Monday, September 1, 2008

ಯಾರು ಹಿತವರು...?(ಒಂದು ಸ್ವಗತ)

"ಪ್ರದೀಪ್, ಇಲ್ಲಿ ಏನೂ ಇಲ್ಲ!" ಅಂತ 'ಪೆಲ್ಲಿ'ಹೇಳಿ ಮಾತು ನಿಲ್ಲಿಸಿದ.
ಪೆಲ್ಲಿ ನನ್ನ ಬಾಲ್ಯ ಸ್ನೇಹಿತ.ಹಡಗಲಿಯವನು.ಅವನ ಹೆಸರು ಪ್ರಹ್ಲಾದ,
ಆದ್ರೆ ನಮ್ಮ ಬಾಯಲ್ಲಿ ಅದು 'ಪೆಲ್ಲಿ' ಆಗಿದೆ.ಹಾಗೆ ಅವನು ಹೇಳಿದಾಗ,
ನಾನು ಅವನ ಮುಂದೆ ಹೇಳಲೇಬೇಕೆಂದು ಕೊಂಡ ಅದೇ ಮಾತು ಹೇಳಲಾಗದೆ ಸುಮ್ಮನೆ ಮನದಲ್ಲೆ ನಕ್ಕು ಮಾತನ್ನು ಮುಂದುವರೆಸಿದೆ,
"ಹೌದು! ಪೆಲ್ಲಿ ಅಲ್ಲಿಯೂ ಏನೂ ಇಲ್ಲ! ಆ ಬೆಂಗಳೂರಿನಲ್ಲಿ.."ಅಂದೆ.
ಅವನ ಅರ್ಥದಲ್ಲಿ ನಮ್ಮೂರಲ್ಲಿ(ಹೂವಿನ ಹಡಗಲಿ) ಗಿಜಿ ಗಿಜಿ ಎನ್ನುವ ಟ್ರಾಫಿಕ್ ಇಲ್ಲ,ದಿನ ನಿತ್ಯ ದ ಉದ್ದುದ್ದದ ಪ್ರಯಾಣ ವಿಲ್ಲ,ಹೆಜ್ಜೆ ಹೆಜ್ಜೆ ಗೂ ಕಾಣ ಸಿಗುವ ಪಿಜ್ಜಾ ಕಾರ್ನರ್ ಗಳಾಗಲಿ,ಚೈನಿಸ್ ಸೆಂಟರ್ ಗಳಾಗಲಿ,ದೊಡ್ಡದೊಡ್ಡ ಷಾಪಿಂಗ್ ಮಾಲ್ ಗಳಾಗಲಿ,ಹೇಳಲಿಕ್ಕೆ ಬಾರದಂತಹ ಬಹು ದುಬಾರಿಯ ಅಂಗಿ ಪ್ಯಾಂಟ್ ಗಳ ಬ್ರಾಂಡೆಡ್ ಷೋರೂಂ ಗಳಾಗಲಿ ಇಲ್ಲ,'ಕೊಳ್ಳು ಬಾಕತನ'ವನ್ನೇ ಒಂದು ತೆರೆನಾದ ಚಟವಾಗಿ ಪರಿವರ್ತಿಸುತ್ತಿರುವ ಏಟಿಮ್ ಸೆಂಟರ್ ಗಳಾಗಲಿ ಇಲ್ಲ.ಇವೆಲ್ಲಕ್ಕಿಂತ ಮುಖ್ಯವಾಗಿ ಕಣ್ಣಿಗೆ ಚಮಕ್ ಚಮಕ್ ಅನ್ನಿಸುವಂತೆ ಮೈಮಾಟವನ್ನೇಲ್ಲಾ ತೋರಿಸಿಕೊಂಡು ಅಡ್ಡಾಡುತ್ತಿರುವ ಲಲಾನಮಣಿಗಳಿಲ್ಲ.ಮಬ್ಬುಗತ್ತಲಲ್ಲಿ ಮೈಗೆ ಮೈ ಅಂಟಿಸಿಕೊಂಡು ಬೀರನ್ನು ಹೀರುವ
'ಪಬ್' ಗಳಿಲ್ಲ.ಹಾಗಂತ ಅವನ ಮಾತಿನಿಂದಲೇ ನನಗೆ ತಿಳಿದು ಹೋಯಿತು.
ಬೆಂಗಳೂರಿ ನಿಂದ ನೂರಾರು ಮೈಲಿ ದೊರದಲ್ಲಿರುವ ಅವನು ಬೆಂಗಳೂರಿಗೆ ಬರುವುದು ಆಗೊಮ್ಮೆ ಈಗೊಮ್ಮೆ.
ಯಾವುದು ಕಛೇರಿಯ ಕೆಲಸಕ್ಕೂ, ಅಥವಾ ತನ್ನ ಸಂಬಂಧಿ ಕರನ್ನು ಕರೆದುಕೊಂಡು ಬೆಂಗಳೂರಿಗೆ ಬರುವುದು ಬಿಟ್ಟರೆ,ಅವನಿಗೆ ಬೆಂಗಳೂರು ತುಂಬಾನೆ ಅಪರಿಚಿತ.ದಿನ ನಿತ್ಯ ಸಾವಿರಾರು ಮಂದಿ ನಸುಕಿನಿಂದಲೇ ಮೆಜೆಸ್ಟಿಕ್ ನ್ನು ತುಳಿಯುವ ಜನರಲ್ಲಿ ಇವನೂ ಒಬ್ಬ. ಅಷ್ಟೇ!
ಖಂಡಿತಾ! ಪೆಲ್ಲಿ ಯಂತಹ ಸಾವಿರಾರು ಜನರಿಗೂ ಬೆಂಗಳೂರಿನ ಬಗ್ಗೆ ಈಗಲೂ ಒಂದು ಬೆರಗು,ಕೂತುಹಲ,ಆಕರ್ಷಣೆ ಇದೆ.ಬಹುಶಃ ಇದೆಲ್ಲದರ ಬೆನ್ನ ಹಿಂದೆ ಬಿದ್ದೆ ನಾನು ಬೆಂಗಳೂರಿಗೆ ಬದಿದ್ದು.ಏನೇನೂ ಮಾಡಿದೆ. ನನಗೆ ಈಗೀಗ ಅನ್ನಿಸ್ತಾಇದೆ 'ನಾನು ನನಗಲ್ಲದೆ ಇನ್ನ್ಯಾರಿಗೂ ನನ್ನನ್ನ ಮತ್ತು ನನ್ನ ಕೆಪಬಲಿಟಿಸ್ ನ್ನು ಪ್ರೂವ್ ಮಾಡಬೇಕಾಗಿತ್ತು.ಒಟ್ಟಾಗಿ ನಾನು ನನ್ನ ಬದುಕನ್ನು ಬದುಕಲಿಲ್ಲ.
ನನಗನ್ನಿಸುತ್ತಾ ಇತ್ತು.ಈ ಊರಲ್ಲಿ ಎಲ್ಲಾ ಇದೆ ಯಲ್ಲ?ಟ್ರಾಫಿಕ್ ನ ದೂಳು ಇಲ್ಲ,ಉದ್ದುದ್ದದ ಪ್ರಯಾಣ ವಿಲ್ಲ, ಜಗ್ಗ ಜನ ಎನ್ನಿಸುವಂತ ರಸ್ತೆಗಳಿಲ್ಲ.ಇವೆಲ್ಲಕ್ಕಿಂತ ಹೆಚ್ಚಾಗಿ ಕೃತ್ರಿಮತೆ ನನಗೆ ಎಲ್ಲೂ ಕಾಣಿಸಲಿಲ್ಲ.ಇವರೆಲ್ಲಾ ತಮಗೋಸ್ಕರವೇ ಬದುಕಿತಿದ್ದಾರೆ ಅಂತ ಅನ್ನಿಸುತ್ತ ಇತ್ತು.
ಊರಿಂದ ಒಂದಿಷ್ಟು ದೊರ ಹೊದೆಡೆ ಸಾಕು ಹಸಿರು.ಕಣ್ಣು ತಂಪಾಗುತ್ತೆ.ಬೆಂಗಳೂರಿನ ಚಮಕ್ ಚಮಕ್ ಗಿಂತಲೂ ಅಲ್ಲಿನ ಸ್ವಚ್ಛಂದ ಗಾಳಿ ಏನೋ ಒಂದು ತರಹದ ಹೇಳಲಿಕ್ಕೆ ಬಾರದಂತಹ 'ಮಜಾ' ಕೊಡುತ್ತೆ.ಆ ಊರಿಗೆ ಹೋದಾಗ ನನಗೆ ಸಿಗುವ ಸಂತೋಷ ಬಹುಶಃ ,ತಿಂಗಳ ಕೊನೆಯಲ್ಲಿ ನನ್ನ ಎಸ್ ಬಿ ಅಕೌಂಟಿ ಗೆ ಬಂದಾಗ ಆಗುವ ಸಂತೋಷ ಕಿಂತಲೂ ಅದು ಹೆಚ್ಚಾಗಿತ್ತು.
ಮಾತು ಮಾತಿ ಗೂ ಅಗತ್ಯ ವಿರಲಿ ಇಲ್ಲದೆ ಇರಲಿ.thanks,sorry,no issues, pardom me ,fine...ಶಬ್ದಗಳಿಂದ ಬೇಸತ್ತು ಹೋಗಿದ್ದೀನಿ.ನನಗೆ ಇಷ್ಟವಿರಲಿ ಇಲ್ಲದೆ ಇರಲಿ ಕೊನೆಗೆ ನನ್ನ ಅಸ್ತಿತ್ವಕ್ಕಾಗಿಯಾದರೂ ಅಥವಾ ನನ್ನ ದೊಡ್ಡಸ್ತಿಕೆ ಯನ್ನು ತೋರಿಸಿಕೊಳ್ಳುವುದಕ್ಕಾದರೂ ನಾನು ಆಡಲೇ ಬೇಕಾಗಿರುವ ಸಣ್ಣ ಸಣ್ಣ ಆಟ,ನಾಟಕಕ್ಕಿಂತಲೂ ಸಂಕೀರ್ಣವಾಗಿರೋ ನಾಟಕಗಳು,ತರಾವರಿ ವರಸೆಗಳು,ಗುಂಪುಗಾರಿಕೆ,ನನ್ನ ಬಲಾಢ್ಯವನ್ನು ಪ್ರದರ್ಶಿಸುವುದಕ್ಕಗಿ ಇನ್ನೊಬ್ಬ ನ 'ಕಾಲು ಎಳೆಯುವುದು' ಇವಿಷ್ಟೂ ಅಲ್ಲಿ ಇರಲಿಲ್ಲ!.
ಇದನ್ನೆಲ್ಲಾ ಅವನಿಗೆ ಅರ್ಥ ಮಾಡಿಸಿ ಹೇಳಬೇಕೆಂದು ಕೊಂಡೆ,ಆದರೆ ಅದನ್ನೆಲ್ಲಾ ತಿಳಿಸಿ ಹೇಳುವ ವ್ಯವಧಾನವನ್ನೂ ಬೆಂಗಳೂರು ಬಸಿದು ಬಿಟ್ಟಿತ್ತು!
ಇದೆಲ್ಲಾ ನಾನು ನಾನೇ ಆಡಿ ಕೊಂಡ ಮಾತುಗಳು.
"ಪ್ರದೀಪ್ ಏನೇ ಆದ್ರೂ ನಾನು ಆರಾಮ ಗೆ ಇದ್ದೀನಿ..." ಅಂತ ಮನಸ್ಸಿಂದ ಹೇಳಿದ್ದ.ಆ ಮಾತನ್ನು ಹೇಳಿ ಮುಗಿಸಿದ ಮೇಲೆ ಅವನು ನಕ್ಕನೊ ಇಲ್ಲವೋ ಗೊತ್ತಿಲ್ಲ ಆದರೆ ನನಗೆ ಅವನೆಲ್ಲೋ ನಕ್ಕಿದ್ದಾನೆ ಅಂತ ಅನ್ನಿಸಿತು.
ಇದೆಲ್ಲ ನಡೆದದ್ದು ನಾನು ಮೊನ್ನೆ ನಮ್ಮೊರಿಗೆ ಹೂದಾಗ!

3 comments:

..... said...
This comment has been removed by the author.
..... said...

Including "ಇದನ್ನೆಲ್ಲಾ ಅವನಿಗೆ ಅರ್ಥ ಮಾಡಿಸಿ ಹೇಳಬೇಕೆಂದು ಕೊಂಡೆ,ಆದರೆ ಅದನ್ನೆಲ್ಲಾ ತಿಳಿಸಿ ಹೇಳುವ ವ್ಯವಧಾನವನ್ನೂ ಬೆಂಗಳೂರು ಬಸಿದು ಬಿಟ್ಟಿತ್ತು.." many sentences which are expressed as his inner feelings let me say confessions which show not only the promptness of the writer but also the spark to ignite the other minds..If we begin to think the same, thats the best compliment the writer can get..and I just wish the writer Dheeru continues to think all those things which are literally forgotten by the readers...!
Regards,
Vijay

ನಾಗರಹಳ್ಳಿ ಧೀರೇಂದ್ರ said...

My Sincere thanks to VIJAY.
Not for just drafting comments,but he literary had a discussion about the article in the blog.I say VIJAY is not just a reader but also CRITIC.
Thanks a lot VIJAY.