗಿತಲ್ಲಪ್ಪ ಹನುಮಪ್ಪನ ತೇರು...ಮತ್ತೆ ಮುಂದಿನ ವರ್ಷಕ್ಕೆ ರೆಡಿ ಯಾಗ್ಬೇಕು...?" ಅಂತ ಗೊಣಗುತ್ತ ನಡೆದರು.ಅಲ್ಲಿ ನೆರೆದಿದ್ದವರಲ್ಲಿ ಬಹುತೇಕರು ರಥಕ್ಕೆ ಎಸೆಯಲು ಇಟ್ಟುಕೊಂಡಿದ್ದ ಬಾಳಹಣ್ಣು ಮತ್ತು ಉತ್ತತ್ತಿಗಳನ್ನು ತಮ್ಮ ಹಾಳು ಹರಟೆಯಲ್ಲಿ ಎಸೆಯುವುದನ್ನೇ ಮರೆತು ಬಿಟ್ಟಿದ್ದರು.ಇನ್ನೇನು ರಥೋತ್ಸವ ನಡೆಯುವ ಸ್ಥಳ ಬಿಟ್ಟು ಹೊರಡ ಬೇಕು ಎನ್ನುವ ಹಂತದಲ್ಲಿ ಕೈ ಯಲ್ಲಿ ಹಾಗೆ ಇದ್ದ ಬಾಳೆ ಹಣ್ಣು ಮತ್ತು ಉತ್ತತ್ತಿ ನೆನೆಪಾಗಿತ್ತು.ಅಷ್ಟರಲ್ಲಿ ಮಂಗಳಾರತಿ ಮುಗಿಸಿ ಹನುಮಪ್ಪ ನ ಉತ್ಸವ ಮೂರ್ತಿಯನ್ನು ರಥ ದಿಂದ ಕೆಳಗೆ ಇಳಿಸಿಯೂ ಆಗಿತ್ತು.ಇಷ್ಟೆಲ್ಲಾ ಆದ ಮೇಲೆಯೂ ರಥಕ್ಕೆ ಬಾಳೆ ಹಣ್ಣು ಮತ್ತು ಉತ್ತತ್ತಿ ಎಸೆದು ಕೈ ಮುಗಿದು,ಗಲ್ಲ ಗಲ್ಲ ಬಡಿದು ಕೊಂಡರು.ರಥ ಕ್ಕೆ ಶಿರ ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂತ ಬಗ್ಗಿದಾಗಲೆಲ್ಲೆ ಕೇವಲ ರಥೋತ್ಸವಕ್ಕೆ ಬಂದ ಜನರ ಕಾಲಿಗೆ ನಮಸ್ಕರಿಸಲಾಗುತಿತ್ತು.

ಅಯಿತು ಮುಗಿಯಿತು ಆಂಜೆನೇಯ ಸ್ವಾಮಿಯ ರಥೋತ್ಸವ.ದೇವಸ್ಥಾನಕ್ಕೆ ಮತ್ತೊಮ್ಮೆ ಕೈ ಮುಗಿದು ಒಳಗೆ ಹೋಗಿ ಆಂಜನೇಯ ಸ್ವಾಮಿಯನ್ನು ಕಣ್ತುಂಬಿ ಕೊಂಡು ರಥೋತ್ಸವ ದ ನೆನೆಪ ಅಲ್ಲಿಯ ಸಾಂಸ್ಕೃತಿಕ ವೈಭವನ್ನು ಮನದಲ್ಲಿ ತುಂಬಿಕೊಂಡು ಎಲ್ಲರೂ ಮನೆಯ ದಾರಿ ಹಿಡಿದರು.ಹಿಂತಿರುಗುವಾಗ ಪ್ರತಿಯೊಬ್ಬರ ಮನದಲ್ಲೂ ಮತ್ತದೆ ಯಾಂತ್ರಿಕ ಜಗತ್ತಿನ ಗೋಜು , ಗದ್ದಲ ,ಗೊಂದಲ ಕಾಡ ಹತ್ತಿತ್ತು.ಒಬ್ಬರಿಗೆ ಒಂದೊಂದು ತರಹ.ಯಾರಿಗೊ ಕಛೇರಿ ಯಲ್ಲಿ ಹಿರಿಯ ಅಧಿಕಾರಿಗೆ ಹೇಳದೆ ರಜ ಹಾಕದೆ ಜಾತ್ರೆಗೆ ಬಂದಿದ್ದ ಸಂದರ್ಬ ಹೇಗೆ ಎದುರಿಸಬೇಕು ಅಂತ ಕಾಡುತಿದ್ದರೆ.ಇನ್ನು ಕೆಲವರಿಗೆ ಮಕ್ಕಳ ಶಾಲೆಯನ್ನು ಬಿಡಿಸಿಕೊಂಡು ಬಂದಿರುವುದರಿಂದ ಅವರ ಮನೆಗೆಲಸ ವನ್ನೆಲ್ಲ ತಾವು ಮಾಡಬೇಕಾಗುವುದಲ್ಲ ಅಂತ ಅಲ್ಲದೆ ಶಾಲಾ ಶಿಕ್ಷಕಿಯರ ಬಳಿ ಮಂಗಳಾರತಿ ಬೇರೆ ಮಾಡಿಸಿಕೊಳ್ಳಬೇಕಲ್ಲ ಅಂತ ಕಾಡುತಿತ್ತು. ಜಾತ್ರೆಯಲ್ಲಿ ಮಗನಿಗೆ ಒಂದಾದರೂ ಕನ್ಯ ಸಿಗಬಹುದು ಅಂತ ಬಂದಿದ್ದವರಿಗೆ ವಿಪರೀತ ನಿರಾಸೆ ಯಾಗಿತ್ತು.ಕನ್ಯೆಗಳೇನೋ ಸಿಕ್ಕಿದ್ದವು ಆದರೆ ಒಂದೊಂದು ಕನ್ಯೆಯದು ಒಂದೊಂದು ಬೇಡಿಕೆ.ಒಬ್ಬಳದು ಆಮೇರಿಕಾದಲ್ಲೇ ಕೆಲಸ ಮಾಡುವ ಹುಡುಗ ಬೇಕು ಇನ್ನೊಬ್ಬಳಿಗೆ ತಿಂಗಳಿಗೆ ಕನಿಷ್ಟವೆಂದರೂ ಒಂದು ಲಕ್ಷವರಮಾನವಿರುವ ಹುಡುಗ ಬೇಕಾಗಿತ್ತು.ಇನ್ನೊಂದಿಬ್ಬರಿಗಂತೂ ಮದುವೆ ಆದ ಮೇಲೆ ಗಂಡಿನ ಕಡೆಯವರೂ ಒಬ್ಬರೂ ಮನೆಗೆ ಬರಬಾರದು ಅಂತ ತಾಕೀತು ಮಾಡಿ ಹೇಳಿಬಿಟ್ಟಿದ್ದರು.ಈಗಿನ ಹುಡಿಗೀಯರ ಬೇಡಿಕೆ ಕೇಳಿ ಮಗನ ತಾಯಿ - "ಏನಪ್ಪ ,ಹನುಮಪ್ಪ ಮಗನ್ನ ಹೆತ್ತೆ, ಆದರೆ ಮನೆಗೆ ಸೊಸೆ ಬರೋ ಕಾಲ ಮುಗಿತು ಅನ್ಸತಾದ.ಮಗ ಮನೆ ಬಿಟ್ಟು ಹೋಗ ಕಾಲ ಬಂದಾದ ಅಂತ ಅನ್ಸತಾದ" ಅಂದುಕೊಂಡು ನಿಟ್ಟಿಸಿರಿಟ್ಟಳು.ಕೆಲವು ದಂಪತಿಗಳು ಸಂತಾನ ಬೇಡಿಕೆ ಹೊತ್ತು ಬಂದಿದ್ದರು.ಕೆಲವು ಪಡ್ಡೆ ಐಕಳು ಕೇವಲ ಹುಡಿಗೀಯರ ಚುಡಾಯಿಸುವುದಕ್ಕೆ ಜಾತ್ರೆ ಗೆ ಜಮಾಯಿಸಿದ್ದರು.ಹೀಗೆ ಜಾತ್ರಯಲ್ಲಿ ಜನವೂ ಜನ.

ಹೀಗೆ ಹಲವಾರು ಜನ ತರಾವರಿ ಕನಸು, ಬೇಡಿಕೆ, ಹರಕೆ ಹೊತ್ತು ಆಂಜನೇಯ ಸ್ವಾಮಿ ಹತ್ತಿರ ಬಂದಿದ್ದರು.ಕೆಲವರ ಹರಕೆ ಆಂಜನೇಯ ಸ್ವಾಮಿ ಇಡೇರಿಸಿದ್ದ,ಕೆಲವರ ಹರಕೆ ಬಾಕಿ ಇಟ್ಟಿದ್ದ. ಎಲ್ಲವನ್ನು ಅವರವರ ಒಳಿತು ಮತ್ತು ಕೆಡಕುಗಳ ಲೆಕ್ಕಚಾರದ ಮೇಲೆ ನಿರ್ಧಾರ ಮಾಡುತ್ತಿದ್ದ.ಆದರೆ ನಮ್ಮ ಆಂಜನೇಯ ಸ್ವಮಿ ಯಾರನ್ನು ಖಾಲಿ ಕೈಯಿಂದ ಕಳಿಸಿದ್ದಂತೂ ಇರಲಿಲ್ಲ.ಭಕ್ತಿಯಿಂದ ಕೈ ಮುಗಿದು ಬೇಡಿದವರಿಗೆ ಎಂದೂ ಮೋಸ ಮಾಡಿದ್ದಿಲ್ಲ ನಮ್ಮ ದೇವ್ರು.

ಎರೆಡು ದಿನಗಳಿಂದ ವಿಜೃಂಭಣೆಯಿಂದ ನೆರವೇರಿದ ಜಾತ್ರೆ ರಥೋತ್ಸವದೊಂದಿಗೆ ಕೊನೆಗೊಂಡಿತ್ತು.

"ಮುಗಿತಲ್ಲಪ್ಪ ಹನುಮಪ್ಪನ್ ತೇರು" -
"ಬಂತು ಬಂತು ಅನ್ನೊಷ್ಟರಲ್ಲಿ ಮುಗಿದ್ ಹೋಯ್ತು ...ನೋಡಪ್ಪ..
"-ನೋಡ್ರಿ ..ಸುಮ್ನೆ ಜಾತ್ರಿಗಂತ ಮಗಳನ್ನ ಕರ್ಕೊಂಡು ಬಂದ್ವಿ ...ಲಗ್ನ ಠರಾವ್ ಅಯ್ತು .ಎಲ್ಲಾ ಹನುಮಪ್ಪನ್ ದಯ ..."

ಲೋಕಾಭಿರಾಮವಾಗಿ ಮಾತಾಡುವಾಗ ಕೇಳು ಬಂದ ನಾಲ್ಕರು ಮಾತುಗಳಲ್ಲಿ ಹಲವಾರು ವಿಚಾರ ಗಳು ಸಾಮನ್ಯ ವಾಗಿರಿತಿದ್ದವು.ಮದುವೆ,ಮಕ್ಕಳು...ಮನೆ,ದುಡ್ಡು...ಇಂತಹದ್ದೆ ಹತ್ತಾರು ಮಾತುಗಳು.ಈ ಮಾತುಗಳಲ್ಲೆ ಮುಗಿದು ಹೋಗಿತ್ತು ಹನುಮಪ್ಪನ ತೇರು.



ಎಲ್ಲರೂ ಧನ್ಯತಾ ಭಾವದಿಂದ ಹನುಮಪ್ಪಗೆ ನಮಸ್ಕರಿಸಿ ನಾಳಿನ ದಿನಗಳ ಆತಂಕ,ಸವಾಲು,ಪ್ರೆಶ್ನೆ ...ಹೊತ್ತು ಮುಂದಿನ ವರ್ಷದ ಆಂಜನೇಯ ಸ್ವಾಮಿ ಯ ರಥೋತ್ಸವ ದ ಕನಸು ಕಾಣುತ್ತಲೇ ತಮ್ಮ ತಮ್ಮ ಊರುಗಳಿಗೆ ಮರಳಿದರು.


ಮತ್ತೆ ಎಲ್ಲಾ ಶುರು ವಾಯಿತು.ಬದುಕು,ಗೊಂದಲ,ಹಪಾ-ಹಪಿ,ಧಾವಂತ,ಓಟ,ದಿನ ನಿತ್ಯದ ಪ್ರಶ್ನೆ ಗಳು(?),ಧುತ್ತೆಂದು ನಿಲ್ಲುವ ಸವಾಲುಗಳು,ಮನೆಯ ರಗಳೆ,ಕಛೇರಿ ರಾಜಕೀಯ,ರಾಜ್ಯ ಮತ್ತು ರಷ್ಟ್ರ ರಾಜಕಾರಣ,ದಿನಿ ನಿತ್ಯದ ಕರ್ಚು,ಆದಾಯ, ಸಂಭ್ರಮದ ಸಮಾರಂಭಗಳು ,ಆಸ್ಪತ್ರೆ,ಅನಿರೀಕ್ಷಿತ ಖರ್ಚುಗಳು, - ಇವೆಲ್ಲಾ ಜಂಜಡಗಳಲ್ಲಿ ಅಕ್ಷರಸಹ ಹನುಮಪ್ಪನ ಎಲ್ಲರು ಮರೆತೆ ಬಿಟ್ಟಿದ್ದರು.

ದೂರ ದೂರ ದ ಊರುಗಳಲ್ಲಿ ಇದ್ದವರಿಗೆ ಹನುಮಪ್ಪ ನೆನಪಾದದ್ದು ಎಲ್ಲರ ಮನೆಬಾಗಿಲಿಗೆ ಅಂಚೆಯಣ್ಣ ಬಂದಾಗಲೇ! ಎಲ್ಲಿಂದೆಲ್ಲಿಯ ಸಂಬಂಧ ಅಂಚೆ ಯಣ್ಣನಿಗೂ ಹನುಮಪ್ಪನ ಜಾತ್ರೆಗೂ?ನಿಜ ಹನುಮಪ್ಪನ ಜಾತ್ರೆ ಗೂ ಅಂಚೆಯಣ್ಣನಿಗೂ ಸಂಬಂಧವೇ ಇಲ್ಲ.ಆದರೆ ಅಂಚೆಯಣ್ಣ ತನ್ನ ಕರ್ತವ್ಯ ಶ್ರಧೆಯಿಂದ ಮಾಡಿದಾಗಲೇ? ದೂರದ ಊರಿನ ಭಕ್ತರಿಗೆ ಹನುಮಪ್ಪನ ಜಾತ್ರೆ ದಿನಾಂಕ ತಿಳಿಯುತಿತ್ತು.ವಿಷಯ ಇಷ್ಟೆ.ಪ್ರತಿ ವರ್ಷದ ಜಾತ್ರೆ ತುಂಬಾ ಸಾಂಗೋಪಾಂಗವಾಗಿ ನಡೆಯಲೆಂದೆ ಹಿಂದಿನ ತಲೆಮಾರಿನ ಹಿರಿಯರು ಒಂದು ಸಮಿತಿ ರಚಿಸಿದ್ದರು.ಆ ಸಮಿತಿಗೆ "ಹನುಮಪ್ಪನ ಸೇವಾ ಸಮಿತಿ" ಅಂತ ಹೆಸರಿಟ್ಟು ಅದನ್ನು ನೊಂದಾಯಿಸಲಾಗಿತ್ತು.ಅಲ್ಲದೆ ಹನುಮಪ್ಪನ ದೇವಸ್ಥಾನ ವಿದ್ದದ್ದು ತುಂಗ-ಭದ್ರೆಯ ತಟದಲ್ಲಿ.ಆ ಮೂರ್ತಿ ಇದ್ದ ಸ್ಥಳಕ್ಕೆ ಇಂತಹದ್ದೆ ಊರು ಅಂತ ಹೆಸರು ಇರಲಿಲ್ಲ.ಆ ಮೂರ್ತಿ ಇದ್ದ ಸ್ಥಳದ ಸುತ್ತ ಮುತ್ತ ಕೇವಲ ನಾಲ್ಕಾರು ಕೀಲೊಮೀಟರ ನ ಸುತ್ತಳತೆಯಲ್ಲಿ ಸುಮಾರು ಎಂಟು ಗ್ರಾಮಗಳಿದ್ದವು.ಕೆಲವು ನದಿಯ ಆ ಕಡೆ ಇದ್ದರೆ ಇನ್ನು ಕೆಲವು ನದಿಯ ಈ ಕಡೆ.


ಒಂದೊಂದು ಗ್ರಾಮಕ್ಕೂ ಒಂದೊಂದು ಕೆಲಸ ವೆಂಬಂತೆ ಆ ಸಮಿತಿಯಲ್ಲಿ ನಿರ್ಧರಿಸಿಯೂ ಆಗಿತ್ತು.ಒಂದು ಗ್ರಾಮಕ್ಕೆ ಹೂವು,ಹಣ್ಣು,ಬಾಳೆ ಕಂಬ,ಮಾವಿನ ಸೊಪ್ಪು,ತರಕಾರಿ.ಇನ್ನೊಂದು ಗ್ರಾಮಕ್ಕೆ ಅಕ್ಕೆ,ಬೇಳೆ - ಹೀಗೆ ಬೆಲ್ಲ,ಎಣ್ಣೆ,ತುಪ್ಪ ಎಂಬಂತೆ ಒಂದೊಂದು ಗ್ರಾಮಕ್ಕೆ ಒಂದೊಂದು ಜವಬ್ದಾರಿಯನ್ನು ವಹಿಸಿ ಕೊಡಲಾಗಿತ್ತು.ಜಾತ್ರೆಯ ದಿನವನ್ನು ಆ ಹಿರಿಯ ತಲೆಗಳು ನಿರ್ಧರಿಸಿದ್ದವು.ಅದು ಜನೆವರಿ ತಿಂಗಳ ಮೊದಲ ಹುಣ್ಣಿಮೆ ಯಾಗಿತ್ತು.ಆ ದಿನ ಬರುವುದಕ್ಕೆ ಮೂರು ತಿಂಗಳಿಗೂ ಮೊದಲು ಹನುಮಪ್ಪ ನ ದೇವಸ್ಥಾನದಲ್ಲಿ "ಹನುಮಪ್ಪನ ಸೇವಾ ಸಮಿತಿ" ಸಭೆ ಸೇರುತಿತ್ತು.ಆ ವರುಷ ಸೇರ ಬಹುದಾದ ಜನ,ಹಿಂದಿನ ಜಾತ್ರೆಗಳಲ್ಲಿ ಉಳಿದಿರಬಹುದಾದ ಹಣ ಮತ್ತು ಜರುಗರಲಿರುವ ಜಾತ್ರೆಗೆ ಬೇಕಾಗಿರುವ ಹಣ ಎಲ್ಲವನ್ನು ಲೆಕ್ಕ ಹಾಕುತಿದ್ದರು.ಸಭೆ ಮುಗಿದಾದ ಮೇಲೆ ಆ ಗ್ರಾಮಸ್ಥರು ದೂರ ದೂರ ಇರುವ ತಮ್ಮ ಹತ್ತಿರದ ಸಂಬಂಧಿಕರಿಗೆ,ದೂರದ ಸಂಬಂಧಿಕರಿಗೆ,ಸ್ನೇಹಿತರಿಗೆ,ಪರಿಚಯಸ್ಥರಿಗೆ - ದೇಣಿಗೆ ಪುಸ್ತಕವನ್ನು ಕಳುಹಿಸಿ ಕೊಡುತ್ತಿದ್ದರು.ಆ ಪುಸ್ತಕಗಳನ್ನು ತೆರೆದ ಅಂಚೆಯಲ್ಲೆ ಕಳುಹಿಸುತ್ತಿದ್ದರಿಂದಲೇ- ಅಂಚೆಯಣ್ಣ ನಿರ್ದಿಷ್ಟ ವಿಳಾಸಗಳಿಗೆ ತಲುಪಿಸಿದಾಗಲೇ ಹನುಮಪ್ಪ ನ ತೇರು ಮತ್ತೊಮ್ಮೆ ಎಲ್ಲರಿಗೂ ನೆನಪಾಗುತಿತ್ತು.


ದೇಣಿಗೆ ಪುಸ್ತಕದ ಜೊತೆಗೆ ಜಾತ್ರೆಯ ವಿವರಗಳನ್ನೊಳಗೊಂಡ ಒಂದು ಚಿಕ್ಕ ಆಕಾರದ ಪುಟವನ್ನು ಕಳುಹಿಸಿಕೊಡಲಾಗುತಿತ್ತು.ಆ ಹಾಳೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ನಡೆಯುವ ದಿನಾಂಕವಾರು ಪೂಜೆ,ಆಚರಣೆ ಮತ್ತು ಶ್ರ್‍ಇ ಕ್ಷೇತ್ರದಲ್ಲಿ ಪಾಲಿಸಬೇಕಾಗಿರುವ ಕಟ್ಟಳೆಗಳನ್ನು ದಾಖಲಿಸಲಾಗಿರುತಿತ್ತು.ಪರ ಊರಿನ ಭಕ್ತಾದಿಗಳು ದೇಣಿಗೆ ಪುಸ್ತಕ ಬಂದಾದ ದಿನದಿಂದಲೇ ತಮ್ಮ ನೆಂಟರಿಷ್ಟರಲ್ಲಿ,ಸ್ನೇಹಿತರಲ್ಲಿ,ಸಹೋದ್ಯೋಗಿಗಳಲ್ಲಿ ದೇಣಿಗೆ ಬರೆಯಿಸುತಿದ್ದರು.ಪ್ರತಿಯೊಬ್ಬರು ತಮ್ಮ ಶಕ್ತಿ ಇದ್ದಷ್ಟು ದೇಣಿಗೆ ಬರೆದು ಕೈಮುಗಿದು ಧನ್ಯರಾಗುತಿದ್ದರು.ಇನ್ನು ಕೆಲವರು ದೇಣಿಗೆ ಪುಸ್ತಕದ ಪ್ರತಿ ಹಾಳೆ ತಿರುವಿ ತಮ್ಮ ಪರಿಚಯದವರು,ತಮ್ಮ ಸಂಬಂಧಿಕರು, ಮತ್ತು ತಮ್ಮನ್ನು ಪ್ರತಿಸ್ಪರ್ಧಿಗಳಂತೆ ಕಾಣುವವರ ದೇಣಿಗೆ ನೋಡಿ ತಮ್ಮ ದೇಣಿಗೆ ಅವರೆಲ್ಲರ ದೇಣಿಗೆ ಗಿಂತಲೂ ಹೆಚ್ಚು ಇರಬೇಕೆಂದೆ ದೇಣಿಗೆ ಪುಸ್ತಕದ ಹಾಳೆಗಳನ್ನು ನಾಲ್ಕೈದು ಬಾರಿ ತಿರುವಿಹಾಕಿ ನಂತರವಷ್ಟೆ ತಮ್ಮ ದೇಣಿಗೆಯನ್ನು ನಿರ್ಧರಿಸುತಿದ್ದರು.ಇವರಿಗೆ ತಮ್ಮ ಸ್ವಯಂ ಪ್ರತಿಷ್ಠೆ ತೋರಿಸಿಕೊಳ್ಳುವುದಷ್ಟೆ ಬೇಕಾಗಿರುತಿತ್ತು.ದೇಣಿಗೆ ಕೊಟ್ಟವರಲ್ಲಿ ಬಹುತೇಕರು ಜಾತ್ರೆಗೆ ಬರುಲು ಆಗುವುದಿಲ್ಲ ಪ್ರಸಾದ ವನ್ನು ಮರೆಯದೆ ತಂದು ಕೊಡಿ ಅಂತ ದಯನೀಯವಾಗಿ ಬೇಡುತ್ತಿದ್ದರು.ಆದರೆ ಇನ್ನು ಕೆಲವರು ದೇಣಿಗೆಯನ್ನು ಯಾರದೋ ಉಪಕಾರಕ್ಕೆ ಕೊಟ್ಟಂತೆ ಬರೆಯುತಿದ್ದರು.ಹನುಮಪ್ಪ ಅವರವರ ಯೂಗ್ಯತೆಗೆ ತಕ್ಕಂತೆಯೇ ಸರಿಯಾಗಿ ಪ್ರಸಾದವನ್ನು ಕೊಡುತಿದ್ದ.


ಇಷ್ಟೆಲ್ಲದರ ನಡುವೆ ಜಾತ್ರೆ ಸಮೀಪಿಸುತಿತ್ತು.ಬಹುತೇಕರು ಜಾತ್ರೆಗೋಸ್ಕರವೇ ತಮ್ಮ ವರುಷದ ರಜೆಗೆಳಲ್ಲಿ ರಜೆ ಎತ್ತಿಡುತಿದ್ದರು.ಆದರಲ್ಲೂ ಕೆಲವರಿಗೆ ರಜೆ ಇದ್ದರೂ ಹಾಕಲಾರದ ಪರಿಸ್ಥಿತಿ ಇರುತಿತ್ತು.ಇನ್ನು ಕೆಲವರು ಜಾತ್ರೆ ಕೆಲವೆ ದಿನ ಇದೆ ಎನ್ನುವಾಗ ಕಛೇರಿಗೆ ಹಾಕಬೇಕಾಗಿರುವ ರಜೆ ನೆನಪಾಗುತಿತ್ತು.ಆಗ ಏನೇನೊ ಮಾಡಿ ರಜೆ ತೆಗೆದು ಕೊಳ್ಳುವವರು ಕೆಲವರಾದರೆ ಇನ್ನು ಕೆಲವರು ಮೊದಲು ಜಾತ್ರೆ ಗೆ ಹೋಗಿ ಬರೋಣ ಬಂದಾದ ಮೇಲೆ ಯೋಚಿಸಿದಾರಾಯಿತು ಅಂತ ಹುಂಬ ವಿಚಾರದಿಂದ ಜಾತ್ರೆ ಗೆ ಹೋಗಲು ಸಿದ್ಧರಾಗುತಿದ್ದರು.ಈ ಎಲ್ಲಾ ಸರ್ಕಸ್ಸಿನಲ್ಲಿ ಹಣದ ತಾಪತ್ರಯ ಇಲ್ಲ ಎನ್ನುವಂತಿರಲಿಲ್ಲ.ಬಹುತೇಕರು ಬಂದ ಸಂಬಳದಲ್ಲಿ ಉಳಿತಾಯದಲ್ಲಿನ ಹಣವನ್ನು ಇದಕ್ಕೆ ಬಳಸುತಿದ್ದರು ಮತ್ತೆ ಕೆಲವರು ಸಾಲ ಮಾಡುತಿದ್ದರು.ಅಂತೂ ಇಂತೂ ಮತ್ತೊಂದು ಜಾತ್ರೆಗೆ ಸೇರಲು ಎಲ್ಲರೂ ಅಣಿಯಾಗಿದ್ದರು.
**********************************************
....Contd

Friday, June 3, 2011

ಡೊಣ್ಣೆ ನಾಯಕ...!

ಭಾಗ - (೧)ಅಧ್ಯಾಯ - (೧).. .ರಥೋತ್ಸವ!
ಆಕಳು ಗಳ ಕೊರಳಲ್ಲಿ ಕಟ್ಟಿದ್ದ ಗೆಜ್ಜೆಗಳ ಸದ್ದು ಮೆಲ್ಲಗೆ ಕರುಗುತ್ತಲೇ ಶಾಂತಕುಮಾರ ಜಮೀನ್ದಾರ್ ತಲುಪಿತ್ತು.ಹೊಳೆದಂಡಿಯಲ್ಲಿ ಮತ್ತೆ ಸ್ವಲ್ಪ ದೂರ ಸಾಗಿ ನದಿಯ ಅಲಿಗಳನ್ನೆ ದಿಟ್ಟಿಸುತ್ತಾ ನಿಂತುಬಿಟ್ಟ.ಒಮ್ಮೆಲೆ ಗಾಳಿ ಬೀಸಿದ್ದರಿಂದ ಹಳ್ಳಿಕಡೆ ಯಿಂದ ಡೊಳ್ಳು,ಗೆಜ್ಜೆ ಜಾತ್ರೆ ಜನರ ಗದ್ದಲ,ಕೇಕೆ,ಗುಸು ಗುಸು ಮತ್ತೊಮ್ಮೆ ಶಾಂತಕುಮಾರನನ್ನು ತಲುಪಿದ್ದವು.ಒಳಗೊಳಗೆ ನಸು ನಕ್ಕು ಇನ್ನು ಎಷ್ಟು ದೂರ ಅಂತ ಹೋಗಲಿ? ಅಂತ ತನ್ನನ್ನೆ ಪ್ರೆಶ್ನಿಸಿದ್ದ.ಜಾತ್ರೆ ಯ ಗದ್ದಲ ಅವನನ್ನು ಕಸಿಕಸಿ ಮಾಡಿದ್ದವು.ವಾಸ್ತವವಾಗಿ ಶಾಂತಕುಮಾರ್ ಆ ಎಲ್ಲಾ ಗದ್ದಲ,ಗುಸು-ಗುಸು,ಜನರ ಕೇಕೆ ಗಳಿಂದ ದೂರ ಇರಲು ಬಯಸುತ್ತಿದ್ದ.
ಮೊಬೈಲ್ ಗೆ ಬಂದ ಮಗಳ ಕರೆಯನ್ನು ಕತ್ತರಿಸಿ ಮೊಬೈಲ್ ಗುಂಡಿ ಒತ್ತಿ ಆರಿಸ ಬೇಕೆಂದು ಇದ್ದಾಗ "ಅಪ್ಪ...ಎಲ್ಲಿದ್ದಿಯಾ ..ಬಾ ರಥೋತ್ಸವಕ್ಕೆ..." ಅಂತ ಮಗಳು ಸುಧಾ ಕಳಿಸಿದ್ದ ಸಂದೇಶವನ್ನು ಹಿಂದು ಮುಂದು ಯೋಚಿಸಿದೆ ಅಳಿಸಿ ಮೊಬೈಲ್ ನ್ನು ಆರಿಸಿ ಅಂಗಿಯ ಕಿಸೆಯಲ್ಲಿ ಇರಿಸಿದ್ದ.ಹೊಳೆದಂಡಿಯಲ್ಲಿ ಕೆಸರು ಇದ್ದರಿಂದ ತಾನು ಕಟ್ಟಿದ್ದ ಪಂಚೆಯನ್ನು ಎತ್ತಿ ಕೈಲಿ ಹಿಡಿದು ತಡವರಿಸುತ್ತಲೇ ಮುಂದೆ ಹೋದ.ಆದರೂ ಆಗೊಮ್ಮೆ ಈಗೊಮ್ಮೆ ಮತ್ತೆ ಜಾತ್ರೆಯ ಗದ್ದಲ ಗಾಳಿ ಬೀಸಿ ಬಂದಾಗಲೊಮ್ಮೆ ಶಾಂತಕುಮಾರ ಕಿವಿ ತಲುಪುತಿತ್ತು.
ದೂರದಲ್ಲಿ ಕಾಣಿಸುತ್ತಿದ್ದ ಆ ನೀಲಗಿರಿ ತೋಪಿನೊಳಗೆ ಹೊಕ್ಕುಬಿಡಲೇ ಅಂದು ಕೊಂಡು.ನೀಲಿಗಿರಿ ತೋಪಿನೊಳಗೆ ಹೊಕ್ಕಲು ಮುಂದಾದ.ಶಾಂತಕುಮಾರ ನ ಮನಸ್ಸು ಮಾತಾಡ ಹತ್ತಿತು.
"ಎಲ್ಲಿಗೆ ಹೋಗ್ಬೇಕು?...ಎಷ್ಟು ಅಂತ ದೂರ ಹೋಗ್ಬೇಕು...ಯಾರಿಂದ ತಪ್ಪಿಸ್ಕೊ ಬೇಕು?"
ಶಾಂತಕುಮಾರ ಸುಮ್ಮನೆ ನಕ್ಕು ಸುಮ್ಮನಾಗಿದ್ದ ,ಉತ್ತರವಿಲ್ಲದ್ದಕ್ಕೆ.
________________________________________________________________________________
ಹಳ್ಳಿಯಲ್ಲಿ ಆಂಜನೇಯ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗುತಿತ್ತು.ಕ್ಷೇತ್ರವಿಧಿಯಂತೆ ಊರ ಶಾನಭೋಗರು,ಗೌಡರು ಮತ್ತೆ ಜಾತ್ರೆಯ ರಥದ ಚಕ್ರಗಳಿಗೆ ಪೂಜೆ ಮಾಡಬೇಕು.ಊರ ಶ್ಯಾನಭೋಗರು ಈಗಿಲ್ಲ ಅವರ ಮಕ್ಕಳಲ್ಲಿ ಒಬ್ಬರಾದ ಭೀಮಸೇನ ಚಕ್ರಗಳಿಗೆ ಪೂಜೆ ಮಾಡಿ ಹಿಂದೆ ಸರಿದ.ಶ್ಯನಭೋಗರ ವಂಶಸ್ಥ ಎನ್ನುವ ಯಾವುದೆ ಅಹಮಿಕೆ ಭೀಮಸೇನ ನಿಗೆ ಇರಲಿಲ್ಲ.ಎಲ್ಲಾ ಆಂಜನೇಯನ ಸೇವೆ ಅನ್ನುತ್ತಲೇ ಭಕ್ತಿಯಿಂದ ಮಾಡಬೇಕಾದ ಕಾರ್ಯಕ್ರಮಗಳನ್ನೆಲ್ಲಾ ಶ್ರಧೆಯಿಂದ ಮಾಡಿದ್ದ.ರಥಕ್ಕೆ ಸಾಂಷ್ಟಾಂಗ ನಮಸ್ಕಾರ ಮಾಡಿ ದೂರ ಸರಿದು ನಿಂತಿದ್ದ.
ಮಂಜುನಾಥ ಊರ ಗೌಡ್ರ ಮೊಮ್ಮಗ.ಹಳ್ಳಿಯಲ್ಲೆ ಸಣ್ಣ ಪುಟ್ಟ ರಾಜಕೀಯ ಮಾಡುತ್ತಾ ಉರ್‍ಎ ತನ್ನದೆನ್ನುತ್ತಾ ತಿರುಗಾಕೊಂಡಿದ್ದ.ಮಂಜುನಾಥನಿಗೆ ದೇವರ ಮೇಲಿನ ಭಕ್ತಿ ಮತ್ತು ಶ್ರದ್ಧೆ ಗಿಂತ ತನ್ನ ದೊಡ್ಡಸ್ತಿಕೆ ತೋರಿಸಿ ಕೊಳ್ಳುವುದು ಬೇಕಾಗಿತ್ತು.ಪ್ರತಿ ಯೊಂದು ಸಂಪ್ರದಾಯ ನಡೆಸಿಕೊಟ್ಟಾಗಲು ನಾಟಕೀಯವಾಗಿ ಕೈ ಮುಗಿಯುತ್ತಾ..ಸುತ್ತಲೂ ಸೇರಿದ್ದ ಜನತೆ ಕಡೆ ಕೈ ಬೀಸುತ್ತಾ...ಆ ಜಾತ್ರೆಯನ್ನು ತನಗೆ ಪುಗ್ಸಟ್ಟೆ ಪ್ರಚಾರಕ್ಕಾಗಿ ಒಂದು ವೇದಿಕೆ ಯಾಗಿ ಸಿದ್ಧತೆ ಮಾಡಿದ್ದ....

Wednesday, June 1, 2011

ಹೊಸ ಕಥೆ -

ಹೊಸ ಕಥೆ ನನ್ನೊಳಗೆ ಹೊಸಿಯಲು ಪ್ರಾರಂಭಿಸಿದೆ.
ಕಥಾ ವಸ್ತು ಮೂಲವಾಗಿ ಸಾಕಷ್ಟು ಬಾರಿ ಬಂದು ಹೋಗಿರಬಹುದು.
ಆದರೆ ಇದು ಕೇವಲ ಒಬ್ಬ ವೈಶ್ಯೆ ಮತ್ತು ಗಿರಾಕಿ ನಡುವೆ ನಡೆಯುವ ಒಂದು ಸ್ನೇಹ
ಸಂಬಂಧ ದ ಕಥೆಯಲ್ಲ.ಪರಮ ನೀಚ ಹೆಂಗಸಿನ ಅನೈತಿಕತೆ ಯ ಕಥೆ.
ಬಹುಶಃ ಇದನ್ನು ಇನ್ನು ಬರೆಯದೆ ಇರಲಾರೆ!