Tuesday, October 29, 2019

Published in Samyuktha karnataka 27th Oct 2019 Sunday Supplement.
This story one won first prize in the story competation conducted by 'NIRATA SAHITYA SANGHA' BELTAHANGADI'.
**********************************************************
                                                                    ಪಳುಯುಳಿಕೆ

ಮೋಹನ ಮದುವೆಯಾಗಿ ಮಕ್ಕಳಾಗಿ ಆಗಲೆ ಸುಮಾರು ವರ್ಷಗಳಾಗಿ ಹೋದಾಗಲೂ ಇನ್ನೂ ಬಿಡದೆ ಅವಳ ನೆನಪು
ಕಾಡುತ್ತಿತ್ತು.ಈಗ ಮೋಹನ ಆಮೇರಿಕಾದ ಸ್ಯಾನ್ಪ್ರಾನ್ಸಿಸ್ಕೊಗೊ ಕಂಪನಿಯಿಂದ ಪ್ರೋಜೆಕ್ಟ್ ಕೆಲಸಕ್ಕಾಗಿ
ಹೋಗಿದ್ದಾನೆ.ಅದೊಂದು ವಾರಾಂತ್ಯದ ಬಿ.ಬಿ.ಸಿ ಸುದ್ದಿ ವಾಹಿನಿಯಲ್ಲಿ ಹಂಪೆಯ ಬಗ್ಗೆ ಒಂದು ಡಾಕ್ಯೂಮೆಂಟರಿಯನ್ನು
ನೋಡಿದ.ಆ ಕ್ಷಣದಿಂದಲೆ ವಿಪರೀತವಾಗಿ ವಿಚಲಿತನಾಗಿಬಿಟ್ಟ.ತನ್ನ ದುಗುಡುವನ್ನು ಕಡಿಮೆ ಮಾಡಿಲಿಕ್ಕಾಗಿಯೆ
ಭಾರತದಲ್ಲಿಯರಿವ ತನ್ನ ಹೆಂಡತಿಗೆ ಒಂದು ಈ ಮೇಲ ಬರೆಯುಲು ಶುರುವಿಟ್ಟ.
ಹಲೋ ಹನಿ,
ಬೆಳಿಗ್ಗೇನೆ ವಿಡಿಯೋ ಕಾಲ್ ಮಾಡಿ ಆಗಿದೆ ಮತ್ತೇನು ಈ 'ಅಕ್ಷರಗಳು ' ಅಂತ ಆಶ್ಚರ್ಯ ಆಗಬಹುದು.ಈ ಮೇಲಿಗೆ
ಒಂದು ಕಾರಣವಿದೆ.ಈ ವಾರಾಂತ್ಯದಲ್ಲಿ ಬಿ.ಬಿ.ಸಿಯ ಹಂಪೆಯ ಬಗ್ಗೆ ಒಂದು ಡಾಕುಮೆಂಟರಿಯನ್ನು
ನೋಡಿದೆ.ವಿಜಯನಗರ ಸಾಮ್ರಜ್ಯದ ವಿವರಗಳನ್ನು ಕಟ್ಟಿ ಕೊಟ್ಟರು.ಹಾಗೆಯೇ ಬಹಮನಿ ಸುಲ್ತಾನರಿಂದ ನಾಶವಾದ
ಹಂಪೆಯ ವಿವರವನ್ನು ಕೊಡಲಾಯಿತು.ಹಂಪೆಯ ನಾಶದ ವಿಷಯವನ್ನು ತೋರಿಸುವಾಗಲಂತೂ - ನಾನು
ನಿಜವಾಗಿಯೂ ಸತ್ತೆ ಹೋದೆ.ಆ ಸಾಲು ಸಾಲು ಮುರಿದು ಹೋದ ಮಂಟಪಗಳು,ಛಾವಣಿಯಿಲ್ಲದೆ ನಿಂತಿರುವ
ದೇವಸ್ಥಾನಗಳು,ಪ್ರತಿ ಉತ್ಖನನನಕ್ಕೂ ದೊರಕುತ್ತಿರುವ ಭಗ್ನ ವಿಗ್ರಹಗಳು, ಬಿರು ಬಿಸಿಲು,ಮಳೆ,ಛಳಿಗಳಿಗೆ ಮೈಯೊಡ್ಡಿ
ನಿಂತಿರುವ ಕಾಡು ಬಂಡೆಗಳು, ನನ್ನ ಎಲ್ಲ ನೆನಪುಗಳನ್ನು ಒಮ್ಮೆಲೆ ಮನದ ಮೂಲೆಯಿಂದ ಎತ್ತಿ ಪಡಸಾಲೆಗೆ ತಂದು
ಹಾಕಿದವು .ಎಷ್ಟೆ ಆ ನೆನೆಪುಗಳಿಂದ ಹೊರಬರಲು ಪ್ರಯತ್ನಿಸಿದರು,ಹೊರಬರಲಾಗಲಿಲ್ಲ. ಹಂಪೆಯ ಆ ಮುರುಕಲು
ಮಂಟಪಗಳಲ್ಲಿಯೆ ನಾನು ಮತ್ತು ಅವಳು ಅಡ್ಡಾಡಿದ್ದೆವು ನಮ್ಮಿಬ್ಬರ ಗಹನ ಪ್ರೇಮಕ್ಕೆ ಆ ಮಂಟಪಗಳೇ ಸಾಕ್ಷಿ ಆಗಿದ್ದವು
.ಎಂತಹ ದುರಂತ ನೋಡು ಅದೆ ಮಂಟಪಗಳಲ್ಲಿಯೆ ನಾನು ಮತ್ತು ಅವಳು ಬೇರೆ ಆಗುವ ಮಾತು ಆಗಿತ್ತು .ಹಾಳು
ಹಂಪೆಯಂತಿಯೆ ಪ್ರೇಮವೂ 'ಹಾಳು ಹಾಳು ಆಗಿತ್ತು. '
ಅಲ್ಲಿಯ ಮುರುಕಲು ಮಂಟಪದಂತೆಯೆ, ಛಾವಣಿಯಿಲ್ಲದ ದೇವಸ್ಥಾನಗಳಂತೆಯೆ,ಬಿಸಿಲು,ಮಳೆ ಮತ್ತು ಛಳಿಗೆ
ಮೈಯಿಡ್ಡಿದ ಕಲ್ಲು ಬಂಡೆಯಂತೆಯೆ ನನ್ನ ಜೀವನವು ಆಗಿತ್ತು.'ಅದೃಷ್ಟಕ್ಕೆ ನೀನು ಸಿಕ್ಕೆ ಮತ್ತೆ ನಾನು ನಕ್ಕೆ ' .ನನ್ನ ಎಲ್ಲ
ಪ್ರೇಮಾಲಾಪಗಳ ನಡುವೆಯೂ ನನ್ನನ್ನು ಮೆಚ್ಚಿದೆ, ಒಪ್ಪಿದೆ,ಮದುವೆಯೂ ಆದೆ.ಎಲ್ಲವನ್ನೂ ತಿಳಿದು ನೀನು ನನ್ನನ್ನು
ವರಿಸಿದ್ದು ನಿನ್ನ ಔದಾರ್ಯ.ನಮ್ಮ ಮದುವೆಯಾದಾಗ ಮೊಬೈಲಗಳು ಇರಲಿಲ್ಲ.ಇಬ್ಬರು ಬೇರೆ ಬೇರೆ ಊರಲ್ಲಿದ್ದರು ಪ್ರತಿ
ವಾರಕ್ಕೊಮ್ಮೆ ತಪ್ಪದೆ ಪತ್ರ ಬರೆಯುತ್ತಿದ್ದೆವು.ಆದರೆ ಈಗ ಮೊಬೈಲು ಬಂದ ಮೇಲೆ ಪತ್ರ ಬರೆಯುವುದನ್ನೆ ಮರೆತು
ಬಿಟ್ಟಿದ್ದೇವೆ.ನಿನ್ನ ಮತ್ತು ಮಕ್ಕಳ ನೆನಪಾದರೆ ಸಾಕು ವಿಡಿಯೋ ಕಾಲ್ ಮಾಡುತ್ತೇನೆ.ಆದರೆ ಮೊನ್ನೆ ರಾತ್ರಿ ಅಂದರೆ
ನಿಮ್ಮ ಬೆಳಗಿನ ಜಾವಕ್ಕೆ ನೋಡಿದ ಬಿ.ಬಿ.ಸಿ ಕಾರ್ಯಕ್ರಮ ನನ್ನ ಎಲ್ಲ ನೆನಪುಗಳನ್ನು ಬಡಿದೆಬ್ಬಿಸಿತು.ಆಕ್ಷಣಕ್ಕೆ ನನ್ನ
ಮನಸ್ಸಿಗೆ ತೋಚಿದ್ದನ್ನು ಈ ಮೇಲಲ್ಲಿ ಬರೆದಿದ್ದೇನೆ.ನನ್ನ ಮನಸ್ಸು ಹಗುರವಾಗಿದೆ ನಿನ್ನ ಮನಸ್ಸು ಭಾರವಾಗಿದೆ
ಅಂತಲೂ ಗೊತ್ತು.ನೀನು ಇದನ್ನು ಓದುವಷ್ಟರಲ್ಲಿ ನಾನು ಘಾಢ ನಿದ್ರೆಯಲ್ಲಿರುತ್ತೇನೆ .ಇನ್ನೇನು ನಾನು ಭಾರತಕ್ಕೆ
ವಾಪಸ್ಸು ಬರುವ ದಿನಗಳು ಸಮೀಪಿಸಿವೆ .ಇನ್ನೆಂದು ನಿಮ್ಮನ್ನು ಬಿಟ್ಟು ಇಷ್ಟು ದಿನ ಇರೆನು
ಕನಸಲಿ ಬರುವೆ
ಇಂತಿ ನಿನ್ನ
ಹಬ್ಬಿ

No comments: