Friday, October 19, 2018

ಅರ್ಬನ್ ನಕ್ಸಲ್ ಎನ್ನುವ....


ಅರ್ಬನ್ ನಕ್ಸಲ್ ಎನ್ನುವ....

   ತೀರ ಇತ್ತೀಚಿನ ಶಬ್ದಗಳಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದು ಒಂದು ಲೆಕ್ಕದಲ್ಲಿ ಮೋದಿ ಸರ್ಕಾರವನ್ನು ಕಾಡಲು ಶರುವಾಗಿರುವ ನಿಜವಾದ ಅರ್ಥದಲ್ಲಿ ಅಷ್ಟೇನು ದೊಡ್ಡದಾಗಿರದ  ಶಬ್ದ ‘ಅರ್ಬನ್ ನಕ್ಸಲ್’. ನಕ್ಸಲ್ ಎನ್ನುವ ಶಬ್ದಕ್ಕೆ ಸುಮಾರು ದಶಕಗಳ ಇತಹಾಸವೆ ಇದೆ.ಆದರೆ ಅರ್ಬನ್ ನಕ್ಸಲ್(ನಾಡ ನಕ್ಸಲ್) ಎನ್ನುವುದುಕ್ಕೆ ಕೇವಲ ಕಲವು ಪುಟಗಳನ್ನಷ್ಟೆ ತಿರುವಿದರೆ ಸಾಕು.ಆದರ ಇತಿಹಾಸ,ಆಳ,ಅಗಲ ಅರ್ಥವಾಗಿ ಹೋಗುತ್ತೆ

ನಕ್ಸಲ್ ರ ಆದಿ ಮತ್ತು ಉಗಮ:-

 ಪಶ್ಚಿಮ ಬಂಗಾಲದ ನಕ್ಸಲ್ ಬಾರಿ ಎನ್ನುವ ಸ್ಥಳದಲ್ಲಿ ಉಗಮ ವಾದ ಒಂದು ಹೋರಾಟದ ಮಾದರಿ.ಇದು ಮಾವೋ ಸಿಧ್ದಾಂತಗಳಿಂದ ಪ್ರಭಾವಿತವಾಗಿ ವ್ವವಸ್ಥೆಯ ವಿರುಧ್ಧ ಹೋರಾಡುತ್ತಾ ತೀಕ್ಷ್ಣ ಮತ್ತು ತೀವ್ರತರವಾದ ಬದಲಾವಣೆಯನ್ನು ಬಯುಸುತ್ತಲೆ ಶಸ್ತ್ರಸಜ್ಜಿತ ಹೋರಾಟಕ್ಕೆ ಅಣಿಯಾದ ಒಂದು ಎಡ ಪಂಥೀಯ ಸಂಘಟನೆ. ಈ ಹೋರಾಟಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಉದ್ದೇಶದಿಂದ ಈ ಮಾವೋವಾದಿ ಹೋರಾಟವನ್ನು  ರಾಜಕೀಯವಾಗಿ ಬಲಿಷ್ಟವಾಗಿಸಲು ಸಿಪಿಐ (ಮಾವೋ) ಎನ್ನುವ ಸಂಘಟನೆ 2004 ರಲ್ಲಿ ಒಂದು ಸಂಘಟಿತ ಸಂಘಟನೆಯನ್ನಾಗಿ ಸ್ಥಾಪಸಲಾಯಿತು ಆರ್ಥಿಕವಾಗ ಹಿಂದುಳಿದ ಪ್ರದೇಶಗಳಲ್ಲಿ ಮವೋ ಸಿಧ್ದಾಂತ ಗಳನ್ನು ಪ್ರಚಾರ ಪಡಿಸುತ್ತಲೆ ಅಲ್ಲಿನ ಅತೃಪ್ತ ನಾಗರಿಕರನ್ನು ಶಸ್ತ್ರ ಸಜ್ಜಿತ ಹೋರಾಟಕ್ಕೆ ಪ್ರಚೋದನೆ ನೀಡುವುದು ಮತ್ತು ಹೋರಾಟಗಳನ್ನು ಪ್ರಖರವಾಗಿ ವಿಸ್ತಾರ ಮಾಡುವುದು.ಸಿ.ಪಿ.ಐ(ಮಾವೋ) ಸಂಘಟನೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು.ಭಾರತದ ರಾಜ್ಯಗಳಾದ ಓಡಿಶ್ಶಾ,ಬಿಹಾರ,ಮಧ್ಯ ಪ್ರದೇಶ,ಪಶ್ಚಿಮ ಬಂಗಾಳ,ಜಾರ್ಖಂಡ್,ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವಾರು ಜಿಲ್ಲೆಗಳನ್ನು ಈ ಮಾವೋ ವಾದಿಗಳು ತಮ್ಮ ಪ್ರಾಭಲ್ಯವನ್ನು ಈಗಾಗಲೆ ಸ್ಥಾಪಿಸಿಯಾಗಿದೆ.ಬಿಬಿಸಿಯ ಒಂದು ಅಂದಾಜಿನ ಪ್ರಕಾರ  1990 ರಿಂದ 2010 ರ ವರೆಗಿನ ಅವಧಿಯಲ್ಲಿ ಸುಮಾರು ಆರು ಸಾವಿರ ಜೀವಗಳ ಬಲಿಯಾಗಿವೆ(ಇದರಲ್ಲಿ ನಾಗರಿಕರು,ಸಿಅರ್ಪಿ ಎಫ್,ಮತ್ತು ಮಾವೋ ಉಗ್ರರು ಸೇರಿದ್ದಾರೆ). ಆದರೆ ಇದರ ಹೋರಾಟದ ಮಾದರಿ ಮತ್ತು ವೈಖರಿಯನ್ನು ಗಮನಸಿದ ಸರ್ಕಾರವು ಈ ಸಿ.ಪಿ.ಐ(ಮಾವೋ)  ಸಂಘಟನೆಯನ್ನು ಯು.ಪಿ,ಏ(ಎರಡನೆ ಬಾರಿ) ಸರ್ಕಾರವು ನಿರ್ಭಂಧಿಸಿದೆ,

