Friday, July 26, 2019

ಸಮಾಧಿಗಳ ಮೇಲೆ ಸಾಮ್ರಜ್ಯ

Published in 10th March 2019 Samyuktha karnataka
*******************************************************
ಸಮಾಧಿಗಳ ಮೇಲೆ ಸಾಮ್ರಜ್ಯ

ವೀಣ ವಿಪರೀತವಾದ ಒತ್ತಡದಲ್ಲಿ ಸಿಲುಕಿ ಬೆಂದು ಹೋಗಿದ್ದಳು.ಎಲ್ಲಾ ಸಂಪರ್ಕ ಮಾಧ್ಯಮದ ಆಧುನಿಕ ಯುಗದಲ್ಲಿ ಕಳೆದು
ಹೋಗಿದ್ದಳು.ಸವ್ಯವಸ್ಥಿತವಾದ ಸಾರಿಗೆ ವ್ಯವಸ್ಥೆಯಲ್ಲಿಯೂ ಒಂಟಿಯಾಗಿದ್ದಳು.ಎಲ್ಲವನ್ನೂ ಹೊಂದಿಯೂ ಯಾವುದು ಬೇಕು?
ಮತ್ತು ಯಾವುದು ಬೇಡ? ಎನ್ನುವ ಗೊಂದಲದಲ್ಲಿ ಬಿದ್ದು ಏನು ಇಲ್ಲದವಳಂತಾಗಿದ್ದಳು.ಒಟ್ಟಾಗಿ ಎಲ್ಲಾ ಉಂಟು ಎನೂ ಇಲ್ಲ
ಎನ್ನುವಂತಾಗಿತ್ತು ಅವಳ ಜೀವನ!!!ಕೊರಳ ಸೆರೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ‘ನೋವು’ ಒಂದು ಸುಸಂಧರ್ಭಕ್ಕಾಗಿ
ಕಾಯುತ್ತಿತ್ತು.ಬಿಕ್ಕಿ ಬಿಕ್ಕಿ ಅತ್ತಳು ಸ್ವಲ್ಪ ಮನದ ಭಾರ ಇಳಿದಂತಾಗಿತ್ತು.ಭರಿಸಲಾಗದ ನೋವು ಎದೆಯಾಳದಲ್ಲಿ ಮುಚ್ಚಿ
ಲಾವದ ರೀತಿಯಲ್ಲಿ ಒಳಗೆ ಕುದಿಯುತ್ತಲಿತ್ತು.ಆ ಬೃಹತ್ ನಗರದ ಸದ್ದು ಗದ್ದಲ ಮನಸ್ಸಿಗೆ ಅಹಿತವಾಗಿತ್ತು.ಏಕತಾನದ
ಬದುಕು ಕಸಿವಿಸಿ ಯಂತಾಗಿತ್ತು.ಎಲ್ಲೊ ದೂರದ ಬೆಟ್ಟ ಗುಡ್ಡಗಳೆಡೆಗೆ,ಹೆಸರಿಲ್ಲದ ಕಾಡು ಸುಮದ ವಾಸನೆ ಸಿಗುವ
ಕಡೆ,ಸ್ವಛ್ಛಂದ ಗಾಳಿ ಮತ್ತು ನಿರ್ಮಲವಾಗಿ ತನ್ನಷ್ಟಕ್ಕೆ ತಾನು ಹರಿಯುತ್ತಿರುವ ನೀರಿನ ಕಡೆಗೆ ಹೊರಡುವಂತೆ ಮನಸ್ಸು
ಅವಳನ್ನು ತಳ್ಳುತ್ತಲಿತ್ತು.
ಹೊರಟೆ ಬಿಟ್ಟಳು!ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಕೊಡಚಾದ್ರಿಗೆ!ಹೊಟ್ಟೆ ಹಸಿದವನಿಗೆ ಅನ್ನ ಸಿಗದೆ ಪರದಾಡುವ
ಪರಿಸ್ಥಿತಿಯಲ್ಲಿ ಕೈ ಮುಷ್ಠಿಗೆ ಸಿಕ್ಕ ಅನ್ನವನ್ನು ಒಂದೇ ಉಸಿರಿನಲ್ಲಿ ತಿನ್ನಲು ಪ್ರಯತ್ನಿಸುವಂತಹ ಪರಿಸ್ಥಿತಿ
ವೀಣಾಳದ್ದಾಗಿತ್ತು.ಹುಚ್ಚೆದ್ದು ಬೆಳದ ಕಾಡು,ಕಣ್ಣು ಹಾಸಿದಷ್ಟು ಹಸಿರು,ಸ್ವಚ್ಛಂದ ಗಾಳಿ,ಎಲ್ಲಿಂದಲೊ ತೇಲಿ ಬರುತ್ತಲಿದ್ದ ಕಾಡ
ಸುಮದ ಪರಿಮಳ ,ವೀಣಾಳನ್ನು ನಾಡಿನ ಎಲ್ಲಾ ಗೊಂದಲಗಳನ್ನು ಮರೆಯುವಂತೆ ಮಾಡಿದ್ದವು.ಎಷ್ಟೊ ಪಕ್ಷಿಗಳನ್ನು
ಕಂಡಳು.ಅವಿಷ್ಟರಲ್ಲಿ ಗುಬ್ಬಿ,ಮರ ಕುಟುಗ,ಗಿಳಿ ಕೇವಲ ಇವಿಷ್ಟನ್ನು ಮಾತ್ರ ವೀಣಾಳಿಗೆ ಗುರುತಿಸಿಲು
ಸಾಧ್ಯವಾಯಿತು.ಗುಬ್ಬಚ್ಚಿಗಳ ದೊಡ್ಡದೊಂದು ದಂಡನ್ನೆ ನೋಡಿದಳು.ಎಲ್ಲೋ ನೋಡಿದ ನೆನಪು.ಹಳ್ಳಿಯಲ್ಲಿ ಶಾಲೆಗೆ
ಹೋಗುವಾಗ ನೋಡಿದ್ದು ನೆನಪಾಯಿತು.ಅಲ್ಲದೆ ಮಟ್ಟಸವಾಗಿ ಗುಬ್ಬಿ ಕಟ್ಟಿದ ಗೂಡನ್ನು ನೋಡಿದ್ದ ನೆನಪಾಯಿತು.ಆದರೆ ಹಳ್ಳಿ
ಬಿಟ್ಟಾದ ಮೇಲೆ ಗುಬ್ಬಿಗಳನ್ನು ನೋಡಿದ ನೆನಪಾಗಲಿಲ್ಲ.ತಾನು ನಡೆದಾಡುತ್ತಿದ್ದ ಕಾಡಿನಲ್ಲಿ ಕೂಗಳತೆ ದೂರದಲ್ಲಿ
ದೊಡ್ಡದೊಂದು ಗುಬ್ಬಿ ಸಮೂಹವನ್ನೆ ನೋಡಿದಳು.ಒಂದೆರೆಡು ಗುಬ್ಬಿಗಳನ್ನು ಹಿಡಿದು ಮಾತಾಡಿಸುವ ವ್ಯರ್ಥ ಪ್ರಯುತ್ನವನ್ನು
ಮಾಡಿದಳು.ಗುಬ್ಬಿಗಳು ತೀರ ಸಂಕೋಚದ ಜೀವಿಗಳು ಯಾರಾದರು ಹತ್ತಿರಕ್ಕೆ ಬರುತ್ತಿದ್ದಾರೆ ಎನ್ನುವ ಸೂಚು ಸಿಕ್ಕರೆ
ಸಾಕಿತ್ತು ಹಾರಿಬಿಡುತ್ತವೆ.ಆಂತಹದರಲ್ಲಿ ಮನುಷ್ಯನ ಸುಳಿವಿರದ ಕಾಡಿನಲ್ಲಿ ಮನುಷ್ಯರೊಬ್ಬರು ಹತ್ತಿರಕ್ಕೆ ಬರುತ್ತಿದ್ದಾರೆ ಎಂದು
ಗೊತ್ತಾದರೆ ಅಲ್ಲೇ ಕುಳಿತಿರತ್ತವೆಯೇ?
ನೆಲದಲ್ಲಿನ ಆಹಾರವನ್ನು ಹೆಕ್ಕಿ ತಿನ್ನ್ನುತ್ತಿದ್ದ ಗುಬ್ಬಚ್ಚಿಯನ್ನು,ಮರದ ಮರೆಯಲ್ಲಿ ನಿಂತು ನೋಡಿದಳು.ಮನುಷ್ಯರ ವಾಸನೆ
ಗ್ರಹಿಸಿದ ಗುಬ್ಬಚ್ಚಿ ಹಾರಿ ಹೋಗಿ ಮತ್ತೊಂದು ಮರದ ಟೊಂಗೆಯ ಮೇಲೆ ಕುಳಿತಿತು.ನಿಧಾನವಾಗಿ ವೀಣ ಗುಬ್ಬಚ್ಚಿ ಕುಳಿತಿದ್ದ
ಮರದ ಬಳಿ ಹೋದಳು ಮತ್ತೊಮ್ಮೆ ಗುಬ್ಬಚ್ಚಿ ಹಾರಿ ಹೋಯಿತು. ವೀಣ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಗುಬ್ಬಚ್ಚಿ ಹಾರಿ
ಹೋದ ಕಡೆ ತಾನು ಹೋಗುತ್ತಿದ್ದಳು.ಅವರಿಬ್ಬರ ಕಣ್ಣಾ ಮುಚ್ಚಾಲೆ ನಡೆದೆ ಇತ್ತು.ವೀಣ ಸುಸ್ತಾಗಿ ಒಂದು ಮರದ ಕೆಳಗೆ
ಕುಳಿತು ಬಿಟ್ಟಳು.ಗುಬ್ಬಚ್ಚಿ ತಾನೇ ತಾನಾಗಿ ವೀಣ ಕುಳಿತಿದ್ದ ಮರದ ಎದುರಿನ ಮರದ ಟೊಂಗೆಯ ಮೇಲೆ ಬಂದು
ಕುಳಿತಿತು.ಇದನ್ನು ಗಮನಿಸಿದ ವೀಣ ಬೇಕರಿಯಿಂದ ತಂದಿದ್ದ ಹುರಿಗಾಳನ್ನು ಒಣಗಿದ ಒಂದು ಎಲೆಯ ಮೇಲೆ ಹಾಕಿ
ಮರೆಯಾಗಿ ನಿಂತಳು.ವೀಣ ಮರೆಯಾಗಿ ನಿಂತದ್ದನ್ನು ಗಬ್ಬಚ್ಚಿ ಗಮನಿಸಿತ್ತು. ಆದರೂ ಹೊಟ್ಟೆ ಹಸಿವಿನಿಂದ ಹಾರಿ ಬಂದು

ಹುರಿಗಾಳನ್ನು ಹೆಕ್ಕಿ ತಿಂದಿತು.ವೀಣ ದೂರದಲ್ಲಿಂದಲೇ ಮತ್ತೊಂದು ಒಣಗಿದ ಎಲೆಯ ಮೇಲೆ ತಾನು ತಂದಿದ್ದ ಬಿಸ್ಲೆರಿ
ನೀರನ್ನು ಸುರಿದಳು.ಕಾಳು ತಿಂದಾದ ಮೇಲೆ ನೀರನ್ನು ಕುಡಿದು ಗಿಬ್ಬಚ್ಚಿ ಹಾರದೆ ಅಲ್ಲೆ ಕುಳಿತ್ತಿತ್ತು.ವೀಣ ಮರದ ಮರೆಯಿಂದ
ತನ್ನ ಹತ್ತಿರಕ್ಕೆ ಬರುತ್ತಿರುವುದನ್ನು ಗಮನಿಸಿತು ಆದರೂ ಹಾರದೆ ಅಲ್ಲೆ ಕುಳಿತ್ತಿತ್ತು.ಆ ಹೊತ್ತಿಗಾಗಲೆ ವೀಣ ಎನ್ನುವ ಮನುಷ್ಯ
ಪ್ರಾಣಿ ತನಗೆ ಯಾವ ಹಾನಿಯನ್ನು ಮಾಡುವುದಿಲ್ಲ ಎನ್ನುವುದು ಖಾತ್ರಿಯಾಗಿತ್ತು.ಹಾಗಾಗಿ ವೀಣ ಹತ್ತಿರ ಬರುತ್ತಿದ್ದರೂ
ಹಾರದೆ ಅಲ್ಲೆ ಕುಳಿತಿತ್ತು.ಈಗ ವೀಣ ಮತ್ತು ಗುಬ್ಚಚ್ಚಿಯ ಮಧ್ಯೆ ಸಲುಗೆ ಬೆಳೆದಿತ್ತು.ಆ ಗುಬ್ಬಚ್ಚಿಯ ಜೊತೆ ಅಂತಃಕರಣದಿಂದ
ಮಾತಾಡಿದಳು,ತನ್ನ ಬಗ್ಗೆ ಹೇಳಿದಳು ಅಲ್ಲದೆ ತಾನಿರುವ ನಗರಕ್ಕೆ ಯಾವಗಲಾದರು ಬರುವಂತೆ ಆಹ್ವಾನ ಕೊಟ್ಟಳು.ನಂತರ
ಮನಸ್ಸಿಲ್ಲದ ಮನಸ್ಸಿಂದ ನಗರದ ಕಡೆ ಮುಖ ಮಾಡಿದಳು.
ಗುಬ್ಬಚ್ಚಿಗೆ ವೀಣಾಳ ನಗರಕ್ಕೆ ಹೋಗಿ ಅವಳನ್ನು ಮಾತಾಡಿಸಿಕೊಂಡು ಬರಬೇಕೆನ್ನುವ ಬಯಕೆ ಉತ್ಕಟವಾಗಿತ್ತು.ಆದರೆ
ನಗರದ ಗದ್ದಲ,ಶಬ್ದ,ವಿದ್ಯುತ್ ಕಾಂತೀಯ ತರಂಗಳ ಭಯ ಗುಬ್ಬಚ್ಚಿಯನ್ನು ನಗರಕ್ಕೆ ಬರದಂತೆ ಹೆದರಿಸಿದ್ದವು.ಆದರೆ
ವೀಣಾಳ ವಿಶ್ವಾಸ ಭರಿತ ಅಂತಃಕರಣದ ಮಾತುಗಳು ಗುಬ್ಬಚ್ಚಿಯನ್ನು ಪ್ರತಿ ಬಾರಿಯೂ ನಾಡಿಗೆ ಬರುವಂತೆ
ಪ್ರೇರೆಪಿಸುತ್ತಿದ್ದವು.ನಗರದಲ್ಲಿ ತಾನು ಭೇಟಿಯಾಗಿದ್ದ ಗುಬ್ಬಚ್ಚಿ ಬಂದೇ ಬರುತ್ತದೆ ಎನ್ನುವ ವಿಶ್ವಾಸವಿತ್ತು.ಗುಬ್ಬಚ್ಚಿಗಾಗಿ
ರಟ್ಟಿನಿಂದ ಒಂದು ಗೂಡು ಕಟ್ಟಿ ಗುಬ್ಬಚ್ಚಿಗಾಗಿ ಕಾದು ಕುಳಿತಳು.
ಅಂದು ಮಾರ್ಚ 20 ! ವಿಶ್ವ ಗುಬ್ಬಚ್ಚಿಯ ದಿನ.
ಮಾಹಿತಿ ತಂತ್ರಜ್ಞಾನದ ತನ್ನ ಕಂಪನಿಯ ತಾರಸಿಯ ಮೇಲೆ ,ಕಂಪನಿಯ ಉದ್ಯೋಗಿಗಳೆಲ್ಲಾ ಸೇರಿದ್ದರು. ವಿಶ್ವ ಗುಬ್ಬಚ್ಚಿ
ದಿನದ ಅಂಗವಾಗಿ ಕೃತಕ ಗೂಡುಗಳನ್ನು ನಿರ್ಮಿಸಿ ಅದರಲ್ಲಿ ಕೃತಕ ಗುಬ್ಬಚ್ಚಿಗಳನ್ನಿಟ್ಟು ಅದರ ಮುಂದೆ ನಿಂತು ಫೋಟೂ
ತೆಗೆಸಿಕೊಳ್ಳುತ್ತಿದ್ದರು.ವಿಪರ್ಯಾಸವೆಂದರೆ ಅವರು ನಿರ್ಮಿಸಿದ್ದ ಆ ಗೂಡುಗಳು ದೊಡ್ಡ ಆ್ಯಂಟಾನಗಳ
ನರೆಳಿನಲ್ಲಿದ್ದವು.ಗುಂಪಿನಲ್ಲಿದ್ದ ವೀಣ ದೂರದಿಂದಲೇ ಹಾರಿ ಬರುತ್ತಿದ್ದ ಯಾವುದೋ ಗುಬ್ಬಚ್ಚಿ ಬರುತ್ತಿದ್ದನ್ನು ಗಮನಿಸಿದಳು.
ಸ್ವಲ್ಪ ಹತ್ತಿರಕ್ಕೆ ಬಂದಮೇಲೆ ಆ ಗುಬ್ಬಚ್ಚಿ ತಾನು ಕಾಡಿನಲ್ಲಿ ನೋಡಿದ್ದ ಗುಬ್ಬಚ್ಚಿಯೇ ಎಂದು ಗುರುತಿಸಿದಳು.ತಾರಸಿಯ
ಅಂಚಿಗೆ ಹೋಗಿ ಅದನ್ನು ಕೈ ಬೀಸಿ ಕರೆದಳು.ಗುಬ್ಬಚ್ಚಿಯ ಇನ್ನು ಸ್ವಲ್ಪ ಹತ್ತಿರಕ್ಕೆ ಕಾಣಿಸಿತು.ಆದರೆ ಗುಬ್ಬಚ್ಚಿಯ ಹಾರಾಟದ
ವೇಗ ಮಾತ್ರ ಕ್ಷೀಣಿಸುತ್ತಾ ಬಂತು.ಗಾಳಿಯ ವೇಗವೇ ಆ ಗುಬ್ಬಚ್ಚಿಯನ್ನು ಹಾರಿಸಿಕೊಂಡು ಹೋಗುತ್ತಿತ್ತು.ಆದರೂ ತನ್ನ ಛಲ
ಬಿಡದ ಗುಬ್ಬಚ್ಚಿ ವೀಣಾಳ ಬಳಿ ಬರುತ್ತಲಿತ್ತು.ಆದರೆ ನೋಡು ನೋಡುತ್ತಿರುವಷ್ಟರಲ್ಲೆ ಗುಬ್ಬಚ್ಚಿ ಮೇಲಿನಿಂದ ರಭಸವಾಗಿ
ತಾರಸಿ ಮೇಲೆ ಬಿದ್ದಿತು.ವೀಣಾ ಕಂಗಾಲಾಗಿ ಅದರ ಬಳಿ ಓಡಿ ಬಂದಳು.ಮೇಲಿನಿಂದ ಬಿದ್ದಿದ್ದ ರಭಸಕ್ಕೆ ಮತ್ತೊಮ್ಮೆ ಗುಬ್ಬಚ್ಚಿ
ಹಾರಿ ಬಿದ್ದಿತು.ವೀಣಾ ನೀರನ್ನು ಹಿಡಿದು ಓಡಿ ಬಂದಳು.ಒಂದೇ ಒಂದು ಹನಿಯನ್ನು ಅದರ ಬಾಯಿಗೆ ಹಾಕಿದಳು.ನೀರನ್ನು
ಗುಟುಕಿಸಿದ ಮೇಲೆ ಇನ್ನೊಂದು ಹನಿಯನ್ನು ಅದು ಕುಡಿಯಲಿಲ್ಲ.
ವೀಣಾಳಿಗೆ ಭಯಂಕರ ಪಾಪಪ್ರಜ್ಞೆ ಕಡ ಹತ್ತಿತು.ಜೀವ ಹಿಂಡುವ ನೋವಾಯಿತು.ಸಮಾಧಿಗಳ ಮೇಲೆ ಸಾಮ್ರಜ್ಯಗಳ
ಸಾಧಿಸಿದ್ದಕ್ಕೆ ಅಸಹ್ಯ ಬಂತು.

No comments: