Monday, June 27, 2011

...ಜಾತ್ರೆಯಲ್ಲಿ ಊರ ಶಾಸ್ತ್ರಿಗಳು ಮುಂದೆ ನಿಂತು ಮಾಡಬೇಕಾದ ವಿಧಿ ವಿಧಾನಗಳನ್ನೆಲ್ಲಾ ಶಾಸ್ತ್ರೊಕ್ತವಾಗಿ ನಡೆಸಿ ಕೊಟ್ಟರು.ಆಂಜನೇಯ ಸ್ವಾಮಿ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ದೇವಸ್ಥಾನದ ಮುಖ್ಯ ಅರ್ಚಕರು ರಥಕ್ಕೆ ಓರೆಯಾಗಿ ಆನಿಸಿಟ್ಟಿದ್ದ ಏಣಿಯ ಮೆಟ್ಟಿಲನ್ನು ತುಂಬಾ ಜಾಗೂರುಕತೆಯಿಂದ ಏರಲು ಪ್ರಾರಂಭಿಸಿದರು.ಒಂದು ಏಣಿಯ ಮೆಟ್ಟಿಲನ್ನು ಏರಿದಾಗಲೂ ಜನ ಸಮೂಹದ ಭಕ್ತಿ ಪರಾಕಷ್ಟೆ ಮುಗಿಲು ಮುಟ್ಟುತಿತ್ತು.ಕೈ ಮುಗಿದು "...ಆಂಜನೇಯ ವರದ ಗೋವಿಂದ ಗೋವಿಂದ...ಭಕ್ತಾಭಿಮಾನಿ ಗೋವಿಂದ...ಗೋವಿಂದ....."- ಅಂತ ಭಕ್ತಿಯಿಂದ ಹೇಳುತಿದ್ದರು.ಮುಖ್ಯ ಅರ್ಚಕರು ರಥದ ಮೇಲೆ ಕುಳಿತು - ತಲೆಯ ಮೇಲೆ ಹೊತ್ತ ಉತ್ಸವ ಮೂರ್ತಿಯನ್ನು ನಿಧಾನವಾಗಿ ಪೀಠದಮೇಲೆ ಕುಳ್ಳಿರಿಸಿ ಬಾಳೆ ನಾರಿನಿಂದ ಮೆದುವಾಗಿ ಮೂರ್ತಿಗೂ ಮತ್ತು ಹಿಂದೆ ಇದ್ದ ಕಟ್ಟಿಗೆಯ ಹಲಗೆಗೂ ಬಿಗಿದು.ಮಂಗಳಾರತಿ ಮಾಡಿ ರಥದ ಮೇಲಿಂದಲೇ ರಥವನ್ನು ನಡೆಸಲು ಅನುಮತಿ ಕೊಟ್ಟರು.ದೊಡ್ಡ ಗಾತ್ರ ದ ಹಗ್ಗ ಗಳನ್ನು ಹಿಡಿದ ಜನ ಸಮೂಹ -"...ಆಂಜನೇಯ ವರದ ಗೋವಿಂದ ಗೋವಿಂದ...ಭಕ್ತಾಭಿಮಾನಿ ಗೋವಿಂದ...ಗೋವಿಂದ....." -ಉದ್ಗಾರಿಸುತ್ತಲೇ ರಥವನ್ನು ವೀರಾವೇಷದಿಂದ ಎಳೆದು ಪಾದಘಟ್ಟದ ಬಳಿ ನಿಲ್ಲಿಸಿದರು. ಇಡೀ ಗ್ರಾಮಸ್ಥರು ಜಾತ್ರೆಯ ಸಂಭ್ರಮದಲ್ಲಿದ್ದರೆ ಸುಧಾ ಮತ್ತು ಶಾಂತಕುಮಾರ್ ಜಮಿನ್ದಾರ್ ನ ಮಡದಿ ರೇಖಾ ಶಾಂತಕುಮಾರ್ ನ ಅನುಪಸ್ಥಿತಿಯನ್ನು ವಿಪರೀತ ವಾಗಿ ಅನುಭವಿಸುತಿದ್ದರು.