ಅರ್ಬನ್ ನಕ್ಸಲ್:-

  ಈಗಿನ ಮಾತಲ್ಲ 2013 ರಲ್ಲೆ ಆಗಿನ ಕೇಂದ್ರದ ಯು.ಪಿ,ಎ ಸರ್ಕಾರವು ಸುಪ್ರಿಂ ಕೋರ್ಟಿಗೆ ಸಲ್ಲಿಸಲಾಗಿರುವ ಒಂದು ಕೌಂಟರ್ ಆಫ್ಡಿವೇಟ್ ನಲ್ಲಿ ಶಿಕ್ಷಕ ವೃತ್ತಿಗೆ ಸಂಬಂದಿಸಿದವರು,ಹೋರಾಟಗಾರು ಹಾಗೂ ಬರಹಗಾರರು ಕೆಲವೊಂದು ಸಂಘಟನೆಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಮತ್ತು ಆ ಎಲ್ಲಾ ಸಂಘಟನೆಗಳನ್ನು ಮಾವೋವಾದಿಗಳು ‘ಮಾನವ ಹಕ್ಕು’ ಎನ್ನುವ ತಲೆಬರಹದಡಿಯಲ್ಲಿ ಸುರಕ್ಷಿತವಾಗಿರುಸುತಿದ್ದಾರೆ.ಈಗ ಬಂದಿರುವ ವಿಚಾರ ಆಗಷ್ಟ್ 2018 ರಲ್ಲಿ ಐದು ಮಾವೋ ಉಗ್ರರ ವಿಚಾರಗಳನ್ನು ಪೋಷಿಸುತ್ತಿರುವ ಐವರನ್ನು ಭೀಮಾ ಕೋರೆಗಾಂವ್ ನಲ್ಲಿ ನಡೆದ ದಂಗೆಯ ವಿಚಾರವಾಗಿ ಬಂಧಿಸಲಾಗಿದೆ.ಅಲ್ಲದೆ ಮಾವೋ ಉಗ್ರರು ನಮ್ಮ ಪ್ರಧಾನ ಮಂತ್ರಿಯಾದ ನರೆಂದ್ರ ಮೋದಿಯನ್ನು ಹತ್ಯಗೈಯುವ ಒಂದು ಯೋಜನೆಯನ್ನೂ ಇಲ್ಲಿ ಪ್ರಸ್ತಾಪಲಾಗಿದೆ.ಮೊದಲೆ ಸಿ.ಪಿ.ಐ(ಮಾವೋ) ಒಂದು ನಿರ್ಭಂಧಿಸಿದ ಸಂಘಟನೆ.ಅದರಲ್ಲೂ ಈ ಸಂಘಟನೆಗೆ ನಗರದಲ್ಲಿದ್ದುಕೊಂಡು ಆರ್ಥಿಕ ಸಹಾಯ ಮತ್ತು ಇನ್ನಿತರೆ ನಗರಗಳಿಂದ ಮಾತ್ರ ಒದಗಿಸಬಹುದಾಂತಹ ಸಹಾಯ ಮತ್ತು ಅನುಕೂಲಗಳನ್ನು ಮಾವೋ ಉಗ್ರರಿಗೆ ಒದಗಿಸುತ್ತಿದ್ದಾರೆ.ಈಗ ಎಲ್ಲಕಿಂತಲೂ ಹಾಸ್ಯಸ್ಪದ ಎನ್ನುವಂತೆ ನಗರದಲ್ಲಿರುವ ಕೆಲವು ಬುಧ್ದಿ(?) ಜೀವಿಗಳು ‘ನಾನು ನಗರ ನಕ್ಸಲ್’ ಎನ್ನುವ ಹಣೆ ಪಟ್ಟಿಯನ್ನು ಹಾಕಿಕೊಂಡು ತಿರುಗಾಡುತಿದ್ದಾರೆ.

 

No comments: