೨೦೧೯ ಕರ್ಮ ವೀರ ಕನ್ನಡ ರಾಜ್ಯೋತ್ಸವ ಕವನ ಸ್ಪರ್ಧೆ ತೀರ್ಪುಗಾರ ಮೆಚ್ಚುಗೆ ಪಡೆದ ಕವಿತೆ
****************************************************************************
ವೈತರೇಣೆಯ ನದಿ ಮತ್ತು ಕನಸುಗಳ ವಿಮೆ....!
ಮೆದುಳ ಸುರಳಿಯಲ್ಲಿ ಹೊಳೆದು
ನಿದಿರೆಯ ಮಬ್ಬಲ್ಲೆ ಘಟಿಸಿದಂತೆ ಬೆಳೆದು
ಸಾಕಾರವಾಗದೆಂದೆ ಅರೆಬರೆಯಾಗಿದ್ದೆ -
ಕೊನೆಗೊಳ್ಳುವುದಕ್ಕೆ ಗೊತ್ತು ಗುರಿಯಿಲ್ಲ! * (ಕನಸುಗಳು)
ಮಣಿಕರ್ಣಿಕಾ ಘಾಟಿನ ಹೊಗೆ ಘಾಟಲ್ಲೆ
ದೇಹ ಬಿಟ್ಟಾತ್ಮವು ಸುಪ್ತವಾಗಿ ಗುಪ್ತವಾಗಿ
ಗಮ್ಯದಡಿಗೆ ಚಲಿಸದೆ ನಿಲ್ಲುವುದೆ?
ವೈತರೇಣೆಯ ನದಿಯ ರಕ್ತ, ಕೀವು, ಎಲುಬು, ಮಾಂಸ, ಮಜ್ಜಲೆಗಳ
ಮಡುವಲಿ ಬೇಡವೆಂದರೂ ಕರ್ಮ ಮುಳುಗೇಳಿಸದೆ ಬಿಡುವುದೆ?. *(ಆತ್ಮ)
ಲಂಗು ಲಗಾಮು ಇಲ್ಲದೆ ಬೆಳೆದ ಕನಸು
ರಾಗ ದ್ವೇಷಗಳಲ್ಲೆ ಬೆರೆತು ದೂರ ದೂರ ಸಾಗಿ -
ಮನುಷತ್ವವೆ ಮರೆತು ಎಲ್ಲೆಲ್ಲಿಯೊ ಕಳೆದು ಹೋಗುವ
ಮಾಗದ ಬಾಗದ ಕನಸುಗಳಿಗೆ ಶುಲ್ಕವಿಲ್ಲ!!!
ಆತ್ಮವ ದೂರ ದೂರಕೆ ಎಳೆದು-
“ಮಾಡುದ್ದೋಣ್ಣೊ ಮಹಾ ರಾಯ” ಎಂದು
ಕೀವು, ರಕ್ತದ ಮಡುವಲಿ ಬಿದ್ದು-
ಕುದ್ದು ಹೋಗುತಿಹವು ಆತ್ಮಗಳು ಶಿಕ್ಷೆಯಲಿ ಬೆಂದು
ಆ ಲೋಕದಲಿ ಯಾವ ರೀಯಾಯಿತಿಯೂ ಇಲ್ಲ!!!!
ವೈತರೇಣೆಯ ನದಿಯ ಆ ದಾರಿಯಲಿ
ಏನೆ ಆದರೂ ವಿನಾಯಿತಿ ಕೇಳಿ
ಕನಸಿನರಮನೆಗೆ ಶುಲ್ಕ ಕಟ್ಟದೆ ಕನಸಲೇನೇನೊ ಕಟ್ಟಿ
ಅರ್ಥವಾದುದಕೆ ಅಪಾರ್ಥದಲೇನೋ ಭಾವಿಸಿ –
ಕಾಯಿಸಿ ಬೇಯಿಸಿ ಹುರಿಯುವ ಆ-
ಪಾಷದ ಭಾಷೆಗೆ ರಿಯಾಯಿತಿಯ ಮಾತಿಲ್ಲ
ಕೊನೆಗೆ ಕಾಣುವ ಕನಸುಗಳಿಗೆ ವಿಮೆಯೂ ಇಲ್ಲ!!!

No comments:
Post a Comment