ರೇಖಾ " ನಿಮ್ಮಪ್ಪ ಎಲ್ಲಿದ್ದಾರೆ ನೋಡು..." ಅಂತ ಕಣ್ಣಲ್ಲೇ ಕೇಳಿದ ಪ್ರೆಶ್ನೆಗೆ ,"..ಇಲ್ಲಮ್ಮ ಮೆಸೆಜ್ ಮಾಡಿದಿನಿ..ಕಾಲು ರೀಸಿವ್ ಮಾಡ್ತ ಇಲ್ಲ..." ಅಂತ ಮೊಬೈಲ್ ತೋರಿಸಿ ಕೈ ಅಳ್ಲಾಡಿಸಿ ಮಾತಾಡದೆ ಉತ್ತರಿಸಿದ್ದಳು. ಇಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತ್ತಿದ್ದರೆ , ಅಲ್ಲಿ ನೀಲಗಿರಿ ತೋಪಿನಲ್ಲಿ ವಿಪರೀತ ಒಂಟಿತನ ಅನುಭವಿಸುತ್ತಲೇ ಶಾಂತಕುಮಾರ್ ಮರಗಳ ನೆರಳಿನಲ್ಲಿ ಅಂಗಾತ ಮಲಗಿದ್ದ.ಬೀಸಿದ ಗಾಳಿಗೆ ಮರದ ಲೆಕ್ಕವಿಲದಷ್ಟು ಮರದ ಎಲೆಗಳು ಪಟ ಪಟನೇ ಉದಿರಿದವು.ಕೂಗಳತೆಯ ದೂರದಲ್ಲಿ ತುಂಗಭದ್ರ ತಣ್ಣಗೆ ಝುಳು ಝುಳು ಶಬ್ದದಿಂದ ಹರಿಯುತಿತ್ತು.ಶಾಂತಕುಮಾರನಿಗೆ ನದಿಯ ಅಲೆಗಳಂತೆ ನೆನಪಿನ ಪುಟಗಳು ಒಂದೊಂದಾಗಿ ತೆರೆಯಲು ಪ್ರಾರಂಭಿಸಿದವು.
bhaaga - (1) adhayaa (2)ಸುರಷ ಟೆಕ್ನಾಲಿಜಿಸ್ ಪ್ರೈ. ಲಿ.
ಹತ್ತು ವರ್ಷದ ಕೆಳಗಿನ ಮಾತು.
ದೇಶದ ನಂಬರ್ ಒನ್ ಐಟಿ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ನೂರಾರು ಐಟಿ ಕಂಪನಿಗಳು ಕೆಲಸ ಮಾಡುವ ಸರ್ಜಾಪುರ ರಸ್ತೆಯಲ್ಲಿರುವ ಒಂದು ಹೈಟೆಕ್ ಐಟಿ ಕಂಪನಿ ಸುರಷ ಟೆಕ್ನಾಲಿಜಿಸ್ ಪ್ರೈ. ಲಿ.ಈ ಕಂಪನಿಯ ಶಾಖೆಗಳು ಪ್ರಪಂಚದ ವಿವಿಧ ದೇಶಗಳಲ್ಲಿ ಚದುರಿಹೋಗಿದ್ದವು.ಆಮೇರಿಕ,ಇಂಗ್ಲೆಂಡ್,ಯುರೋಪ್ ಮತ್ತು ಗಲ್ಫ ನ ಕೆಲವು ಭಾಗಗಳಲ್ಲಿ.ಈ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಮುಕಾಅ) ಯೇ ನಮ್ಮ ಶಾಂತಕುಮಾರ್ ಜಮಿನ್ದಾರ್.

No comments: