Wednesday, April 14, 2021

ಗಾಂಢೀವಿ ಗರ್ವ ಭಂಗ!

Published in 4th April 2021 Vikrama

*******************************************

 (ಕುರುಕ್ಷೇತ್ರ ಯುಧ್ಧದ ಕೊನೆಯಲ್ಲಿ ಅರ್ಜುನ ಗೆಲುವೆಲ್ಲಾ ತನ್ನಿಂದಲೇ ಎಂದು ಅಹಂನಿಂದ ಬೀಗುತ್ತಿರುವಾಗ,ಕೃಷ್ಣ ಅರ್ಜುನನ ಗರ್ವವನ್ನು

ಭಂಗ ಮಾಡಿ ಗೆಲುವಿನ ನಿಜವಾದ ಕಾರಣವನ್ನು ತೋರಿಸುತ್ತಾನೆ)

ವಿಜಯ ಧ್ವಜಕೆ

ವಿಧಾತ ಸಾರಥಿಯಾಗಿರಲು

ವಿಶ್ವರೂಪದಿಂ ಉಪದೇಶಿಸಿ

ವಿಕ್ರಮ ಸಾಧಿಪೆ ಸಮರದೋಳ್! | 1 |


ಬಂದಾಪತ್ತು ಪರಿಹರಿಸಿ ಅಭಯನಾಗಿ

ನೆರಳಂತೆ ಕಾದಿಹನು ಅರ್ಜುನಂಗೆ

ಧರ್ಮ ಪರ ನಿಂತು ಅಯ್ಯುಕ್ತನಾಗಿ

ಯುದ್ಧ ರಂಗದಿ ಮುನ್ನುಗ್ಗುತಿದೆ ‘ಧರ್ಮ’ ಅಜೇಯನಾಗಿ | 2 |


ಕಾಂತೇಯನ ಬಾಣಗಳು ಮಳೆಗಳಂದದಿ

ಕಿರೀಟಿಯ ಹರಿದು ಹಾಕಲು ಬರುತಿರಲು

ಕಿಶೋರ ರಥವ ಭೂಮಿಗೊತ್ತಿ ಕೆಳಗಿಳಿಸಿ

ಕರುಣಾಳಾಗಿದ್ದ ಹತ್ತು ಹಲವು ಬಾರಿ | 3 |

ಹತ್ತಾರು ತಂತ್ರಗಳ ಹೆಣೆದ ಕೃಷ್ಣ

ಹಣಿದಿದ್ದ ಕರ್ಣ, ಭೀಷ್ಮ ಮತ್ತು ದ್ರೋಣ!

ದಯಾನಿಧಿ ಮಾಯೆಯ ಅರಿಯದ

ಧನಂಜಯ ಗೆಲುವೆಲ್ಲಾ ತನ್ನಿಂದಲೆಂದು ಬೀಗಿದ | 4 |


ವಿಷ್ಣು ರಥದ ಮೇಲಿರುವ ಹನುಮ ತೋರಿಪೆ-

ವಿಭಸ್ತುಗೆ ಹೆಜ್ಜೆ ಹೆಜ್ಜೆಗೂ ಕಾಯ್ತಿರುವಂತೆ.

ಜಗದೊಡೆಯ ರಥದಿಂದಿಳಿದೊಡನೆ ಭಸ್ಮವಾಯಿತು ರಥವು

ಬೀಗುತ್ತಿದ್ದ ಜಿಷ್ನುವಿನ ಗರ್ವ ಅನಂತನ ಮುಂದೆ ಭಂಗವಾಯಿತು.| 5 |

No comments: