Tuesday, October 29, 2019

Published in SANJEVANI deepavali Special 2019.
********************************************
                  ಮತ್ತೆ ಮತ್ತೆ ಬುಧ್ದ !!!!

ಲುಂಬಿಣಿಯ ಸಿದ್ದಾರ್ಥ ಕೇಶ ತೂರಿ
ಕಾಂತಕನಿಗೆ ಕಣ್ಣೀರ ವಿದಾಯ ಹೇಳಿ
ಹುಟ್ಟು, ಸಾವು, ರೋಗಗಳ ಮೂಲ ಕೆದಕಲು
ಸಿಧ್ಧನಾಗಿ ಬಧ್ಧನಾಗಿ ಬೋಧಿ ವೃಕ್ಷದ ಕೆಳಗೆ ಬುಧ್ದನಾದ!!!

ಕುಶಿ ನಗರದ ತೋಟದಲಿ
ತಲೆಗೆ ಕೈಕೊಟ್ಟು “ಈ ಮನುಜರ ಪಾಡೇನು?” ಅಂತ
ಯೋಚಿಸಿತ್ತಲೆ ಯೋಚಿಸುತ್ತಲೆ ಯೋಚಿಸುತ್ತಲೆ...ಮಲಗಿದ!!!
ಆದರೇನು ಫಲ? ನೋರಾರು ವರ್ಷಗಳು ಬೇಕಾದವು
ಬುದ್ದನ ನೆನೆದು ಎಲ್ಲವ ಮರೆತು ತಮ್ಮನ್ನು ತಾವು ಅರಿಯಲು !!

ಧನನಂದನು ಲೋಲುಪತೆಯ ಅಂಧಾಕರದಲಿ
ಮುಳುಗಿರಲು ಮಗಧದಲಿ
ರಾಷ್ಟ್ರ ರಕ್ಷಣೆಯ ರಾಜ ಧರ್ಮವ ಪಾಲಿಸುವಂತೆ
ದೈನೇಸಿಯಿಂದ ಬೇಡಿದ ಬಡ ಬ್ರಾಹ್ಮಣ ಭಿಕ್ಷೆಯಂತೆ
ಅಧಿಕಾರದ ಅಮಲು ನೆತ್ತಿಗೇರಿತ್ತು
ಪಾಪದ ಕೊಡವು ತುಂಬಿದ ಬಂದಿತ್ತು!!!
ಜುಟ್ಟು ಹಿಡಿದು ಹೊರ ಹಾಕಿದರು
ಒಡಲಿನ ಬೆಂಕಿ ಜ್ವಾಲಾಮುಖಿಯಾಗಿತ್ತು
‘ನಂದ’ ಸಾಮ್ರಾಜ್ಯದ ನಾಶಕ್ಕೆ ನಾಂದಿಯಾಯಿತು.
ಮೌರ್ಯರ ದರ್ಬಾರು ಮರೆದು ನಿಂತಿತು
ನಂದ ಸಾಮ್ರಾಜ್ಯ ನಂದಿ ಹೋಯಿತು

ಕ್ರೋರಿ ಆಶೋಕ ಚಕ್ರವರ್ತಿ(?) ಜಗವಾಳಲು ಹೋದ,
ನೆತ್ತರು ಕಾಲ ಕೆಳಗೆ ಸುಳಿದು ಹರಿದು
ನದಿ ನೀರಲಿ ನೀರಾಗುತ್ತಿತ್ತು

ಆಕಾಶಕ್ಕೆಲ್ಲಾ ಹಾರಾಡಿದವು ರುಂಡ ಮುಂಡಾದಿಗಳು
ಕೈಲಿದ್ದ ಕತ್ತಿಯ ಬಿಸುಪು ಸಡಿಲವಾಗಿತ್ತು
ನೆತ್ತರು ಹರಿದಂತೆ ಕ್ರೂರ ಮನಸ್ಸು ಕರುಗುತ್ತಲಿತ್ತು.
ಕಳಿಂಗ ಯುಧ್ಧವೇನೊ ಗೆದ್ದಿದ್ದ
ಆದರೆ ಮನಸ್ಸಲಿ ಎಲ್ಲಾ ಕಳೆದುಕೊಂಡು ಸೋತಿದ್ದ.
ತನಗೆ ತಾನು ಆಳಾದ ಯುಧ್ಧಗಳೆಲ್ಲವೂ ಕೀಳಾದವು.

ತನ್ನನ್ನು ತನ್ನೆಲ್ಲವನ್ನೂ ತೊರೆದು
ವರ್ಷಗಳ ಕಾಲ ಬುದ್ಧನ ಅರುಹಲು ಹೊರಟ
ಕತ್ತಿ ಅಲುಗಲಿ ನಲುಗಿದ ಜೀವಕ್ಕೀಗ ಬುಧ್ಧ ಬೇಕಾಗಿತ್ತು
ಹೌದು ಈಗಲೂ ಅಷ್ಟೆ!!!!
ನೆನಪಾಗುವುದು ಬುಧ್ದ ಮತ್ತೆ ಮತ್ತೆ!!!

No comments: