Friday, July 26, 2019

ಜೀವ ಕಿನ್ನರಿಯಲ್ಲಿತ್ತು (ಕಥನ ಕಾವ್ಯ)

Pubished in Kastuir Aug 2019
*********************************************
ಜೀವ ಕಿನ್ನರಿಯಲ್ಲಿತ್ತು
(ಕಥನ ಕಾವ್ಯ)

ನಿಷಾಧಿಯ ಆ ಸಂಧಿ ಕಾಲದಲ್ಲಿ
ಕಾಯುತಲಿದ್ದ ಚಂದ್ರನು ಸರದಿಯಲಿ
ತೇಲಿತ್ತು ಮನ ಸ್ವಛ್ಛಂದ ಗಾಳಿಯಲ್ಲಿ ಕಂಪಾದ ಗಂಧದಲ್ಲಿ!

ಬೆಟ್ಟದಡಿಯಲಿ ಕಾಡು ಬಂಡೆ ಕಾಣಿತೊಂದು
ಹೆಣ್ಣಿನಾಕರದ ಆದನು ನೋಡಿರಲಿಲ್ಲ ಹಿಂದೆಂದು
ಬಂಡೆ ಸವರಲು ಆಸೆ ಚಿಗರೊಡೆದು ಬಂತು

ಏನಾಶ್ಚರ್ಯ ಕಲ್ಲು ಉಸಿರಾಡುತ್ತಿತ್ತು
ಆ ಕಾಡಲ್ಲೆನಗೆ ಸಣ್ಣಗೆ ಭಯ ಆವರಿಸಿತ್ತು!
ನನ್ನುಸಿರ ಸ್ಪರ್ಷದಿಂದ ಸುಂದರಿಯ ಅವತಾರವೂ ಆಗಿತ್ತು

ಅವಳು ದೇವ ಲೋಕದ ಕಿನ್ನರಿಯಂತೆ
ಹೆಸರು ಮರೆತ ‘ಋಷಿ’ ಶಾಪದಿಂದ ಕಲ್ಲಾಗಿ ಅವತರಿಸಿದಳಂತೆ
ಮನುಷ್ಯ ಸ್ಪರ್ಶದಿಂದ ಶಾಪ ವಿಮೋಚನೆಯೆಂದು ಋಷಿ ಹೇಳಿದ್ದನಂತೆ!

ನನ್ನ ಶಾಪ ವಿಮೋಚನೆ ಮಾಡಿದ ದೇವನೆಂದಳು-
ನನ್ನ ಹಿಂದೆಯೆ ಹಿಂಬಾಲಿಸಿ ಬಂದಳು
“ನನ್ನ ಮದುವೆಯಾಗು “ ಎಂದು ದೈನಿಸಿ ಕೇಳಿದಳು.

ಮೊದಮೊದಲು ದೂರವಿರಸಿದೆ
ನಂತರದಿ ದಾರಿ ಇರದೆ ಕನಿಕರದಿ ಒಳ ಕರೆದೆ
ಮನದಲಿರಸದೆ, ಕೇವಲ ಮನೆಯಲಿರಿಸಿದೆ

ಕಿನ್ನರಿ ವಿಷಯ ಗಿಣಿ ಸಾಕಿದ ಮಾಯಾವಿ ಅರಿತನು
ನಿಧಿಗಾಗಿ ಕಿನ್ನರಿ ಜೀವ ಗಿಳಿಯೊಳಗಿಳಿಸಲು ಹವಣಿಸಿದನು
ಶತಾಯಗತಾಯ ಕಿನ್ನರಿ ಅಪಹರಿಸಲು ಪ್ರಯತ್ನಿಸಿದನು.

ಬಚ್ಚಿಟ್ಟೆ ಮನೆಯಲ್ಲಿ ಪ್ರೇಮವೆಂದಲ್ಲ ಗತಿ ಇಲ್ಲವೆಂದು!
ನನಗರಿವಿಲ್ಲದಂತೆ ಅನುರಾಗವಾಯಿತು,ಪ್ರೇಮವೂ ಆಯಿತು.
ಕಿನ್ನರಿಯಲ್ಲಿಯೆ ನನ್ನ ಮನಸ್ಸು ನೆಲೆ ನಿಂತಿತು.

ನನ್ನ ಕಣ್ತಪ್ಪಿಸಿ ಕಿನ್ನರಿಯ ‘ಜೀವ’ ಗಿಳಿಯೊಳಗೆ ಇಳಿಸಿದನು
ಇಷ್ಟೆಲ್ಲದರ ಮಧ್ಯೆ ನನ್ನ ಜೀವ ಕಿನ್ನರಿಯೊಳಗಿತ್ತು.
ಕಿನ್ನರಿಯ ವಿಹರದಲಿ ನನ್ನ ಜೀವ ಬೆಂದು ಹೋಗಿತ್ತು.

No comments: