ಯಕ್ಷಗಾನ ನಂಗೆ ಯ್ಯಾಕೆ ಇಷ್ಟವಾಗುತ್ತೆ?ಇದನ್ನು ನನಗೆ ನಾನೆ ನೊರಾರು ಬಾರಿ ಕೆಳಿಕೊಂಡಿದ್ದೇನೆ.
ಉತ್ತರ ಸಿಕ್ಕಿಲ್ಲ.ಆದ್ರೂ ಅದು ಯ್ಯಾಕೆ ನಂಗೆ ಇಷ್ಟವಾಗುತ್ತೆ ಅಂತ ನನ್ನನ್ನ ನಾನು ಕೇಳಿ ಕೊಳ್ಳುತ್ತಲೇ ಇದ್ದೇನೆ.
ಹುಟ್ಟಿದ್ದು ಬಟ್ಟ ಬಯಲ ಸೀಮೆ ಬಳ್ಳಾರಿ ಜಿಲ್ಲೆಯಾದರು ನನ್ನ ಊರು ಎಲ್ಲೂ ಒಂದು ಕಡೆ ಹಸಿರಿನಿಂದ ತುಂಬಿದೆ.ಬೇಸಿಗೆ ಯ ಒಂದು ಕಾಲದಲ್ಲಂತೂ ಹಾದಿ ತುಂಬ ಮಲ್ಲಿಗೆ 'ಘಮ'.ಅದುವೇ ನನ್ನೂರು 'ಹೂವಿನ ಹಡಗಲಿ'! ಹಂಪಿ ಯ ವಿರುಪಾಕ್ಷನ ಪೂಜೆ ಗೆ ಇಲ್ಲಿಂದಲೇ ಮಲ್ಲಿಗೆ ಸರಬರಾಜು ಅಗಿತ್ತಿತ್ತು ಎಂದು ಇದಕ್ಕೆ 'ಹೂವಿನ ಹಡಗಲಿ' ಅನ್ನುವ ಹೆಸರು ಬಂತು ಎನ್ನುವ ಓಂದು ಮಾತಿದೆ.ಈ ಊರನ್ನು ರಬ್ಬಲಾಂಬ ಎನ್ನುವ ರಾಣಿ ವಿಜಯನಗರದ ಅರಸರ ಸಾಮಂತೆ ಯಾಗಿ ಆಳಿದ್ದಳು.ಹೀಗೆ ಹತ್ತು ಹಲವು ಕಥೆ ಗಳು ನನ್ನೂರ ಬಗ್ಗೆ ಇವೆ ಅವನ್ನೇ ಓಂದು ಕಥಾ ಪುಂಜ ವಾಗಿ ಒಮ್ಮೆ ಹೇಳಿಕೊಳ್ಳುತ್ತೇನೆ.
ಆದರೆ ಈಗಿನ ನನ್ನ ಪ್ರೆಶ್ನೆ 'ಯಕ್ಷಗಾನ' ನನ್ನ ಈ ಪರಿಯಾಗಿ ಕಾಡುವುದು ಏಕೆ?ಮೇಲಿ ಹೇಳಿದ ಎಲ್ಲಾ ಪೀಠಿಕೆ ಯಿಂದ ಅರ್ಥ ವಾಗುತ್ತೆ ನಮ್ಮೂರಿಗೂ 'ಯಕ್ಷಗಾನ'ಕ್ಕೂ ಯಾವುದೇ ಸಂಬಂಧವಿಲ್ಲ ಅಂತ.'ಯಕ್ಷಗಾನ' ಉತ್ತರ ಕನ್ನಡ,ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೀವ ನಾಡಿ. ಇಂದಿಗೂ ದೇಶ ವಿದೇಶ ಸುತ್ತು ತ್ತಿರುವಗೆ ತಾಯ ಮಡಿಲ ಸುಖ ಕೊಡುವುದು ಇದೇ 'ಯಕ್ಷಗಾನ'.'ತೆಂಕತಿಟ್ಟು' ಮತ್ತು 'ಬಡಗತಿಟ್ಟು' ಎನ್ನೋ ಎರೆಡು ವಿಧ ಗಳಿವೆ ಅಂತ ಕೇಳಿದ್ದೇನೆ. ಆ ಎರೆಡು ವಿಧಗಳ ಬಗ್ಗೆ ನಡುವೆ ಇರುವ ಸ್ವಲ್ಪ ವೆತ್ಯಾಸ ವೂ ಗೊತ್ತು.ನಮ್ಮೂರಿಂದ ಹೊದೆಡೇ ಹಾವೇರಿ ಜಿಲ್ಲೆ ದಾಟಿದರೆ ನಮಗೆ ಸಿಗುವುದೇ 'ಉತ್ತರ ಕನ್ನಡ' ಜಿಲ್ಲೆ.ಅದೇ ಜಿಲ್ಲೆ ಬಳಸಿ ಕೊಂಡು ಹೋದರೆ 'ಉಡುಪಿ' ಮತ್ತು 'ದಕ್ಷಿಣ ಕನ್ನಡ' ಜಿಲ್ಲೆಗಳು ದೊರೆಯುತ್ತವೆ.
'ಯಕ್ಷಗಾನ' ದ ಬಗ್ಗೆ ಮೊದಲು ಕೇಳಿದ್ದು ಶಿವರಾಂ ಕಾರಂತರ ಹೆಸರು ಕೇಳಿದಂದು.ಹೌದು!ಅವರು ಆಹೊತ್ತಿ ಗಾಗಲೇ 'ಯಕ್ಷಗಾನ'ದಲ್ಲಿ ಸುಮಾರು ಕೆಲಸ ಮಾಡಿದ್ದರು ಕಾರಂತರು.ನನಗೆ ಆಗ ಸುಮಾರು ಹತ್ತೂ ಹನ್ನೆರೆಡೊ ವರ್ಷ.ಅದಾದ ನಂತರ ನಮ್ಮೋರಲ್ಲೇ ನಮ್ಮೂರಿನ ಕೆಲವು ಹವ್ಯಾಸಿ ತಂಡ ನಡೆಸಿಕೊಟ್ಟ 'ಬಯಲಾಟ' ನೋಡಿದ್ದೆ.ಅದಾಗಲೇ ನಮ್ಮ ಭಾಗದಲ್ಲಿ 'ಬಯಲಾಟ' ಅವಸಾನ ದ ಅಂಚಿಗೆ ತಲುಪಿತ್ತು.ಬಹುಶಃ ಈ ಹೊತ್ತಿಗಾಗಲೇ ಆ ತಂಡ ದ ಹಿರಿಯ ತಲೆಗಳು ಇಲ್ಲದಾಗಿದ್ದಾವೂ,ಹೊಸಬರಿಗೆ ಅವೆಲ್ಲದರ ಬಗ್ಗೆ ತಾತ್ಸರ.ಈಗ ಆ ವೇಷ ಭೊಷಣ ಗಳು ಆ ಹಿರಿಯ ತಲೆಗಳ ಮನೆ ಜಂತಿ ಯ ಮೇಲೆ ಬಣ್ಣ ಕಳೆದು ಕೊಂಡು ತೂತು ಬಿದ್ದು ಧೂಳು ಹಿಡಿದು ಹಾಳಾಗುವ ಹಾದಿಯಲ್ಲಿದ್ದಾವು.
ಆ ಬಯಲಾಟ ನೋಡಿದಾಗ ಯ್ಯಾರು ಹೇಳಿದ್ದು ನೆನಪಿದೆ'..ಯಕ್ಷಗಾನ ಅಂದರೆ ಅದೂ ಹೀಗೆ ಇರುತ್ತೆ .." ಅಂತ.ಆ ದಿನದಿಂದಲೇ ನನಗೆ ಶಿವರಾಂ ಕಾರಂತರ ಷ್ಟೇ ಆಸಕ್ತಿ ಯ ವಿಷಯವಾಗಿ ಯಕ್ಷಗಾನ ನನ್ನಲ್ಲಿ ಕೊರೆಯಲಿಕ್ಕೆ ಶುರುಮಾಡಿತು.ಪತ್ರಿಕೆ,ಪುಸ್ತಕ ದಲ್ಲಿ ಬರುವ 'ಯಕ್ಷಗಾನ' ಸಂಬಂಧಿ ವಿಷಯಗಳನ್ನು ಶ್ರದ್ಧೆ ಯಿಂದ ಓದುತ್ತ ಇದ್ದೆ.ಆಗಲೇ ನನ್ನೊಳಗೆ 'ಯಕ್ಷಗಾನ' ದ ಜೊತೆ ಒಂದು ತೆರೆ ನಾದ ಸಂಬಂಧ ಶುರುವಾಯಿತು.ಅಷ್ಟೇ ಅಲ್ಲದೇ ಕೃಷಿ ಯಷ್ಟೆ 'ಯಕ್ಷಗಾನ' ವನ್ನೂ ಹಚ್ಚಿ ಕೊಂಡಿರುವ ಹವ್ಯಾಕ ಸಮುದಾಯ ದ ಬಗ್ಗೆಯೂ ಆಸಕ್ತಿ ಹುಟ್ಟಿತು....
Monday, September 29, 2008
Subscribe to:
Post Comments (Atom)
No comments:
Post a Comment